Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಜೋತಿಷ್ಯಶಾಸ್ತ್ರದ ಪ್ರಕಾರ ಬುಧವಾರ ಗಣಪತಿಯ ಆರಾಧಿಸಿ..! ಇಲ್ಲಿದೆ ಸ್ತೋತ್ರ
ಗಣಪತಿಯನ್ನು ಪೂಜಿಸುವುದರಿಂದ ಸಂತೋಷ ಮತ್ತು ಸೌಭಾಗ್ಯವು ಅಪಾರವಾಗಿ ವೃದ್ಧಿಯಾಗುತ್ತದೆ. ಅಲ್ಲದೆ ಎಲ್ಲಾ ರೀತಿಯ ದುಃಖಗಳಿಂದ ಪರಿಹಾರವನ್ನು ಪಡೆಯುತ್ತಾನೆ. ಆದ್ದರಿಂದ, ಭಕ್ತರು
ಬುಧವಾರದಂದು ವಿಧಿವಿಧಾನಗಳೊಂದಿಗೆ ಗಣಪತಿಯನ್ನು ಪೂಜಿಸುವುದು ರೂಢಿಯಲ್ಲಿದೆ. ಜೀವನದಲ್ಲಿ ಸಂತೋಷ, ಸಂಪತ್ತು ವೃದ್ಧಿಗಾಗಿ ಗಣಪತಿಯನ್ನು ಆರಾಧಿಸಲಾಗುತ್ತದೆ. ಶುಭ ಕಾರ್ಯಕ್ಕೂ ಮುನ್ನ ವಿಘ್ನ ವಿನಾಶಕನ ಜಪಿಸುವುದು ರೂಢಿಯಾಗಿದೆ. ಅಲ್ಲದೆ ಬುಧವಾರದಂದು ಗಣಪತಿಯ ಪೂಜಿಸುವುದು ಎಷ್ಟು ಶುಭ ತರಲಿದೆ ಎಂಬುದನ್ನು ನೋಡಿ.
ದೇವರ ದೇವರಾದ ಮಹಾದೇವನ ಮಗ ಗಣೇಶನನ್ನು ಮೊದಲು ಪೂಜಿಸಲಾಗುತ್ತದೆ. ಗಣಪತಿಯನ್ನು ಪೂಜಿಸುವುದರಿಂದ ಸಂತೋಷ ಮತ್ತು ಸೌಭಾಗ್ಯವು ಅಪಾರವಾಗಿ ವೃದ್ಧಿಯಾಗುತ್ತದೆ. ಅಲ್ಲದೆ ಎಲ್ಲಾ ರೀತಿಯ ದುಃಖಗಳಿಂದ ಪರಿಹಾರವನ್ನು ಪಡೆಯಬಹುದು ಎಂದು ನಂಬಲಾಗಿದೆ.

ಶುಭ ಕಾರ್ಯಗಳಲ್ಲಿ ಯಶಸ್ವಿಯಾಗಲು, ಬುಧವಾರದಂದು ಗಣೇಶನ ಪೂಜಿಸಲೆಂದು ಉಪವಾಸ ಆಚರಿಸಲಾಗುತ್ತದೆ. ಜ್ಯೋತಿಷ್ಯದಲ್ಲಿ ಬುಧವಾರದಂದು ವಿಶೇಷ ಕ್ರಮಗಳನ್ನು ಕೈಗೊಳ್ಳುವ ಅವಕಾಶವೂ ಇದೆ. ಈ ಕ್ರಮಗಳನ್ನು ಅನುಸರಿಸುವುದರಿಂದ ಮನೆಯಲ್ಲಿ ಆಹಾರ ಮತ್ತು ಹಣದ ಕೊರತೆ ಎಂದಿಗೂ ಉಂಟಾಗುವುದಿಲ್ಲ. ನೀವು ಸಹ ಹಣಕಾಸಿನ ತೊಂದರೆಗಳಿಂದ ಮುಕ್ತಿ ಹೊಂದಲು ಬಯಸಿದರೆ, ಬುಧವಾರದಂದು ಖಂಡಿತವಾಗಿಯೂ ಈ ಕ್ರಮಗಳನ್ನು ಮಾಡಿ.
ಬುಧವಾರ ಗಣೇಶಣ ಪೂಜೆ ಹೇಗೆ ಮಾಡಬೇಕು?
ನೀವು ಗಣಪತಿಯ ಅನುಗ್ರಹವನ್ನು ಹೊಂದಲು ಬಯಸಿದರೆ, ಬುಧವಾರದಂದು ಸ್ನಾನ ಮತ್ತು ಧ್ಯಾನದ ನಂತರ, ವಿಧಿವಿಧಾನಗಳ ಪ್ರಕಾರ ಗಣಪತಿಯನ್ನು ಪೂಜಿಸಿ. ಈ ಸಮಯದಲ್ಲಿ ಗಣೇಶನಿಗೆ ಬೆಲ್ಲದಿಂದ ಮಾಡಿದ ಮೋದಕವನ್ನು ಅರ್ಪಿಸಿ. ಗಣಪತಿಗೆ ಬೆಲ್ಲದಿಂದ ಮಾಡಿದ ಮೋದಕವನ್ನು ನೈವೇದ್ಯ ಮಾಡಿದರೆ ಗಜಾನನನು ಬೇಗನೇ ಸುಖಿಯಾಗುತ್ತಾನೆ ಎಂದು ಶಾಸ್ತ್ರಗಳಲ್ಲಿ ಸೂಚಿತವಾಗಿದೆ. ಅವರ ಆಶೀರ್ವಾದವು ಖಂಡಿತವಾಗಿಯೂ ಸಾಧಕನ ಮೇಲೆ ಬೀಳುತ್ತದೆ. ಅಪೇಕ್ಷಿತ ಫಲಿತಾಂಶಗಳನ್ನು ಪಡೆಯಲು, ಬೆಲ್ಲದಿಂದ ಮಾಡಿದ ಮೋದಕವನ್ನು ಗಣೇಶನಿಗೆ ಅರ್ಪಿಸಿ.
