Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸರಳ, ಸುಂದರ ಮತ್ತು ಯುನಿಕ್.. 2026ರ ಸೂಪರ್ ಹಿಟ್, ಟ್ರೆಂಡಿ ಹೆಸರುಗಳಿವು! ನಿಮ್ಮ ಮಗನಿಗೆ ಈ ಬೆಸ್ಟ್ ಹೆಸರಿಡಿ
2026ರ ಸೂಪರ್ ಹಿಟ್ ಮತ್ತು ಟ್ರೆಂಡಿಂಗ್ ಹೆಸರುಗಳು! ನಿಮ್ಮ ಮುದ್ದಾದ ಮಗನಿಗೆ ಈ ಬೆಸ್ಟ್ ಹೆಸರು ಇಡಿ.. ಯಾರೂ ಕೇಳಿರದ ಯುನಿಕ್ ಹೆಸರುಗಳಿವು. ಎಲ್ಲರೂ ಇಷ್ಟಪಡುತ್ತಾರೆ. ಹೌದು, ಮನೆಗೆ ಪುಟಾಣಿ ಅತಿಥಿಯ ಆಗಮನವು ಯಾವಾಗಲೂ ಅಪಾರ ಸಂತೋಷವನ್ನು ತರುತ್ತದೆ. ಈ ಸುಂದರ ಸಂದರ್ಭದಲ್ಲಿ, ಪೋಷಕರಿಗೆ ತಮ್ಮ ಮಗುವಿಗೆ ಸುಂದರ ಮತ್ತು ಅರ್ಥಪೂರ್ಣ ಹೆಸರನ್ನು (Baby Names) ಆರಿಸುವುದು ಮಹತ್ವದ ಜವಾಬ್ದಾರಿಯಾಗುತ್ತದೆ.
ಹೆಸರು ಕೇವಲ ಗುರುತಾಗಿ ಉಳಿಯದೆ, ಆ ಮಗುವಿನ ವ್ಯಕ್ತಿತ್ವದ ಪ್ರತಿಬಿಂಬವೂ ಹೌದು. 2026ರಲ್ಲಿ ನಾಮಕರಣದ ಟ್ರೆಂಡ್‌ಗಳು (Trending Baby Names 2026) ಗಮನಾರ್ಹವಾಗಿ ಬದಲಾಗಿವೆ. ಇಂದಿನ ಪೋಷಕರು ಪುರಾತನ ಸಂಪ್ರದಾಯಕ್ಕೆ ಆಧುನಿಕತೆಯ ಸ್ಪರ್ಶವಿರುವ, ಉಚ್ಚರಿಸಲು ಸುಲಭ ಮತ್ತು ಆಳವಾದ ಅರ್ಥವಿರುವ ಹೆಸರುಗಳನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ. ನಿಮ್ಮ ಮುದ್ದು ಮಗನಿಗೆ ಅನ್ವಯವಾಗುವ, 2026ರಲ್ಲಿ ಟ್ರೆಂಡಿಂಗ್‌ನಲ್ಲಿರುವ ಕೆಲವು ವಿಶಿಷ್ಟ, ಅರ್ಥಪೂರ್ಣ ಗಂಡು ಮಗುವಿನ ಹೆಸರುಗಳ ಪಟ್ಟಿ (Trending Baby Boy Names 2026), ಅವುಗಳ ಅರ್ಥ ಇಲ್ಲಿದೆ.

ಹೆಸರಿಡುವಾಗ ಈ ವಿಷಯ ನೆನಪಿರಲಿ!
ಹೆಸರು ಆಯ್ಕೆ ಮಾಡುವಾಗ ಪೋಷಕರು (Parents) ಮೂರು ಪ್ರಮುಖ ವಿಷಯಗಳನ್ನು ಗಮನಿಸುತ್ತಾರೆ. ವಿಶಿಷ್ಟತೆ, ಸರಳತೆ ಹಾಗೂ ಅರ್ಥ. ಇದು ಆಧುನಿಕ ಪೋಷಕರ ಆಯ್ಕೆಯಾಗಿದೆ.
- ಹೆಸರು ಭಿನ್ನವಾಗಿರಬೇಕು
- ಉಚ್ಚರಿಸಲು ಮತ್ತು ಬರೆಯಲು ಸುಲಭವಾಗಿರಬೇಕು
- ಸಕಾರಾತ್ಮಕ ಅಥವಾ ದೈವಿಕ ಅರ್ಥವನ್ನು ಹೊಂದಿರಬೇಕು
ಪೋಷಕರ ಆಯ್ಕೆ ಏಕೆ ಬದಲಾಗ್ತಿದೆ?
ಪೋಷಕರ ಆಯ್ಕೆಗಳು ಬದಲಾಗುತ್ತಿವೆ. ಹಿಂದಿನಂತೆ ದೇವರ ಪೂರ್ಣ ಹೆಸರುಗಳ ಬದಲು, ಈಗ ಅವುಗಳ ಸಂಕ್ಷಿಪ್ತ, ಸ್ಟೈಲಿಶ್ ರೂಪಗಳು ಹೆಚ್ಚು ಪ್ರಚಲಿತ. ಉದಾಹರಣೆಗೆ, ಪರಶಿವನ ಬದಲಿಗೆ 'ರುದ್ರ' ಅಥವಾ 'ಶಿವಾಂಶ'ದಂತಹ ಹೆಸರುಗಳು ಸಂಪ್ರದಾಯ ಉಳಿಸಿ, ಆಧುನಿಕ ಇಮೇಜ್ ನೀಡುತ್ತವೆ.
