Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಅಂಗಳದಲ್ಲಿದ್ದ ಹೂವು ತಿಂದು ಯುವತಿ ಸಾವು..! ಶಬರಿಮಲೆಯಲ್ಲಿ ಈ ಹೂವಿಗೆ ನಿಷೇಧ
ನಮ್ಮ ಸುತ್ತಮುತ್ತವೇ ಅಪಾಯಗಳಿದ್ದರೂ ನಮಗೆ ತಿಳಿಯೋದಿಲ್ಲ. ಇದರ ಜೊತೆಗೆ ಸಾವು ಯಾವಾಗ ಯಾರ ಬೆನ್ನ ಹಿಂದೆ ಬರುತ್ತೆ ಅನ್ನೋದನ್ನು ಸಹ ನಾವು ಊಹಿಸಲು ಸಾಧ್ಯವಾಗುವುದಿಲ್ಲ. ಯಾವ ವಸ್ತುಗಳು ಯಾವಾಗ ಅಪಾಯಕಾರಿಯಾಗಿ ಬದಲಾಗುತ್ತವೆ ಎಂಬುದು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.
ಏಕೆಂದರೆ ಯಾವಾಗ? ಯಾರಿಗೆ ಯಾವ ರೀತಿಯಲ್ಲಿ ಸಾವು ಬರುತ್ತವೆ ಎಂಬುದನ್ನು ನಾವು ತಿಳಿಯಲು ಸಾಧ್ಯವಿಲ್ಲ. ಕೆಲವರ ಸಾವು ಎಷ್ಟು ವಿಚಿತ್ರವಾಗಿರುತ್ತೆ ಅಂದ್ರೆ ನಾವದನ್ನು ಊಹಿಸಿರುವುದಿಲ್ಲ. ಈಗ ಇಲ್ಲೊಬ್ಬ ಮಹಿಳೆ ಸಹ ವಿಚಿತ್ರ ಕಾರಣದಿಂದಾಗಿ ಮೃತಪಟ್ಟಿದ್ದಾಳೆ.

ಮನೆ ಅಂಗಳದಲ್ಲಿ ಬಿಟ್ಟಿದ್ದ ಹೂವು ತಿಂದ ಯುವತಿಯೊಬ್ಬಳು ಮೃತಪಟ್ಟಿರುವ ವಿಚಿತ್ರ ಘಟನೆ ನಡೆದಿದೆ. ಕೇರಳದಲ್ಲಿ ಈ ಘಟನೆ ನಡೆದಿದ್ದು, ಎಲ್ಲರಿಗೂ ಆಘಾತ ಉಂಟು ಮಾಡಿದೆ. ಮೊಬೈಲ್‌ನಲ್ಲಿ ಮಾತನಾಡುತ್ತಾ ಆಕೆ ಹೂವು ಹಾಗೂ ಆ ಗಿಡದ ಎಲೆಯನ್ನು ಸೇವಿಸಿದ್ದಳು ಎಂದು ತಿಳಿದುಬಂದಿದೆ.
ಸೂರ್ಯ ಸುರೇಂದ್ರನ್ ಎಂಬ 24 ವರ್ಷದ ಯುವತಿ ಕಳೆದ ಮೂರು ದಿನದ ಹಿಂದೆ ಅರಳಿ ಹೂವನ್ನು ತಿಂದು ಸಾವನ್ನಪ್ಪಿದ್ದಾಳೆ. ವರದಿಗಳ ಪ್ರಕಾರ, ವೃತ್ತಿಯಲ್ಲಿ ನರ್ಸ್ ಆಗಿರುವ ಯುವತಿ ವಿಮಾನ ನಿಲ್ದಾಣದಲ್ಲಿ ಅಸ್ವಸ್ಥಳಾಗಿದ್ದಳು ಮತ್ತು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಪರೀಕ್ಷೆ ನಡೆಸಿದ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದರು.
ಆದರೆ ಮೃತಪಟ್ಟ ಕಾರಣ ತಕ್ಷಣಕ್ಕೆ ತಿಳಿದಿರಲಿಲ್ಲ. ಬಳಿಕ ಅಲಪ್ಪುಳ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು.
ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಅರಳಿ ಹೂವು ಮತ್ತು ಎಲೆ ಸೇವಿಸಿದ್ದೇ ಆಕೆಯ ಸಾವಿಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ತನ್ನ ಸಂಬಂಧಿಕರೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದಾಗ ಆಕಸ್ಮಿಕವಾಗಿ ಆಕೆ ಒಂದು ಹೂವು ಹಾಗೂ ಅರಳಿಯ ಎಲೆಯನ್ನು ಕಿತ್ತು ತಿಂದಿದ್ದಾಳೆ. ಆದರೆ ಆ ಜಾಗದಲ್ಲಿ ಆಕೆ ಎಲೆಯನ್ನು ತುಪ್ಪಿದ್ದಳು ಆದರೆ ಅಷ್ಟರಾಗಲೇ ಅವಳ ದೇಹಕ್ಕೆ ಅದರ ದ್ರವ ಸೇರಿಬಿಟ್ಟಿತ್ತು. ಬಳಿಕ ಒಂದು ದಿನದ ನಂತರ ಆಕೆ ವಿಮಾನ ನಿಲ್ದಾಣದಲ್ಲಿ ಕುಸಿದು ಬಿದ್ದಿದ್ದಳು.
ಭಾನುವಾರ ಈ ಘಟನೆ ನಡೆದಿತ್ತು, ಬೆಳಗ್ಗೆ 11.30ಕ್ಕೆ ಪಳ್ಳಿಪಟ್ಟೆಯಲ್ಲಿರುವ ಮನೆಯಿಂದ ಸಂಬಂಧಿಕರೊಂದಿಗೆ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಬಂದಿದ್ದಳು. ಆದರೆ ವಿಮಾನ ನಿಲ್ದಾಣದಲ್ಲಿ ಆಕೆ ಕುಸಿದು ಬಿದ್ದಾಗ ಹೃದಯಾಘಾತವಾಗಿದೆ ಎಂದು ಶಂಕಿಸಲಾಗಿತ್ತು. ಆದರೆ ಬಳಿಕ ಹೂವಿನ ಎಲೆ ತಿಂದ ಕಾರಣ ಆಕೆ ಅದ್ವಸ್ಥಳಾಗಿದ್ದಳು ಎಂದು ವರದಿಯಾಗಿದೆ.
ಅದೇ ಸಮಯದಲ್ಲಿ ಯುವತಿಗೆ ಬೇರೆ ಯಾವುದಾದರೂ ಕಾಯಿಲೆ ಇದೆಯೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ವಂದನಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸೂರ್ಯನ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಆಂತರಿಕ ಅಂಗಗಳನ್ನು ರಾಸಾಯನಿಕ ವಿಶ್ಲೇಷಣೆಗಾಗಿ ಕಳುಹಿಸಲಾಗಿದೆ. ಫಲಿತಾಂಶ ಬಂದ ಬಳಿಕವಷ್ಟೇ ಸಾವಿನ ಕಾರಣ ಸ್ಪಷ್ಟವಾಗಲಿದೆ. ಸೂರ್ಯ ಬಿಎಸ್‌ಸಿ ನರ್ಸಿಂಗ್ ಪದವೀಧರರಾಗಿದ್ದರು. ಭಾನುವಾರ ಆಕೆ ಕೆಲಸದ ನಿಮಿತ್ತ ಇಂಗ್ಲೆಂಡ್‌ಗೆ ತೆರಳುತ್ತಿದ್ದರು.
ಶಬರಿಮಲೆಯಲ್ಲಿ ಅರಳಿ ಹೂವು ನಿಷೇಧ
ಈ ಘಟನೆ ನಡೆಯುತ್ತಿದ್ದಂತೆ ತಿರುವಾಂಕೂರು ದೇವಸ್ವಂ ಮಂಡಳಿ ನಿರ್ಣಾಯಕ ನಿರ್ಧಾರ ಕೈಗೊಂಡಿದೆ. ದೇವರ ಪೂಜೆಗೆ ಈ ಹೂವು ಬಳಸದಂತೆ ನಿರ್ಬಂಧ ಹೇರಿದೆ. ಈ ಹೂವಿನ ಬದಲಿಗೆ ತುಳಸಿ ದಳ ಪೂಜೆಗೆ ಬಳಸುವಂತೆ ಸೂಚಿಸಲಾಗಿದೆ. ಈ ಹೂವು ಹಾಗೂ ಎಲೆ ವಿಷಕಾರಿ ಅಂಶ ಹೊಂದಿವೆ ಎಂಬುದು ಈವರೆಗೆ ವರದಿಯಾಗಿರಲಿಲ್ಲ. ಈ ಪ್ರಕರಣದ ಬಳಿಕ ಈಗ ಆತಂಕ ಎದುರಾಗಿದೆ. ಅದರಲ್ಲೂ ಮನೆಯಲ್ಲಿ ಮಕ್ಕಳಿದರೆ ಈ ಹೂವಿನ ಗಿಡ ಬೆಳೆಸುವುದು ಅಪಾಯಕಾರಿಯಾಗಲಿದೆ.



Click it and Unblock the Notifications
