Latest Updates
-
ಪ್ರೀತಿಯ, ಪಯಣ, ಆನಂದ.. ಸಿಂಗಲ್ಸ್ಗೆ ಸ್ನೇಹವು ಪ್ರೀತಿಯಾಗಿ ಬದಲು! ಪ್ರೇಮ ಜೀವನ ಅದ್ಭುತ -
March 05 Horoscope: ಮನೆಯ ಕುರಿತಾಗಿದ್ದ ಚಿಂತೆ ದೂರಾಗಲಿದೆ! -
ಶನಿ-ಮಂಗಳನ ಚಲನೆಯಿಂದ ದ್ವಿ ದ್ವಾದಶ ಯೋಗ: ಈ ರಾಶಿಯವರಿಗೆ ಆಶೀರ್ವಾದ, ಹಣ ಲಾಭದ ನಿರೀಕ್ಷೆ -
ವಿಶ್ವದ ದುಬಾರಿ ಬಣ್ಣ ಇದು: 1 ಗ್ರಾಮ್ಗೆ ಬರೋಬ್ಬರಿ 80 ಸಾವಿರ ರೂ.! -
ಎಷ್ಟೇ ಹಠಮಾರಿ ಕಲೆಗಳಿದ್ದರೂ ಚಿಟಿಕೆಯಲ್ಲಿ ಮಾಯ! ಇಲ್ಲಿದೆ ಹಣ ಉಳಿಸುವ ಸಿಂಪಲ್ ಉಪಾಯ -
ಊಟ, ಮುದ್ದೆ ಸವಿಯೋಕೆ ಈ ರೀತಿ ಮಟನ್ ಸಾಂಬಾರ್ ಮಾಡಿ! -
10 ನಿಮಿಷದ ಸ್ನ್ಯಾಕ್ಸ್ ರೆಸಿಪಿ.. 1 ಕಪ್ ರವೆ, 1 ಬಾಳೆಹಣ್ಣು ಇದ್ದರೆ ಸಾಕು! 2 ದಿನ ಇಟ್ಟು ತಿನ್ನಬಹುದು -
ಈ 4 ಬಗೆಯ ಜನರಿಗೆ ಎಂದಿಗೂ ಸಹಾಯ ಮಾಡಬೇಡಿ! ನಿಮ್ಮ ಒಳ್ಳೆಯತನವೇ ಮುಳುವಾಗುತ್ತೆ -
ನಿಶಕ್ತಿ, ಬಲಹೀನತೆ ಇದ್ರೆ ವಾರದಲ್ಲಿ ಈ 2 ಮುದ್ದೆ ತಿನ್ನಿ ಸಾಕು -
ಹೆಸರುಬೇಳೆ ಬಳಸಿ ಪಕೋಡ ಮಾಡಿ ಸವಿಯಿರಿ! ಇಲ್ಲಿವೆ ಶೆಫ್ ಸ್ಟೈಲ್ನ ಈ 2 ಸಿಂಪಲ್ ವಿಧಾನಗಳು
ಮಗುವಿಗೆ ಮಾಡರ್ನ್ ಹೆಸರು ಹುಡುಕುತ್ತಿದ್ದಾರಾ? ವೇದ ಕಾಲದ ಈ ಹೆಸರುಗಳ ಆಕರ್ಷಕವಾಗಿದೆ
ದಂಪತಿಗಳ ಬಾಳು ಸಂಪೂರ್ಣ ಆಗುವುದು ಅವರ ಬಾಳಲ್ಲಿ ಒಂದು ಹೊಸ ಜೀವದ ಆಗಮನ ಆಗುವಾಗ. ಹೊಸ ಜೀವಕ್ಕೆ ಜನ್ಮ ಕೊಡುವುದು ಆ ಜೀವಕ್ಕೆ ಒಂದು ಬದುಕು ಕಟ್ಟಿಕೊಡುವುದು ಬಹಳ ಖುಷಿ ಕೊಡುವ ವಿಷಯ. ಮಗು ತಮ್ಮ ಜೀವನದಲ್ಲಿ ಬರುತ್ತದೆ ಎಂದಾಗ ಬಹಳಷ್ಟು ವಿಷಯಗಳು ಬದುಕಲ್ಲಿ ಬದಲಾಗತೊಡಗುತ್ತವೆ.
ಮೊದಲು ಇದ್ದಷ್ಟು ಸ್ವಾತಂತ್ಯ್ರ ಇರುವುದಿಲ್ಲ. ಅದರಲ್ಲೂ ಮೊದಲೆರಡು ವರ್ಷಗಳಲ್ಲಂತೂ ಅಮ್ಮನ ಬದುಕು ಮಗುವಿನ ಸುತ್ತಲೇ ಕಳೆದು ಹೋಗುತ್ತದೆ. ಮೊದಲಿದ್ದ ಜೀವನ ಶೈಲಿ ಸಂಪೂರ್ಣವಾಗಿ ಬದಲಾಗುತ್ತದೆ.

