Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಪ್ಯಾರೆಂಟ್ಸ್ - ಟೀಚರ್ಸ್ ಮೀಟಿಂಗ್‌ನಲ್ಲಿ ಮಾರ್ಕ್ಸ್ ಬಗ್ಗೆ ಅಲ್ಲ ಮುಖ್ಯವಾಗಿ ಕೇಳಬೇಕಾಗಿರುವುದು ಈ 5 ವಿಷಯಗಳನ್ನ
ನೀವು ಪೇರೆಂಟ್ಸ್ ಟೀಚರ್ಸ್ ಮೀಟಿಂಗ್‌ಗೆ ಹೋದಾಗ ನೀವು ಟೀಚರ್ ಜೊತೆ ಹೆಚ್ಚಾಗಿ ಕೇಳುವ ಪ್ರಶ್ನೆ ಯಾವುದು? ಅವರ ಮಾರ್ಕ್ಸ್ ಬಗೆಯೇ? ಟೀಚರ್ ಅವರು ಮಾರ್ಕ್ಸ್ ಕಾರ್ಡ್ ತೋರಿಸಿದಾಗ ಅದರಲ್ಲಿ ಮಕ್ಕಳು ಔಟ್ ಆಫ್ ಔಟ್ ಮಾರ್ಕ್ಸ್ ತೆಗೆದರೆ ನಮಗೆ ಖುಷಿಯೋ ಖುಷಿ, ಅಷ್ಟೇ ಮತ್ತೇನು ಹೇಳುವುದಿಲ್ಲ, ನನ್ನ ಮಗ ಅಥವಾ ಮಗಳು ತುಂಬಾನೇ ಜಾಣ/ಜಾಣೆ ಎಂದು ಬಂದು ಬಿಡುತ್ತೇವೆ.
ಆದರೆ ಪೋಷಕರೇ ಇನ್ಮುಂದೆ ನೀವು ಮಕ್ಕಳ ಮಾರ್ಕ್ಸ್ ಮಾತ್ರ ಕೇಳಬೇಡಿ, ಅದರ ಜೊತೆಗೆ ನೀವು ಟೀಚರ್ ಬಳಿ ಈ ಬಗ್ಗೆಯೂ ಕೇಳಬೇಕು, ಆವಾಗ ಮಾತ್ರ ನಿಮ್ಮ ಮಗುವಿನ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಸಾಧ್ಯ....

ನನ್ನ ಮಗು ಶಾಲೆಯಲ್ಲಿ ಎಲ್ಲರ ಜೊತೆ ಹೊಂದಿಕೊಳ್ಳುತ್ತಾನಾ/ ಳಾ?
ಮನೆಯಲ್ಲಿ ಇರುವಂತೆ ಮಕ್ಕಳು ಶಾಲೆಯಲ್ಲಿ ಇರಬೇಕೆಂದು ಇಲ್ಲ, ಮನೆಯಲ್ಲಿ ಎಲ್ಲರ ಜೊತೆ ಬೆರೆಯುವ ಮಗು ಶಾಲೆಯಲ್ಲಿ ಇಂಟ್ರೀವರ್ಟ್ ಆಗಬಹುದು, ಅದಕ್ಕೆ ನಾನಾ ಕಾರಣಗಳಿರಬಹುದು, ಅಲ್ಲದೆ ಈ ಪ್ರಶ್ನೆ ಕೇಳುವುದರಿಂದ ನಿಮ್ಮ ಮಗುವಿನ ಭಾವನೆಗಳನ್ನು ಮತ್ತಷ್ಟು ಅರ್ಥ ಮಾಡಿಕೊಳ್ಳಲು ಅವರನ್ನು ಮತ್ತಷ್ಟು ಹುರಿದುಂಬಿಸಲು ಸಾಧ್ಯವಾಗುವುದು.
ಆದ್ದರಿಂದ ಮಕ್ಕಳ ಬಗ್ಗೆ ಈ ಪ್ರಶ್ನೆ ಕೇಳಲೇಬೇಕು, ಆವಾಗ ಟೀಚರ್ ನಿಮಗೆ ನಿಮ್ಮ ಮಗುವಿನ ಬಗ್ಗೆ ಉತ್ತರ ಕೊಡುತ್ತಾರೆ, ಮಗು ನಿಮಗೆ ಹೇಳದೆ ಯಾವುದೋ ಸಮಸ್ಯೆ ಅನುಭವಿಸುತ್ತಿದೆ ಎಂದಾದರೂ ಇದರಿಂದ ತಿಳಿಯುವುದು. ಮಗು ಎಲ್ಲರ ಜೊತೆ ಬೆರೆಯುತ್ತಿದೆ ಎಂದರೆ ತೊಂದರೆಯಿಲ್ಲ, ಇಲ್ಲ ಯಾರ ಜೊತೆಯೂ ಸೇರಲ್ಲ ಎಂದರೆ ಆ ಮಗುವಿನಲ್ಲಿ ಆತ್ಮವಿಶ್ವಾಸ ಕೊರತೆ ಕಡಿಮೆ ಇರಬಹುದು, ಪೋಷಕರು ಈ ನಿಟ್ಟಿನಲ್ಲಿ ಪ್ರಯತ್ನಿಸಿದರೆ ಮಾತ್ರ ಮಗುವಿನಲ್ಲಿ ಲವಲವಿಕೆ ಮರಳಿ ತರಲು ಸಾಧ್ಯ.
