Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಡೆಲಿವರಿ ಬಾಯ್‌ನಂತೆ ಬಂದ ಜೊಮೆಟೊ ಸಿಇಒಗೆ ಮಾಲ್‌ನಲ್ಲಿ ಲಿಫ್ಟ್ ನಿಷೇಧ: ಗೋಯಲ್ ಟ್ವೀಟ್ ವೈರಲ್
ಹಿಂದಿನ ಕಾಲದಲ್ಲಿ ರಾಜರು ಮಾರು ವೇಷದಲ್ಲಿ ಹೋಗಿ ತನ್ನ ರಾಜ್ಯದ ಸ್ಥಿತಿಗತಿ ಹೇಗಿತ್ತು ಎಂದು ತಿಳಿಯಲು ಪ್ರಯತ್ನಿಸುತ್ತಿದ್ದರು ಎಂಬುವುದನ್ನು ಕೇಳುತ್ತೇವೆ ಅದರಂತೆ ಜೊಮೆಟೊ ಎಂಬ ಆನ್‌ಲೈನ್ ಫುಡ್ ಡೆಲಿವರಿ ಕಂಪನಿಯ ಸಿಇಒ ತಾನೇ ಡೆಲಿವರಿ ಬಾಯ್ ಆಗಿ ಹೋದಾಗ ಡೆಲಿವರಿ ಬಾಯ್ಸ್ ಕಷ್ಟ ಏನೆಂಬುವುದು ಅರಿವಾಗಿದೆ.
ನಿಜಕ್ಕೂ ಅವರಿಗೆ ಅಂಥದ್ದೊಂದು ಆಲೋಚನೆ ಬಂದಿರುವುದಕ್ಕೆ ಮೆಚ್ಚಲೇಬೇಕು. ಯಾರೇ ಆಗಲಿ ತನ್ನ ಕಂಪನಿ ಬೆಳೆಯಬೇಕೆಂದು ಬಯಸುವುದಾದರೆ ಅಲ್ಲಿಯ ಮ್ಯಾನೇಜ್‌ಮೆಂಟ್ ಪರಿಚಯ ಮಾತ್ರ ಇದ್ದರೆ ಸಾಲದು, ಅಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳ ಪರಿಚಯವೂ ಇರಬೇಕಾಗುತ್ತದೆ. ಅದಾಗಲು ಅವರಂತೆಯೇ ನಾವಿದ್ದು ನೋಡಬೇಕು, ಅದನ್ನೇ ಗೋಯಲ್ ಮಾಡಿರುವುದು

ಫುಡ್ ಡೆಲಿವರಿ ಬಾಯ್ ಆಗಿ ಹೋದ ಗೋಯಲ್
ಫುಡ್ ಡೆಲಿವರಿ ಬಾಯ್ಸ್ ತಮ್ಮ ಟಾರ್ಗೆಟ್ ತಲುಪಬೇಕೆಂದರೆ ತುಂಬಾನೇ ಕಷ್ಟಪಡುತ್ತಾರೆ. ಕಡುಬಡತನ, ಕುಟುಂಬದ ಜವಾಬ್ದಾರಿ, ಓದಿಗೆ ತಕ್ಕ ಕೆಲಸ ಸಿಗಲಿಲ್ಲ ಹೀಗೆ ಅನೇಕ ಕಾರಣಗಳಿಂದ ಹೊಟ್ಟೆಪಾಡಿಗಾಗಿ ಡೆಲಿವರಿ ಬಾಯ್ ಆಗಿ ದುಡಿಯುತ್ತಿರುತ್ತಾರೆ, ಕೆಲವರು ಪಾರ್ಟ್‌ಟೈಂ ಕೆಲಸ ಮಾಡಿ ತಮ್ಮ ಓದಿಗೆ ಹಣ ಹೊಂದಿಸುತ್ತರೆ. ಡೆಲಿವರಿ ಬಾಯ್ಸ್ ಕಷ್ಟ ಅಷ್ಟಿಷ್ಟಲ್ಲ.