ಈ ತರಹದ ಎಲ್ಲಾ ಕಷ್ಟಗಳು ಆ ಸಮಯದಲ್ಲಿ ಕಷ್ಟ ಎಂದೆನ್ನಿಸುವುದಿಲ್ಲ. ಕಾರಣ ತಮ್ಮ ಮಗುವಿಗೆ ಬದುಕು ಕಟ್ಟಿಕೊಡುವುದು ಬಹಳ ಮುಖ್ಯ. ಬಹಳ ಮಂದಿಗೆ ತಮ್ಮ ಮಗು ಮುಂದೆ ದೊಡ್ಡವನಾಗಿ ಇಂತಹುದೇ ವೃತ್ತಿಯಲ್ಲಿ ತೊಡಗಬೇಕೆಂದಿರುತ್ತದೆ. ಬದುಕಿನಲ್ಲಿ ತಾವು ಸಾಧಿಸಲಾಗದ್ದು ತಮ್ಮ ಮಗು ಸಾಧಿಸಬೇಕು ಎನ್ನುವ ಆಸೆ ಇರುತ್ತದೆ. ಇನ್ನೂ ಕೆಲವರು ತಮ್ಮ ಮಕ್ಕಳು ತಮ್ಮ ತಮಗೆ ಬೇಕಾದಂತೆ ಬದುಕು ಕಟ್ಟಿಕೊಳ್ಳಲಿ ಎಂದು ಆಶಿಸುತ್ತಾರೆ.
ಮಗುವಿಗೆ ಹೆಸರಿಡಬೇಕಾದರೂ ತಂದೆ ತಾಯಿಯ ಅಥವಾ ಮನೆಯ ಹಿರಿಯರ ಇದೇ ತರಹದ ಆಸೆಗಳು ಮತ್ತು ಬಯಕೆಗಳು ಬಹಳ ಮುಖ್ಯ ಪಾತ್ರ ವಹಿಸುತ್ತದೆ. ತಮ್ಮ ಮಗ ಮುಂದೆ ಏನಾಗಬೇಕು ಎನ್ನುವಂತಹ ಹೆಸರುಗಳನ್ನು ಇಟ್ಟು ಹಾಗೆಯೇ ಆಗಲಿ ಎಂದು ಆಶಿಸುತ್ತಾರೆ. ಹೀಗೆ ಹೆಸರುಗಳನ್ನು ಹುಡುಕುವಾಗ ಇತಿಹಾಸ ಅಥವಾ ಪುರಾಣ ಬಹಳ ಸಹಾಯಕ್ಕೆ ಬರುತ್ತದೆ. ಪುರಾಣದ ಯಾವುದೋ ಒಂದು ಪಾತ್ರ ಬಹಳ ಮನಸ್ಸಿಗೆ ಹತ್ತಿರವಾಗಿದ್ದರೆ ತಮ್ಮ ಮಗುವೂ ಅದೇ ತರಹ ಬಾಳಲಿ ಎಂದು ಅಂತಹ ಹೆಸರುಗಳನ್ನೇ ಇಡುತ್ತಾರೆ.
ವೇದಗಳ ಕಾಲದ ಹೆಸರುಗಳನ್ನೂ ಬಹಳ ಮಂದಿ ಇಷ್ಟಪಡುತ್ತಾರೆ ಮತ್ತು ಆ ತರಹದ ಬಾಳನ್ನೇ ತನ್ನ ಮಗು ಬಾಳಲಿ ಎಂದು ಆಶಿಸುತ್ತಾರೆ. ನಿಮಗೂ ಅಂತಹ ವೇದ ಕಾಲದ ಒಂದು ಹೆಸರು ಬೇಕು ಎಂದಾದರೆ ಈ ಹೆಸರುಗಳನ್ನು ಆಯ್ಕೆಗೆ ಪರಿಗಣಿಸಬಹುದು.
ಅನಘ್: ಇದು ವಿಷ್ಣುವಿನ ಹೆಸರು. ವಿಷ್ಣು ಸಹಸ್ರನಾಮದ 146 ನೇ ಹೆಸರು ಅನಘ್. ಮಹಾಭಾರತದಲ್ಲಿ ಗರುಡನ ಮಗನ ಹೆಸರು ಅನಘ್. ಅನ್ ಎಂದರೆ ಇಲ್ಲದ ಅಘ್ ಎಂದರೆ ಕಲ್ಮಶ. ಕಲ್ಮಶವಿಲ್ಲದ, ಶುದ್ಧ ಎನ್ನುವ ಅರ್ಥ ಈ ಹೆಸರಿನದ್ದು.
