Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಈ 6 ರಾಶಿಯವರು ಅತಿಯಾದ ಆಲೋಚನೆಯಿಂದ ದುಃಖಿತರಾಗುತ್ತಾರೆ!
ನಾವು ಯಾವುದಾದರೂ ಕೆಲಸವನ್ನು ಮಾಡುವಾಗ ಯೋಚಿಸಿ ನಿರ್ಧಾರ ಮಾಡಬೇಕು ಅಂತ ಹೇಳುತ್ತಾರೆ. ಏಕೆಂದರೆ ಗಡಿ-ಬಿಡಿಯಲ್ಲಿ ತೆಗೆದುಕೊಂಡ ನಿರ್ಧಾರ ನಿಮ್ಮ ಜೀವನಕ್ಕೆ ಮುಳುವಾಗಬಹುದು. ಆದರೆ ಹಾಗಂತ ಇಡೀ ದಿನ ಒಂದೇ ವಿಚಾರದ ಬಗ್ಗೆ ಅತಿಯಾಗಿ ಯೋಚಿಸುವುದು ಒಳ್ಳೆಯದಲ್ಲ. ಯಾವುದೇ ವಿಚಾರವಾದರೂ ಸರಿ ಆ ಬಗ್ಗೆ ಅತಿಯಾಗಿ ಚಿಂತಿಸೋದಕ್ಕೆ ಹೋಗಬಾರದು.

ಆದರೆ ಕೆಲವರಿಗೆ ಈ ಅಭ್ಯಾಸ ಹೆಚ್ಚಿರುತ್ತೆ. ಒಂದು ಘಟನೆ ನಡೆದರೆ ಅದೇ ವಿಚಾರದ ಬಗ್ಗೆ ಇಡೀ ಹೊತ್ತು ಯೋಚಿಸುತ್ತಾ ಕೂರುವುದು. ಆ ವಿಚಾರದ ಬಗ್ಗೆ ಕೊರಗುತ್ತಿರುತ್ತಾರೆ. ಅಷ್ಟಕ್ಕೂ ಯಾವೆಲ್ಲಾ ರಾಶಿಯವರು ಒಂದು ವಿಚಾರದ ಬಗ್ಗೆ ಅತಿಯಾಗಿ ಆಲೋಚಿಸುತ್ತಾ ಕುಳಿತುಕೊಳ್ಳುತ್ತಾರೆ ಅನ್ನೋದನ್ನು ತಿಳಿಯೋಣ.
ಕನ್ಯಾ ರಾಶಿ
ಕನ್ಯಾ ರಾಶಿಯನ್ನು ಬುಧನು ಆಳುತ್ತಿದ್ದಾನೆ. ಈ ರಾಶಿಯಲ್ಲಿ ಜನಿಸಿದವರು ಜೀವನದ ಪ್ರತಿಯೊಂದು ವಿಚಾರದ ಬಗ್ಗೆ ಅತಿಯಾಗಿ ಆಲೋಚನೆ ಮಾಡುತ್ತಾರೆ. ಸಣ್ಣ ನಿರ್ಧಾರಗಳು ಅಥವಾ ಪ್ರಮುಖ ಜೀವನ ಆಯ್ಕೆಗಳನ್ನು ಮಾಡುವಲ್ಲಿ ಕನ್ಯಾರಾಶಿಗಳು ಪ್ರತಿ ವಿವರವನ್ನು ವಿಶ್ಲೇಷಿಸಲು ಮತ್ತು ವಿಭಜಿಸಲು ಒಲವು ತೋರುತ್ತಾರೆ. ಇವರ ಪರಿಪೂರ್ಣತೆಯ ಅನ್ವೇಷಣೆಯು ಇವರ ಅವನತಿಗೆ ಕಾರಣವಾಗಬಹುದು.
ಮಿಥುನ ರಾಶಿ
ಬುಧನು ಮಿಥುನ ರಾಶಿಯನ್ನು ಆಳುತ್ತಿದ್ದಾನೆ. ಎಲ್ಲಾ ವಿಚಾರದ ಬಗ್ಗೆ ಅತಿಯಾಗಿ ಯೋಚಿಸುವ ಪ್ರವೃತ್ತಿಯನ್ನು ಇವರು ಹೊಂದಿರುತ್ತಾರೆ. ಮಿಥುನ ರಾಶಿಯವರ ಅತಿಯಾದ ಚಿಂತನೆಯು ಅವರಿಗೆ ಶಾಂತಿ ಮತ್ತು ನೆಮ್ಮದಿಯನ್ನು ಕಂಡುಕೊಳ್ಳಲು ಕಷ್ಟವಾಗಬಹುದು. ಅವರ ಮನಸ್ಸು ನಿರಂತರವಾಗಿ ಓಡುತ್ತಿರುತ್ತದೆ. ಮಿಂಚಿನ ವೇಗದಲ್ಲಿ ಒಂದು ಆಲೋಚನೆಯಿಂದ ಇನ್ನೊಂದಕ್ಕೆ ಬದಲಾಗುತ್ತದೆ. ವಿಭಿನ್ನ ದೃಷ್ಟಿಕೋನದ ಆಲೋಚನೆಯೇ ಕೊನೆಗೆ ಚಿಂತನೆಗೆ ಕಾರಣವಾಗುತ್ತದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಭಾವೋದ್ರಿಕ್ತರು. ಪ್ರತಿ ಸನ್ನಿವೇಶವನ್ನು ಅತಿಯಾಗಿ ಯೋಚಿಸುವುದಕ್ಕೆ ಹೆಸರುವಾಸಿಯಾಗಿದ್ದಾರೆ. ಸರಳವಾದ ವಿಚಾರಕ್ಕೂ ಕೂಡ ಅತಿಯಾಗಿ ಯೋಚನೆ ಮಾಡುತ್ತಾರೆ. ಈ ಅತಿಯಾಗಿ ಯೋಚಿಸುವ ಪ್ರವೃತ್ತಿಯು ವೃಶ್ಚಿಕ ರಾಶಿಯವರಿಗೆ ತಮ್ಮ ಮನಸ್ಸಿನಲ್ಲಿ ಓಡುವ ಆಲೋಚನೆಗಳನ್ನು ಶಾಂತಗೊಳಿಸಲು ಸಾಧ್ಯವಾಗದ ಕಾರಣ ಅವರೊಳಗೆ ಅಶಾಂತಿ ಮತ್ತು ಚಡಪಡಿಕೆಯನ್ನು ಉಂಟುಮಾಡಬಹುದು. ಈ ರಾಶಿಯವರು ಜೀವನದ ರಹಸ್ಯಗಳನ್ನು ಬಿಚ್ಚಿಡುವ ಸಹಜ ಬಯಕೆಯನ್ನು ಹೊಂದಿದ್ದಾರೆ. ಹಾಗೆಯೇ ಯಾವುದಾದರೂ ಘಟನೆಗಳ ಹಿಂದಿನ ಆಳವಾದ ಅರ್ಥಗಳನ್ನು ಆಲೋಚಿಸುತ್ತಾರೆ.
