Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಪ್ರಪಂಚದಲ್ಲಿಅತ್ಯಂತ ಉದ್ದ ಕೂದಲಿನ ವ್ಯಕ್ತಿ ಎಂದು ರೆಕಾರ್ಡ್ ಮಾಡಿದ ಭಾರತದ ಮಹಿಳೆ, ಇವರ ಕೂದಲಿನ ಉದ್ದ ಎಷ್ಟು ಗೊತ್ತೇ?
ನೀಳ ಕೂದಲನ್ನು ನೋಡಿದಾಗ ಪ್ರತಿಯೊಬ್ಬರಿಗೂ ವಾವ್! ಅವರ ಕೂದಲು ಎಷ್ಟು ಚೆನ್ನಾಗಿದೆ ಎಂದು ಅನಿಸಿದೆ ಇರಲ್ಲ. ಕೆಲವರ ಕೂದಲಂತೂ ಪಾದ ಮುಟ್ಟುವಂತೆ ಇರುತ್ತದೆ, ಅಂಥವರು ನಡೆದಾಡುವಾಗ ಎಲ್ಲರ ಕಣ್ಣು ಅವರ ಕೂದಲು ಮೇಲೆ ಹೋಗುವುದು ಸಹಜ.
ಇಲ್ಲೊಬ್ಬರು ತಮ್ಮ ನೀಳ ಕೂದಲಿನ ಮೂಲಕ ದಾಖಲೆ ಬರೆದಿದ್ದಾರೆ. ಅವರ ಕೂದಲು ಬರೋಬರಿ 236.22ಸೆಂ.ಮೀ ಅಂದರೆ 7 ಅಡಿ 9 ಇಂಚು ಉದ್ದವಿದೆ. ಈ ಮೂಲಕ ಅವರು ಪ್ರಪಂಚದಲ್ಲಿಯೇ ಅತೀ ಉದ್ದದ ಕೂದಲು ಹೊಂದಿರುವ ವ್ಯಕ್ತಿಯಾಗಿದ್ದರೆ. ಅವರು ಭಾರತೀಯರು ಎನ್ನುವುದು ಇನ್ನೂ ವಿಶೇಷ.

ಅವರ ಹೆಸರು ಸ್ಮಿತಾ ವಯಸ್ಸು 46 ವರ್ಷ, ತಮ್ಮ14ನೇ ವಯಸ್ಸಿನಲ್ಲಿ ಕೂದಲನ್ನು ಬೆಳೆಸಲಾರಂಭಿಸಿದ್ದಾರೆ. ಅವರು ಅವರ ತಾಯಿಯ ಕೂದಲನ್ನು ನೋಡಿ ಬೆಳೆಸಬೇಕೆಂದು ಬಯಸಿದರಂತೆ. ಅಲ್ಲಿದೆ ಅವರಿಗೆ ಆರೋಗ್ಯಕರ ಕೂದಲು ವಂಶಪಾರಂಪರ್ಯವಾಗಿ ಕೂಡ ಬಮದಿತ್ತು, ಹೀಗಾಗಿ ಅವರ ಕೂದಲು ತುಂಬಾನೇ ಸೊಗಸಾಗಿ ಬೆಳೆಯಲಾರಂಭಿಸಿತು.
ಅವರಿಗೆ ಅವರ ಕೂದಲನ್ನು ಬಾಚಲು ದಿನದಲ್ಲಿ 3 ಗಂಟೆ ಬೇಕಂತೆ
ಉದ್ದ ಕೂದಲು ನೋಡಲು ತುಂಬಾ ಚೆಂದ, ಆದರೆ ಅದನ್ನು ನಿರ್ವಹಣೆ ಮಾಡುವುದು ಅಷ್ಟು ಸುಲಭವಲ್ಲ. ಅದನ್ನು ಬಾಚಲು, ಎಣ್ಣೆ ಹಾಕಲು, ತಲೆ ಕೂದಲು ತೊಳೆಯಲು ಅಷ್ಟು ಸುಲಭವಲ್ಲ.
