Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪೋಷಕರ ಆತಂಕ ಹೆಚ್ಚಿಸಿದ ಮಕ್ಕಳ ಗ್ಯಾಜೆಟ್ ಗೀಳು..! ಈ ಸಮಸ್ಯೆ ಕಟ್ಟಿಟ್ಟ ಬುತ್ತಿ
ಮೊಬೈಲ್, ಕಂಪ್ಯೂಟರ್ ಯುಗದಲ್ಲಿ ಮಕ್ಕಳು ವಿಡಿಯೋ ಗೇಮ್‌ಗಳಿಗೆ ದಾಸರಾಗುತ್ತಿದ್ದಾರೆ. ಅವರ ಕೈಯಲ್ಲಿ ಒಂದಲ್ಲಾ ಒಂದು ಡಿಜಿಟಲ್ ವಸ್ತು ಯಾವಾಗಲೂ ಇದ್ದೇ ಇರುತ್ತದೆ. ನಿಮ್ಮ ಮಕ್ಕಳು ಸಹ ಮೊಬೈಲ್ ಕೊಡುವಂತೆ ಹಠ ಹಿಡಿಯುತ್ತಾರಾ? ಊಟ ಮಾಡುವಾಗ, ಓದುವಾಗ ಮೊಬೈಲ್ ಬೇಕು ಎಂದು ಕೂಗಾಡುತ್ತಾರಾ? ಹಾಗಾದ್ರೆ ನೀವು ಎಚ್ಚರ ವಹಿಸೋದು ಅವಶ್ಯಕ.
ಈ ಹಿಂದೆ ವಯಸ್ಸಾದವರನ್ನು ಬಾಧಿಸುತ್ತಿದ್ದ ದೀರ್ಘಕಾಲದ ಕಾಯಿಲೆಗಳು ಈಗ ಯುವ ವಯಸ್ಕರಲ್ಲಿ ಮಾತ್ರವಲ್ಲದೆ ಹದಿಹರೆಯದವರಲ್ಲಿಯೂ ಹರಡುತ್ತಿವೆ. ಅತಿಯಾದ ಗ್ಯಾಜೆಟ್ ಬಳಕೆ, ಅನಾರೋಗ್ಯಕರ ಆಹಾರ ಪದ್ಧತಿ, ಮಲಗುವ ಅಭ್ಯಾಸದಲ್ಲಿನ ಬದಲಾವಣೆ ಮತ್ತು ಕಡಿಮೆ ಆಟದ ಸಮಯದಿಂದ ಮಕ್ಕಳಲ್ಲಿ ಜೀವನಶೈಲಿ ರೋಗಗಳ ಈ ಹೆಚ್ಚುತ್ತಿರುವ ಅಪಾಯವನ್ನು ತಜ್ಞರು ವಿವರಿಸುತ್ತಾರೆ.

ಈ ಅನಾರೋಗ್ಯಕರ ಜೀವನಶೈಲಿಯಿಂದ ಮಕ್ಕಳಲ್ಲಿ ಮಧುಮೇಹ, ಅಧಿಕ ರಕ್ತದೊತ್ತಡ, ಅಸ್ತಮಾ, ಹೃದಯ ಸಂಬಂಧಿ ಸಮಸ್ಯೆಗಳು, ಮಾನಸಿಕ ಅಸ್ವಸ್ಥತೆಗಳು ಹೆಚ್ಚಾಗುತ್ತಿವೆ. ವಿವಿಧ ಅಧ್ಯಯನಗಳು ಆರಂಭಿಕ ಜೀವನದಲ್ಲಿ ಆರೋಗ್ಯಕರ ಆಹಾರದ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿವೆ ಏಕೆಂದರೆ ಇದು ದೈಹಿಕ ಮತ್ತು ಮಾನಸಿಕ ಆರೋಗ್ಯದ ಬೆಳವಣಿಗೆಗೆ ಸಹಾಯ ಮಾಡುತ್ತದೆ, ಆದರೆ ನಂತರದ ಜೀವನದಲ್ಲಿ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ನಿಯಮಿತವಾಗಿ ಬೆಳಗಿನ ಉಪಾಹಾರವನ್ನು ಸೇವಿಸದ ಮತ್ತು ಸಿಹಿ ಮತ್ತು ಉಪ್ಪು ತಿಂಡಿಗಳನ್ನು ಸೇವಿಸುವ ಮಕ್ಕಳು ಕಾಯಿಲೆಗೆ ಒಳಗಾಗುವ ಸಂಭವ ಹೆಚ್ಚು ಎಂದು ತಿಳಿದುಬಂದಿದೆ. ಅಲ್ಲದೆ 2023ರಲ್ಲಿ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಹಾನಿಕಾರಕ ಜೀವನಶೈಲಿ ಅಭ್ಯಾಸಗಳನ್ನು ವೈದ್ಯರು ಪಟ್ಟಿ ಮಾಡಿದ್ದಾರೆ.
