Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ತಮ್ಮ ದೇಹದ ಲುಕ್ ಮೂಲಕ 2023ರಲ್ಲಿ ಗಿನ್ನೀಸ್ ವರ್ಲ್ಡ್ ರೆಕಾರ್ಡ್ ಮಾಡಿರುವ ವ್ಯಕ್ತಿಗಳಿವರು, ಒಬ್ಬೊಬ್ಬರೂ ಚಿತ್ರ-ವಿಚಿತ್ರ!
2023 ವರ್ಷ ಮುಗಿಯತ್ತಾ ಬಂದಿದೆ. ಈ ವರ್ಷ ಹಲವರು ತಮ್ಮ ದೇಹದ ಮುಖಾಂತರ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಬರೆದಿದ್ದಾರೆ. ಇದೀಗ ಗಿನ್ನೀಸ್ ವರ್ಲ್ಡ್ ರೆಕಾರ್ಡ್ ಯಾರು ಯಾವೆಲ್ಲಾ ಕಾರಣಕ್ಕೆ ಮಾಡಿದ್ದಾರೆ ಎಂದು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ವೀಡಿಯೋ ಮಾಡಿ ಹಾಕಿದೆ.
ಬನ್ನಿ ಈ ವರ್ಷ ಯಾರು ತಮ್ಮ ದೇಹದ ಯಾವ ವಿಶೇಷತೆಗಳಿಂದಾಗಿ ಯಾವೆಲ್ಲಾ ಕಾರಣಕ್ಕೆ ಗಿನ್ನೀಸ್ ರೆಕಾರ್ಡ್ ಮಾಡಿದ್ದಾರೆ ಎಂದು ತಿಳಿದಾಗ ಅಬ್ಬಾ ಎಂದನಿಸದೆ ಇರಲ್ಲ, ಬನ್ನಿ ಯಾರು ಯಾವ ಕಾರಣಕ್ಕೆ ಗಿನ್ನೀಸ್ ರೆಕಾರ್ಡ್ ಮಾಡಿದ್ದಾರೆ ಎಂದು ನೋಡೋಣ ಬನ್ನಿ:
1. ವಿಶ್ವದ ಅತಿ ನೀಳ ಕೂದಲಿನ ವ್ಯಕ್ತಿ
ವಿಶ್ವದ ಅತಿ ನೀಳ ಕೂದಲಿನ ವ್ಯಕ್ತಿಯೆಂದು ನಮ್ಮ ಭಾರತದ ಮಹಿಳೆಯೊಬ್ಬರು ಗಿನ್ನೀಸ್ ರೆಕಾರ್ಡ್ ಬರೆದಿದ್ದಾರೆ. ಈ ಮಹಿಳೆಯ ಹೆಸರು ಸ್ಮಿತಾ, ತಮ್ಮ 14ನೇ ವಯಸ್ಸಿನಿಮದ ಉದ್ದ ಕೂದಲನ್ನು ಬೆಳಸಲಾರಂಭಿಸಿದರು. ಇವರ ಕೂದಲು 236.22ಸೆಂ.ಮೀ ಅಂದರೆ 7 ಅಡಿ 9 ಇಂಚು ಉದ್ದವಿದೆ.

2. ಅತಿ ಉದ್ದದ ಗಡ್ಡ ಹೊಂದಿರುವ ವ್ಯಕ್ತಿ
ವಿಶ್ವದಲ್ಲಿಯೇ ಅತಿ ಉದ್ದದ ಗಡ್ಡ ಹೊಂದಿರುವ ವ್ಯಕ್ತಿ ಕೂಡ ಭಾರತೀಯ ವ್ಯಕ್ತಿಯೇ ಆಗಿದ್ದಾರೆ. ಇವರ ಗಡ್ಡ 2.54 m (8 ft 3 in) ಉದ್ದವಿದೆ. ಈ ಮೊದಲು ಕೆನಡಾದ ವ್ಯಕ್ತಿ 2008ರಲ್ಲಿ 2.33m ಉದ್ದದ ಗಡ್ಡದ ಮೂಲಕ ರೆಕಾರ್ಡ್ ಮಾಡಿದ್ದರು, ಆ ರೆಕಾರ್ಡ್ ಅನ್ನು ಸರ್ವನ್ ಸಿಂಗ್ ಮುರಿದಿದ್ದಾರೆ. 2022ರಲ್ಲಿಯೂ ಇವರೇ ರೆಕಾರ್ಡ್ ಮಾಡಿದ್ದರು.
3. ಗಡ್ಡದ ಸರಪಳಿ ಮೂಲಕ ರೆಕಾರ್ಡ್
ಮಾನವ ಸರಪಳಿಯಂತೆಯೇ ಇದು ಗಡ್ಡದ ಸರಪಳಿ. ಈ ರೆಕಾರ್ಡ್‌ನಲ್ಲಿ 69 ಪುರುಷರ ಭಾಗವಹಿಸಿದ್ದರು.ಈ ಗಡ್ಡದ ಸರಪಳಿ ಉದ್ದ 45.99 ಮೀ ಉದ್ದದ ಸರಪಳಿ ಮೂಲಕ ರೆಕಾರ್ಡ್ ಮಾಡಿದ್ದಾರೆ.
