Latest Updates
-
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ?
2023ರಲ್ಲಿ ನೆಟ್ಟಿಗರ ತಲೆ ಕೆಡಿಸಿದ ಚಿತ್ರಗಳಿವು..!ಇನ್ನೂ ಸಿಗದ ಉತ್ತರ...
ಇಂಟರ್‌ನೆಟ್‌ನಲ್ಲಿ ಇತ್ತೀಚಿಗೆ ನಿಮ್ಮ ಬುದ್ಧಗೊಂದು ಸವಾಲು ಎಸೆಯುವ ಚಿತ್ರಗಳು ಓಡಾಡುತ್ತವೆ. ನೀವು ಸಹ ಇಂತಹ ಚಿತ್ರಗಳನ್ನು ಎಷ್ಟು ಬಾರಿ ನೋಡಿ ಅದಕ್ಕೆ ತಕ್ಕ ಉತ್ತರ ನೀಡುವ ಪ್ರಯತ್ನ ಮಾಡಿರುತ್ತೀರಿ. ಇಂತಹ ನೂರಾರು ಚಿತ್ರಗಳು ಜಾಲತಾಣದಲ್ಲಿ ಇಂದು ಹರಿದಾಡುತ್ತಿವೆ. ಇವು ನಿಮ್ಮ ಬುದ್ಧಿಶಕ್ತಿ ಚುರುಕುಗೊಳಿಸಬಹುದು.
ಇಂಟರ್‌ನೆಟ್‌ನಲ್ಲಿ ಕೆಲವು ಪೋಸ್ಟ್‌ಗಳು ಈ ರೀತಿ ಕಾಣಸಿಗುತ್ತವೆ. ಈ ಚಿತ್ರದಲ್ಲಿ ಎಷ್ಟು ಹುಲಿಗಳು ಇದೆ. ಎಷ್ಟು ಪ್ರಾಣಿಗಳು, ಈ ಚಿತ್ರದಲ್ಲಿರುವ ಬೆಕ್ಕನ್ನು ಕಂಡುಹಿಡಿಯಿರಿ, ಈ ಚಿತ್ರದಲ್ಲಿ ಹಾವು ಅಡಗಿದೆ ಎಲ್ಲಿದೆ ಗುರುತಿಸಿ ಹೀಗೆ ಒಂದಲ್ಲಾ ಒಂದು ಚಿತ್ರಗಳು ನೆಟ್ಟಿಗರ ಗಮನ ಸೆಳೆಯುತ್ತವೆ.
ಈಗ ಇದೇ ರೀತಿಯ ಮತ್ತೊಂದು ಚಿತ್ರ ಸಹ ಗಮನ ಸೆಳೆಯುತ್ತಿದೆ. ಈ ಚಿತ್ರದಲ್ಲಿ ಎಷ್ಟು ಬೆರಳುಗಳಿವೆ ಹೇಳಿ? ಎಂಬ ಬರಹದಡಿ ಈ ಚಿತ್ರ ಹರಿದಾಡುತ್ತಿದ್ದು, ನೆಟ್ಟಿಗರ ಮೆದುಳಿಗೆ ಕೆಲಸ ಕೊಟ್ಟಿದೆ. ಚಿತ್ರವು ಉತ್ತರಿಸಲು ಸುಲಭವಾಗಿ ಕಂಡರು ಬೆರಳು ಎಣಿಕೆ ಮಾಡಲು ಮುಂದಾದಾಗ ಲೆಕ್ಕ ತಪ್ಪುವುದು ಅಥವಾ ಪ್ರತಿ ಬಾರಿ ಎಣಿಸಿದಾಗ ಒಂದೊಂದು ಉತ್ತರ ಸಿಗುತ್ತಿದೆ.

