Latest Updates
-
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ!
Year Ender 2023: 2023ರಲ್ಲಿ ಭಾರತದಲ್ಲಿನ ಗ್ರಾಹಕರ ಕುರಿತು ಸ್ವಿಗ್ಗಿ ಬಹಿರಂಗ ಪಡಿಸಿದ 15 ತುಂಬಾ ಇಂಟೆರೆಸ್ಟಿಂಗ್ ಸಂಗತಿಗಳಿವು
ನಗರ ಪ್ರದೇಶದಲ್ಲಿ ಇರುವವರಿಗೆ ಮನೆಯಲ್ಲಿ ಕೂತು ರೆಸ್ಟೋರೆಂಟ್ ಫುಡ್ ತಿನ್ನಬೇಕೆಂದು ಅನಿಸಿದಾಗ, ಇವತ್ತು ರೆಸ್ಟ್ ಬೇಕು ಅಡುಗೆ ಮಾಡೋಕೆ ಮನಸ್ಸಿಲ್ಲ, ಆದರೆ ಹೊರಗಡೆ ಹೋಗಿ ತಿನ್ನಕ್ಕೂ ಇಷ್ಟವಿಲ್ಲ, ಮನೆಗೆ ಫುಡ್ ಬರಬೇಕೆಂದು ಬಯಸಿದಾಗ ಜನರ ಆಯ್ಕೆ, ಸ್ವಿಗ್ಗಿ, ಜೊಮೆಟೋ ಈ ಬಗೆಯ ಆಹರಗಳು.
2023ಕ್ಕೆ ಇನ್ನೇನು ಕೆಲವೇ ದಿನಗಳಲ್ಲಿ ಗುಡ್‌ಬೈ ಹೇಳುತ್ತೇವೆ, ಇದೀಗ ಸ್ವಿಗ್ಗಿ 2023ರ ಬಿಸ್‌ನೆಸ್ ಸೀಕ್ರೆಟ್ ಹಂಚಿಕೊಂಡಿದೆ. ಈ ವರ್ಷ ನಮ್ಮಲ್ಲಿ ಅತೀ ಖರೀದಿಸಿದ ಆಹಾರ ಪದಾರ್ಥ ಯಾವುದು? ಯಾವೆಲ್ಲಾ ಫುಡ್‌ಗಳಿಗೆ ತುಂಬಾನೇ ಬೇಡಿಕೆಯಿತ್ತು, ಈ ವರ್ಷ ಸ್ವಿಗ್ಗಿಯಿಂದ 1,633 ಬಿರಿಯಾನಿ ತರಿಸಿದ ವ್ಯಕ್ತಿ, ಮುಂಬಯಿಯಲ್ಲಿರುವ ವ್ಯಕ್ತಿಯೊಬ್ಬರು 42.3 ಲಕ್ಷ ಬೆಲೆಯ ಆಹಾರವನ್ನು ಸ್ವಿಗ್ಗಿಯಿಂದ ತರಿಸಿಕೊಂಡಿರುವುದು ಹೀಗೆ ಸ್ವಿಗ್ಗಿ ಅನೇಕ ಆಸಕ್ತಿಕರ ವಿಷಯಗಳನ್ನು ಹಂಚಿಕೊಂಡಿದೆ.

2023ರಲ್ಲಿ ಸ್ವಿಗ್ಗಿಯಲ್ಲಿ ಟ್ರೆಂಡ್‌ನಲ್ಲಿದ್ದ ಆಹಾರಗಳಾವುವು, ಸ್ವಿಗ್ಗಿಯ ವ್ಯವಹಾರ 2023ರಲ್ಲಿ ಹೇಗಿತ್ತು ಎಂಬುವುದರ ಬಗ್ಗೆ ಸ್ವಿಗ್ಗಿ ಡೈರೀಸ್‌ನಲ್ಲಿ ಹಂಚಿಕೊಂಡ ವಿಷಯಗಳನ್ನು ಇಲ್ಲಿ ಹೇಳಲಾಗಿದೆ ನೋಡಿ:
1. ಎಂಥ ಮಾರಾಯ್ರೆ!
ಸ್ವಿಗ್ಗಿಯಲ್ಲಿ ನಿಮಗೆ 6,64,46,312 ಡಿಶ್‌ಗಳು ಸಿಗುತ್ತವೆ, ಅ ಆದರೆ 5028 ಯೂಸರ್‌ಗಳು ಸ್ವಿಗ್ಗಿ ಆ್ಯಪ್‌ಗೆ ಬಂದು ಸ್ವಿಗ್ಗಿ ಅಂತ ಹುಡುಕಿದ್ದಾರೆ ಅಂತೆ, 1682 ಯೂಸರ್‌ಗಳು 'order' ಅಂತ ಹುಡುಕಿದ್ದಾರೆ.