ಎಷ್ಟೇ ಟ್ರಾಫಿಕ್ ಇರಲಿ ತಮ್ಮ ಪ್ರಾಣ ಪಣಕ್ಕಿಟ್ಟು ಸಮಯಕ್ಕೆ ಆಹಾರ ಒದಗಿಸಲು ಪ್ರಯತ್ನ ಪಡುತ್ತಾರೆ. ಕೆಲವೊಂದಿಷ್ಟು ಜನ ಡೆಲಿವರಿ ಬಾಯ್ ಬಂದಾಗ ಅವರೊಬ್ಬ ಮನುಷ್ಯರು ಎಂದು ಕೂಡ ಪರಿಗಣಿಸುವುದಿಲ್ಲ. ಲಿಫ್ಟ್ ಬಳಸುವಂತಿಲ್ಲ, ಬರುವುದು 5 ನಿಮಿಷ ತಡವಾದರೆ ಅವರ ತಂಡ ಆರ್ಡರ್ ರಿಜೆಕ್ಟ್ ಮಾಡುವುದು, ಅವರಿಗೆ ತಮ್ಮ ಮನಸ್ಸಿಗೆ ಬಂದಂತೆ ರೇಟಿಂಗ್ ನೀಡುವುದು ಮಾಡುತ್ತಾರೆ, ಮನುಷ್ಯತ್ವ ಮರೆತು ಡೆಲಿವರಿ ಬಾಯ್ಸ್ ಜೊತೆ ವರ್ತಿಸುವ ಅನೇಕರು ನಮ್ಮ ಸಮಾಜದಲ್ಲಿದ್ದಾರೆ.
ಇನ್ನು ಮಾಲ್‌ಗಳಲ್ಲಿ ಡೆಲಿವರಿ ಬಾಯ್ಸ್‌ಗೆ ಎಂಟ್ರಿ ಕೊಡಲ್ಲ, ಅವರು ಲಿಫ್ಟ್ ಬಳಸುವಂತಿಲ್ಲ ಹೀಗೆ ಅವರು ಅನೇಕ ತೊಂದರೆಗಳನ್ನು ಅನುಭವಿಸುತ್ತಾರೆ. ಕೆಲವೊಂದು ಫ್ಲ್ಯಾಟ್‌ಗಳಲ್ಲಿ ಇವರು ಲಿಫ್ಟ್ ಬಳಸುವಂತಿಲ್ಲ, ಫುಡ್ ಆರ್ಡರ್ ಮಾಡಿದವರಾದರೂ ಲಿಫ್ಟ್‌ನಲ್ಲಿ ಬಂದು ತಗೋತಾರೆ ಎಂದರೆ ಅದೂ ಇಲ್ಲ, ಅವರ ಮನೆ ಬಾಗಿಲಿಗೆ ಮೆಟ್ಟಿಲುಗಳನ್ನ ಹತ್ತ ಹೋಗಿ ಫುಡ್ ಕೊಟ್ಟು ಬಂದರೆ ಮಾತ್ರ ಇವರ ಹೊಟ್ಟೆ ತುಂಬುವುದು. ಡೆಲಿವರಿ ಬಾಯ್ಸ್ ಕಷ್ಟ ಏನೆಂಬುವುದು ಸ್ವತಃ ಗೋಯಲ್‌ಗೆ ಅರಿವಾಗಿದೆ.
