Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಈ ರಾಶಿಯ ಮಹಿಳೆಯರು ಯಾವಾಗಲೂ ಸ್ನೇಹಿತೆಯರ ಜೊತೆಗೆ ಟ್ರಿಪ್‌ಗೆ ಹೋಗ್ತಾರೆ!
ಪ್ರವಾಸಕ್ಕೆ ಹೋಗೋದು ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ. ಹೊಸ ಜಾಗಗಳನ್ನು ನೋಡ್ಬೇಕು, ಅಲ್ಲಿ ಸುತ್ತಾಡ್ಬೇಕು, ಅಲ್ಲಿನ ಅನುಭವ ಪಡೆಯಬೇಕು ಅನ್ನೋ ಆಸೆ ಖಂಡಿತ ಇರುತ್ತೆ. ಆದರೆ ಪ್ರವಾಸಕ್ಕೆ ಹೋಗುವ ಸಂದರ್ಭದಲ್ಲಿ ನಾವು ಅಲ್ಲಿ ಎಂಜಾಯ್ ಮಾಡ್ಬೇಕಂದ್ರೆ ನಮ್ಮ ಪ್ರೀತಿ ಪಾತ್ರರು ನಮ್ಮ ಜೊತೆಗಿರಬೇಕು. ಅದ್ರಲ್ಲೂ ಮಹಿಳೆಯರು ಮದುವೆಯಾದ ಮೇಲೆ ಹೆಚ್ಚಾಗಿ ತನ್ನ ಪತಿಯ ಜೊತೆಗೆ ಟ್ರಿಪ್‌ಗೆ ಹೋಗೋದಕ್ಕೆ ಇಷ್ಟ ಪಡ್ತಾರೆ. ಆದ್ರೆ ಕೆಲ ರಾಶಿಯ ಮಹಿಳೆಯರು ತಮ್ಮ ಗರ್ಲ್ಸ್ ಗ್ಯಾಂಗ್ ಜೊತೆಗೆ ಸುತ್ತಾಡೋದಲ್ಲಿ ಖುಷಿ ಕಂಡುಕೊಳ್ತಾರೆ. ಹಾಗಾದ್ರೆ ಆ ರಾಶಿಯವರು ಯಾರು ಅನ್ನೋದನ್ನು ನೋಡೋಣ.
ಸಿಂಹ ರಾಶಿ
ಸಿಂಹ ರಾಶಿಯ ಮಹಿಳೆಯರು ತಮ್ಮ ಗೆಳತಿಯರ ಜೊತೆಗೆ ತುಂಬಾನೇ ಆತ್ಮೀಯರಾಗಿರುತ್ತಾರೆ. ಅವರು ತಮ್ಮ ಕುಟುಂಬ, ಮಕ್ಕಳು ವೃತ್ತಿ ಜೀವನದ ಬಗ್ಗೆ ಸ್ನೇಹಿತೆಯರೊಂದಿಗೆ ಹಂಚಿಕೊಳ್ಳುತ್ತಾರೆ. ಅವರು ತಮ್ಮ ಮಹಿಳಾ ಸ್ನೇಹಿತೆಯರ ಜೊತೆಗೆ ಪ್ರಯಾಣ ಮಾಡೋದ್ರಲ್ಲಿ ಖುಷಿ ಕಂಡುಕೊಳ್ಳುತ್ತಾರೆ. ಸಿಂಹ ರಾಶಿಯವರು ತಮ್ಮ ಸ್ನೇಹಿತೆಯರ ಜೊತೆಗೆ ಎಲ್ಲಾ ದುಃಖವನ್ನು ಹಂಚಿಕೊಳ್ಳುತ್ತಾರೆ. ಇವರು ಸ್ನೇಹಿತೆಯರ ಜೊತೆಗೆ ಟ್ರಿಪ್‌ಗೆ ಹೋಗೋ ಮುಖಾಂತರ ಒಂದು ಬ್ರೇಕ್ ತೆಗೆದುಕೊಳ್ಳೋದಕ್ಕೆ ಇಷ್ಟ ಪಡುತ್ತಾರೆ. ಸಾಮಾನ್ಯವಾಗಿ ಇವರು ಯಾವಾಗಲೂ ಖುಷಿಯಾಗಿಯೇ ಇರುತ್ತಾರೆ.