2. ಯಾರು ಅತಿ ಹೆಚ್ಚಾಗಿ ಆಹಾರ ಖರೀದಿಸಿದ್ದಾರೆ ?
ಮುಂಬೈಯ ಸ್ವಗ್ಗಿ ಬಳಕೆದರರೊಬ್ಬರು ಒಂದು ವರ್ಷದಲ್ಲಿ ₹ 42.3 ಮೌಲ್ಯದ ಆಹಾರ ಖರೀದಿಸಿದ್ದಾರೆ. ಇವರಿಗೆ ಸ್ವತಃ ಒಂದು ಹೋಟೆಲ್ ಇಡಬಹುದಿತ್ತು ಅಲ್ವಾ?
* ಇನ್ನು ಸ್ವಿಗ್ಗಿಗೆ ಚೆನ್ನೈ, ದೆಹಲಿ, ಹೈದರಾಬಾದ್‌ನಿಂದ ಅತೀ ಹೆಚ್ಚು ಆರ್ಡರ್ ಬಂದಿದೆಯಂತೆ.
3. ಪಿಜ್ಜಾ ಪಾರ್ಟಿಯೇನೂ ಇರಲಿಲ್ಲ ಆದರೂ 207 ಪಿಜ್ಜಾಗೆ ಆರ್ಡರ್
ಒಂದೇ ದಿನದಲ್ಲಿ ಒಬ್ಬರು 207 ಪಿಜ್ಜಾ ತರಿಸಿಕೊಂಡಿದ್ದಾರೆ, ಆದರೆ ಅವರ ಮನೆಯಲ್ಲಿ ಯಾವುದೇ ಪಾರ್ಟಿ ಇರಲಿಲ್ಲ ಎಂದು ಸ್ವಿಗ್ಗಿ ಹೇಳಿದೆ. ಬಹುಶಃ ಯಾರಿಗಾದರೂ ಬಡಮಕ್ಕಳಿಗೆ ನೀಡಲು ತರಿಸಿದರೂ ಅಥವಾ ಅವರೇ ತಿನ್ನಲು ತರಿಸಿದರೋ ಗೊತ್ತಿಲ್ಲ.
4 ದುರ್ಗಾ ಪೂಜೆಯಲ್ಲಿ ರಸಗುಲ್ಲಾಗಿಂತ ಮಿಂಚಿದ ಗುಲಾಬ್ ಜಾಮೂನ್
ಸುಮಾರು 7.7 ಮಿಲಿಯನ್ ಆರ್ಡರ್ ಬಂದಿತ್ತು
5. ಅಲ್ಲದೆ ನವರಾತ್ರಿಯಲ್ಲಿ ಅತೀ ಹೆಚ್ಚಾಗಿ ಆರ್ಡರ್ ಬಂದ ಮತ್ತೊಂದು ಫುಡ್ ಐಟಂ ಅಂದರೆ ಅದು ಮಸಾಲೆ ದೋಸೆ.
6. ಹೈದರಾಬಾದ್‌ನ ಗ್ರಾಹಕರೊಬ್ಬರು 6 ಲಕ್ಷ ರುಪಾಯಿ ಇಡ್ಲಿಗಾಗಿ ಖರ್ಚು ಮಾಡಿದ್ದಾರೆ.
7. ಬೆಂಗಳೂರಿನವರಿಗೆ ಕೇಕ್ ಇಷ್ಟ
ಬೆಂಗಳೂರಿನವರು ಇಡ್ಲಿ, ದೋಸೆ ಅಂತ ತರಿಸುವುದಕ್ಕಿಂತ ಕೇಕ್ ಹೆಚ್ಚು ತರಿಸಿಕೊಂಡಿದ್ದಾರೆ. ಅದರಲ್ಲೂ 8.5 ಮಿಲಿಯನ್ ಚಾಕೋಲೆಟ್ ಕೇಕ್‌ಗೆ ಆರ್ಡರ್ ಬಂದಿದೆಯಂತೆ.
