Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವಿಶ್ವ ಭೂಮಿ ದಿನ 2024: ಆಚರಣೆ ಕುರಿತ ಅಚ್ಚರಿಯ ಮಾಹಿತಿಗಳಿವು..!
ಪ್ರತಿ ವರ್ಷ ನಾವು ಏಪ್ರಿಲ್ 22ರಂದು ವಿಶ್ವ ಭೂಮಿ ದಿನವನ್ನಾಗಿ ಆಚರಿಸುತ್ತೇವೆ. ಈ ಭೂಮಿಯಲ್ಲಿ ಮನುಷ್ಯ ಮಾತ್ರವಲ್ಲ ಎಷ್ಟೋ ಜೀವ ಸಂಕುಲಗಳು, ಸೂಕ್ಷಾಣುಗಳು, ಸಸ್ಯಗಳು ಹೀಗೆ ಭೂಮಿ ತನ್ನ ಒಡಲಿನಲ್ಲಿ ಎಲ್ಲವನ್ನು ತುಂಬಿಕೊಂಡು ಜೀವ ರಾಶಿಗಳನ್ನು ಸಾಕಿ ಸಲುಹುತ್ತಿದೆ. ಆದರೆ ಈ ಭೂಮಿಯಲ್ಲಿ ಇರುವ ಜೀವಿಗಳಲ್ಲಿ ಭೂಮಿಗೆ ಕಂಟಕವಾಗಿರುವುದು ಮನುಷ್ಯ ಮಾತ್ರ.
ಆದರೆ ಭೂಮಿಗೆ ಹಲವು ರೀತಿಯ ಆತಂಕಗಳು ಎದುರಾಗಿವೆ. ಅದರಲ್ಲಿ ಪ್ಲಾಸ್ಟಿಕ್ ಬಳಕೆ, ತಾಪಮಾನ ಏರಿಕೆ, ಮರಳುಗಾಡು ನಿರ್ಮಾಣವಾಗುತ್ತಿರುವುದು, ಜನಸಂಖ್ಯೆ, ಕಾಡು ನಾಶ ಹೀಗೆ ಇದರ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಆದ್ರೆ ನಾವೆಂದು ಭೂಮಿ ಉಳಿಸುವ ಕಡೆಗೆ ಇಂದಿಗೂ ಯೋಚಿಸಿಯೇ ಇಲ್ಲ. ಅದರೆ ಬೇರೆ ಗ್ರಹದಲ್ಲಿ ಮನೆ ಮಾಡುವ ಕುರಿತು ಕನಸು ಕಾಣುತ್ತಿದ್ದೇವೆ.

ಇನ್ನು ಭೂಮಿಯ ದಿನವನ್ನು ಏಪ್ರಿಲ್‌ನಲ್ಲಿ ಏಕೆ ಆಚರಿಸಲಾಗುತ್ತದೆ ಎಂದು ಎಂದಾದರೂ ಯೋಚಿಸಿದ್ದೀರಾ? ಮುಖ್ಯವಾಗಿ ಭೂಮಿಯನ್ನು ಉಳಿಸುವ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿರುವ ಕಾರಣ ಈ ದಿನವನ್ನು ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಶಾಲೆಗಳ ಅವಧಿಯಲ್ಲಿ ನಡೆಸಲು ನೆರವಾಗುವಂತೆ ಏಪ್ರಿಲ್ 22ರಂದು ಆಚರಿಸಲು ನಿರ್ಧರಿಸಲಾಗಿತ್ತು. ಆದರೆ ಭಾರತದಲ್ಲಿ ಈ ವೇಳೆ ಬಹುತೇಕ ಕಡೆ ರಜಾ ದಿನಗಳಾಗಿವೆ. ಇನ್ನು ಮೊದಲ ಭೂಮಿ ದಿನವನ್ನು 1970ರಲ್ಲಿ ಆಚರಿಸಲಾಗಿತ್ತು.
ಪ್ರತಿ ವರ್ಷ ಭೂಮಿಯ ದಿನದಂದು ಒಂದೊಂದು ಥೀಮ್ ಘೋಷಿಸಲಾಗುತ್ತದೆ. ಭೂಮಿಯನ್ನು ಮುಂದಿನ ಪೀಳಿಗೆ ಉಳಿಸುವ ಕುರಿತಂತೆ ಅಗತ್ಯವಾಗಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು ಹಾಗೂ ತುರ್ತಾಗಿ ನೀಡಬೇಕಾದ ಎಲ್ಲಾ ನೆರವು ಸೇರಿದಂತೆ ವಿವಿಧ ವಿಚಾರಗಳು ಚರ್ಚೆಗೆ ಬರುತ್ತವೆ.
ಭೂಮಿಯ ದಿನವನ್ನು 190 ದೇಶಗಳಲ್ಲಿ ವಾರ್ಷಿಕವಾಗಿ ಆಚರಿಸಲಾಗುತ್ತದೆ. ಕೆಲವು ದೇಶಗಳು ಬೇರೆ ಬೇರೆ ದಿನಾಂಕದಂದು ಸಹ ಭೂಮಿಯ ದಿನವನ್ನು ಆಚರಿಸುತ್ತವೆ. ಆದರೆ 190 ದೇಶಗಳಲ್ಲಿ 20,000 ಪಾಲುದಾರರು ವರ್ಷಪೂರ್ತಿ ಪರಿಸರ ಸ್ನೇಹಿ ಕಾರ್ಯಕ್ರಮಗಳ ಮೂಲಕ ಭೂ ರಕ್ಷಣೆಗೆ ಮುಂದಾಗುತ್ತಾರೆ.