ಕರುಣ್: ಋಗ್ವೇದ ಮತ್ತು ಅಥರ್ವವೇದದಲ್ಲಿ ಕರುಣ್ ಎಂದರೆ ಒಂದು ಪುಣ್ಯದ ಕೆಲಸ ಅಥವಾ ಕ್ರಿಯೆ. ಭಗವತ್ ಪುರಾಣದಲ್ಲೂ ಈ ಪದದ ಉಲ್ಲೇಖವಿದೆ. ಈ ಸಂಸ್ಕೃತ ಪದದ ಅರ್ಥ ಕರುಣೆ, ಮೃದುತ್ವ, ಸೌಮ್ಯ ಎಂದಾಗಿದೆ.
ದಕ್ಷ್: ಬ್ರಹ್ಮ ದೇವರು ಮತ್ತು ಅದಿತಿಯ ಮಗನ ಹೆಸರು ದಕ್ಷ್ ಎಂದು. ಈ ಹೆಸರಿನ ಅರ್ಥ ಬುದ್ಧಿಶಾಲಿ ಎನ್ನುವುದಾಗಿದೆ.
ಜಿವಾ: ಋಗ್ವೇದ ಮತ್ತು ಚರಕನ ಕೃತಿಯಲ್ಲಿ ಈ ಹೆಸರಿನ ಉಲ್ಲೇಖವಿದೆ. ಮಹಾಭಾರತ ಮತ್ತು ಕಥಾ ಸರಿತ್ಸಾಗರದ ಪ್ರಕಾರ ಈ ಹೆಸರಿನ ಅರ್ಥ ಜೀವನ ಅಥವಾ ಅಸ್ತಿತ್ವ ಎನ್ನುವುದಾಗಿದೆ.
ಅಕ್ಷರ್: ಇದೂ ಒಂದು ಸಂಸ್ಕೃತ ಹೆಸರಾಗಿದ್ದು ಬ್ರಹ್ಮ ವಿಷ್ಣು ಮತ್ತು ಮಹೇಶ್ವರ ಎಲ್ಲರ ಹೆಸರೂ ಆಗಿದೆ. ದೇವರುಗಳ ದೇವ, ಶಾಶ್ವತ ಎನ್ನುವ ಅರ್ಥವನ್ನು ಈ ಹೆಸರು ಕೊಡುತ್ತದೆ.
ಇಜ್ಯಾ: ವಿಷ್ಣು ದೇವರನ್ನು ಈ ಹೆಸರಿನಿಂದ ಕರೆಯಲಾಗುತ್ತದೆ. ದುಷ್ಟ ಮನಸ್ಸಿನ ಶತ್ರುಗಳನ್ನು ನಾಶಮಾಡುವಾತ ಎನ್ನುವ ಅರ್ಥವನ್ನು ಈ ಹೆಸರು ಕೊಡುತ್ತದೆ.
ವಿರಾಜ್: ಇದರ ಅರ್ಥ ವೈಭವಯುತ ಎನ್ನುವುದಾಗಿದೆ. ವಿರಾಜ್ ಅನ್ನು ದ್ವಿತೀಯ ಸೃಷ್ಟಿಕರ್ತ ಎನ್ನಲಾಗಿದೆ.
ಷಿವಯಾ: ಇದು ಈಶ್ವರನ ಒಂದು ಹೆಸರಾಗಿದೆ. ದಯಾಮಯಿ ಎನ್ನುವ ಅರ್ಥವನ್ನು ಈ ಹೆಸರು ಕೊಡುತ್ತದೆ.
ನಿಮಿತ್: ಋಗ್ವೇದ, ಅಥರ್ವವೇದ ಮತ್ತು ತೈತ್ತರೀಯ ಬ್ರಹ್ಮನ್ ಮುಂತಾದ ಮಾಹಾಕಾವ್ಯಗಳಲ್ಲಿ ಈ ಹೆಸರಿನ ಉಲ್ಲೇಖವಿದೆ. ಭಗವತ್ ಪುರಾಣದ ಪ್ರಕಾರ ಈ ಹೆಸರಿನ ಅರ್ಥ ಒಂದು ಘಟನೆಗೆ ಕಾರಣವಾದ ಇನ್ನೊಂದು ಘಟನೆ ಎಂದಾಗಿದೆ.
ರಕ್ಷಿತ್: ಈ ಹೆಸರಿನ ಅರ್ಥ ಕಾಯುವವ, ರಕ್ಷಕ, ಕಾವಲು ಎಂದಾಗಿದೆ.



Click it and Unblock the Notifications











