Latest Updates
-
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ?
ತಿಂಗಳಿಗೆ 6 ಲಕ್ಷದ 16 ಸಾವಿರ ಜೀವನಾಂಶ ಕೇಳಿದ ಮಹಿಳೆ: ಜಡ್ಜ್‌ನ ಖಡಕ್ ವಾರ್ನಿಂಗ್ ವೀಡಿಯೋ ವೈರಲ್
ಮಹಿಳೆಯರ ರಕ್ಷಣೆಗೆ ಇರುವ ಅನೇಕ ಕಾನೂನುಗಳನ್ನು ಕೆಲ ಮಹಿಳೆಯರು ದುರ್ಬಳಿಕೆ ಮಾಡುತ್ತಿದ್ದಾರೆ ಅದು ವರದಕ್ಷಿಣೆಯಾಗಿರಲಿ, ಜೀವನಾಂಶವಾಗಿರಲಿ, ಕೆಲವರು ವರದಕ್ಷಿಣೆ ಕಿರುಕುಳ ಎಂದು ಸುಳ್ಳು ಕೇಸ್ ಹಾಕುತ್ತಾರೆ, ಇಲ್ಲಿ ಕೂಡ ಅಷ್ಟೇ ಹೈಕೋರ್ಟ್ ಜಡ್ಜ್ ತಿಂಗಳಿಗೆ 6 ಲಕ್ಷ 16 ಸಾವಿರ ಜೀವನಾಂಶ ಕೇಳಿದ ಮಹಿಳೆಗೆ ಸರಿಯಾಗಿ ಛೀಮಾರಿ ಹಾಕಿದ್ದಾರೆ.

ಬಾಯಿಗೆ ಬಂದಂತೆ ಜೀವನಾಂಶ ಕೇಳಿದ ಮಹಿಳೆ
ತಿಂಗಳಿಗೆ ಆಕೆಯ ಖರ್ಚಿಗೆ ಇಂತಿಷ್ಟು ಹಣ ಬೇಕು ಎಂದು ಆಕೆಯ ವಕೀಲರು ಲೆಕ್ಕ ನೀಡುವುದನ್ನು ನೋಡುವಾಗ ಹೀಗೂ ಉಂಟಾ ಎಂದು ಅಚ್ಚರಿ ಉಂಟಾಗುವುದು. ಆಕೆ ಧರಿಸುವ ಒಂದು ಟೀಶರ್ಟ್ ಬೆಲೆ 10 ಸಾವಿರ, ಆಕೆಗೆ ಚಪ್ಪಲಿ, ಬಳೆ ಮುಂತಾದ ವಸ್ತುಗಳನ್ನು ಖರೀದಿಸಲು ತಿಂಗಳಿಗೆ 15 ಸಾವಿರ, ಮತ್ತೆ ಫಿಸಿಯೋ ಥೆರಪಿ ಮುಂತಾದ ಚಿಕಿತ್ಸೆಗೆ 3-4 ಲಕ್ಷ ರುಪಾಯಿ ಹೀಗೆ ಸುಮ್-ಸುಮ್ಮನೆ ಲಕ್ಷಗಟ್ಟಲೆ ಜೀವನಾಂಶ ಕೇಳಿದ ಮಹಿಳೆಗೆ ಜಡ್ಜ್ ಸರಿಯಾಗಿಯೇ ಬುದ್ಧಿ ಕಲಿಸಿದ್ದಾರೆ, ಆಕೆಯ ಪರ ವಾದಿಸಿದ ವಕೀಲರಿಗೆ ನೀವು ಸರಿಯಾದ ಲೆಕ್ಕವನ್ನು ಕೋರ್ಟ್ ಮುಂದೆ ಹೇಳಬೇಕು, ಒಬ್ಬ ಮಹಿಳೆಗೆ ಬರೀ ಅವಳ ಖರ್ಚಿಗೆ ಗಂಡನಿಂದ ತಿಂಗಳಿಗೆ ಲಕ್ಷಗಟ್ಟಲೆ ಹಣವನ್ನು ಜೀವನಾಂಶ ಕೇಳಿದರೆ ಕೊಡಲು ಸಾಧ್ಯವಿಲ್ಲ, ಅಷ್ಟೊಂದು ದುಡ್ಡು ಬೇಕೆಂದರೆ ಅವಳು ದುಡಿದು ಖರ್ಚು ಮಾಡಲಿ ಅದು ಬಿಟ್ಟು ಗಂಡನ ಹಣದಿಂದ ಅಲ್ಲ ಎಂದು ಹೇಳಿದ್ದಾರೆ.
ಹೈಕೋರ್ಟ್‌ನಲ್ಲಿ ನಡೆದ ಈ ವಿಚ್ಛೇದನ ಪ್ರಕರಣದ ವೀಡಿಯೋ ವೈರಲ್ ಆಗುತ್ತಿದೆ. ಆ ವೀಡಿಯೋ ನೋಡಿದಾಗ ಜೀವನಾಂಶ ಕೇಳುತ್ತಿರುವ ಮಹಿಳೆ ಕಾನೂನುನಲ್ಲಿ ಮಹಿಳೆಯರ ರಕ್ಷಣೆಗೆ ಇರುವ ಅಂಶವನ್ನು ತನ್ನ ಸ್ವಾರ್ಥಕ್ಕಾಗಿ ಬಳಸಲು ಯತ್ನಿಸುವುದನ್ನು ನೀವು ಕಾಣಬಹುದು.



Click it and Unblock the Notifications
