Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ನಾವು ತಿನ್ನುವ ಇಡ್ಲಿ ಕುರಿತ ಈ ಆಸಕ್ತಿಕರ ಸಂಗತಿಗಳು ನಿಮಗೆ ಗೊತ್ತಾ?
ದಕ್ಷಿಣ ಭಾರತದಲ್ಲಿ ಇಡ್ಲಿ ಯಾರಿಗೆ ತಾನೆ ಗೊತ್ತಿಲ್ಲ ಅಲ್ವಾ? ವಾರದಲ್ಲಿ ಕನಿಷ್ಠ ಒಂದು ಬಾರಿಯಾದರೂ ಇಡ್ಲಿ ಗ್ಯಾರಂಟಿ. ನಮ್ಮ ಉಡ್ಲಿ ಬರೀ ಇಲ್ಲಿ ಮಾತ್ರವಲ್ಲ ವಿದೇಶದಲ್ಲೂ ಫೇಮಸ್.
ವಿದೇಶದ ಇಂಡಿಯನ್ ರೆಸ್ಟೋರೆಂಟ್‌ಗಳಲ್ಲಿ ಸಿಮಗೆ ಸಿಗುವುದು. ಆ ಇಡ್ಲಿ ದಿನವಿಂದು. ಮಾರ್ಚ್ 30ನ್ನು ಇಡ್ಲಿ ದಿನವನ್ನಾಗಿ ಆಚರಿಸಲಾಗುವುದು.

ಈ ಇಡ್ಲಿ ಕುರಿತ ಕೆಲ ಸ್ವಾರಸ್ಯಕರ ಸಂಗತಿಯನ್ನು ನಾವು ನಿಮಗೆ ಹೇಳಲಿದ್ದೇವೆ:
* ಈ ಇಡ್ಲಿ ಇದೆಯೆಲ್ಲಾ ಅದು ನಮಗೆ 10ನೇ ಶತಮಾನದಿಂದಲೂ ಪರಿಚಯ. ಶಿವಕೋಟ್ಯಾಚಾರ್ಯ ಬರೆದಿರುವನೆಂದು ನಂಬಲಾಗಿರುವ ಜೈನ ಧಾರ್ಮಿಕ ಕಥೆಗಳ ಸಂಗ್ರಹವಾಗಿರುವ ವಡ್ಡಾರಾಧನೆಯಲ್ಲಿ ಇಡಲಿಗೆ ಎಂದು ಇಡ್ಲಿ ಕುರಿತು ಉಲ್ಲೇಖವಿದೆ.
* ಇಡ್ಲಿ ಎಷ್ಟು ಬಗೆಯಲ್ಲಿ ಮಾಡುತ್ತಾರೆ ಲೆಕ್ಕವೇ ಸಿಗಲ್ಲ ಅಷ್ಟೊಂದು ವೈರಟಿಯಲ್ಲಿ ಮಾಡುತ್ತಾರೆ. ಅದರಲ್ಲೂ ಪ್ಲೇನ್ ಇಡ್ಲಿ, ಮಸಾಲೆ ಇಡ್ಲಿ, ರವೆ ಇಡ್ಲಿ, ಚಾಕೋಲೆಟ್ ಇಡ್ಲಿ ಹೀಗೆ ನೂರಕ್ಕೂ ಅಧಿಕ ಬಗೆಯ ಇಡ್ಲಿ ತಯಾರಿಸಲಾಗುವುದು,
* ಬೆಂಗಳೂರಿನ ಮಾವಳ್ಳಿ ಟಿಫಿನ್ ರೂಮ್ಸ್ ಇಡ್ಲಿಯನ್ನು ತಾವು ಕಂಡು ಹಿಡಿದಿರುವುದಾಗಿ ಹೇಳುತ್ತಾರೆ.
* ಈ ಇಡ್ಲಿ ಭಾರತದ ಗಡಿ ದಾಟಿ ಶ್ರೀಲಂಕಾ ಸೇರಿದಂತೆ ಹಲವು ದೇಶಗಳಲ್ಲಿ ತನ್ನ ರುಚಿ ಬೀರಿದೆ.
* ಇಡ್ಲಿ ಕ್ಯಾಲೋರಿ ಕಡಿಮೆ ಅಲ್ಲದೆ ಹುದುಗು ಬರಿಸಿದ ಆಹಾರವಾಗಿರುವುದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
* ಇಡ್ಲಿಯನ್ನು ಮಾಡಬೇಕೆಂದರೆ ನೀವು ಹುದುಗು ಬರಿಸಬೇಕು. ಆದ್ದರಿಂದ ಈ ಇಡ್ಲಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದರಲ್ಲಿ ವಿಟಮಿನ್ ಬಿ ಇದೆ.
* ಇಡ್ಲಿಯಲ್ಲಿ ಕೊಲೆಸ್ಟ್ರಾಲ್ ಇಲ್ಲ, ಸ್ಯಾಚುರೇಟಡ್ ಫ್ಯಾಟ್ ಇಲ್ಲ ಆದ್ದರಿಂದ ಅನಾರೋಗ್ಯವಿದ್ದಾಗಲೂ ಇಡ್ಲಿ ಸವಿಯಬಹುದು.
