Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
World Blood Donor Day 2025: ಈ ದಿನ ಏಕೆ ಆಚರಣೆ? ಹೇಗೆ ಪ್ರಾರಂಭವಾಯಿತು? ಈ ವರ್ಷದ ಥೀಮ್ ಏನು?
ದಾನಗಳಲ್ಲಿ ಬಹಳ ಶ್ರೇಷ್ಠ ದಾನ ರಕ್ತದಾನ. ಪ್ರತಿಯೊಬ್ಬ ಮನುಷ್ಯನ ದೇಹದಲ್ಲಿ ಇರುವುದು ಒಂದೇ ರಕ್ತ. ಆದರೆ, ನಾವು ಆರೋಗ್ಯವಾಗಿರಲು ಶುದ್ದ ರಕ್ತ ತುಂಬಾ ಅವಶ್ಯಕ. ಪ್ರತಿ ಕ್ಷಣ ಲೆಕ್ಕವಿಲ್ಲದಷ್ಟು ಜನರಿಗೆ ರಕ್ತದ ಅವಶ್ಯಕತೆ ಇರುತ್ತದೆ. ಬಹುತೇಕರು ಸರಿಯಾದ ಸಮಯಕ್ಕೆ ರಕ್ತ ಸಿಗದೆ ಮೃತಪಡುವುದು ಉಂಟು. ಹೀಗಾಗಿ, ರಕ್ತವನ್ನು ಜೀವದ್ರವ್ಯ ಎಂದು ಕರೆಯಲಾಗುತ್ತದೆ. ಈ ಹಿನ್ನಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ವಿಶ್ವ ರಕ್ತದಾನಿಗಳ ದಿನವನ್ನು (World Blood Donor Day) ಘೋಷಿಸಿದೆ. ಅದರಂತೆ, ಪ್ರತಿ ವರ್ಷ ಹೊಸ ಥೀಮ್‌ನೊಂದಿಗೆ ವಿಶ್ವ ರಕ್ತದಾನಿಗಳ ದಿನ ಆಚರಿಸಲಾಗುತ್ತದೆ. ಈ ದಿನದ ಇತಿಹಾಸ, ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ
ಪ್ರತಿ ವರ್ಷ ಜೂನ್ 14 ರಂದು ವಿಶ್ವ ರಕ್ತದಾನಿಗಳ ದಿನವನ್ನು (World Blood Donor Day 2025) ಆಚರಿಸಲಾಗುತ್ತದೆ. ರಕ್ತದಾನವು ಯಾರೊಬ್ಬರ ಜೀವವನ್ನು ಉಳಿಸುತ್ತದೆ ಎಂಬ ಕಾರಣದಿಂದಾಗಿ ಇದನ್ನು ಮಹಾದಾನ ಎಂದು ಕರೆಯಲಾಗುತ್ತದೆ. ಯಾವುದೇ ಲಾಭವಿಲ್ಲದೆ, ಇತರರ ಜೀವಗಳನ್ನು ಉಳಿಸಲು ರಕ್ತದಾನ ಮಾಡುವ ಸ್ವಯಂಪ್ರೇರಿತ ರಕ್ತದಾನಿಗಳನ್ನು ಗೌರವಿಸುವುದು ಇದರ ಉದ್ದೇಶ. ಇದರ ಹೊರತಾಗಿ, ರಕ್ತದಾನದಂತಹ ಉತ್ತಮ ಕೆಲಸಗಳನ್ನು ಮಾಡಲು ಜನರನ್ನು ಪ್ರೋತ್ಸಾಹಿಸಲು ವಿಶ್ವ ರಕ್ತದಾನಿಗಳ ದಿನವನ್ನು ಸಹ ಆಚರಿಸಲಾಗುತ್ತದೆ. ಪ್ರತಿ ವರ್ಷ ವಿಶ್ವ ರಕ್ತದಾನಿಗಳ ದಿನವನ್ನು ಏಕೆ ಆಚರಿಸಲಾಗುತ್ತದೆ? ಅದು ಹೇಗೆ ಪ್ರಾರಂಭವಾಯಿತು? ಮತ್ತು ಈ ವರ್ಷದ ಥೀಮ್ ಏನು? ಎಂಬ ಬಗ್ಗೆ ತಿಳಿಯಲು ಮುಂದೆ ಓದಿ.

