Latest Updates
-
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ! -
ಮಳೆಗಾಲದಲ್ಲಿ ಮದುವೆ ನಿಶ್ಚಯವಾಗಿದೆಯೇ? ನಿಮ್ಮ ಮದುವೆ ಸಂಭ್ರಮ ಹಾಳಾಗದಂತೆ ತಡೆಯಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್!
ಗರ್ಭಿಣಿಯರಿಗೆ ಪಿಲಾಟೆಸ್ ವ್ಯಾಯಾಮ ಒಳ್ಳೆಯದು
ವ್ಯಾಯಾಮ ಮಾಡುವುದು ಆರೋಗ್ಯಕ್ಕೆ ಸದಾ ಒಳ್ಳೆಯದು. ಆದರೆ ಆ ವ್ಯಾಯಾಮವನ್ನು ಯಾರು ಯಾವ ಸಮಯದಲ್ಲಿ ಮಾಡಬೇಕು ಎಂಬಿತ್ಯಾದಿ ಅಂಶಗಳನ್ನು ಸದಾ ಗಮನದಲ್ಲಿರಿಸಿಕೊಳ್ಳಬೇಕು. ಏಕೆಂದರೆ ಮುಟ್ಟಿನ ಸಮಯದಲ್ಲಿ, ಗರ್ಭಿಣಿಯಾಗಿರುವಾಗ ಎಲ್ಲಾ ರೀತಿಯ ವ್ಯಾಯಾಮಗಳನ್ನೂ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಆಯಾ ಸಂದರ್ಭಗಳಲ್ಲಿ ಅದಕ್ಕೆ ತಕ್ಕ ಹಾಗೆ ವ್ಯಾಯಾಮಗಳನ್ನು ರೂಢಿಸಿಕೊಂಡರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಪಿಲಾಟೆಸ್ ವ್ಯಾಯಾಮ ಗರ್ಭಾವಸ್ಥೆಯಲ್ಲಿರುವಾಗ ಮಾಡಬಹುದಾದ ಅತ್ಯಂತ ಸುರಕ್ಷಿತ ವ್ಯಾಯಾಮ ವಿಧಾನವಾಗಿದೆ. ಗರ್ಭಿಣಿ ಮಹಿಳೆಯರಲ್ಲಿ ಸಾಮಾನ್ಯವಾಗಿ ಕಾಲು ಊತ, ದೇಹದ ಬಳಲಿಕೆ, ಸೊಂಟದಲ್ಲಿ ನೋವು ಮೊದಲಾದವುಗಳು ಕಾಣಿಸಿಕೊಳ್ಳುವುದು ಸಾಮಾನ್ಯ.
ಪಿಲಾಟೆಸ್, ಸಾಮಾನ್ಯವಾಗಿ ಗರ್ಭಿಣಿ ಸ್ತ್ರೀಯರ ಆರೋಗ್ಯ ಹೆಚ್ಚಿಸುವ ಹಾಗೂ ಉಸಿರಾಟವನ್ನು ಸುಲಲಿತಗೊಳಿಸಬಲ್ಲ ಒಂದು ವಿಧಾನ. ಗರ್ಭಾವಸ್ಥೆಯ ಸಂದರ್ಭದಲ್ಲಿ ಅವರ ಅನುಕೂಲಕ್ಕೆ ತಕ್ಕಹಾಗೆ ಪಿಲಾಟೆಸ್ ನ ಆವರ್ತನ ಹಾಗೂ ತೀವ್ರತೆಯನ್ನು ಹೊಂದಿಸಿಕೊಳ್ಳಬಹುದು.
ಇಲ್ಲಿ ಗರ್ಭಿಣಿ ಸ್ತ್ರೀಯರಿಗೆ ಪಿಲಾಟೆಸ್ ನ ಪ್ರಯೋಜನವನ್ನು ಹೇಳಲಾಗಿದೆ.

