ಈ 6 ರಾಶಿಯವರು ಬೇರೆಯವರಿಗೆ ಕೆಟ್ಟದ್ದನ್ನು ಬಯಸೋದಿಲ್ಲ!

ಹೆಚ್ಚಿನವರು ತಮ್ಮ ಬಗ್ಗೆ ಮಾತ್ರ ಯೋಚಿಸುತ್ತಾರೆ. ಆದ್ರೆ ಇತರರ ಬಗ್ಗೆ ಅವರಲ್ಲಿ ದ್ವೇಷ, ಅಸೂಯೆ ತುಂಬಿರುತ್ತದೆ. ಬೇರೆಯವರಿಗೆ ಒಳ್ಳೆಯದು ಮಾಡಬೇಕು ಅನ್ನೋ ಮನಸ್ಸು ಎಲ್ಲರಿಗೆ ಇರೋದಿಲ್ಲ. ಅದ್ರಲ್ಲಿ ಕೆಲವೇ ಕೆಲವು ಜನ ಮಾತ್ರ ಇತರರ ಬಗ್ಗೆ ಕಾಳಜಿ ತೋರುತ್ತಾರೆ. ಹಾಗೂ ಅವರನ್ನು ಅರ್ಥ ಮಾಡಿಕೊಂಡು ಪ್ರೋತ್ಸಾಹ ನೀಡುತ್ತಾರೆ.

ಯಾರಿಗೆ ಒಳ್ಳೆಯ ಮನಸ್ಸಿರುತ್ತದೆಯೋ ಅವರ ಆಲೋಚನೆಗಳು ಕೂಡ ಧನಾತ್ಮಕವಾಗಿರುತ್ತದೆ. ಹಾಗೂ ಅವರ ಮನಸ್ಸಿನಲ್ಲಿ ಕಲ್ಮಶ ಅನ್ನೋದು ಇರೋದಿಲ್ಲ. ಇನ್ನೂ ಇವರಿಗೆ ಸುಳ್ಳು ಹೇಳುವುದು, ಅಪ್ರಮಾಣಿಕತೆ ತೋರುವುದು, ದ್ರೋಹ ಮಾಡೋದು ಗೊತ್ತಿರೋದಿಲ್ಲ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಯವರು ಕೂಡ ಇದೇ ರೀತಿ ನಿಷ್ಮಲ್ಮಶ ಮನಸ್ಸನ್ನು ಹೊಂದಿರುತ್ತಾರಂತೆ. ಹಾಗಾದ್ರೆ ಆ ರಾಶಿಯವರು ಯಾರು ಅನ್ನೋದನ್ನು ತಿಳಿಯೋಣ.

Zodiac Signs Who Always have a Good Intention in Heart According to Astrology

ಸಿಂಹ ರಾಶಿ

ಸಿಂಹ ರಾಶಿಯವರು ಮನಸ್ಸಿನಿಂದ ಯಾರಿಗೂ ಕೆಟ್ಟದ್ದನ್ನು ಬಯಸುವವರಲ್ಲ. ತಮ್ಮ ಜೊತೆ ಇರುವವರು ಯಾವತ್ತೂ ಖುಷಿಯಾಗಿರಲಿ ಎಂದು ಇವರು ಬಯಸುತ್ತಾರೆ. ಇವರ ಗುಣ ಹೇಗೆಂದರೆ ಇವರು ನ್ಯಾಯ ಸಮ್ಮತವಾಗಿರುತ್ತಾರೆ. ಯಾವುದೇ ಕಾರಣಕ್ಕೂ ಅನ್ಯಾಯದ ಕೆಲಸಕ್ಕೆ ಪ್ರೋತ್ಸಾಹ ನೀಡುವುದಿಲ್ಲ. ಬೇರೆಯವರು ಖುಷಿಯಾಗಿರಲಿ ಎಂದು ಇವರು ಮನಸ್ಸಿನಿಂದ ಬಯಸುತ್ತಾರೆ.

ಕುಂಭ ರಾಶಿ

ಕುಂಭ ರಾಶಿಯವರು ಅತ್ಯಂತ ಆದರ್ಶವಾದಿ ವ್ಯಕ್ತಿತ್ವವನ್ನು ಹೊಂದಿರುತ್ತಾರಂತೆ. ಇವರು ಆಡುವ ಮಾತುಗಳು ಸ್ನೇಹಿತರು ಹಾಗೂ ಆಪ್ತರ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತಂತೆ. ಇವರು ಯಾವುದೇ ಕಾರಣಕ್ಕೂ ಕೆಟ್ಟ ಉದ್ದೇಶವನ್ನು ಹೊಂದಿರೋದಿಲ್ಲ. ಬೇರೆಯವರಿಗೆ ಒಳ್ಳೆಯದಾಗಲಿ ಎಂದು ಅವರು ಬಯಸುತ್ತಾರೆ. ಇನ್ನೂ ಉತ್ತಮ ಸಮಾಜವನ್ನು ಬೆಳೆಸುವುದರ ಕಡೆಗೆ ಇವರು ತಮ್ಮ ಮನಸ್ಸನ್ನು ಕೇಂದ್ರೀಕರಿಸುತ್ತಾರೆ.

