Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ 5 ರಾಶಿಯವರು ಚಿಕ್ಕ-ಪುಟ್ಟ ವಿಚಾರಕ್ಕೂ ಕಣ್ಣೀರು ಹಾಕುತ್ತಾರೆ!
ಪ್ರತಿಯೊಬ್ಬರ ಗುಣ-ನಡೆತೆ ಒಂದೇ ರೀತಿ ಇರೋದಿಲ್ಲ. ಈ ಜಗತ್ತಿನಲ್ಲಿ ಒಬ್ಬೊಬ್ಬರು ಒಂದೊಂದು ರೀತಿ ಇರುತ್ತದೆ. ಕೆಲವರು ಹೇಗಿರುತ್ತಾರೆ ಎಂದರೆ ಅವರಿಗೆ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸೋದು ಹೇಗೆ ಅಂತಾನೇ ಗೊತ್ತಿರೋದಿಲ್ಲ. ಏನಾದ್ರು ಸ್ವಲ್ಪ ಸಮಸ್ಯೆ ಆದ್ರೆ ಸಾಕು ಎಲ್ಲವನನೂ ಬಿಟ್ಟು ಕಣ್ಣೀರು ಹಾಕೋದಕ್ಕೆ ಶುರು ಮಾಡ್ತಾರೆ.
ಬೇರೆ ಯಾರಾದರೂ ಇವರ ಮುಂದೆ ಕಠಿಣವಾಗಿ ಮಾತನಾಡಿದರೂ ಸಾಕು ಅದನ್ನು ಎದುರಿಸುವ ಶಕ್ತಿ ಇವರಿಗೆ ಇರೋದಿಲ್ಲ. ಮಾತು ಮಾತಿಗೂ ಕಣ್ಣೀರು ಹಾಕುತ್ತಾರೆ. ಇವರ ಸ್ವಭಾವ ತುಂಬಾನೇ ಸೂಕ್ಷ್ಮವಾಗಿರುತ್ತಾರೆ. ಕೊಂಚ ನೋವಾದರೂ ಇವರು ಅದನ್ನು ತಡೆಯೋದಿಲ್ಲ. ಅಷ್ಟಕ್ಕು ಯಾವ ರಾಶಿಯವರು ತುಂಬಾ ಭಾವನಾತ್ಮಕ ಜೀವಿಗಳು ಅನ್ನೋದನ್ನು ತಿಳಿಯೋಣ.

ವೃಷಭ ರಾಶಿ
ವೃಷಭ ರಾಶಿಯವರು ತಮ್ಮ ಆಪ್ತರನ್ನು ತುಂಬಾನೇ ಹಂಚಿಕೊಂಡಿರುತ್ತಾರೆ. ಅವರೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುತ್ತಾರೆ. ಇವರು ತುಂಬಾ ಸೂಕ್ಷ್ಮ ಸ್ವಭಾವದವರಾಗಿರೋದ್ರಿಂದ ಕೆಲವೊಂದು ಕಠಿಣ ಪರಿಸ್ಥಿತಿಯನ್ನು ಎದುರಿಸೋದು ಇವರಿಂದ ಸಾಧ್ಯ ಆಗೋದಿಲ್ಲ. ಇನ್ನೂ ಇವರು ತಮ್ಮ ಆಪ್ತರಿಂದ ನೋವಾದರೂ ಕೂಡ ಸಹಿಸೋದಿಲ್ಲ. ಒಂದು ವಿಷಯವನ್ನು ಪದೇ ಪದೇ ನೆನೆಯುತ್ತಾ ಕಣ್ಣೀರು ಹಾಕುತ್ತಾರೆ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರು ಕೂಡ ಭಾವನಾತ್ಮಕ ಜೀವಿಗಳು. ಬೇರೆಯವರ ಬಗ್ಗೆ ಇವರು ಸಹಾನುಭೂತಿ ಹೊಂದಿರುತ್ತಾರೆ. ಕರ್ಕಾಟಕ ರಾಶಿಯವರು ಟೀಕೆ ಅಥವಾ ಋಣಾತ್ಮಕತೆಯನ್ನು ಸಹಿಸೋದಿಲ್ಲ. ಯಾವುದಾದರೂ ಒಂದು ವಿಚಾರ ಇವರ ಮನಸ್ಸಿನ ಮೇಲೆ ಆಳವಾಗಿ ಪರಿಣಾಮ ಬೀರಬಹುದು. ಹಾಗೂ ಅದನ್ನೇ ನೆನೆದು ಇವರು ಕೊರಗುತ್ತಾರೆ.