ಸ್ಮಿತಾ ಅವರಿಗೆ ಕೂದಲಿನ ಸಿಕ್ಕು ಬಿಡಿಸಲು 2 ಗಂಟೆ ಕಾಲ ಬೇಕಂತೆ. ಕೂದಲನ್ನು ತೊಳೆಯಲು ಅರ್ಧ ಗಂಟೆಗಿಂತಲೂ ಅಧಿಕ ಸಮಯ ಬೇಕಂತೆ.
ಕೆಳಗಡೆ ಸೀಟ್ ಹಾಸಿ ಬೆಡ್ ಮೇಲೆ ನಿಂತು ಕೂದಲು ಬಾಚುತ್ತಾರಂತೆ
ಅಷ್ಟೊಂದು ಉದ್ದ ಕೂದಲನ್ನು ಬಾಚುವುದು ಅಷ್ಟು ಸುಲಭವಲ್ಲ, ಬಿಟ್ಟರೆ ನೆಲ ಗುಡಿಸುತ್ತದೆ, ಆದ್ದರಿಂದ ಕೆಳಗಡೆ ಸೀಟ್ ಹಾಸಿ, ಬೆಡ್ ಮೇಲೆ ಹತ್ತಿ ನಿಂತುಕೊಂಡು ಸಿಕ್ಕು ಬಿಡಿಸುತ್ತೇನೆ ಎನ್ನುತ್ತಾರೆ ಸ್ಮಿತಾ....
ಉದುರಿದ ಕೂದಲನ್ನು ಬಿಸಾಡುವುದೇ ಇಲ್ವಂತೆ
ಪ್ರತಿಯೊಬ್ಬರಿಗೂ ತಲೆ ಬಾಚಿದಾಗ ಸ್ವಲ್ಪ ಕೂದಲು ಬಾಚಣಿಕೆಯಲ್ಲಿ ಬರುತ್ತದೆ, ಅದನ್ನು ಬಿಸಾಡುತ್ತೇವೆ, ಆದರೆ ಇವರು ಒಂದು ಕೂದಲನ್ನು ಕೂಡ ಹೊರಗಡೆ ಬಿಸಾಡುವುದಿಲ್ವಂತೆ, ಅದನ್ನು ಸಂಗ್ರಹಿಸಿ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿಡುತ್ತಾರಂತೆ. ಒಮ್ಮೆ ಅವರಿಗೆ ತುಂಬಾನೇ ಕೂದಲು ಉದುರಲು ಆರಂಭಿಸಿತು, ಇದರಿಂದ ಅವರಿಗೆ ತುಂಬಾನೇ ಬೇಸರ ಉಂಟಾಯ್ತು, ಅಲ್ಲಿಂದ ಉದುರಿದ ಕೂದಲನ್ನು ಬಿಸಾಡದೆ ಸಂಗ್ರಹಿಸಿಡುತ್ತೇನೆ ಎನ್ನುತ್ತಾರೆ. ಕೂದಲನ್ನು ಹೊರಗಡೆ ಬಿಸಾಡಿದರೆ ತುಂಬಾನೇ ಬೇಸರವಾಗುತ್ತೆ. ಹಾಗಾಗಿ ಕೂದಲನ್ನು ಬಿಸಾಡುತ್ತಿಲ್ವಂತೆ. 20 ವರ್ಷಗಳಿಂದ ಕೂದಲನ್ನು ಬಿಸಾಡುತ್ತಿಲ್ಲ, ಹಾಗಾಗಿ ಸಂಗ್ರಹಿಸಿದ ಕೂದಲೇ ತುಂಬಾ ಇದೆಯಂತೆ.
ಕೂದಲು ಬಿಡಲಾರಂಭಿಸಿದ ಮೇಲೆ ಕತ್ತರಿಸಲೇ ಇಲ್ಲವೇ?