ಜಡ ಜೀವನಶೈಲಿ
ಮಕ್ಕಳು ಹೆಚ್ಚು ಹೊತ್ತು ಗ್ಯಾಜೆಟ್‌ಗಳ ಬಳಸುತ್ತಿದ್ದರೆ ಸಾಮಾನ್ಯವಾಗಿ ದೀರ್ಘಾವಧಿಯಲ್ಲಿ ಆಲಸ್ಯಕ್ಕೆ ಒಳಗಾಗುತ್ತಾರೆ. ಇದು ಜಡ ಜೀವನಶೈಲಿಗೆ ಕಾರಣವಾಗುತ್ತದೆ. ಸುದೀರ್ಘ ಸ್ಕ್ರೀನ್‌ಗಳ ಮುಂದೆ ಕಾಲ ಕಳೆಯುವುದು ಹೆಚ್ಚಿನ ಕೊಬ್ಬಿನಾಂಶ ವೃದ್ಧಿಗೆ ಕಾರಣವಾಗುತ್ತದೆ. ಇದು ತೂಕ ಹೆಚ್ಚುವಂತೆ ಮತ್ತು ಅನಗತ್ಯ ಕ್ಯಾಲೋರಿಯನ್ನು ಕೊಡುಗೆಯಾಗಿ ನೀಡುತ್ತದೆ.
ಅನಾರೋಗ್ಯಕರ ಆಹಾರ ಪದ್ಧತಿ
ಇದು 2023ರಲ್ಲಿ ಮಕ್ಕಳ ಮತ್ತೊಂದು ಬಹುದೊಡ್ಡ ಸಮಸ್ಯೆ ಎಂದು ಪಟ್ಟಿ ಮಾಡಲಾಗಿದೆ. ಒಂದೆಡೆ ಮಕ್ಕಳು ಡಿಜಿಟಲ್ ಪರದೆಗಳ ಮುಂದೆ ಕಾಲ ಕಳೆದರೆ ಮತ್ತೊಂದೆಡೆ ಆಹಾರ ಕ್ರಮಗಳು ನಿತ್ಯವೂ ಬಿಗಡಾಯಿಸುತ್ತಿದೆ. ಕರಿದ ತಿನಿಸುಗಳ ಮೇಲಿನ ವ್ಯಾಮೋಹ ಹೆಚ್ಚುತ್ತಲೇ ಇದ್ದು, ಪ್ಯಾಕ್ ಮಾಡಲಾದ ತಿನಿಸುಗಳ ಕಡೆ ಮಕ್ಕಳು ಬೇಗ ಆಕರ್ಷಿತರಾಗುತ್ತಿರುವ ಪ್ರಮಾಣ ಹೆಚ್ಚಾಗುತ್ತಿದೆ.
ಇವು ಕಡಿಮೆ ಪೋಷಕಾಂಶ ಹೊಂದಿದ್ದು, ಹೆಚ್ಚಿನ ಕ್ಯಾಲೋರಿ, ಕಳಪೆ ಆಹಾರ ಹೊಂದಿರಲಿದೆ. ಇವು ಮಕ್ಕಳ ಅನಾರೋಗ್ಯದ ಮೂಲ ಎಂದು ಅಂದಾಜಿಸಲಾಗಿದೆ.