1. ತೂಕ ನಿಯಂತ್ರಣ
ಗರ್ಭಾವಸ್ಥೆಯಲ್ಲಿರುವಾಗ ಆಹಾರ ಸೇವಿಸುವುದರಲ್ಲಿ ಕಡಿಮಾ ಮಾಡಬಾರದು. ಅಥವಾ ಆಹಾರದಲ್ಲಿ ಹೆಚ್ಚು ನಿಯಂತ್ರಣವನ್ನು ಮಾಡಬಾರದು. ಹಾಗೆಂದ ಮಾತ್ರಕ್ಕೆ ದೇಹದ ತೂಕವನ್ನು ಅತೀಯಾಗಿ ಹೆಚ್ಚಿಸಿಕೊಳ್ಳುವುದೂ ಸರಿಯಲ್ಲ. ಪಿಲಾಟೆಸ್ ವ್ಯಾಯಾಮ ದೇಹ ತೂಕವನ್ನು ನಿಯಂತ್ರಿಸುತ್ತದೆ.

2. ದಣಿದ ದೇಹಕ್ಕೆ ನಿವಾರಣೆ
ಪಿಲಾಟೆಸ್ ಚಲನೆಯಿಂದ ಶಕ್ತಿಯನ್ನು ಕಾಯ್ದುಕೊಳ್ಳಲು ಸಹಾಯಕವಾಗುತ್ತದೆ. ಗರ್ಭಾವಸ್ಥೆಯಲ್ಲಿ ಶಕ್ತಿಯನ್ನು ಕಾಯ್ದುಕೊಳ್ಳುವುದು ತುಂಬಾ ಮುಖ್ಯ.

3. ಕಾಲು ಸೆಳೆತ ಮತ್ತು ಊತ
ಪಿಲಾಟೆಸ್ ವ್ಯಾಯಾಮ ಮಾಡುವಾಗ ಕಾಲಿನ ಚಲನೆ ಮಾಡುವುದರಿಂದ ದೇಹದಲ್ಲಿ ರಕ್ತ ಪರಿಚಲನೆ ಸರಾಗವಾಗಿ ಸಾಗುತ್ತದೆ. ದೊಡ್ಡ ಸ್ನಾಯುಗಳು ಹಾಗೂ ಪಾದದ ವ್ಯಾಯಾಮ ಮಾಡುವುದರಿಂದ ಊತವೂ ಕೂಡ ಉಂಟಾಗುವುದಿಲ್ಲ.

4. ಸ್ಥಿರ ಭಂಗಿ
ಗರ್ಭಾವಸ್ಥೆಯಲ್ಲಿ ದೇಹದ ನಿಲುವು ಅಥವಾ ಅವಸ್ಥೆ ಸಹಜವಾಗಿ ಬದಲಾಗುತ್ತದೆ. ಹೊಟ್ಟೆ ದೊಡ್ಡದಾದ ಹಾಗೇ ದೇಹದ ಭಾರವೂ ಬದಲಾಗುತ್ತದೆ. ಈ ಬದಲಾವಣೆ ದೇಹದ ಕೊಂಡಿಗಳು ಹಾಗೂ ಸ್ನಾಯುಗಳ ಮೇಲೆ ಪರಿಣಾಮ ಬೀರುತ್ತದೆ. ಪಿಲಾಟೆಸ್ ವ್ಯಾಯಾಮ ದೇಹದ ಭಂಗಿಯ ಬದಲಾವಣೆಗೆ ಪರಿಹಾರವನ್ನು ನೀಡುತ್ತದೆ ಹಾಗೂ ದೇಹ ಯಾವುದೇ ರೋಗ ಅಥವಾ ನೋವಿನಿಂದ ಬಳಲದಂತೆ ನೋಡಿಕೊಳ್ಳುತ್ತದೆ.

5. ಸುಲಭವಾಗಿ ದೇಹದ ಆಕಾರ ಮರುಕಳಿಸುತ್ತದೆ
ಕೆಲವು ಮಹಿಳೆಯರು ಗರ್ಭಧಾರಣೆಯಿಂದಾಗಿ ಅಧಿಕ ತೂಕವನ್ನು ಹೊಂದುವುದನ್ನು ಇಷ್ಟಪಡುವುದಿಲ್ಲ. ಪಿಲಾಟೆಸ್ ಈ ಕಾಳಜಿಯನ್ನು ಮಾಡುತ್ತದೆ! ಗರ್ಭಿಣಿಯಾಗಿದ್ದಾಗಲೂ ಸ್ನಾಯುಗಳು ಸುರಕ್ಷಿತವಾಗಿರುವಂತೆ ನೋಡಿಕೊಳ್ಳುತ್ತದೆ. ಆದ್ದರಿಂದ ನೀವು ನಿಮ್ಮ ಮೊದಲಿನ ದೇಹದ ಆಕಾರವನ್ನೇ ಹೊಂದಬಹುದು.