ವಿಶ್ವ ರಕ್ತದಾನಿಗಳ ದಿನ ಪ್ರಾರಂಭವಾಗಿದ್ದು ಯಾವಾಗ?
ವಿಶ್ವ ರಕ್ತದಾನಿಗಳ ದಿನವನ್ನು 2004 ರಲ್ಲಿ ಪ್ರಾರಂಭಿಸಲಾಯಿತು. ಈ ದಿನವನ್ನು ವಿಶ್ವ ಆರೋಗ್ಯ ಸಂಸ್ಥೆ (WHO), ರೆಡ್ ಕ್ರಾಸ್, ಅಂತರಾಷ್ಟ್ರೀಯ ರಕ್ತದಾನಿಗಳ ಸಂಸ್ಥೆಗಳ ಒಕ್ಕೂಟ (IFBDO) ಮತ್ತು ಇತರೆ ಆರೋಗ್ಯ ಸಂಸ್ಥೆಗಳ ಸಹಯೋಗದೊಂದಿಗೆ ಪ್ರಾರಂಭಿಸಲಾಯಿತು. ವಿಶ್ವಾದ್ಯಂತ ಸ್ವಯಂಪ್ರೇರಿತ ಮತ್ತು ಉಚಿತ ರಕ್ತದಾನವನ್ನು ಉತ್ತೇಜಿಸುವುದು ಮತ್ತು ಸುರಕ್ಷಿತ ರಕ್ತದ ಲಭ್ಯತೆಯನ್ನು ಖಚಿತಪಡಿಸುವುದು ಇದರ ಉದ್ದೇಶವಾಗಿತ್ತು. ಈ ವಿಶೇಷ ದಿನ ಹೇಗೆ ಪ್ರಾರಂಭವಾಯಿತು ಎಂದರೆ, 1940 ರಲ್ಲಿ ನಾಕ್‌ನ ವಿಜ್ಞಾನಿ ರಿಚರ್ಡ್ ಲೋವೆರಿ ಅವರು ಎರಡು ನಾಯಿಗಳ ನಡುವೆ ಮೊದಲ ಯಶಸ್ವಿ ರಕ್ತ ವರ್ಗಾವಣೆ ಮಾಡಿದರು. ಈ ಪರೀಕ್ಷೆಯ ಆಧಾರದ ಮೇಲೆ, ಮಾನವರಲ್ಲಿ ರಕ್ತ ವರ್ಗಾವಣೆಯ ತಂತ್ರವನ್ನು ಸಹ ಅಭಿವೃದ್ಧಿಪಡಿಸಲಾಯಿತು.
ಈ ವರ್ಷದ ಥೀಮ್ ಏನು?
ವಿಶ್ವ ರಕ್ತದಾನಿಗಳ ದಿನವನ್ನು ಇದೇ ಜೂನ್ 14 ರಂದು ಆಚರಿಸಲಾಗುವುದು. ಪ್ರತಿ ವರ್ಷವೂ ಈ ದಿನದ ಥೀಮ್ ವಿಭಿನ್ನವಾಗಿರುತ್ತದೆ. ಈ ವರ್ಷದ ಥೀಮ್ ಬಗ್ಗೆ ಹೇಳುವುದಾದರೆ, 'ರಕ್ತ ನೀಡಿ, ಭರವಸೆ ನೀಡಿ - ಒಟ್ಟಾಗಿ ನಾವು ಜೀವಗಳನ್ನು ಉಳಿಸುತ್ತೇವೆ' (Give blood, give hope - Together we save live). 18 ರಿಂದ 65 ವರ್ಷ ವಯಸ್ಸಿನ ಆರೋಗ್ಯವಂತ ಜನರು ದೇಶದ ಯಾವುದೇ ಶಿಬಿರ ಅಥವಾ ರಕ್ತ ಬ್ಯಾಂಕಿನಲ್ಲಿ ದಾನ ಮಾಡಬಹುದು.