ಮಕ್ಕಳಲ್ಲಿ ನಿದ್ರೆಯ ಕೊರತೆ
ಇತ್ತೀಚಿನ ದಿನಗಳಲ್ಲಿ ಮಕ್ಕಳ ಈ ಗ್ಯಾಜೆಟ್ ಅಭ್ಯಾಸದಿಂದ ಮಲಗುವ ಸಮಯವೂ ಏರುಪೇರಾಗಿದೆ. ನಿದ್ರೆಯ ಸಮಯ ಮೀರಿದರೂ ಬಲವಂತವಾಗಿ ಎಚ್ಚರದಿಂದ ಇದ್ದು ಗ್ಯಾಜೆಟ್ ಬಳಕೆ ಮಾಡುತ್ತಿರುವುದು ಭವಿಷ್ಯದಲ್ಲಿ ನಿದ್ರಾಹೀನತೆಗೆ ಕಾರಣವಾಗುತ್ತಿದೆ. ಮಕ್ಕಳು 7ರಿಂದ 8 ಗಂಟೆಗಳ ನಿದ್ರೆ ಮಾಡದಿದ್ದರೆ ಹಾರ್ಮೋನ್‌ಗಳ ಮೇಲೆ ಪ್ರಭಾವ ಬೀರಲಿದ್ದು, ಇದರಿಂದಾಗಿ ಅವರ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ವ್ಯತಿರಿಕ್ತ ಪರಿಣಾಮ ಉಂಟುಮಾಡಲಿದೆ.
ಕಡಿಮೆ ದೈಹಿಕ ಚಟುವಟಿಕೆ
ಹೆಚ್ಚಾಗುತ್ತಿರುವ ಗ್ಯಾಜೆಟ್ ಬಳಕೆ ಸಮಯದಿಂದ ಮಕ್ಕಳು ಹೊರಾಂಗಣ ಕ್ರೀಡೆಗಳಲ್ಲಿ ತೊಡಗುವುದನ್ನೇ ನಿಲ್ಲಿಸಿದ್ದಾರೆ. ಅದರಲ್ಲೂ ನಗರ ಪ್ರದೇಶದಲ್ಲಿ ಈ ಪ್ರಮಾಣ ಅತ್ಯಧಿಕವಾಗಿದೆ. ಈ ವ್ಯಾಯಾಮದ ಕೊರತೆಯು ತೂಕ ಹೆಚ್ಚಾಗಲು ಮತ್ತು ಸ್ಥೂಲಕಾಯತೆಗೆ ಮತ್ತಷ್ಟು ಕೊಡುಗೆ ನೀಡುತ್ತದೆ. ಅಲ್ಲದೆ ಮಕ್ಕಳು ಸಾಮಾಜಿಕರಣದಿಂದ ದೂರಾಗುತ್ತಿದ್ದಾರೆ. ಅವರಲ್ಲಿ ಅಸೂಯೆ, ಅಹಂನಂತಹ ಲಕ್ಷಣಕ್ಕೆ ಕಾರಣವಾಗುತ್ತಿದೆ.
ಓದಿನಲ್ಲೂ ಮಕ್ಕಳು ಹಿಂದೆ
ಇತ್ತೀಚಿಗೆ ಪ್ರತಿ ಪೋಷಕರ ದೂರೆಂದರೆ ಮಕ್ಕಳು ಹೆಚ್ಚು ಓದಿನತ್ತ ಗಮನ ಕೊಡದೆ ಮೊಬೈಲ್ ಬಳಸುತ್ತಾರೆ ಎಂಬುದು. ಒಮ್ಮೆ ಮಕ್ಕಳು ಗ್ಯಾಜೆಟ್‌ಗಳ ಹಿಂದೆ ಬಿದ್ದರೆ ಅವರಿಗೆ ಓದಿನ ಕಡೆ ಗಮನ ಕೊಡಲು ಸಾಧ್ಯವಾಗುವುದಿಲ್ಲ. ಮೊಬೈಲ್ ಓದಿಗೆ ಪೂರಕವಾಗಿರಬೇಕೆ ಹೊರತು ಗೀಳಾಗಬಾರದು. ಗ್ಯಾಜೆಟ್ ಎಷ್ಟು ಸಮಯ ಮಕ್ಕಳ ಕೈಗೆ ಸಿಗಬೇಕು ಎಂಬುದನ್ನು ಪೋಷಕರೇ ನಿರ್ಧರಿಸಬೇಕು. ಹಾಗೆ ಓದಿನ ಸಮಯದಲ್ಲಿ ಮೊಬೈಲ್ ಬಳಸದಂತೆ ನೋಡಿಕೊಳ್ಳಬೇಕು.



Click it and Unblock the Notifications