Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Year Ender 2025: ಈ ವರ್ಷ Googleನಲ್ಲಿ ಜನರು ಹೆಚ್ಚು ಹುಡುಕಿದ್ದು ಇದೇ! ಇಲ್ಲಿದೆ ಪಟ್ಟಿ
ಈ ವರ್ಷ ಜನರು ಗೂಗಲ್‌ನಲ್ಲಿ (Google) ಹೆಚ್ಚು ಹುಡುಕಿದ ವಿಷಯಗಳಿವು! 2025 ರಲ್ಲಿ ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್ ಆಗಿದ್ದು ಏನು? ಇಲ್ಲಿದೆ ಪಟ್ಟಿ. ಹೌದು, 2025ರ ವರ್ಷಾಂತ್ಯ (Year Ender 2025) ಸಮೀಪಿಸುತ್ತಿದ್ದು, ಈ ವರ್ಷ ಜನರು ಗೂಗಲ್‌ನಲ್ಲಿ ಅತಿ ಹೆಚ್ಚು ಏನನ್ನು ಹುಡುಕಿದ್ದಾರೆ ಎಂಬ ಕುತೂಹಲವಿದೆ.
ಗೂಗಲ್ ತನ್ನ 'Year in Search 2025' ವರದಿಯನ್ನು ಬಿಡುಗಡೆ ಮಾಡಿದೆ. ಈ ವರದಿಯು ವಿವಿಧ ವಿಭಾಗಗಳಲ್ಲಿ ಹೆಚ್ಚು ಆಸಕ್ತಿ ಕೆರಳಿಸಿದ ವಿಷಯಗಳನ್ನು ಬಹಿರಂಗಪಡಿಸಿದೆ. ಜನರು ಹೆಚ್ಚು ಮಾಹಿತಿ ಅರಸಿದ ಪ್ರಮುಖ ವಿಷಯಗಳ (top google searches) ವಿವರ ಇಲ್ಲಿದೆ.

ಎಐ (ಕೃತಕ ಬುದ್ಧಿಮತ್ತೆ)
ಗೂಗಲ್ ಟ್ರೆಂಡ್‌ಗಳ (2025 Google Top Trends) ಪ್ರಕಾರ, 2025ರಲ್ಲಿ ಅತಿ ಹೆಚ್ಚು ಹುಡುಕಲಾದ ವಿಷಯ 'ಎಐ' (Artificial Intelligence) ಆಗಿದೆ. ನಿರ್ದಿಷ್ಟವಾಗಿ, ಜನರು ಗೂಗಲ್ ಜೆಮಿನಿ (Google Gemini) ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಆಸಕ್ತಿ ತೋರಿದ್ದು, ಅದರ ಬಳಕೆಯೂ ಗಣನೀಯವಾಗಿ ಹೆಚ್ಚಿದೆ.
ಭಾರತದಲ್ಲಿನ ಪ್ರಮುಖ ಟ್ರೆಂಡ್‌ಗಳು
- 2025ರಲ್ಲಿ ಭಾರತದಲ್ಲಿ ಐಪಿಎಲ್ (IPL) ಅತಿ ಹೆಚ್ಚು ಹುಡುಕಿದ ವಿಷಯವಾಗಿದೆ.
- ಗೂಗಲ್ ಜೆಮಿನಿ ಎರಡನೇ ಸ್ಥಾನದಲ್ಲಿದ್ದರೆ, ಏಷ್ಯಾ ಕಪ್ ಮೂರನೇ ಸ್ಥಾನದಲ್ಲಿದೆ.
- ಟಾಪ್ ಹತ್ತು ಹುಡುಕಾಟಗಳಲ್ಲಿ ಐಪಿಎಲ್, ಏಷ್ಯಾ ಕಪ್, ಐಸಿಸಿ ಚಾಂಪಿಯನ್ಸ್ ಟ್ರೋಫಿ ಮತ್ತು ಮಹಿಳಾ ವಿಶ್ವಕಪ್ ಸೇರಿದಂತೆ ನಾಲ್ಕು ಕ್ರಿಕೆಟ್‌ಗೆ ಸಂಬಂಧಿಸಿದ್ದವು. ಇದು ಭಾರತೀಯರ ಅಗಾಧ ಕ್ರಿಕೆಟ್ ಕ್ರೇಜ್ ಅನ್ನು ತೋರಿಸುತ್ತದೆ.
- ಪ್ರೊ ಕಬಡ್ಡಿ ಲೀಗ್ ಐದನೇ ಸ್ಥಾನದಲ್ಲಿರುವುದು ಕ್ರಿಕೆಟ್ ಹೊರತಾದ ಕ್ರೀಡಾ ಆಸಕ್ತಿಯನ್ನೂ ಸೂಚಿಸುತ್ತದೆ.