ಕಾರ್ಲ್ ಲ್ಯಾಂಡ್‌ಸ್ಟೈನರ್ ಅವರಿಗೆ ಗೌರವ
ವಿಶ್ವ ರಕ್ತದಾನಿಗಳ ದಿನ ಬಹಳ ವಿಶೇಷವಾಗಿದೆ. ABO ರಕ್ತ ಗುಂಪು ವ್ಯವಸ್ಥೆಯನ್ನು ಕಂಡುಹಿಡಿದ ವಿಜ್ಞಾನಿ ಕಾರ್ಲ್ ಲ್ಯಾಂಡ್‌ಸ್ಟೈನರ್ ಅವರ ಜನ್ಮದಿನದಂದು ಈ ದಿನವನ್ನು ಆಚರಿಸಲಾಗುತ್ತದೆ. ಈ ಮೂಲಕ ಅವರಿಗೆ ಗೌರವ ಸಲ್ಲಿಸಲಾಗುವುದು.
ರಕ್ತದಾನದ ಮಹತ್ವ ಉತ್ತೇಜಿಸುವುದು
ಪ್ರತಿ ವರ್ಷ ಲಕ್ಷಾಂತರ ರೋಗಿಗಳಿಗೆ ಸುರಕ್ಷಿತ ರಕ್ತದ ಅಗತ್ಯವಿದೆ. ಕೆಲವರು ಅಪಘಾತಕ್ಕೀಡಾಗುತ್ತಾರೆ. ಕೆಲವರು ರಕ್ತದ ಅಗತ್ಯವಿರುವ ಶಸ್ತ್ರಚಿಕಿತ್ಸೆಯ ರೋಗಿಗಳು ಇರುತ್ತಾರೆ. ಇನ್ನು ಗರ್ಭಿಣಿಯರು, ಕ್ಯಾನ್ಸರ್ ಅಥವಾ ಥಲಸ್ಸೆಮಿಯಾ ರೋಗಿಗಳಿಗೆ ರಕ್ತದ ಅವಶ್ಯಕತೆ ಹೆಚ್ಚಿರುತ್ತದೆ. ಈ ಪರಿಸ್ಥಿತಿಯಲ್ಲಿ ಅಗತ್ಯವಿರುವ ಜನರಿಗಾಗಿ ಪ್ರತಿ ವರ್ಷ ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸಲಾಗುತ್ತದೆ.
ಸ್ವಯಂಪ್ರೇರಿತ ರಕ್ತದಾನಿಗಳಿಗೆ ಥ್ಯಾಂಕ್ಸ್ ಹೇಳುವುದು
ಯಾವುದೇ ಆಸೆ ಅಥವಾ ದುರಾಸೆ ಇಲ್ಲದೆ, ರಕ್ತದಾನ ಮಾಡುವವರು ಅನೇಕರಿದ್ದಾರೆ. ಈ ಸಮಯದಲ್ಲಿ, ಯಾವುದೇ ಪ್ರತಿಫಲ ಅಥವಾ ಸ್ವಾರ್ಥವಿಲ್ಲದೆ ರಕ್ತದಾನ ಮಾಡುವ ರಕ್ತದಾನಿಗಳನ್ನು ಈ ದಿನವು ಶ್ಲಾಘಿಸುತ್ತದೆ.
ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುವುದು
ಈ ದಿನದ ಪ್ರಮುಖ ಉದ್ದೇಶ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುವುದು. ಸಾರ್ವಜನಿಕರು ನಿಯಮಿತವಾಗಿ, ಸುರಕ್ಷಿತವಾಗಿ ಮತ್ತು ಯಾವುದೇ ಹಣವಿಲ್ಲದೆ ರಕ್ತದಾನ ಮಾಡುವಂತೆ ಪ್ರೋತ್ಸಾಹಿಸಲಾಗುತ್ತದೆ. ಅದಕ್ಕಾಗಿಯೇ ಈ ವಿಶೇಷ ದಿನವನ್ನು ಆಚರಿಸಲಾಗುತ್ತದೆ.
