Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವಾಸಯೋಗ್ಯವಾದ ಭಾರತದ 7 ನಗರಗಳ ಪಟ್ಟಿ ರಿಲೀಸ್...ಬೆಂಗಳೂರಿಗೆ ಎಷ್ಟನೆ ಸ್ಥಾನ ಗೊತ್ತಾ?
ಭಾರತ ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಅಭಿವೃದ್ಧಿಯಾಗುತ್ತಿರುವ ರಾಷ್ಟ್ರವಾಗಿದೆ. ಇದಕ್ಕೆ ಭಾರತದ ಮಹಾನಗರಗಳ ಕೊಡುಗೆಯೂ ಅಪಾರವಾಗಿದೆ. ಹಾಗೆ ಭಾರತದ ಹಲವು ನಗರಗಳು ಕ್ವಾಲಿಟಿ ಆಫ್ ಲಿವಿಂಗ್ ಪಟ್ಟಿಯಲ್ಲಿ ಸ್ಥಾನಗಿಟ್ಟಿಸಿವೆ. 2023ರ ಮರ್ಸರ್ಸ್ ಕ್ವಾಲಿಟಿ ಆಫ್ ಲಿವಿಂಗ್ ಸಮೀಕ್ಷೆಯಲ್ಲಿ ಭಾರತದ 7 ಮಹಾನಗರಗಳು ಪಟ್ಟಿಯಲ್ಲಿವೆ.
ಈ ಪಟ್ಟಿಯಲ್ಲಿ ಹೈದಾರಾಬಾದ್ ಅತ್ಯುತ್ತಮ ನಗರ ಎನಿಸಿಕೊಂಡಿದೆ. ವಾಸಯೋಗ್ಯವಾದ ಅತ್ಯುತ್ತಮ ನಗರಗಳ ಸಾಲಿನಲ್ಲಿ ಹೈದರಾಬಾದ್ 153ನೇ ಸ್ಥಾನ ಪಡೆದಿದ್ದು, ಭಾರತದ ರಾಜ್ಯಗಳಲ್ಲಿ ಮೊದಲ ಆಯ್ಕೆಯಾಗಿದೆ. ಇದರ ನಂತರ 154ನೇ ಸ್ಥಾನದಲ್ಲಿ ಪುಣೆ ಹಾಗೂ 156ನೇ ಸ್ಥಾನದಲ್ಲಿ ಬೆಂಗಳೂರು, 161 ಚೆನ್ನೈ, 164 ಮುಂಬೈ, 170 ಕೋಲ್ಕತ್ತಾ ಮತ್ತು 172ನೇ ಸ್ಥಾನದಲ್ಲಿ ದೆಹಲಿ ಹೆಸರು ಪಟ್ಟಿಯಲ್ಲಿದೆ.

ಸ್ಥಿರತೆ, ಆರೋಗ್ಯ, ಶಿಕ್ಷಣ
2019ರಲ್ಲಿ ಹೈದರಾಬಾದ್ ಈ ಶ್ರೇಯಾಂಕದಲ್ಲಿ 143ನೇ ಸ್ಥಾನದಲ್ಲಿತ್ತು. ಆದರೆ 2023ರಲ್ಲಿ 153ಕ್ಕೆ ಜಾಗತಿಕ ಶ್ರೇಯಾಂಕದಲ್ಲಿ ಸ್ವಲ್ಪ ಕುಸಿತ ಕಂಡಿದ್ದರೂ ದೇಶೀಯವಾಗಿ ತನ್ನ ಪ್ರಮುಖ ಸ್ಥಾನವನ್ನು ಉಳಿಸಿಕೊಂಡಿದೆ. ಹೈದರಾಬಾದ್‌ನ ಉನ್ನತ ಶ್ರೇಣಿಗೆ ಕೊಡುಗೆ ನೀಡುವ ಪ್ರಮುಖ ಅಂಶಗಳು ಸ್ಥಿರತೆ, ಆರೋಗ್ಯ, ಶಿಕ್ಷಣ, ಮೂಲಸೌಕರ್ಯ ಮತ್ತು ಅಭಿವೃದ್ಧಿ ಹೊಂದುತ್ತಿರುವ ಸಾಮಾಜಿಕ-ಸಾಂಸ್ಕೃತಿಕ ಪರಿಸರವನ್ನು ಒಳಗೊಳ್ಳುತ್ತವೆ.