ಅವರು ಕೂದಲು ಬಿಡಲಾರಂಭಿಸಿದ ಮೇಲೆ ಎರಡನೇ ಮಗು ಗರ್ಭದಲ್ಲಿದ್ದಾಗ ಹಾಗೂ ಒಮ್ಮೆ ಕಾಯಿಲೆಯಾದ ಕೂದಲಿನ ನಿರ್ವಹಣೆ ಸುಲಭವಾಗಲಿ ಎಂದು 6 ಅಡಿಯಷ್ಟು ಕೂದಲು ಕತ್ತರಿಸಲಾಯ್ತು ಎಂದು ಹೇಳಿದ್ದಾರೆ.
ಅವರು ಕೂದಲನ್ನು ತುರುಬು ಕಟ್ಟಿ ಇಟ್ಟಿರುತ್ತಾರೆ. ಒಮ್ಮೊಮ್ಮೆ ಬಿಟ್ಟಾಗ ಜನ ಅಚ್ಚರಿಯಿಂದ ಅವರ ಕೂದಲನ್ನು ನೋಡುತ್ತಾರಂತೆ. ಇಷ್ಟು ಉದ್ದದ ಕೂದಲು ನಿಜವಾಗಲೂ ಇರುತ್ತಾ ಎಂಬ ಅಚ್ಚರಿಯಲ್ಲಿ ಜನ ನೋಡುತ್ತಾರೆ. ಅಲ್ಲದೆ ಅವರ ಬಳಿ ಬಂದು ಕೂದಲನ್ನು ಮುಟ್ಟಿ ನೋಡುವುದು, ಫೋಟೋ ತೆಗೆಯುವುದು, ಸೆಲ್ಫಿ ತೆಗೆದುಕೊಳ್ಳುವುದು ಮಾಡುತ್ತಾರೆ. ಕೂದಲಿಗೆ ಏನು ಹಚ್ಚುತ್ತೀರಿ ಎಂಬೆಲ್ಲಾ ಪ್ರಶ್ನೆಗಳನ್ನೂ ಕೇಳುತ್ತಾರೆ. ಈಗ ಅವರು ಗಿನ್ನಿಸ್ ಬುಕ್‌ನಲ್ಲಿ ಅತ್ಯಂತ ಉದ್ದ ಕೂದಲಿನ ವ್ಯಕ್ತಿ ಎಂಬ ದಾಖಲೆ ಬರೆದಿದ್ದಾರೆ.
ನೀಳ ಕೂದಲು ಚೆಲುವು ಹೆಚ್ಚಿಸುತ್ತೆ
ನೀಳ ಕೇಶರಾಶಿ ಹೆಣ್ಣಿಗೆ ಮತ್ತಷ್ಟು ಅಂದವನ್ನು ತಂದು ಕೊಡುತ್ತದೆ. ನೀಳ ಕೂದಲು ನೋಡುವುದೇ ಆಕರ್ಷಕ. ಮೊಣಕಾಲಿನವರೆಗೆ ನೀಳ ಕೂದಲು ಇರುವವರನ್ನು ನೋಡುತ್ತೇವೆ. ಕೂದಲು ಉದ್ದ ಬಂದಷ್ಟು ಅದರ ನಿರ್ವಹಣೆ ಮಾಡುವುದು ಕಷ್ಟ, ಹಾಗಾಗಿ ಹೆಚ್ಚಿನವರು ಕೂದಲನ್ನು ಉದ್ದ ಬಿಡುವುದಿಲ್ಲ. ಇದೀಗ ಸ್ಮಿತಾ ಅವರು ಗಿನ್ನಿಸ್ ದಾಖಲೆ ಬರೆದ ಮೇಲೆ ಆ ದಾಖಲೆ ಮುರಿಯಲು ಬೇರೆಯವರು ಪ್ರಯತ್ನ ಮಡಬಹುದೇನೋ....



Click it and Unblock the Notifications