ಸೆಪ್ಟೆಂಬರ್ 2021ರಿಂದಲೂ ಈ ಫೋಟೋವನ್ನು ಹಂಚಿಕೊಳ್ಳಲಾಗಿದೆ, ಆದರೆ ಈ ಫೋಟೋ ಹಂಚಿಕೊಂಡಾಗಲೆಲ್ಲಾ ಒಬ್ಬಬ್ಬರು ಒಂದೊಂದು ರೀತಿಯ ಉತ್ತರ ಹೇಳಿದ್ದಾರೆ. ಇದರಲ್ಲಿ ಆಪ್ಟಿಕಲ್ ಇಲ್ಯೂಷನ್ ಬಳಸಲಾಗಿದ್ದು, ನೀವು ಬೆರಳು ಎಣಿಸುವಾಗ ದೃಷ್ಟಿ ದಿಟ್ಟಿಸುವುದರಿಂದ ಲೆಕ್ಕ ತಪ್ಪಾಗಲಿದೆ.
ಹೆಚ್ಚಿನವರು ಈ ಚಿತ್ರದಲ್ಲಿ 55 ಮತ್ತು 150 ಬೆರಳುಗಳಿವೆ ಎಂದು ಅಂದಾಜಿಸಿದ್ದಾರೆ. ಇನ್ನೂ ಕೆಲವರು 50, 150 ಮತ್ತು 160 ಬೆರಳುಗಳಿಗೆ ಎಂದಿದ್ದಾರೆ. ಆದರೆ ಎಲ್ಲರಿಗೂ ಒಂದೇ ರೀತಿಯ ಉತ್ತರ ಮಾತ್ರ ಸಿಕ್ಕಿಲ್ಲ. ಹಾಗಾದ್ರೆ ಈ ಚಿತ್ರದಲ್ಲಿ ಎಷ್ಟು ಬೆರಳುಗಳಿವೆ ಎಂಬ ಉತ್ತರ ಇನ್ನೂ ಸಿಗಬೇಕಿದ್ದು, ನಿಮಗೆ ಯಾವ ಉತ್ತರ ಬಂದಿದೆ ಎಂಬುದನ್ನು ಪರೀಕ್ಷಿಸಿ.
ಎಷ್ಟು ಪ್ರಾಣಿಗಳಿವೆ ಹೇಳಿಇದೇ ರೀತಿ ಇನ್ನೊಂದು ಚಿತ್ರದಲ್ಲಿ ಇದು ಯಾವ ಪ್ರಾಣಿಯನ್ನು ಹೋಲುತ್ತದೆ ಎಂದು ಪ್ರಶ್ನೆ ಮಾಡಲಾಗಿದೆ. ಈ ಚಿತ್ರ ಹೆಚ್ಚಿನ ಜನರು ಎರಡು ಪ್ರಾಣಿಗಳಲ್ಲಿ ಒಂದನ್ನು ನೋಡುತ್ತಾರೆ ಎಂದು ಹೇಳುತ್ತಾರೆ, ಆದರೆ ಕೆಲವರಿಗೆ ಈ ವಿತ್ರದಲ್ಲಿ ನಾಲ್ಕು ಪ್ರಾಣಿಗಳು ಕಾಣಿಸುತ್ತದೆ.
ಯಾವ ಪ್ರಾಣಿಯನ್ನು ಚಿತ್ರಿಸಲಾಗಿದೆ ಎಂಬುದರ ಕುರಿತು ಒಬ್ಬಬ್ಬರಿಗೆ ಒಂದೊಂದು ಉತ್ತರ ಸಿಕ್ಕಿದೆ. ಕೆಲವರಿಗೆ ಕುದುರೆ ಮುಖವಾಗಿ ಕಂಡಿದೆ. ಮತ್ತೆ ಕೆಲವರಿಗೆ ಮೊಲ, ಮೀನು ಎಂಬಿತ್ಯಾದಿ ಉತ್ತರ ಸಿಕ್ಕಿದೆ.