ಕೋವಿಡ್ ಪೂರ್ವ ಯಶಸ್ಸಿನ ಓಟ
ಕೋವಿಡ್‌ನಿಂದ ಉಂಟಾದ ಅಡೆತಡೆಗಳ ಮೊದಲು, ಹೈದರಾಬಾದ್ ಸತತವಾಗಿ 2015 ರಿಂದ 2019ರ ವರೆಗೆ ಅಗ್ರಸ್ಥಾನವನ್ನು ಪಡೆದುಕೊಂಡಿತ್ತು. ಮರ್ಸರ್ಸ್ ವರದಿಯು, ವಲಸಿಗರಿಗೆ ದೈನಂದಿನ ಜೀವನದ ಪ್ರಾಯೋಗಿಕತೆಗಳು ಮತ್ತು ಜೀವನ ವೆಚ್ಚಗಳ ಜಾಗತಿಕ ಮೌಲ್ಯಮಾಪನವನ್ನು ಕೇಂದ್ರೀಕರಿಸುತ್ತದೆ, ಇದು ಹೈದರಾಬಾದ್‌ನ ನಿರಂತರ ಸ್ಥಿರತೆಯನ್ನು ಒತ್ತಿಹೇಳುತ್ತದೆ. ಕೋವಿಡ್ ವೇಳೆ ಹೈದರಾಬಾದ್ ತೆಗೆದುಕೊಂಡಿದ್ದ ಮುನ್ನೆಚ್ಚರಿಕೆಗಳು ಹಾಗೂ ಅದರ ನಿರ್ವಹಣೆ ಮಾಧರಿಯಾಗಿತ್ತು ಎಂಬುದನ್ನು ವರದಿ ತಿಳಿಸಿದೆ.
ದುಬಾರಿಯಾಗದ ಹೈದರಾಬಾದ್
227 ನಗರಗಳಲ್ಲಿ 202ನೇ ಸ್ಥಾನವನ್ನು ಪಡೆದುಕೊಂಡಿರುವ ಜಾಗತಿಕ ಕೈಗೆಟಕುವ ದರವು ಹೈದರಾಬಾದ್‌ನ ಹಿರಿಮೆಯಲ್ಲಿ ಗಮನಾರ್ಹ ಸಾಧನೆಗೆ ಕಾರಣವಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ, ಉಳಿದ ನಗರಗಳು ದುಬಾರಿ ಎಂಬ ಪಟ್ಟಿಯಲ್ಲಿವೆ. ಹೈದರಾಬಾದ್‌ನಲ್ಲಿ ಜೀವನ ವೆಚ್ಚ ದುಬಾರಿಯಾಗಿರದೆ ಕೈಗೆಟುಕುವ ದರ ಇರುವುದು ವಾಸಯೋಗ್ಯ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವಂತೆ ಮಾಡಿದೆ.
ವಲಸಿಗರ ಅಚ್ಚುಮೆಚ್ಚಿನ ತಾಣ
ವಲಸಿಗರಿಗೆ ಆಯಸ್ಕಾಂತದಂತೆ ಈ ನಗರದ ಆಕರ್ಷಿಸುತ್ತಿದೆ. ದೇಶದ ವಿವಿಧ ಕಡೆಗಳಿಂದ ಉದ್ಯೋಗ ಅರಸಿ ಬರುವವರನ್ನು ರಾಜ್ಯ ತನ್ನತ್ತ ಸೆಳೆಯುತ್ತಿದೆ. ವಲಸಿಗರಿಗೆ ಮೂಲಭೂತ ಸೌಕರ್ಯವಾಗಿ ಎಲ್ಲವೂ ದೊರೆಯುತ್ತಿದೆ. ಜೊತೆಗೆ ಅಷ್ಟೇ ಉದ್ಯೋಗವಕಾಶಗಳು, ನಗರಗಳಲ್ಲಿನ ಹೇರಳ ಸೌಕರ್ಯ ಜನರನ್ನು ಸೆಳೆಯುತ್ತಿದೆ. ಜೊತೆಗೆ ದೆಹಲಿಗೆ ಹೋಲಿಸಿದರೆ ಕಡಿಮೆ ಮಾಲಿನ್ಯ ಮಟ್ಟಗಳು. ಅನೇಕ ವಲಸಿಗರು ಅತ್ಯುತ್ತಮ ಶಿಕ್ಷಣಕ್ಕಾಗಿ, ಉದ್ಯೋಗಕ್ಕಾಗಿ ಅತ್ಯುತ್ತಮ ಜೀವನ ಮಟ್ಟಕ್ಕಾಗಿ ಶಾಶ್ವತವಾಗಿ ನೆಲೆಸಲು ಬಯಸುತ್ತಾರೆ. ಇದು ಸಹ ಜೀವನ ಮಟ್ಟ ಶ್ರೇಯಾಂಕದಲ್ಲಿ ಕೊಡುಗೆ ನೀಡಿದೆ.