ಸುರಕ್ಷಿತ ರಕ್ತದ ಲಭ್ಯತೆ ಖಚಿತಪಡಿಸಿಕೊಳ್ಳುವುದು
ರಕ್ತದ ನಿರಂತರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಈ ದಿನ ಆಚರಿಸಲಾಗುವುದು. ಪ್ರತಿಯೊಂದು ದೇಶದಲ್ಲೂ ಸಾಕಷ್ಟು ಮತ್ತು ಸುರಕ್ಷಿತ ರಕ್ತದ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವುದು ಇದರ ಉದ್ದೇಶ ಮತ್ತು ಗುರಿಯಾಗಿದೆ. ರಕ್ತದಾನ ನಿಯಮಿತವಾಗಿ ನಡೆದಾಗ ಮಾತ್ರ ಇದು ಸಾಧ್ಯವಾಗುತ್ತದೆ.
ಇದನ್ನೂ ಓದಿ: Indore Couple Case: ಸೋನಂ ರಘುವಂಶಿ ಲವರ್ ಯಾರು? ಅವನೆಂದರೆ ಯಾಕಿಷ್ಟು ಹುಚ್ಚು? ಸತ್ಯ ತಿಳಿದ್ರೆ ಬೆಚ್ಚಿ ಬೀಳ್ತೀರಾ!
ರಕ್ತದಾನ ಯಾರು ಮಾಡಬಹುದು?
• 18 ರಿಂದ 60 ವರ್ಷದವರೆಗಿನ ಆರೋಗ್ಯವಂತ ವ್ಯಕ್ತಿಗಳು ಯಾರು ಬೇಕಾದರೂ ರಕ್ತದಾನ ಮಾಡಬಹುದು.
• ರಕ್ತದಾನಿಗಳ ದೇಹದ ತೂಕ 45 ಕೆಜಿ ಮೇಲ್ಪಟ್ಟಿರಬೇಕು.
• ಹಿಮೋಗ್ಲೋಬಿನ್ ಅಂಶ 12.5 ಗ್ರಾಮ್‌ಗಿಂತ ಹೆಚ್ಚಿರಬೇಕು.
• ರಕ್ತದ ಒತ್ತಡ ಸಾಮಾನ್ಯವಾಗಿರಬೇಕು. ಅಂದರೆ ಸಿಸ್ಟೋಲಿಕ್ ರಕ್ತದ ಒತ್ತಡ 100 ರಿಂದ 140 ಹಾಗೂ ಡಯಾಸ್ಟೊಲಿಕ್ ಒತ್ತಡ 70 ರಿಂದ 100 ಇರಬೇಕು.
• 45 ರಿಂದ 60 ಕೆಜಿ ತೂಕದ ದಾನಿಗಳಿಂದ 350 ಎಂಎಲ್ ರಕ್ತ ಪಡೆಯಲಾಗುವುದು.
• 60 ಕೆಜಿಗೂ ಹೆಚ್ಚು ತೂಕ ಹೊಂದಿರುವ ದಾನಿಗಳಿಂದ 450 ಎಂಎಲ್ ರಕ್ತ ಪಡೆಯಲಾಗುವುದು.
ರಕ್ತದಾನ ಯಾರು ಮಾಡುವಂತಿಲ್ಲ?
• ಅನಾರೋಗ್ಯ ಪೀಡಿತರು ಮತ್ತು ನಿರಂತರ ಔಷಧ ಸೇವಿಸುವರು ರಕ್ತದಾನ ಮಾಡಬಾರದು.
• ಎಚ್‌ಐವಿ (ಏಡ್ಸ್) ಸೋಂಕಿತರು, ಕ್ಯಾನ್ಸರ್ ರೋಗಿಗಳು.
• ಹೃದ್ರೋಗಿಗಳು, ಕ್ಷಯ ರೋಗಿಗಳು, ಲಿವರ್ ಮತ್ತು ಕಿಡ್ನಿ ಸಮಸ್ಯೆ ಹೊಂದಿರುವವರು.