ಜಾಗತಿಕ ಟ್ರೆಂಡ್‌ಗಳು
ಭಾರತದಂತೆಯೇ, ಜಾಗತಿಕ ಟ್ರೆಂಡ್‌ಗಳಲ್ಲಿಯೂ 'ಎಐ' (AI) ಅಗ್ರಸ್ಥಾನದಲ್ಲಿದೆ. ಎಐ ನಂತರ, ವಿಶ್ವದಾದ್ಯಂತ ಅತಿ ಹೆಚ್ಚು ಹುಡುಕಲಾದ ವಿಷಯ ಭಾರತ ವರ್ಸಸ್ ಇಂಗ್ಲೆಂಡ್ (India vs England) ಕ್ರಿಕೆಟ್ ಪಂದ್ಯವಾಗಿದೆ. ಈ ಟ್ರೆಂಡ್ ವಿಶ್ವಾದ್ಯಂತ ಕ್ರಿಕೆಟ್ ಪ್ರೇಕ್ಷಕರ ಆಸಕ್ತಿಯ ಆಳವನ್ನು ಎತ್ತಿ ತೋರಿಸುತ್ತದೆ.
ಎಐ ಪ್ಲಾಟ್‌ಫಾರ್ಮ್‌ಗಳು ಮತ್ತು ಟೂಲ್ಸ್‌ಗಳು
ಎಐ ವಿಭಾಗದಲ್ಲಿ ಗೂಗಲ್ ಜೆಮಿನಿ ಮುಂಚೂಣಿಯಲ್ಲಿದ್ದರೆ, ಜೆಮಿನಿ ಎಐ ಫೋಟೋ (Gemini AI Photo), ಗ್ರೋಕ್ (Grok), ಡೀಪ್‌ಸೀಕ್ (Deepseek) ಮತ್ತು ಪರ್ಪ್ಲೆಕ್ಸಿಟಿ (Perplexity) ನಂತಹ ಇತರೆ ಎಐ ಪ್ಲಾಟ್‌ಫಾರ್ಮ್‌ಗಳು ಮತ್ತು ಟೂಲ್‌ಗಳನ್ನು ಜನರು ಹೆಚ್ಚಾಗಿ ಹುಡುಕಿದ್ದಾರೆ.
ಅತಿ ಹೆಚ್ಚು ಹುಡುಕಿದ ಚಲನಚಿತ್ರಗಳು
2025ರಲ್ಲಿ ಹೆಚ್ಚು ಹುಡುಕಿದ ಚಲನಚಿತ್ರಗಳಲ್ಲಿ ಸೈಯರಾ (Saiyara), ಕಾಂತಾರ: ಎ ಲೆಜೆಂಡ್ ಚಾಪ್ಟರ್ 1 (Kantara: A Legend Chapter 1), ಕೂಲಿ (Coolie), ವಾರ್ 2 (War 2) ಮತ್ತು ಸನಮ್ ತೇರಿ ಕಸಮ್ (Sanam Teri Kasam) ಸೇರಿವೆ.
ಅತಿ ಹೆಚ್ಚು ಹುಡುಕಿದ ಟಿವಿ ಕಾರ್ಯಕ್ರಮಗಳು
ಟಿವಿ ಕಾರ್ಯಕ್ರಮಗಳಲ್ಲಿ ಸ್ಕ್ವಿಡ್ ಗೇಮ್ (Squid Game), ಪಂಚಾಯತ್ (Panchayat), ಬಿಗ್ ಬಾಸ್ (Bigg Boss), ದ ಬ್ಯಾಡ್ಸ್ ಆಫ್ ಬಾಲಿವುಡ್ (The Bads of Bollywood) ಮತ್ತು ಪಾತಾಳ್ ಲೋಕ್ (Paatal Lok) ಹೆಚ್ಚು ಜನಪ್ರಿಯವಾಗಿವೆ.
ಗೇಮಿಂಗ್‌ನಲ್ಲಿ ಹೆಚ್ಚು ಹುಡುಕಾಟ
ಈ ವರ್ಷ, ಪ್ರಪಂಚದಾದ್ಯಂತ ಜನರು ಗೇಮಿಂಗ್‌ಗೆ ಸಂಬಂಧಿಸಿದ ಪ್ರಶ್ನೆಗಳನ್ನು ಅತಿ ಹೆಚ್ಚು ಹುಡುಕಿದ್ದಾರೆ.
'ಆರ್ಕ್ ರೈಡರ್ಸ್' (Arc Raiders) ಗೇಮ್ ಹೆಚ್ಚು ಜನಪ್ರಿಯವಾಗಿದ್ದು, ಬ್ಯಾಟಲ್‌ಫೀಲ್ಡ್ 6 (Battlefield 6), ಸ್ಟ್ರಾಂಡ್ಸ್ (Strands), ಸ್ಪ್ಲಿಟ್ ಫಿಕ್ಷನ್ (Split Fiction) ಮತ್ತು ಕ್ಲೇರ್ ಆಬ್ಸ್ಕ್ಯೂರ್ ಎಕ್ಸ್‌ಪೆಡಿಶನ್ 33 (Clair Obscur Expedition 33) ನಂತಹ ವಿಡಿಯೋ ಗೇಮ್‌ಗಳನ್ನು ಸಹ ಹೆಚ್ಚಾಗಿ ಹುಡುಕಲಾಗಿದೆ.



Click it and Unblock the Notifications