ಜಾಗತಿಕ ಶಿಕ್ಷಣ, ಮೂಲ ಸೌಕರ್ಯ
ಹೈದರಾಬಾದ್ ಈಗ ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ನೀಡುವ ಕುರಿತಾಗಿ ಯೋಜನೆ ರೂಪಿಸಿದೆ. ರಾಷ್ಟ್ರೀಯ ಗಡಿಗಳನ್ನು ಮೀರಿ ಅಂತರರಾಷ್ಟ್ರೀಯ ವಿದ್ಯಾರ್ಥಿಗಳಲ್ಲಿ ವಿಸ್ತರಿಸಿದೆ. ನಗರವು ಗುಣಮಟ್ಟದ ಶಿಕ್ಷಣ, ಸ್ವಾಗತಾರ್ಹ ಸ್ಥಳೀಯ ಸಮುದಾಯ, ಅನುಕೂಲಕರ ಪ್ರಯಾಣದ ಆಯ್ಕೆಗಳು ಮತ್ತು ಒಟ್ಟಾರೆ ವೆಚ್ಚ-ಪರಿಣಾಮಕಾರಿ ಜೀವನಶೈಲಿಯ ಮಿಶ್ರಣ ನೀಡುತ್ತಿದೆ. ಈ ಎಲ್ಲಾ ಪ್ರಗತಿಗೆ ಬೇಕಾಗುವ ಮೂಲ ಸೌಕರ್ಯವನ್ನು ಏರುಗತಿಯಲ್ಲಿ ನೀಡುತ್ತಿದೆ. ಹೀಗಾಗಿ ಹೈದರಾಬಾದ್ ಎಲ್ಲಾ ಶ್ರೇಯಾಂಕಗಳಲ್ಲಿ ಮೊದಲ ಸ್ಥಾನಕ್ಕೆ ಏರುತ್ತಿದೆ.
ಬೆಂಗಳೂರಿಗೆ ಹೈದರಾಬಾದ್ ಪೈಪೋಟಿ
ಭಾರತದ ಸಿಲಿಕಾನ್ ಸಿಟಿಯಾಗಿ ಮೆರೆಯುತ್ತಿರುವ ಬೆಂಗಳೂರಿಗೆ ಮತ್ತೊಂದು ಪೈಪೋಟಿ ನೀಡುವ ನಗರವಾಗಿ ಹೈದರಾಬಾದ್ ಮುನ್ನುಗ್ಗುತ್ತಿದೆ. ದೊಡ್ಡ ದೊಡ್ಡ ಐಟಿ ಕಂಪನಿಗಳು ಹೈದರಾಬಾದ್ ಅನ್ನೇ ಕೇಂದ್ರ ಕಚೇರಿಗಾಗಿ ಅರಸುತ್ತಿವೆ. ಜೊತೆಗೆ ಬೆಂಗಳೂರಿನ ಜೀವನ ಮಟ್ಟಕ್ಕೆ ಹೋಲಿಸಿದರೆ ಹೈದರಾಬಾದ್‌ನಲ್ಲಿ ಈ ಪ್ರಮಾಣ ತುಸು ಕಡಿಮೆ ಇರುವುದರಿಂದ ಕಂಪನಿಗಳ ವಲಸೆಯೂ ಹೆಚ್ಚಿದೆ. ಹೀಗಾಗಿ ಬೆಂಗಳೂರಿಗೆ ಭಾರತದ ಮತ್ತೊಂದು ನಗರಿ ಪೈಪೋಟಿ ನೀಡುತ್ತಿದೆ. ಭಾರತದಲ್ಲಿ ಕಂಪನಿ ತೆರೆಯಲು ಬೆಂಗಳೂರನ್ನೇ ಮೆಚ್ಚಿಕೊಂಡಿದ್ದ ಬೃಹತ್ ಕಂಪನಿಗಳು ಈಗ ಹೈದರಾಬಾದ್ ಕಡೆಯೂ ಮುಖ ಮಾಡಿವೆ.



Click it and Unblock the Notifications