* ಇಡ್ಲಿಯನ್ನು ನೀವು ಬೇಕಾದ ಆಕಾರದಲ್ಲಿ ತಯಾರಿಸಬಹುದು.
ಇಡ್ಲಿ ಅತ್ಯಾದ್ಭುತ ಬ್ರೇಕ್‌ಫಾಸ್ಟ್ ಏಕೆ?
ಇಡ್ಲಿಯನ್ನು ಬರೀ ಬ್ರೇಕ್‌ಫಾಸ್ಟ್‌ನಲ್ಲಿ ಮಾತ್ರವಲ್ಲ ಲಂಚ್, ಸ್ನ್ಯಾಕ್ಸ್, ಡಿನ್ನರ್ ಹೀಗೆ ಯಾವಾಗ ಬೇಕಾದರೂ ತಿನ್ನಬಹುದು. ಆದರೆ ಹೆಚ್ಚಾಗಿ ಬ್ರೇಕ್‌ಫಾಸ್ಟ್ ರೆಸಿಪಿಯಾಗಿ ಇದನ್ನು ಬಳಸಲಾಗುವುದು. ದಕ್ಷಿಣ ಭಾರತದ ಚಿಕ್ಕ ಹೋಟೆಲ್‌ನಿಂದ ದೊಡ್ಡ-ದೊಡ್ಡ ರೆಸ್ಟೋರೆಂಟ್‌ಗಳಿಗೂ ಹೋದರೂ ನಿಮಗೆ ಬ್ರೇಕ್‌ಫಾಸ್ಟ್‌ಗೆ ಇಡ್ಲಿ ಸಿಕ್ಕೇ ಸಿಗುತ್ತದೆ.
ಇಡ್ಲಿಯ ಪ್ರಯೋಜನಗಳ ಬಗ್ಗೆ ನೋಡುವುದಾದರೆ
ಇಡ್ಲಿಯಲ್ಲಿ ಕ್ಯಾಲೋರಿ ಕಡಿಮೆ: ಯಾರು ಫಿಟ್ನೆಸ್ ಕಾಪಾಡಬೇಕು ಎಂದು ಬಯಸುತ್ತೀರೋ ಅವರು ಇಡ್ಲಿಯನ್ನು ಸವಿದು ಮೈ ತೂಕ ಕಾಪಾಡಬಹುದು.
ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು
ಇಡ್ಲಿ ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು. ಇದನ್ನು ಹುದುಗು ಬರಿಸಿ ಮಾಡುವುದರಿಂದ ಇದರಿಂದ ಹೊಟ್ಟೆಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಬೇಗನೆ ಹೊಟ್ಟೆ ತುಂಬಿಸುತ್ತದೆ
ಇಡ್ಲಿಯನ್ನು ತಿನ್ನುವುದರಿಂದ ಬೇಗನೆ ಹೊಟ್ಟೆ ತುಂಬುವುದು, ಆದ್ದರಿಂದ ಮಧ್ಯ ಮಧ್ಯ ತಿನ್ನುವುದು ಕಡಿಮೆಯಾಗುವುದು, ಇದರಿಂದ ಮೈ ತೂಕ ಕಾಪಾಡಲು ಸಹಕಾರಿಯಾಗಿದೆ.
ಇದರಲ್ಲಿ ನಾರಿನಂಶ ಅಧಿಕ
ಉದ್ದಿನ ಬೇಳೆ ಹಾಗೂ ಅಕ್ಕಿ ಬಳಸಿ ಇಡ್ಲಿಯನ್ನು ತಯಾರಿಸಲಾಗುವುದು. ಇದರಿಂದ ನಾರಿನಂಶ ಅಧಿಕವಿರುತ್ತದೆ.
ಇಡ್ಲಿಯನ್ನು ಮಾಡುವುದು ಹೇಗೆ?
ಒಂದು ಲೋಟ ಅಕ್ಕಿ, 1/ 2 ಲೋಟ ಉದ್ದಿನ ಬೇಳೆ ಅಥವಾ ಅದಕ್ಕಿಂತ ಸ್ವಲ್ಪ ಕಡಿಮೆ ಉದ್ದಿನ ಬೇಳೆ ಬೇಕಾದರೆ ಬಳಸಬಹುದು, ಈ ಎರಡು ಸಾಮಗ್ರಿಯನ್ನು 8 ಗಂಟೆ ನೀರಿನಲ್ಲಿ ನೆನೆಹಾಕಿ. ನಂತರ ರುಬ್ಬಿ ಮತ್ತೆ 8 ಗಂಟೆ ಹುದುಗು ಬರಲು ಇಡಬೇಕು. ಇಡ್ಲಿಗೆ ರುಬ್ಬುವಾಗ ಸ್ವಲ್ಪ ಅನ್ನ ಅಥವಾ ಅವಲಕ್ಕಿ ಹಾಕಿದರೆ ಇಡ್ಲಿ ತುಂಬಾ ಮೃದುವಾಗಿ ಬರುತ್ತದೆ.



Click it and Unblock the Notifications