8. ವ್ಯಾಲೆಂಟೈನ್ಸ್ ಡೇ ಸಮಯದಲ್ಲಿ ಒಂದು ನಿಮಿಷಕ್ಕೆ 271 ಕೇಕ್ ಆರ್ಡರ್ ಬರ್ತಾ ಇತ್ತಂತೆ
9. ನಾಗಾಪುರದ ವ್ಯಕ್ತಿಯೊಬ್ಬರು ಒಂದೇ ದಿನದಲ್ಲಿ 92 ಕೇಕ್ ತರಿಸಿಕೊಂಡಿದ್ದಾರೆ. ಅಷ್ಟೊಂದು ಕೇಕ್ ಏನು ಮಾಡಿದರೋ ...
10. ತಂದೆಯರ ದಿನಕ್ಕೆ Swiggy Gourmetನಲ್ಲಿ ತುಂಬಾನೇ ಆರ್ಡರ್ ಬಂದಿದೆಯಂತೆ, 2.1 ಮಿಲಿಯನ್ ಶುಗರ್ ಫ್ರೀ ಡೆಸರ್ಟ್ ಆರ್ಡರ್ ಬಂದಿತ್ತು ಎಂದು ಸ್ವಗ್ಗಿ ಬಹಿರಂಗಪಡಿಸಿದೆ.
11. ಇನ್ನು ಸ್ವಿಗ್ಗಿಯಲ್ಲಿ ವೇಗನ್ ಡಯಟ್ ಆರ್ಡರ್ ಶೇ. 146ರಷ್ಟು ಹೆಚ್ಚಾಗಿದೆಯಂತೆ.
12. ಇನ್ನು ಸಿರಿಧಾನ್ಯಗಳ ಆಹಾರದಲ್ಲೂ ಶೇ. 14ರಷ್ಟು ಡಿಮ್ಯಾಂಡ್ ಹೆಚ್ಚಾಗಿದೆಯಂತೆ.
13, ಯಾವೆಲ್ಲಾ ಆಹಾರಗಳಿಗೆ ತುಂಬಾನೇ ಬೇಡಿಕೆ ಬಂದಿದೆ:
* ಬಿರಿಯಾನಿ: ಬಿರಿಯಾನಿ ಟಾಪ್ ಲಿಸ್ಟ್‌ನಲ್ಲಿದೆ. ಪ್ರತಿ ಸೆಕೆಂಡ್‌ಗೆ 2.5 ಬಿರಿಯಾನಿಗೆ ಆರ್ಡರ್ ಬರುತ್ತದೆಯೆಂದು ಸ್ವಿಗ್ಗಿ ತಿಳಿಸಿದೆ.
14. ಅದರಲ್ಲೂ ಬಿರಿಯಾನಿ ಪ್ರಿಯರು ಹೆಚ್ಚಾಗಿ ಇರುವುದು ಹೈದರಾಬಾದ್‌ನಲ್ಲಿ, ಅಲ್ಲಿಂದಲೇ ಹೆಚ್ಚು ಆರ್ಡರ್ ಬಂದಿರುವುದು. ಇನ್ನು ಹೈದರಾಬಾದ್‌ನ ಸ್ವಿಗ್ಗಿ ಬಳಕೆದಾರರೊಬ್ಬರು ವರ್ಷದಲ್ಲಿ 1633 ಬಿರಿಯಾನಿ ಆರ್ಡರ್ ಮಾಡಿದ್ದಾರೆ, ಅಂದರೆ ದಿನದಲ್ಲಿ 4 ಬಿರಿಯಾನಿ, ಒಬ್ಬರೇ ತಿಂದರೋ ಅಥವಾ ಮನೆಯಲ್ಲಿ ನಾಲ್ಕು ಜನ ಇದ್ದು ಪ್ರತಿದಿನ ಬಿರಿಯಾನಿ ತಿಂದರೋ?
15. ಚಂಡಿಗಢದ ಬಿರಿಯಾನಿ ಲವಿಂಗ್ ಕುಟುಂಬವೊಂದು ಇಂಡಿಯಾ Vs ಪಾಕ್ ಮ್ಯಾಚ್ ಸಮಯದಲ್ಲಿ 70 ಬಿರಿಯಾನಿ ತರಿಸಿಕೊಂಡಿದೆಯಂತೆ.
ಹೀಗೆ ಸ್ವಿಗ್ಗಿ 2023ರ ಬಗ್ಗೆ ಇಷ್ಟೆಲ್ಲಾ ಆಸಕ್ತಿಕರ ಸಂಗತಿಗಳನ್ನು ಬಹಿರಂಗಪಡಿಸಿದೆ.



Click it and Unblock the Notifications