• ಮಧುಮೇಹಿಗಳು, ಹೆಪಟೈಟಿಸ್ 'ಬಿ' ಸೋಂಕಿತರು.
• ಮಾದಕ ವ್ಯಸನಿಗಳು, ಕಡಿಮೆ ತೂಕ ಹಾಗೂ ಹಿಮೋಗ್ಲೋಬಿನ್ ಕೊರತೆಯಿಂದ ಬಳಲುತ್ತಿರುವವರು.
• ಗರ್ಭಿಣಿಯರು ರಕ್ತದಾನ ಮಾಡುವಂತಿಲ್ಲ.
• ಮಕ್ಕಳಿಗೆ ಹಾಲುಣಿಸುವ ಅಮ್ಮಂದಿರು ಒಂದು ವರ್ಷ ರಕ್ತದಾನ ಮಾಡುವಂತಿಲ್ಲ.
• ರೇಬಿಸ್ ಲಸಿಕೆ ಹಾಕಿಸಿಕೊಂಡವರು ರಕ್ತದಾನ ಮಾಡುವಂತಿಲ್ಲ.
• ಬದಲಿ ರಕ್ತ ಹಾಕಿಸಿಕೊಂಡವರು ರಕ್ತದಾನ ಮಾಡುವಂತಿಲ್ಲ.
• ಟ್ಯಾಟೂ (ಹಚ್ಚೆ) ಹಾಕಿಸಿಕೊಂಡವರು 6 ತಿಂಗಳ ಕಾಲ ರಕ್ತದಾನ ಮಾಡುವಂತಿಲ್ಲ.
• ಪ್ಲೇಗ್ ಸೇರಿದಂತೆ ಸಾಂಕ್ರಾಮಿಕ ಕಾಯಿಲೆಯಿಂದ ಬಳಲುತ್ತಿರುವವರು.
• ಸಾಂಕ್ರಾಮಿಕ ಕಾಯಿಲೆಯಿಂದ ಬಳಲುತ್ತಿರುವವರು 15 ದಿನಗಳಿಂದ ಒಂದು ತಿಂಗಳವರೆಗೆ ರಕ್ತದಾನ ಮಾಡುವಂತಿಲ್ಲ.
ರಕ್ತದಾನ ನೋವಿನಿಂದ ಕೂಡಿದಿಯೇ?
• ಬಹುತೇಕ ಜನರಿಗೆ ರಕ್ತದಾನ ಮಾಡಿದರೆ ಸೋಂಕಿಗೆ ಒಳಗಾಗಬಹುದು ಎನ್ನುವ ಭಯವಿದೆ. ಆದರೆ, ರಕ್ತದಾನ ಮಾಡುವುದರಿಂದ ಯಾವುದೇ ಸೋಂಕು ತಗಲುವ ಅಪಾಯವಿಲ್ಲ.
• ರಕ್ತದಾನ ನೋವಿನಿಂದ ಕೂಡಿದೆ ಎಂಬುದು ಸುಳ್ಳು. ಏಕೆಂದರೆ, ಸೂಜಿ ಒಳಗೆ ಹೋಗುವಾಗ ಸ್ವಲ್ಪ ನೋವಾಗಬಹುದು. ಬಳಿಕ ಯಾವುದೇ ನೋವು ಆಗಲ್ಲ.
• ನೀವು ಪ್ರತಿ ವರ್ಷ ಒಮ್ಮೆ ಮಾತ್ರ ರಕ್ತ ನೀಡಬೇಕು ಎಂಬುದು ಹಲವರ ಯೋಚನೆ. ಆದರೆ, ಒಬ್ಬ ಆರೋಗ್ಯವಂತ ವ್ಯಕ್ತಿ ಒಮ್ಮೆ ರಕ್ತ ಕಣಗಳು ಮರುಪೂರಣಗೊಂಡ ನಂತರ, 3 ತಿಂಗಳ ನಂತರ ಮತ್ತೆ ರಕ್ತದಾನ ಮಾಡಬಹುದು.



Click it and Unblock the Notifications