ಮೀನ ರಾಶಿ
ಮೀನ ರಾಶಿಯವರು ಒಂದು ವಿಚಾರವನ್ನು ಆಳವಾಗಿ ಯೋಚಿಸುತ್ತಾರೆ. ಈ ರಾಶಿಯವರು ನಿರಂತರವಾಗಿ ಒಂದು ವಿಚಾರದ ಬಗ್ಗೆ ಆಲೋಚಿಸುತ್ತಾರೆ. ಒಂದು ವಿಚಾರದ ಬಗ್ಗೆ ಆಳವಾಗಿ ಯೋಚಿಸಿ ತಲೆ ಕೆಡಿಸಿಕೊಳ್ಳುತ್ತಾರೆ. ಇವರು ಭಾವನಾತ್ಮಕ ಜೀವಿಗಳು ಆಗಿರೋದ್ರಿಂದ ಬಹು ಬೇಗನೆ ದುಃಖಕ್ಕೆ ಒಳಗಾಗುತ್ತಾರೆ. ಅನಗತ್ಯ ವಿಚಾರಗಳಿಗೂ ಸುಖಾಸುಮ್ಮನೇ ಯೋಚಿಸಿ ನೋವು ಪಟ್ಟುಕೊಳ್ಳುತ್ತಾರೆ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರು ಎಲ್ಲವನ್ನೂ ಅತಿಯಾಗಿ ಯೋಚಿಸುವುದಕ್ಕೆ ಹೆಸರುವಾಸಿಯಾಗಿದ್ದಾರೆ. ಅವರು ನಿರಂತರವಾಗಿ ಪ್ರತಿ ಸನ್ನಿವೇಶವನ್ನು ವಿಶ್ಲೇಷಿಸುತ್ತಾರೆ ಮತ್ತು ಆಲೋಚಿಸುತ್ತಾರೆ. ಈ ರಾಶಿಯವರು ಅತಿಯಾಗಿ ಯೋಚಿಸುವ ಪ್ರವೃತ್ತಿಯಿಂದ ಭಾವನಾತ್ಮಕವಾಗಿ ನೋವು ಅನುಭವಿಸುತ್ತಾರೆ. ಅವರು ತಮ್ಮನ್ನು ಮತ್ತು ತಮ್ಮ ಪ್ರೀತಿಪಾತ್ರರನ್ನು ರಕ್ಷಿಸಿಕೊಳ್ಳಲು ಶ್ರಮಿಸುತ್ತಾರೆ, ಇದು ಪ್ರತಿ ನಿರ್ಧಾರ ಅಥವಾ ಕ್ರಿಯೆಯನ್ನು ಸೂಕ್ಷ್ಮವಾಗಿ ಪರೀಕ್ಷಿಸಲು ಅವರನ್ನು ಒತ್ತಾಯಿಸುತ್ತದೆ.
ಮಕರ ರಾಶಿ
ಮಕರ ರಾಶಿಯವರು ಜೀವನದ ಪ್ರತಿಯೊಂದು ಅಂಶವನ್ನು ಅತಿಯಾಗಿ ಯೋಚಿಸುತ್ತಾರೆ. ಈ ರಾಶಿಯವರು ಆಳವಾದ ಚಿಂತನೆ ಮತ್ತು ವಿಶ್ಲೇಷಣೆಯ ಕಡೆಗೆ ನೈಸರ್ಗಿಕ ಒಲವನ್ನು ಹೊಂದಿರುತ್ತಾರೆ. ಮಕರ ರಾಶಿಯವರು ಪ್ರತಿ ಹೆಜ್ಜೆಯನ್ನು ನಿಖರವಾಗಿ ಯೋಜಿಸುತ್ತಾರೆ. ಮಕರ ರಾಶಿಯವರು ಸಂಭಾಷಣೆಗಳನ್ನು ಅತಿಯಾಗಿ ವಿಶ್ಲೇಷಿಸಲು ಒಲವು ತೋರುತ್ತವೆ. ಇವರ ಮನಸ್ಸು ಯಾವಾಗಲೂ ಜಟಿಲವಾಗಿರುತ್ತದೆ.



Click it and Unblock the Notifications
