Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಈ ರಾಶಿಯವರು ಅತಿಯಾದ ಮೂಢನಂಬಿಕೆ ಹೊಂದಿರುತ್ತಾರೆ!
ಹಿಂದಿನ ಕಾಲದಲ್ಲಿ ಜನ ಮೂಢನಂಬಿಕೆಗೆ ಮರುಳಾಗಿ ಹೋಗಿದ್ದರು. ಮೌಢ್ಯತೆಯೇ ತುಂಬಿದ್ದ ಕಾಲವದು. ಆಗ ಜನರನ್ನು ಸಲಭವಾಗಿ ನಂಬಿಸಿ ಕತ್ತು ಕುಯ್ಯಲಾಗುತ್ತಿತ್ತು. ಆದರೆ ಶಿಕ್ಷಣ ಪಡೆದಂತೆ ಎಲ್ಲವೂ ನಿಧಾನವಾಗಿ ಬದಲಾಗುತ್ತಾ ಹೋಯಿತು. ಜನ ಮೂಢ ನಂಬಿಕೆಯಿಂದ ಹೊರ ಬಂದು ಈಗಿನ ಕಾಲಕ್ಕೆ ತಕ್ಕಂತೆ ಹೊಂದಿಕೊಳ್ಳೋದಕ್ಕೆ ಶುರು ಮಾಡಿದ್ದಾರೆ.
ಆದರೆ ಇಂದಿಗೂ ಕೂಡ ಈ ಮಾರ್ಡನ್ ಯುಗದಲ್ಲಿ ಕೆಲ ಜನರು ಜನ ಮೂಢ ನಂಬಿಕೆಯನ್ನು ಆಳವಾಗಿ ನಂಬಿಕೊಂಡಿದ್ದಾರೆ. ಪ್ರತಿಯೊಂದು ಕೆಲಸ ಮಾಡುವಾಗಲೂ ಕೂಡ ಅವರು ಅಂತಹ ನಂಬಿಕಗೆ ಮರುಳಾಗಿ ಅದನ್ನೇ ನಂಬಿಕೊಂಡಿರುತ್ತಾರೆ. ಅದ್ರಲ್ಲೂ ಕೆಲ ರಾಶಿಯವರು ಈ ಬಗ್ಗೆ ಹೆಚ್ಚಿನ ನಂಬಿಕೆಯನ್ನು ಹೊಂದಿದ್ದಾರೆ. ಹಾಗಾದ್ರೆ ಆ ರಾಶಿಯವರು ಯಾರು ಅನ್ನೋದನ್ನು ನೋಡೋಣ.

ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರು ಕೆಲವೊಂದು ವಿಚಾರಗಳನ್ನು ಅತಿಯಾಗಿ ನಂಬುತ್ತಾರೆ. ಮಂಗಳವಾರದ ದಿನ ಶುಭ ಕಾರ್ಯ ಮಾಡಬಾರದೆಂದು ಅವರು ಬಲವಾಗಿ ನಂಬಿರುತ್ತಾರೆ. ಯಾವುದಾದರೂ ಒಂದು ದಿನ ಕೆಟ್ಟ ಘಟನೆ ನಡೆದರೆ ಮತ್ತೆ ಮುಂದಿನ ವಾರ ಆ ದಿನ ಅವರು ಹೊರಗಡೆ ಹೋಗೋದಕ್ಕೆ ಹೆದರುತ್ತಾರೆ. ಹಾಗೂ ಮನೆಯವರನ್ನೂ ಹೊರಗಡೆ ಹೋಗೋದಕ್ಕೆ ಬಿಡೋದಿಲ್ಲ. ಇದರಿಂದ ಅವರ ಮನೆಯವರಿಗೂ ಕಿರಿಕಿರಿ ಉಂಟಾಗುತ್ತದೆ.