ಮೇಷ ರಾಶಿ
ಮೇಷ ರಾಶಿಯವರು ತಮ್ಮ ದಾಂಪತ್ಯ ಜೀವನದಲ್ಲಿ ಖುಷಿಯಾಗಿರುತ್ತಾರೆ. ಇವರು ತಮ್ಮ ಸ್ನೇಹಿತೆಯರ ಜೊತೆಗೆ ಬೀಚ್ ಟ್ರಿಪ್‌ಗೆ ಹೋಗಲು ಇಷ್ಟ ಪಡುತ್ತಾರೆ. ಈ ರಾಶಿಯವರು ಬೇರೆ ಯಾರೂ ಹೋಗದ ಕಡೆಗೆ ತಮ್ಮ ಸ್ನೇಹಿತೆಯರ ಜೊತೆಗೆ ಟ್ರಿಪ್‌ಗೆ ಹೋಗಲು ಬಯಸುತ್ತಾರೆ. ಈ ರಾಶಿಯವರಿಗೆ ಹೊಸ ಹೋಟೆಲ್, ರೆಸ್ಟೋರೆಂಟ್‌ಗೆ ಹೋಗೋದಕ್ಕೆ ಇಷ್ಟ ಪಡುತ್ತಾರೆ. ಹಾಗೂ ಹೊಸ ಹೊಸ ಆಹಾರಗಳನ್ನು ತಿನ್ನೋದಂದ್ರೆ ಅವರಿಗೆ ತುಂಬಾನೇ ಇಷ್ಟ. ಒಟ್ಟಿನಲ್ಲಿ ಈ ರಾಶಿಯವರಿಗೆ ಟ್ರಾವೆಲ್ ಮಾಡೋದು ಅಂದ್ರೆ ತುಂಬಾನೇ ಇಷ್ಟ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಎಷ್ಟು ವಯಸ್ಸಾದರೂ ಕೂಡ ಇವರು ಮಕ್ಕಳಂತೆ ಎಂಜಾಯ್ ಮಾಡೋದಕ್ಕೆ ಇಷ್ಟ ಪಡುತ್ತಾರೆ. ಇವರಿಗೂ ತಮ್ಮ ಸ್ನೇಹಿತೆಯರ ಜೊತೆಗೆ ಟ್ರಿಪ್ ಹೋಗೋದಕ್ಕೆ ತುಂಬಾನೇ ಇಷ್ಟ. ಕನ್ಯಾ ರಾಶಿಯವರು ಪ್ರಕೃತಿ ಸೌಂದರ್ಯವನ್ನು ಸವಿಯೋದಕ್ಕೆ ಇಷ್ಟ ಪಡುತ್ತಾರೆ. ಜೊತೆಗೆ ಇವರಿಗೆ ಅಡ್ವೆಂಚರ್ ಸ್ಪೋರ್ಟ್ಸ್ ಅಂದ್ರೆ ತುಂಬಾನೇ ಇಷ್ಟ. ಇವರು ತಮ್ಮ ಸ್ನೇಹಿತೆಯರ ಜೊತೆಗೆ ಟ್ರಿಪ್‌ಗೆ ಹೋದ ಸಂದರ್ಭದಲ್ಲಿ ಅಲ್ಲಿ ಗಾಸಿಪ್ ಮಾತನಾಡೋದಕ್ಕೆ ಇಷ್ಟ ಪಡುತ್ತಾರೆ. ಇನ್ನೂ ಈ ರಾಶಿಯವರು ತುಂಬಾನೇ ಪ್ರಾಮಾಣಿಕರಾಗಿರುತ್ತಾರೆ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರು ತಮ್ಮ ಪತಿಯ ಜೊತೆಗೆ ಸಾಧಾರಣ ಎಲ್ಲಾ ಕಡೆಗೆ ಪ್ರವಾಸಕ್ಕೆ ಹೊರಡುತ್ತಾರೆ. ಇದಿಷ್ಟೇ ಅಲ್ಲ, ಸಮಯ ಸಿಕ್ಕಾಗಲೆಲ್ಲಾ ಇವರು ತಮ್ಮ ಸ್ನೇಹಿತೆಯರ ಜೊತೆಗೆ ಟ್ರಪ್‌ಗೆ ಹೋಗಿ ಸಿಕ್ಕಾಪಟ್ಟೆ ಮಜಾ ಮಾಡ್ತಾರೆ. ಇವರು ಕೂಡ ಎಷ್ಟು ದೊಡ್ಡವರಾದರೂ ಮಕ್ಕಳಂತೆ ಇರೋದಕ್ಕೆ ಇಷ್ಟ ಪಡುತ್ತಾರೆ. ಕರ್ಕಾಟಕ ರಾಶಿಯವರು ತಮ್ಮ ಸ್ನೇಹಿತೆಯ ಜೊತೆಗೆ ಬಾಲ್ಯದ ನೆನೆಪುಗಳನ್ನು ಮೆಲುಕು ಹಾಕುತ್ತಾರೆ. ಇವರಿಗೆ ಬೇರೆಯವರ ಮಾರ್ಗದರ್ಶನ ಬೇಕಾಗಿರೋದಿಲ್ಲ. ಇವರು ಹೋದ ಕಡೆ ಎಂಜಾಯ್ ಮಾಡೋದಷ್ಟೇ ಇವರಿಗೆ ಗೊತ್ತಿರೋದು. ಇನ್ನೂ ವೀಕೆಂಡ್‌ನಲ್ಲೂ ಹಾಗೆ ಹೆಚ್ಚಾಗಿ ಸ್ನೇಹಿತೆಯರ ಜೊತೆಗೆ ಹೊರಗಡೆ ಕಾಲ ಕಳೆಯುತ್ತಾರೆ.



Click it and Unblock the Notifications

