Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಯಶ್ ಅವರು ಈ ಕಾರಣಕ್ಕೆ ಮತ್ತಷ್ಟು ಗ್ರೇಟ್ ಅನಿಸುವುದು
ರಾಕಿಂಗ್ ಸ್ಟಾರ್ ಯಶ್ ಅವರಿಗೆ ದೇಶದ ಎಲ್ಲಾ ಕಡೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ, ಪ್ಯಾನ್ ಇಂಡಿಯಾ ಸ್ಟಾರ್ ಕಂಡರೆ ಕನ್ನಡಿಗರಿಗೆ ತುಂಬಾನೇ ಪ್ರೀತಿ. ಒಂದು ಕಾಲದಲ್ಲಿ ಬಾಲಿವುಡ್ ಎಂದರೆ ಶ್ರೇಷ್ಠ ಎಂಬ ಭಾವನೆ ಇತ್ತು. ಆದರೆ ನಮ್ಮ ಕನ್ನಡ ಸಿನಿಮಾ ಕೆಜಿಎಫ್ ಬಾಲಿವುಡ್‌ನ ಚಿತ್ರಗಳನ್ನು ಮೀರಿ ಸದ್ದು ಮಾಡಿತು, ಯಶ್ ಅವರು ತಮ್ಮ ಅಭಿನಯ ಕೌಶಲ್ಯ ಮೂಲಕ ಇಡೀ ದೇಶವನ್ನೇ ಮೋಡಿ ಮಾಡಿದರು.

ಜನವರಿ 8ಕ್ಕೆ ಯಶ್ ಅವರ ಹುಟ್ಟುಹಬ್ಬ, ಅವರು ಅಭಿಮಾನಿಗಳು ಈ ದಿನ ತುಂಬಾ ಸಂಭ್ರಮದಿಂದ ಆಚರಿಸುವ ಪ್ಲ್ಯಾನ್ ಮಾಡುತ್ತಾರೆ, ಆದರೆ ಈ ವರ್ಷ ಅವರ ಬರ್ತ್‌ಡೇ ದಿನ ಅಭಿಮಾನಿಗಳಿಗೆ ಆದ ಅವಘಡದಿಂದಾಗಿ 3 ಜನ ಯಶ್ ಅಭಿಮಾನಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆ ನೋಡಿ ಯಶ್ ಅವರಿಗೂ ಸೇರಿ ಇಡೀ ಕರ್ನಾಟ ಬೇಸರ ವ್ಯಕ್ತಿಪಡಿಸಿದೆ.
ಮಕ್ಕಳನ್ನು ಕಳೆದುಗೊಂಡ ಹೆತ್ತವರ ಸಂಕಟ ಹೇಳತೀರದು
ಯಶ್ ಅವರ ಬ್ಯಾನರ್ ಕಟ್ಟುವಾಗ ವಿದ್ಯುತ್ ತಗುಲಿ ಮೂರು ಜನ ಸಾವನ್ನಪ್ಪಿದರು, ಇದನ್ನು ಕೇಳಿ ಯಶ್ ಕೂಡ ಗದಗ್‌ಗೆ ಧಾವಿಸಿ ಕುಟುಂಬಸ್ಥರಿಗೆ ಸಾಂತ್ವಾನ ನುಡಿದ್ದಾರೆ.
ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ಮೃತರನ್ನು ಹನಮಂತ ಹರಿಜನ (21), ಮುರಳಿ ನಡವಿನಮನಿ (20) ಹಾಗೂ ನವೀನ್ ಗಾಜಿ (19) ಎಂದು ಗುರುತಿಸಲಾಗಿದೆ. ಇನ್ನು ಈ ಘಟನೆಯಲ್ಲಿ ಮಂಜುನಾಥ್ ಹರಿಜನ, ದೀಪಕ ಹರಿಜನ ಹಾಗೂ ಪ್ರಕಾಶ ಮ್ಯಾಗೇರಿ ಎಂಬುವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅಭಿಮಾನಿಗಳ ಅಭಿಮಾನಕ್ಕೆ ತಲೆಬಾಗಿದ ಯಶ್
ಅಭಿಮಾನಿಗಳು ಸಾವನ್ನಪ್ಪಿರುವುದು ಕೇಳಿ ಯಶ್ ಅವರಿಗೂ ದುಃಖವಾಯಿತು. ಅವರು ಗೋವಾದಲ್ಲಿದ್ದರು, ಆದರೆ ತನ್ನ ಅಭಿಮಾನಿಗಳ ಸಾವಿನ ಸುದ್ದಿ ಕೇಳಿ ಗದಗ್‌ಗೆ ಬಂದು ಮಕ್ಕಳನ್ನು ಕಳೆದುಕೊಂಡು ಗೋಳಾಡುತ್ತಿದ್ದ ಪೋಷಕರಿಗೆ ಸಾಂತ್ವಾನ ನುಡಿದಿದ್ದಾರೆ, ನಮಗೆ ಮಗವಿಲ್ಲ ಎಂದು ಅಳುತ್ತಿದ್ದ ಪೋಷಕರನ್ನು ನೋಡಿ ನಾನು ಕೂಡ ನಿಮ್ಮ ಮಗ ಎಂದು ಹೇಳಿರುವುದು ನಿಜವಾಗಲೂ ಯಶ್ ಅವರ ದೊಡ್ಡತನ. ಅಷ್ಟೊಂದು ದೊಡ್ಡ ಬೇಕಿದ್ದರೆ ಇದ್ದಲ್ಲಿಯೇ ಪ್ರೆಸ್‌ಮೀಟ್ ಮಾಡಿ, ಕುಟುಂಬಕ್ಕೆ ಪರಿಹಾರ ನೀಡುತ್ತೇನೆ ಎಂದು ಹೇಳಬಹುದಿತ್ತು, ಆದರೆ ಯಶ್ ಎಲ್ಲಾ ಕಾರ್ಯಕ್ರಮ ರದ್ದುಗೊಳಿಸಿ ಆ ಕುಟುಂಬದ ನೋವಿಗೆ ಸ್ಪಂದಿಸಿದ್ದಾರೆ.



Click it and Unblock the Notifications