ಕನ್ಯಾ ರಾಶಿ
ಕನ್ಯಾ ರಾಶಿಯವರು ಅತೀ ಸೂಕ್ಷ್ಮ ಸ್ವಭಾವದವರು. ಇತರರು ಇವರನ್ನು ಟೀಕೆ ಮಾಡಿದರೆ ಇವರಿಂದ ಸಹಿಸಿಕೊಳ್ಳುವ ಶಕ್ತಿ ಇರೋದಿಲ್ಲ. ಸೋಲುಗಳನ್ನು ಇವರು ಸಹಿಸಿಕೊಳ್ಳೋದಿಲ್ಲ. ಸೋಲಿನ ಭಯ ಯಾವಾಗಲೂ ಇವರನ್ನು ಕಾಡುತ್ತಿರುತ್ತದೆ. ಇವರು ಒಂದು ಸಾರಿ ಸೋತರೆ ಅದರಿಂದ ಮೇಲೇಳೋದಕ್ಕೆ ತುಂಬಾನೇ ಕಷ್ಟ ಪಡುತ್ತಾರೆ. ಇವರೊಳಗೆ ಗಟ್ಟಿತನ ಅನ್ನೋದು ಇಲ್ಲ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ದ್ರೋಹ, ಅನ್ಯಾಯ, ಮೋಸವನ್ನು ಸಹಿಸುವ ಶಕ್ತಿಯಿಲ್ಲ. ಆ ರೀತಿ ಏನಾದ್ರು ಘಟನೆ ನಡೆದ್ರೆ ಇವರು ಸಂಪೂರ್ಣವಾಗಿ ಕುಗ್ಗಿ ಹೋಗುತ್ತಾರೆ. ಹೆಚ್ಚಾಗಿ ಇವರು ತಮ್ಮ ದುಃಖವನ್ನು ಯಾರ ಬಳಿಯೂ ಹೇಳದೇ ಒಬ್ಬರೇ ಅಳುತ್ತಾ ಕೂರುತ್ತಾರೆ. ಇವರು ನೋಡೋದಕ್ಕೆ ಗಟ್ಟಿ ಮನುಷ್ಯನಂತೆ ಕಂಡರೂ ಕೂಡ ಇವರು ಮೃದು ಸ್ವಭಾವದವರು.
ಮೀನ ರಾಶಿ
ಮೀನ ರಾಶಿಯವರು ಅತ್ಯಂತ ಸೂಕ್ಷ್ಮ ಸ್ವಭಾವದವರು. ಬೇರೆಯವರು ಇವರನ್ನು ಸುಖಾ ಸುಮ್ಮನೇ ಟೀಕಿಸಿದರೂ ಕೂಡ ಅದರ ಬಗ್ಗೆ ಇಡೀ ದಿನ ಚಿಂತೆ ಮಾಡಿ ಕೊರಗುತ್ತಾ ಕುಳಿತಿರುತ್ತಾರೆ. ಈ ರಾಶಿಯವರ ವ್ಯಕ್ತಿತ್ವ ತುಂಬಾನೇ ಒಳ್ಳೆಯದು. ಬೇರೆಯವರಿಗೆ ಕೆಟ್ಟದಾಗಲಿ ಎಂದು ಬಯಸುವವರಲ್ಲ ಇವರು. ಆದರೆ ಇವರ ಸುತ್ತ-ಮುತ್ತಲಿನವರು ಇವರಿಗೆ ನೋವು ಕೊಡುತ್ತಾರೆ. ಒಂದು ವೇಳೆ ಇವರು ಏನು ತಪ್ಪು ಮಾಡಿಲ್ಲ ಎಂದರೂ ಕೂಡ ಬೇರೆಯವರನ್ನು ಎದುರಿಸುವ ಶಕ್ತಿ ಇವರಿಗೆ ಇರೋದಿಲ್ಲ. ಪ್ರತಿ ಮಾತಿಗೂ ಕಣ್ಣೀರು ಹಾಕುತ್ತಾರೆ.
ಈ ಐದು ರಾಶಿಯವರ ಗುಣ ಹೆಚ್ಚು ಕಡಿಮೆ ಒಂದೇ ರೀತಿ ಇದೆ. ಮೃದು ಹಾಗೂ ಸೂಕ್ಷ್ಮ ಸ್ವಭಾವದವರು ಇವರು.



Click it and Unblock the Notifications