ಕರ್ಕಾಟಕ ರಾಶಿ

ಕರ್ಕಾಟಕ ರಾಶಿಯವರು ತಮಗಿಂತ ಹೆಚ್ಚಾಗಿ ತಮ್ಮ ಆಪ್ತರು ಹಾಗೂ ಸ್ನೇಹಿತರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಹಾಗೂ ಅವರ ಯೋಗಕ್ಷೆಮದ ಬಗ್ಗೆ ಪ್ರಾಮಾಣಿಕ ಚಿಂತನೆ ಮಾಡುತ್ತಾರೆ. ಇನ್ನೂ ಇವರು ತಮ್ಮ ಪ್ರೀತಿ ಪಾತ್ರರನ್ನು ತುಂಬಾನೇ ಪ್ರೀತಿ ಮಾಡುತ್ತಾರೆ. ಅವರ ಬಗ್ಗೆ ಸಹಾನುಭೂತಿ ಹೊಂದಿರುತ್ತಾರೆ. ಇನ್ನೂ ಕಷ್ಟ ಕಾಲದಲ್ಲಿ ಆಪ್ತರ ಕೈ ಬಿಡುವವರಲ್ಲ ಈ ರಾಶಿಯವರು.

ತುಲಾ ರಾಶಿ

ತುಲಾ ರಾಶಿಯವರು ಯಾವಾಗಲೂ ನ್ಯಾಯದ ಪರವಾಗಿ ಇರುತ್ತಾರೆ. ಅನ್ಯಾಯವನ್ನು ಇವರು ಸಹಿಸೋದಿಲ್ಲ. ಇವರು ಯಾವುದೇ ಕಾರಣಕ್ಕೂ ತಾರತಮ್ಯ ಮಾಡೋದಿಲ್ಲ. ತಮ್ಮ ಜೊತೆ ಇರುವವರು ಯಾವಾಗಲೂ ಖುಷಿಯಾಗಿರಲಿ ಎಂದು ಬಯಸುತ್ತಾರೆ. ಹಾಗೂ ತುಂಬಾನೇ ಪ್ರಾಮಾಣಿಕ ವ್ಯಕ್ತಿಗಳು ಇವರು. ಇನ್ನೂ ಈ ರಾಶಿಯವರು ವಿಶಾಲ ಹೃದಯವನ್ನು ಹೊಂದಿದ್ದಾರೆ.

ಧನು ರಾಶಿ

ಧನು ರಾಶಿಯವರು ಯಾವಾಗಲೂ ಇತರರಿಗೆ ಒಳ್ಳೆಯದಾಗಲಿ ಎಂದು ಬಯಸುತ್ತಾರೆ. ಈ ರಾಶಿಯವರಲ್ಲಿ ಉತ್ಸಾಹ ಹೆಚ್ಚಾಗಿರುತ್ತದೆ. ಹೊಸ ವಿಚಾರಗಳನ್ನು ಕಲಿಯೋದಕ್ಕೆ ಮನಸ್ಸು ಮಾಡುತ್ತಾರೆ. ಹಾಗೂ ತಮ್ಮ ಜೊತೆಗೆ ಇತರರನ್ನು ಬೆಳೆಸುವ ಉತ್ತಮ ಮನೋಭಾವವನ್ನು ಇವರು ಹೊಂದಿದ್ದಾರೆ. ಹಾಗೂ ಸಾಧನೆ ಮಾಡೋದಕ್ಕೆ ಇವರು ಇತರರನ್ನು ಪ್ರೇರೇಪಿಸುತ್ತಾರೆ.

ಮೀನ ರಾಶಿ

ಕಷ್ಟ ಎಂದು ಬಂದವರಿಗೆ ಸಹಾಯ ಮಾಡೋದ್ರಲ್ಲಿ ಮೀನ ರಾಶಿಯವರು ಯಾವಾಗಲೂ ಮುಂದಿರುತ್ತಾರೆ. ಇತರರ ಭಾವನೆಗಳಿಗೆ ಬೆಲೆ ಕೊಡುವ ಒಳ್ಳೆಯ ಮನಸ್ಸು ಇವರಲ್ಲಿದೆ. ಇನ್ನೂ ಈ ರಾಶಿಯವರಿಗೆ ಬೇರೆಯವರ ಬಗ್ಗೆ ಸಹಾನುಭೂತಿ ಹೆಚ್ಚು. ಬೇರೆಯವರಿಗೆ ಪಾಪ, ಪುಣ್ಯ ತೋರೋದ್ರಲ್ಲಿ ಇವರು ಮೊದಲಿಗರಾಗಿರುತ್ತಾರೆ.

English summary

Zodiac Signs Who Always have a Good Intention in Heart According to Astrology

These Zodiac Signs Who Always have a Good Intention in Heart According to Astrology.
Story first published: Saturday, June 17, 2023, 8:00 [IST]
X
Desktop Bottom Promotion