ಡಾರ್ಟ್‌ಮೌತ್ ಕಾಲೇಜಿನ ಸಂಶೋಧನಾ ಪ್ರಾಧ್ಯಾಪಕರಾದ ನರವಿಜ್ಞಾನಿ ಪ್ಯಾಟ್ರಿಕ್ ಕ್ಯಾವನಾಗ್ ವೋಕ್ಸ್‌ಗೆ ಈ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ, ನಾವು ವಾಸ್ತವವನ್ನು ನೋಡುತ್ತಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳುವುದು ನಿಜವಾಗಿಯೂ ಮುಖ್ಯವಾಗಿದೆ. ಇಲ್ಲಿ ನಮಗಾಗಿಯೇ ಸೃಷ್ಟಿಯಾಗುತ್ತಿರುವ ಕಥೆಯನ್ನಷ್ಟೇ ನಾವು ನೋಡುತ್ತಿದ್ದೇವೆ ಎಂದಿದ್ದಾರೆ.
ಇಂತಹ ಚಿತ್ರಗಳು ಒಬ್ಬೊಬ್ಬರಿಗೆ ಒಂದೊಂದು ರೀತಿ ಕಾಣಲು ಸಹ ಅದೇ ಕಾರಣ. ನಾವು ನಮ್ಮ ಮನದಲ್ಲಿ ಉದ್ಭವಿಸುವ ಚಿತ್ರವನ್ನು ಅಚ್ಚು ಮಾಡುತ್ತೇವೆ. ನಮ್ಮ ಮೆದುಳು ಇದು ಕುದುರೆ ಎಂದು ಭಾವಿಸಬಹುದು, ಇಲ್ಲವೆ ಮೀನು, ಮೊಲ ಅಂತಲೂ ಸೂಚಿಸಬಹುದು ಆದರೆ ಎಲ್ಲವೂ ಸರಿ ಎಂದೆ ಸೂಚಿಸುತ್ತದೆ.
9 ಸೆಕೆಂಡ್‌ನಲ್ಲಿ ಜೇನುನೊಣವನ್ನು ಹುಡುಕಿಇನ್ನು ಇತ್ತೀಚಿಗೆ ಇಂಟರ್‌ನೆಟ್‌ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದ ಫೋಟೋ ಇದಾಗಿದೆ. ಮೇಲೆ ಹಂಚಿಕೊಂಡಿರುವ ಚಿತ್ರದಲ್ಲಿ ಹುಡುಗಿಯೊಬ್ಬಳು ತುಂಬಾ ಅಲಂಕೃತವಾದ ಕೋಣೆಯಲ್ಲಿ ಮಲಗಿರುವುದನ್ನು ಕಾಣಬಹುದು. ಕೇವಲ 10 ಸೆಕೆಂಡುಗಳಲ್ಲಿ ಕೋಣೆಯಲ್ಲಿರುವ ಜೇನುನೊಣವನ್ನು ಕಂಡುಹಿಡಿಯುವುದು ಓದುಗರಿಗೆ ಸವಾಲಾಗಿತ್ತು.
ಈ ಫೋಟೋದಲ್ಲಿರುವ ಜೇನುನೊಣವನ್ನು ಕಂಡುಹಿಡಿಯಲು ನೆಟ್ಟಿಗರು ತಲೆ ಕೆಡಿಸಿಕೊಂಡಿದ್ದಾರೆ. ಆದರೆ ನಿಮ್ಮ ಎಡಭಾಗದಲ್ಲಿರುವ ಗುಲಾಬಿ ಬಣ್ಣದ ಬ್ಯಾಗ್ ಬಳಿ ಒಂದು ಜೇನುನೊಣವಿರುವುದನ್ನು ನಾವು ಕಾಣಬಹುದು. ಆದರೆ ಈ ಚಿತ್ರ ಇತ್ತೀಚಿಗೆ ಜನರ ತಲೆಗೆ ಹುಳಬಿಟ್ಟಿರುವುದಂತು ಸತ್ಯ.



Click it and Unblock the Notifications