ಶಮಿ ಪತ್ರ (ಮುಟ್ಟಿದರೆ ಮುನಿಯುವ ಮುಳ್ಳಿನ ಗಿಡದ ಹೂವು) ಗಣೇಶನಿಗೆ ತುಂಬಾ ಪ್ರಿಯವಾಗಿದೆ. ಆದ್ದರಿಂದ, ಬುಧವಾರದ ಪೂಜೆಯ ಸಮಯದಲ್ಲಿ, ಗಣೇಶನಿಗೆ ಶಮಿ ಪತ್ರವನ್ನು ಅರ್ಪಿಸಿ.
ನೀವು ಆರ್ಥಿಕ ತೊಂದರೆಗಳಿಂದ ಮುಕ್ತರಾಗಲು ಬಯಸಿದರೆ, ಬುಧವಾರದಂದು ಗಂಗಾಜಲವಿರುವ ನೀರಿನಿಂದ ಸ್ನಾನ ಮಾಡಿ. ಈ ಸಮಯದಲ್ಲಿ, ನಂತರ, ಹಳದಿ ಬಟ್ಟೆಗಳನ್ನು ಧರಿಸಿ ಮತ್ತು ಸೂರ್ಯ ದೇವರಿಗೆ ನೀರನ್ನು ಅರ್ಪಿಸಿ. ಅದರ ನಂತರ, ಗಣಪತಿಗೆ ಕುಂಕುಮ ಮಿಶ್ರಿತ ಹಾಲಿನಿಂದ ಅಭಿಷೇಕ ಮಾಡಿ. ಗಣಪತಿಗೆ ಕೇಸರಿ ತುಂಬಾ ಪ್ರಿಯ. ಈ ಪರಿಹಾರವನ್ನು ಮಾಡುವುದರಿಂದ, ಗಣಪತಿಯ ಆಶೀರ್ವಾದ ನಿಮ್ಮ ಮೇಲೆ ಇರಲಿದೆ.
ಗರಿಕೆ ಗಣೇಶನಿಗೆ ಬಹಳ ಪ್ರಿಯ. ಆದ್ದರಿಂದ, ಗಣಪತಿಯ ವಿಶೇಷ ಆಶೀರ್ವಾದವನ್ನು ಪಡೆಯಲು, 21 ಗರಿಕೆಯನ್ನು ಒಂದು ದಾರದ ಮೇಲೆ ಎಳೆದು ಮತ್ತು ಅದನ್ನು ಬುಧವಾರದಂದು ಗಣಪತಿಗೆ ಅರ್ಪಿಸಿ. ಈ ಸಮಯದಲ್ಲಿ ಸಂತೋಷ, ಸಮೃದ್ಧಿ ಮತ್ತು ಸಂಪತ್ತು ವೃದ್ಧಿಗಾಗಿ ಪ್ರಾರ್ಥಿಸಿ. ಈ ಪರಿಹಾರವನ್ನು ಮಾಡುವುದರಿಂದ ಜೀವನದಲ್ಲಿ ದುಃಖ, ಬಿಕ್ಕಟ್ಟು ಮತ್ತು ಹಣದ ಸಂಬಂಧಿತ ಸಮಸ್ಯೆಗಳು ದೂರವಾಗುತ್ತವೆ.
ಗಣೇಶ ಆರಾಧನೆಯ ಮಂತ್ರಗಳು ಹೀಗಿವೆ:
ಓಂ ಶ್ರೀ ಗಣೇಶಾಯ ನಮಃ
ಓಂ ಗಂ ಗಣಪತಯೇ ನಮಃ
ಓಂ ವಕ್ರತುಂಡಾಯ ನಮಃ
ಓಂ ಹ್ರಿಂ ಶ್ರೀಂ ಕ್ಲೀಂ ಗೌಂ ಗಃ ಶ್ರಿಮ್ನಹಗಣಾಧಿಪತಯೇ ನಮಃ
ಓಂ ವಿಘ್ನೇಶ್ವರಾಯ ನಮಃ
ಗಜಾನನಂ ಭೂತಗಣಾದಿ ಸೇವಿತಂ
ಕಪಿತ್ಥ ಜಂಬೂಫಲಸಾರ ಭಕ್ಷಿತಂ
ಉಮಾಸುತಂ ಶೋಕ ವಿನಾಶಕಾರಣಂ
ನಮಾಮಿ ವಿಘ್ನೇಶ್ವರ ಪಾದಪಂಕಜಂ
ಓಂ ಸುಮುಖಾಯ ನಮಃ
ವಕ್ರತುಂಡ ಮಹಾಕಾಯ
ಸೂರ್ಯಕೋಟಿ ಸಮಪ್ರಭಃ
ನಿರ್ವಿಘ್ನಂ ಕುರು ಮೇ ದೇವ
ಸರ್ವಕಾರ್ಯೇಷು ಸರ್ವದಾ



Click it and Unblock the Notifications