4. ವಿಚಿತ್ರ ಮೂಗಿನ ಮೂಲಕ ಗಿನ್ನಿಸ್ ರೆಕಾರ್ಡ್
ಈ ಮನುಷ್ಯನ ಮೂಗೇ ವಿಚಿತ್ರ , ನಮ್ಮ ಬಲ ಹಾಗೂ ಎಡ ಮೂಗಿನ ಮೂಳೆ, ಹಾಗೂ ಕೆಳಗಡೆ ಮಾಂಸವಿದೆ, ಆದರೆ ಈ ಮನುಷ್ಯನಲ್ಲಿ ರಂಧ್ರವಿದೆ, ಆ ರಂಧ್ರದಲ್ಲಿ ಮಾರ್ಕರ್ ಪೆನ್ನಿಗಿಂತ ದೊಡ್ಡದಾದ ವಸ್ತು ಹಾಕಬಹುದು, ಹೆಬ್ಬರಳನ್ನೇ ಹಾಕಬಹುದು, ಈ ಮುಖಾಂತರ ರೆಕಾರ್ಡ್ ಮಾಡಿದ್ದಾನೆ.
5. ವಿವಾಹಿತ ದಂಪತಿಗಳ ಎತ್ತರ ವ್ಯತ್ಯಾಸ ಗಿನ್ನಿಸ್ ವರ್ಲ್ಡ್ ರೆಕಾರ್ಡ್
ಕುಳ್ಳಗೆ ಪತ್ನಿ ಎತ್ತರದ ಗಂಡ ಈ ರೀತಿಯ ಜೋಡಿ ನೋಡಿದ್ದೇವೆ, ಆದರೆ ಈ ಜೋಡಿ ಎತ್ತರ ಮಾತ್ರ ಭಿನ್ನವಾಗಿದೆ. ಇಲ್ಲಿ ಪತ್ನಿಯ ಎತ್ತರ ಬರೀ ಎರಡು ಅಡಿ 9.44 ಇಂಚು. ಈ ಜೋಡಿಯ ಎತ್ತರದ ವ್ಯತ್ಯಾಸ ಈಗ ಗಿನ್ನೀಸ್ ವರ್ಲ್ಡ್ ರೆಕಾರ್ಡ್ ಬರೆದಿದೆ.
6. ದೇಹ ತುಂಬಾ ಹಚ್ಚೆ ಹಾಕಿಸಿರುವ ಜೋಡಿ
ಅರ್ಜೆಂಟೀನಾ ದೇಶದ ಈ ಜೋಡಿ ದೇಹ ತುಂಬಾ ಹಚ್ಚೆ ಹಾಕಿಸಿಕೊಂಡು ತಮ್ಮ ದೇಹದ ರೂಪವನ್ನೇ ಬದಲಾಯಿಸಿಕೊಂಡಿರುವ ಜೋಡಿಯಾಗಿದೆ. ಇವರನ್ನು ನೋಡುವಾಗ ಭಯವಾಗುವಂತಿದ್ದಾರೆ.
7. ಎರಡೂ ಕೆನ್ನೆಯಲ್ಲಿ ರಂಧ್ರವಿರುವ ವ್ಯಕ್ತಿ
ಆತನ ಈ ಕೆನ್ನೆಗೆ ಒಂದು ಕಡ್ಡಿ ಹಾಕಿ ಆ ಕೆನ್ನೆಯಿಂದ ತೆಗಿಯಬಹುದು, ಈತ ಇಂಗ್ಲೆಂಡ್‌ನ ವ್ಯಕ್ತಿಯಾಗಿದ್ದು ಈತನ ತನ್ನ ರೂಪ ಈ ರೀತಿ ಬದಲಾಯಿಸಿಕೊಳ್ಳುವ ಮೂಲಕ ಗಿನ್ನೀಸ್ ರೆಕಾರ್ಡ್ ಬರೆದಿದ್ದಾರೆ.
8. ಕಣ್ಣು ಗುಡ್ಡೆ ಹೊರ ಬಿಡುವ ಮೂಲಕ ರೆಕಾರ್ಡ್
ಅಬ್ಬಾ ಇದನ್ನು ನೋಡುವಾಗಲೇ ಭಯವಾಗುತ್ತೆ, ಆತನ ಎರಡೂ ಕಣ್ಣು ಗುಡ್ಡೆಗಳು ಸಂಪೂರ್ಣ ಹೊರಬರುತ್ತೆ, ಹಾರರ್ ಮೂವಿ ನೋಡಿದಂತೆಯೇ ಅನಿಸುವುದು.
9. ತಲೆಯಲ್ಲಿ ಕೊಂಬುಗಳಿರುವ ವ್ಯಕ್ತಿ
ಈ ವ್ಯ್ಕಕ್ತಿಯನ್ನು ನೋಡುವಾಗ ತುಂಬಾ ವಿಚಿತ್ರ ಅನಿಸುತ್ತದೆ, ಈತನಿಗೆ ಕೊಮಬುಗಳು ಬಂದಿಲ್ಲ, ಸರ್ಜರಿ ಮಾಡಿ ಮಾಡಿಸಿಕೊಂಡಿರುವುದು, ರಾಕ್ಷಸ ಲುಕ್ ಮೂಲಕ ಈತ ಗಿನ್ನೀಸ್ ರೆಕಾರ್ಡ್ ಮಾಡಿದ್ದಾರೆ.



Click it and Unblock the Notifications