ಪ್ರತಿ ವರ್ಷದಂತೆ ಈ ವರ್ಷವೂ ಸಹ ಹೊಸ ಥೀಮ್ ಮೂಲಕ ಭೂಮಿ ದಿನ ಆಚರಿಸಲು ಮುಂದಾಗಲಾಗಿದೆ. ಈ ವರ್ಷ, ಪ್ಲಾನೆಟ್ ವರ್ಸಸ್ ಪ್ಲಾಸ್ಟಿಕ್ ಎಂಬ ಥೀಮ್ ಇಟ್ಟುಕೊಳ್ಳಲಾಗಿದೆ. 2040 ರ ವೇಳೆಗೆ ಪ್ಲಾಸ್ಟಿಕ್ ಬಳಕೆಯನ್ನು ಶೇ.60ರಷ್ಟು ಕಡಿಮೆ ಮಾಡುವ ಗುರಿಯನ್ನು ಹೊಂದಲಾಗಿದೆ.
ಭೂಮಿಯ ದಿನವು ಒಂದು ಗೀತೆಯನ್ನು ಹೊಂದಿದೆ
ಎಲ್ಲಾ ದಿನಾಚರಣೆಯಂತೆ ಭೂಮಿಯ ದಿನಕ್ಕೂ ಒಂದು ಹಾಡು ರಚಿಸಲಾಗಿದೆ. ಕವಿ ಅಭಯ್ ಕುಮಾರ್ ಅವರು 2013ರಲ್ಲಿ ಈ ಭೂಮಿ ದಿನಕ್ಕಾಗಿ ಹಾಡೊಂದನ್ನು ಸಿದ್ಧಪಡಿಸಿದ್ದರು. ಇದು ವಿಶ್ವದ ಪ್ರಮುಖ 8 ಭಾಷೆಗಳಲ್ಲಿ ಲಭ್ಯವಿದೆ. ಹಿಂದಿಯಲ್ಲೂ ಈ ಭೂಮಿಗೀತೆ ಲಭ್ಯವಿದೆ.
ಭೂಮಿಯ ದಿನಕ್ಕೆ ಧ್ವಜಾರೋಹಣ
ಈ ದಿನದ ಆಚರಣೆಯ ಅಂಗವಾಗಿ ದ್ವಜಾರೋಹಣೆ ಸಹ ನೆರವೇರಲಿದೆ. ಇದಕ್ಕಾಗಿ ವಿಶೇಷ ಧ್ವಜ ಸಹ ಇದೆ. ಅಪೊಲೊ 17 ಸಿಬ್ಬಂದಿ 1972 ರಲ್ಲಿ ಬಾಹ್ಯಾಕಾಶದಲ್ಲಿ ಚಿತ್ರೀಕರಿಸಿದ ಭೂಮಿಯ ಪ್ರಸಿದ್ಧ ಛಾಯಾಚಿತ್ರ ಈ ಧ್ವಜದಲ್ಲಿ ಇರಲಿದೆ.
2018ರಲ್ಲಿ ಭಾರತೀಯರ ದಾಖಲೆ
2018ರ ಏಪ್ರಿಲ್‌ನಲ್ಲಿ ಭಾರತೀಯರು 24 ಗಂಟೆಗಳಲ್ಲಿ 50 ಮಿಲಿಯನ್ ಮರಗಳನ್ನು ನೆಟ್ಟು ಹೊಸ ದಾಖಲೆ ಬರೆದಿದ್ದರು. ವಿಶ್ವಾದ್ಯಂತ ಪರಿಸರದ ಪ್ರಯತ್ನಗಳು ಭೂಮಿಯ ದಿನದ ಗೌರವಾರ್ಥವಾಗಿ ಗಿನ್ನೆಸ್ ವಿಶ್ವ ದಾಖಲೆಗಾಗಿ ಒಟ್ಟಾಗಿ ಒಟ್ಟುಗೂಡಲು ಭಾರತದಲ್ಲಿ ಜನರನ್ನು ಪ್ರೇರೇಪಿಸಿತು. ಭಾರತೀಯ ಅಧಿಕಾರಿಗಳ ಪ್ರಕಾರ, ಜುಲೈ 11, 2018 ರಂದು 24 ಗಂಟೆಗಳಲ್ಲಿ 49.3 ಮಿಲಿಯನ್ ಮರಗಳನ್ನು ನೆಡಲು 800,000 ಜನರು ಒಟ್ಟಾಗಿ ಸೇರಿಕೊಂಡರು, ಒಂದೇ ದಿನದಲ್ಲಿ ನೆಟ್ಟ ಹೆಚ್ಚಿನ ಮರಗಳನ್ನು ನೆಟ್ಟ ದಾಖಲೆ ಬರೆದರು.



Click it and Unblock the Notifications