6. ನೋವು ನಿವಾರಣೆ
ಹೊಟ್ಟೆಯಲ್ಲಿ ಮಗು ಬೆಳೆಯುತ್ತಿದ್ದ ಹಾಗೆ ಹೊಟ್ಟೆ ದೊಡ್ಡದಾಗುತ್ತದೆ. ಇದರಿಂದ ಸೊಂಟದ ಮೇಲೆ ಹೆಚ್ಚಿನ ಭಾರ ಬೀಳುತ್ತದೆ. ಆದ್ದರಿಂದ ಪಿಲಾಟೆಸ್ ವ್ಯಾಯಾಮ ಮಾಡುವುದರಿಂದ ಸೊಂಟದ ಹಿಂಭಾಗ ಅತೀಯಾಗಿ ನೋವಾಗುವುದನ್ನು ತಪ್ಪಿಸಬಹುದು.

7.ಫ್ರೆಶ್ ಮೂಡ್
ಗರ್ಭಾವಸ್ಥೆಯಲ್ಲಿರುವಾಗ ಉಸಿರುಗಟ್ಟಿದಂಟಾಗುವುದು, ದೈನಂದಿನ ಕೆಲಸದಲ್ಲಿ ನಿರಾಸಕ್ತಿ ಉಂಟಾಗಬಹುದು. ಆದರೆ ಇದಕ್ಕೆ ಪರಿಹಾರ ಪಿಲಾಟೆಸ್ ವ್ಯಾಯಾಮ. ಇದು ಹೆರಿಗೆಗೆ ಬೇಕಾಗುವ ಶಕ್ತಿಯನ್ನು ಹೆಚ್ಚಿಸಿ ಹೆರಿಗೆಯ ಸಮಯದಲ್ಲಿಯೂ ನೀವು ಸದೃಢರಾಗಿರುವಂತೆ ಮಾಡುತ್ತದೆ.

8. ಸುಖ ನಿದ್ದೆ ಬರುವುದು
ಸಾಮಾನ್ಯವಾಗಿ, ಗರ್ಭಧಾರಣೆಯಾದ ಮೂರನೇ ತಿಂಗಳಿನಲ್ಲಿ ಆರಾಮವಾಗಿ ನಿದ್ರಿಸುವುದು ಕನಸಿನ ಮಾತು. ಆದರೆ ನಿಯಮಿತವಾದ ಪಿಲಾಟೆಸ್ ವ್ಯಾಯಾಮ ನಿಮಗೆ ಸುಖಕರ ನಿದ್ರೆಯನ್ನು ನೀಡುವಲ್ಲಿ ಸಹಕಾರಿಯಾಗಿದೆ.

9.ಜನನದ ನಂತರದ ಒತ್ತಡ ಕಡಿಮೆ
ಹೆರಿಗೆ ಆದ ನಂತರ ಸ್ತ್ರೀಯ ತ್ರಾಣ ಅಥವಾ ಶಕ್ತಿ ಭಾಗಶಃ ಕಡಿಮೆಯಾಗಿ ಬಿಡುತ್ತದೆ. ಹೆಚ್ಚಿನವವರು ನಿತ್ರಾಣರಾಗಿ ಬಿಡುತ್ತಾರೆ. ಆದರೆ ಗರ್ಭಧಾರಣೆಯ ಸಂದರ್ಭದಲ್ಲಿ ಪಿಲಾಟೆಸ್ ವ್ಯಾಯಾಮವನ್ನು ರೂಢಿಸಿಕೊಂಡಿದ್ದರೆ ಅದು ನಿಮ್ಮಲ್ಲಿ ಫಿಟ್ನೆಸ್ ಇರುವಂತೆ ಮಾಡುತ್ತದೆ. ಮತ್ತು ಮಗುವಿನ ಬಗ್ಗೆ ನೀವು ಆರಾಮವಾಗಿ ಗಮನವಹಿಸಬಹುದು.



Click it and Unblock the Notifications