ಜೊಮೆಟೊ ಸಿಇಒಗೆ ಮಾಲ್‌ನಲ್ಲಿ ಸಿಗಲಿಲ್ಲ ಎಂಟ್ರಿ
ಇವರು ಡೆಲಿವರಿ ಬಾಯ್ ಅಂತೆ ಯೂನಿಫಾರಂ ಹಾಕಿ ಫುಡ್ ಡೆಲಿವರಿಗೆ ಹೋಗಿದ್ದಾರೆ, ಎರಡನೇ ಫುಡ್ ಆರ್ಡರ್ ಗುರಗಾಂವ್‌ನಲ್ಲಿರುವ ಏಂಬೈನ್ಸ್ ಮಾಲ್‌ನಿಂದ ಬಂದಿದೆ, ಇವರು ಫುಡ್ ತರಲು ಹೋದ್ರೆ ಮಾಲ್‌ನ ಸೆಕ್ಯೂರಿಟಿ ಅವರು ಇವರನ್ನು ಡೆಲಿವರಿ ಬಾಯ್ ಎಂದು ಒಳಗಡೆ ಬಿಡಲ್ಲ, ಬೇರೆ ಕಡೆಯಿಂದ ಹೋಗಲು ಹೇಳುತ್ತಾರೆ, ನಂತರ ಅವರ ಸ್ಟೆಪ್ಸ್ ಹತ್ತಿ ಹೋಗಿ ಅಲ್ಲಿ ಇತರ ಡೆಲಿವರಿ ಬಾಯ್ಸ್ ಜೊತೆ ಸ್ಟೆಪ್‌ನಲ್ಲಿ ಕೂತು ಇವರ ಆರ್ಡರ್ ಬಂದಾಗ ತಗೊಂಡು ಬರ್ತಾರೆ. ಆವಾಗ ಅವರಿಗೆ ಒಬ್ಬ ಡೆಲಿವರಿ ಬಾಯ್ ಎಷ್ಟೊಂದು ಕಷ್ಟಪಡುತ್ತಾರೆ ಎಂಬುವುದರ ಅರಿವಾಗಿದೆ.
During my second order, I realised that we need to work with malls more closely to improve working conditions for all delivery partners. And malls also need to be more humane to delivery partners.
— Deepinder Goyal (@deepigoyal) October 6, 2024
What do you think? pic.twitter.com/vgccgyH8oE
ಗೋಯಲ್ ಟ್ವೀಟ್‌ಗೆ ಸ್ಪಂದಿಸಿದ ಮಾಲ್‌ನ ಮಾಲೀಕ
ಗೋಯಲ್ ' ನನ್ನ ಸೆಕೆಂಡ್ ಆರ್ಡರ್‌ನಲ್ಲಿ ನಾವು ಮಾಲ್‌ಗಳ ಜೊತೆ ಇನ್ನಷ್ಟು ಕ್ಲೋಸ್ ಆಗಿ ಕೆಲಸ ಮಾಡಿ ವರ್ಕಿಂಗ್ ಕಂಡೀಷನ್ ಉತ್ತಮ ಪಡಿಸಬೇಕಾಗಿದೆ, ಅಲ್ಲದೆ ಮಾಲ್‌ನವರು ಕೂಡ ಮಾನವೀಯತೆಯಿಂದ ವರ್ತಿಸಬೇಕಾಗಿದೆ, ಈ ಬಗ್ಗೆ ಏನಂತೀರಿ? ಎಂದು ಟ್ವೀಟ್ ಮಾಡಿದ್ದೇ ತಡ ಮಾಲ್‌ನವರು ಸ್ಪಂದಿಸಿದ್ದು ಡೆಲಿವರ್ ಬಾಯ್ಸ್‌ಗೆ ಕಂಫರ್ಟ್ ಫುಡ್ ಡೆಲಿವರಿ ಪಿಕ್‌ಅಪ್ ಪಾಯಿಂಟ್ ಮಾಡಿಕೊಡುವುದಾಗಿ ಹೇಳಿದೆ.
ಶಂಖದಿಂದ ಬಂದರೆ ಮಾತ್ರ ತೀರ್ಥ ಎನ್ನುವುದು ಇದಕ್ಕೆ, ಸ್ವತಃ ಗೋಯಲ್‌ಗೆ ಈ ಅನುಭವಾಗಿ ಹೇಳಿದ್ದಕ್ಕೆ ಬದಲಾಗುವುದಾಗಿ ಮಾಲ್‌ಗಳು ಒಪ್ಪಿವೆ, ಅದೇ ಒಬ್ಬ ಸಾಮಾನ್ಯ ಡೆಲಿವರಿ ಬಾಯ್‌ಗೆ ಪ್ರತಿದಿನ ಈ ಕಷ್ಟವಾಗುತ್ತಿತ್ತು, ಯಾರಾದರು ತಲೆ ಕೆಡಿಸಿಕೊಂಡರೆ?
ಹೊಟ್ಟೆಪಾಡಿಗಾಗಿ ಒಂದೊಂದು ವೃತ್ತಿಒ, ಮಾನವೀಯತೆಯೇ ಮನುಷ್ಯ ಧರ್ಮ ಅಲ್ವಾ?



Click it and Unblock the Notifications