2026ರ ಟ್ರೆಂಡಿಂಗ್ ಹೆಸರುಗಳು ಮತ್ತು ಅರ್ಥ
• ಅಯಾಂಶ್ (Ayansh) - ದೇವರ ಅಮೂಲ್ಯ ಉಡುಗೊರೆ / ಬೆಳಕಿನ ಕಿರಣ
• ಅದ್ವಿಕ್ (Advik) - ಅತ್ಯಂತ ವಿಶಿಷ್ಟ / ಅನನ್ಯ
• ಇವಾನ್ (Ivaan) - ಸೂರ್ಯನಂತೆ ತೇಜಸ್ವಿ / ರಾಜ
• ಕಿಯಾನ್ (Kiaan) - ಈಶ್ವರನ ಕೃಪೆ / ದಯೆ
• ವಿವಾನ್ (Vihaan) - ಮುಂಜಾನೆಯ ಮೊದಲ ಕಿರಣ
• ಆರವ್ (Aarav) - ಶಾಂತಿ / ಬುದ್ಧಿವಂತಿಕೆಯ ಸಂಕೇತ
• ರೇಯಾಂಶ (Reyansh) - ಬೆಳಕಿನ ಒಂದು ಭಾಗ
• ದರ್ಶ (Darsh) - ನೋಡಲು ಅತ್ಯಂತ ಸುಂದರ
• ಅಥರ್ವ (Atharv) - ಗಣೇಶನ ಹೆಸರು / ವೇದದ ಜ್ಞಾನ
• ಶಿವಾಂಶ (Shivansh) - ಶಿವನ ಅಂಶ
• ನಕ್ಷ (Naksh) - ಚಂದ್ರನಂತೆ ಪ್ರಕಾಶಮಾನ / ಪವಿತ್ರ
• ಯುವಾನ್ (Yuvan) - ಸದಾ ತಾರುಣ್ಯ / ಶಕ್ತಿಯುತ
• ಇಶಾನ್ (Ishaan) - ಸುಖ ನೀಡುವವನು / ಶಿವ
• ಅದ್ವೈತ (Advait) - ಸಮಾನರಹಿತನು
• ಕಬೀರ್ (Kabir) - ಅತ್ಯಂತ ಮಹಾನ್ / ದೊಡ್ಡ ವ್ಯಕ್ತಿ
• ರುದ್ರ (Rudra) - ಶಿವನ ಪರಾಕ್ರಮಿ ರೂಪ
• ವೇದಾಂತ್ (Vedant) - ವೇದಗಳ ಜ್ಞಾನವಿರುವವನು
• ಸಾತ್ವಿತ್ (Satvik) - ಶಾಂತ / ಪವಿತ್ರ ಮನಸ್ಸಿನವನು
• ವಿರಾಜ್ (Viraj) - ಪ್ರಕಾಶಿಸುವವನು / ಬ್ರಹ್ಮಾಂಡದ ಅಧಿಪತಿ
• ಆರ್ಯನ್ (Aryan) - ಉದಾತ್ತ / ಉತ್ತಮ ವಿಚಾರಗಳವನು
ಹೆಸರಿಡುವ ಮೊದಲು ಅರ್ಥ ತಿಳಿದುಕೊಳ್ಳಿ!
- ಅರ್ಥಪೂರ್ಣ ಹೆಸರುಗಳು ಸಕಾರಾತ್ಮಕ ಶಕ್ತಿ ನೀಡುತ್ತವೆ.
- ತಂದೆ-ತಾಯಿಯ ಹೆಸರಿನ ಮೊದಲ ಅಕ್ಷರಗಳನ್ನು ಸೇರಿಸಿ ಹೊಸ ಹೆಸರು ಸೃಷ್ಟಿಸುವುದು ಈಗಿನ ಟ್ರೆಂಡ್.
- ಶಾಲಾ ಹೆಸರಿನ ಜೊತೆಗೆ ಪ್ರೀತಿಯಿಂದ ಕರೆಯಲು ಒಂದು ಸಣ್ಣ, ಮುದ್ದಾದ ಅಡ್ಡಹೆಸರನ್ನು (ನಿಕ್ ನೇಮ್ - Nick Names) ಆರಿಸುವುದು ಉತ್ತಮ.
ಒಟ್ಟಾರೆ, ನಿಮ್ಮ ಮಗನಿಗೆ ನೀಡುವ ಮೊದಲ ಉಡುಗೊರೆಯೇ 'ಹೆಸರು'. ಅದು ಅವನ ಜೀವನದುದ್ದಕ್ಕೂ ಜೊತೆಗಿರುತ್ತದೆ. ಇಲ್ಲಿ ನೀಡಲಾದ ಹೆಸರುಗಳು 2026ರಲ್ಲಿ ಹೆಚ್ಚು ಟ್ರೆಂಡಿಂಗ್ (Top Trending & Modern Baby Boy Names for 2026) ಆಗಲಿವೆ. ನಿಮ್ಮ ಮಗುವಿಗೆ ಸೂಕ್ತ ಹೆಸರನ್ನು ಆರಿಸಿ, ಅವನ ಭವಿಷ್ಯ ಉಜ್ವಲವಾಗಲಿ.



Click it and Unblock the Notifications