ಕನ್ಯಾರಾಶಿ
ಕನ್ಯಾ ರಾಶಿಯವರು ಕೂಡ ಮೂಢ ನಂಬಿಕೆಗಳನ್ನು ಅತಿಯಾಗಿ ನಂಬುವ ಜನ ಇವರು. ಆಚಾರ ವಿಚಾರ ಕಟ್ಟು ಪಾಡುಗಳನ್ನು ಅತಿಯಾಗಿ ನಂಬುವವರು ಇವರು. ನಾವು ಕೈಗೊಳ್ಳುವ ಪೂಜೆಯಲ್ಲಿ ಕೊಂಚ ತಪ್ಪಾದರೂ ಇದರಿಂದ ವಿಘ್ನ ಉಂಟಾಗುತ್ತೆ ಎಂದು ಇವರು ಆಳವಾಗಿ ನಂಬಿರುತ್ತಾರೆ. ಪ್ರತಿಯೊಂದು ವಿಚಾರದಲ್ಲೂ ಇವರು ಅತಿಯಾಗಿ ಆಡುವುದರಿಂದ ಇವರ ಮನೆಯವರು ಇದರಿಂದ ಕಿರಿ ಕಿರಿ ಅನುಭವಿಸುತ್ತಾರೆ.
ಮೀನ ರಾಶಿ
ಮೀನ ರಾಶಿಯವರು ಕೂಡ ಮೂಢ ನಂಬಿಕೆಗಳನ್ನು ಹೆಚ್ಚಾಗಿ ನಂಬುತ್ತಾರೆ. ಕನ್ನಡಿಯೊಂದು ಒಡೆದು ಹೋದರೆ ಮುಂದಿನ ಏಳು ವರ್ಷಗಳು ದುರಾದೃಷ್ಟ ಎಂದು ನಂಬುವ ಜನರು. ಇನ್ನೂ ಕೆಲವರು ಮನೆಯ ಒಳಗಡೆ ಕೊಡೆ ಬಿಡಸಬಾರದು ಎಂಬ ಮೂಢನಂಬಿಕೆಯನ್ನು ಹೊದಿದ್ದಾರೆ. ಇದರಿಂದ ದುರಾದೃಷ್ಟ ಉಂಟಾಗುತ್ತೆ ಎಂದು ನಂಬಲಾಗಿದೆ. ಮೀನ ರಾಶಿಯವರ ಈ ರೀತಿಯ ನಂಬಿಕೆಯಿಂದ ಅವರ ಆಪ್ತರೇ ಅವರಲ್ಲಿ ಅಸಮಾಧಾನ ಹೊಂದಿರುತ್ತಾರೆ.
ಧನು ರಾಶಿ
ಧನು ರಾಶಿಯವರು ಬಲ ಅಂಗೈ ತುರಿಸುತ್ತಿದ್ದರೆ ಹಣ ಬರುತ್ತೆ ಅನ್ನೋ ನಂಬಿಕೆಯನ್ನು ಹೊಂದಿರುವ ಜನರಾಗಿದ್ದಾರೆ. ಎಡ ಅಂಗೈ ತುರಿಸುತ್ತಿದ್ದರೆ ದುಡ್ಡು ಹೋಗುತ್ತದೆ ಎಂದು ನಂಬುತ್ತಾರೆ. ನಿಮ್ಮ ಮೂಢ ನಂಬಿಕೆಗಳು ಅನೇಕರಿಗೆ ಮನೋರಂಜನೆ ಆಗಬಹುದು. ನಿಮ್ಮ ದೈನಂದಿನ ಜೀವನದಲ್ಲಿ ಮೂಢನಂಬಿಕೆಗಳು ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು. ಹೀಗಾಗಿ ನಂಬಿಕೆ ಇರಲಿ ಆದರೆ ಅತಿಯಾದ ನಂಬಿಕೆ ಎಂದಿಗೂ ಒಳ್ಳೆಯದಲ್ಲ.



Click it and Unblock the Notifications