ನಿಮ್ಮ ಜೊತೆ ಮಗುವಿನ ಒಡನಾಟ ಹೇಗಿದೆ?
ಆ ಮಗುವಿಗೆ ಆ ಟೀಚರ್ ಇಷ್ಟವಾದರೆ ಮಾತ್ರ ಅವರು ಹೇಳಿ ಕೊಡುವ ಪಾಠದ ಕಡೆಗೆ ಗಮನಹರಿಸಲು ಸಾಧ್ಯವಾಗುವುದು, ಹಾಗಾಗಿ ಈ ಬಗ್ಗೆ ಪ್ರಶ್ನೆ ಕೇಳಬೇಕು. ಟೀಚರ್ ಜೊತೆ ಮಗು ಸರಿಯಾಗಿ ಮಾತನಾಡುತ್ತಾ, ಇಲ್ಲಾ ಭಯದಿಂದ ಏನೂ ಹೇಳುದಿಲ್ಲವೇ ಎಲ್ಲಾ ತಿಳಿದುಕೊಳ್ಳುವುದು ಅವಶ್ಯಕವಾಗಿದೆ.
ಯಾವ ವಿಷಯದಲ್ಲಿ ಆಸಕ್ತಿ ಹೆಚ್ಚು
ಕ್ಲಾಸ್ ಟೀಚರ್‌ಗೆ ಮಗುವಿನ ಪ್ರತಿಯೊಂದು ವಿಷಯವೂ ತಿಳಿದಿರುತ್ತದೆ, ನಿಮಗೆ ತಿಳಿಯದ ಸ್ವಭಾವ ಅಥವಾ ಕೌಶಲ್ಯ ಟೀಚರ್‌ಗೆ ಗೊತ್ತಾಗಿರುತ್ತದೆ, ಆದ್ದರಿಂದ ಈ ಕುರಿತು ಕೇಳಿದರೆ ಮಗು ಯಾವ ವಿಷಯದ ಕಡೆಗೆ ಹೆಚ್ಚು ಆಸಕ್ತಿ ತೋರಿಸುತ್ತಿದೆ ಎಂದು ಗುರುತಿಸಬಹುದು. ಇದರಿಂದ ಮಗುವಿನ ಕೌಶಲ್ಯ ಗುರುತಿಸಿ ಆ ಕೌಶಲ್ಯ ಅಭಿವೃದ್ಧಿ ಪಡಿಸುವತ್ತ ಗಮನಹರಿಸಲು ಸಾಧ್ಯವಾಗುವುದು.
ಆ ಮಗು ಏನಾದರೂ ಸಮಸ್ಯೆ ಎದುರಿಸುತ್ತಿದೆಯೇ?
ಹೌದು ಈ ಕುರಿತು ಕೇಳಲೇಬೇಕು, ಮಗುವಿನಲ್ಲಿ ಹಿಂಜರಿಕೆಯಿದೆ, ಯಾವುದೋ ಮಾನಸಿಕ ತೊಳಲಾಟ ಇದೆ ಎಂದಾದರೆ ಇದೆಲ್ಲವೂ ಟೀಚರ್ ಗಮನಕ್ಕೆ ಬರುವುದು, ನೀವು ಈ ಕುರಿತು ಕೇಳಿದಾಗ ಅವರು ನಿಮಗೆ ಈ ಬಗ್ಗೆ ತಿಳಿಸುತ್ತಾರೆ. ಇದರಿಂದ ನಿಮಗೆ ನಿಮ್ಮ ಮಗುವಿನ ಕಡೆ ಹೆಚ್ಚಿನ ಗಮನಹರಿಸಲು ಸಾಧ್ಯವಾಗುವುದು.
ಕಲಿಕೆಯನ್ನು ಇಷ್ಟಪಡುತ್ತಿದ್ದಾನಾ/ಳಾ?
ಕ್ಲಾಸ್ ರೂಮ್‌ನಲ್ಲಿ ಖುಷಿಯಾಗಿ ಇರುತ್ತಾಳಾ/ನಾ ಎಂಬುವುದನ್ನು ಕೇಳಿ... ನೀವು ಮಾರ್ಕ್ಸ್ ಬಿಟ್ಟು ಈ ರೀತಿಯೆಲ್ಲಾ ಕೇಳುವುದರಿಮದ ನೀವು ಹೆಚ್ಚಿನ ಪ್ರಯೋಜನ ಪಡೆಯಲು ಸಾಧ್ಯವಾಗುವುದು.



Click it and Unblock the Notifications
