Latest Updates
-
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ!
ಕುಟುಂಬಸ್ಥರ ಮೊಬೈಲ್ ಗೀಳು ಬಿಡಿಸಲು ಮಹಿಳೆಯ ಹೊಸ ತಂತ್ರ..! ನೆಟ್ಟಿಗರು ಶಾಕ್...!
ನಾವೀಗ ಡಿಜಿಟಲ್ ಯುಗದಲ್ಲಿದ್ದೇವೆ. ಅದ್ರಲ್ಲೂ ಮೊಬೈಲ್ ಇಲ್ಲದೆ ಯಾವ ಕೆಲಸ ಕಾರ್ಯವೂ ಆಗುವುದಿಲ್ಲ ಎಂಬಷ್ಟು ಮಟ್ಟಿಗೆ ಬೆಂದಿದ್ದೇವೆ. ಇದು ಜನರ ಕೈಯಲ್ಲಿ ಹವ್ಯಾಸವಾಗಿರದೆ ಒಂದು ಗೀಳಾಗಿ ಪರಿಣಮಿಸಿದೆ. ಜನ ಎಲ್ಲಿ ಹೋದರು ಬಂದರು ಮೊಬೈಲ್ ಜೊತೆಗಿರಲೇಬೇಕು ಎಂಬ ಸಂಕಷ್ಟಕ್ಕೆ ಬಿದ್ದಿದ್ದಾರೆ.
ಅದರಲ್ಲೂ ಯುವ ಜನತೆ ಮೊಬೈಲ್ ಗೀಳು ಹಚ್ಚಿಸಿಕೊಂಡಿದ್ದು, ಮೊಬೈಲ್ ಇಲ್ಲದೆ ಅವರು ಬದುಕುವುದೇ ಕಷ್ಟ ಎನ್ನುವ ಹಂತ ತಲುಪಿದ್ದಾರೆ. ಬೆಳಗ್ಗೆ ಏಳುವುದರಿಂದ ಹಿಡಿದು ರಾತ್ರಿ ಮಲಗುವ ವರೆಗೂ ಮೊಬೈಲ್ ಕೈಯಲ್ಲೇ ಹಿಡಿದಿರುತ್ತಾರೆ. ಮೊಬೈಲ್‌ನಿಂದಲೇ ಅದೇಷ್ಟೋ ಮಂದಿ ರಾತ್ರಿ ಸರಿಯಾಗಿ ನಿದ್ರೆಯನ್ನೂ ಮಾಡಲಾಗದ ಮಟ್ಟ ತಲುಪಿಬಿಟ್ಟಿದ್ದಾರೆ.

ಎಲ್ಲಾದರೂ ಒಂದೈದು ನಿಮಿಷ ಸಮಯ ಸಿಕ್ಕರೂ ಮೊಬೈಲ್ ಆನ್ ಮಾಡಿ ರೀಲ್ಸ್ ನೋಡುವುದು, ಗೇಮ್ ಆಡುವುದು, ವಿಡಿಯೋ ನೋಡುವುದು ಹೀಗೆ ಒಂದಿಲ್ಲೊಂದು ಕೆಲಸದಲ್ಲಿ ಮಗ್ನರಾಗುತ್ತಾರೆ. ಈ ಗೀಳು ಎಲ್ಲರ ಬದುಕನ್ನೂ ದುಸ್ತರವಾಗಿಸಿದೆ. ಈ ಗೀಳು ಬಿಡಿಸಲು ಮನೆಯಲ್ಲಿ ಎಷ್ಟೇ ಹೇಳಿದರೂ ಅವರ ಮಾತು ಕೇಳಿರುವುದಿಲ್ಲ. ಹಾಗೆ ಈ ಮೊಬೈಲ್ ಬಳಕೆಯ ಹೆಚ್ಚಳವೇ ಅದೆಷ್ಟೋ ಸಂಬಂಧಗಳಿಂದು ಹಾಳಾಗಲು ಕಾರಣವೂ ಆಗಿದೆ.
ಇದೇ ಕಾರಣಕ್ಕೆ ಇಲ್ಲೊಬ್ಬ ಮಹಿಳೆ ತಮ್ಮ ಕುಟುಂಬಕ್ಕೆ ಅಂಟಿರುವ ಮೊಬೈಲ್ ಗೀಳು ಬಿಡಿಸಲು ಮಾಡಿರುವ ಪ್ಲಾನ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಜೊತೆಗೆ ಎಲ್ಲಾ ಕಡೆಗಳಿಂದ ಆಕೆಯ ಪ್ಲಾನ್‌ಗೆ ಮೆಚ್ಚುಗೆ ಕೇಳಿಬಂದಿದೆ. ಹಾಗಾದ್ರೆ ಆಕೆ ಮಾಡಿದ ಪ್ಲಾನ್ ಏನು? ಮೊಬೈಲ್ ಗೀಳು ಬಿಡಿಸಲು ಆಕೆ ಮಾಡಿದ್ದೇನು? ಈ ಎಲ್ಲಾ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ.
ಮಹಿಳೆಯೊಬ್ಬರು ತಮ್ಮ ಕುಟುಂಬದ ಸ್ಮಾರ್ಟ್‌ಫೋನ್ ಚಟವನ್ನು ನಿಭಾಯಿಸಲು ವಿಶಿಷ್ಟವಾದ ಪರಿಹಾರವನ್ನು ರೂಪಿಸಿದ್ದಾರೆ ಮತ್ತು ಅದು ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತಿದೆ. ಮಂಜು ಗುಪ್ತಾ ಎಂಬ ಮಹಿಳೆ ತನ್ನ ಕುಟುಂಬ ಸದಸ್ಯರು ಮೊಬೈಲ್ ಬಳಸುವ ನಿಯಮ ರೂಪಿಸಿದ್ದಾರೆ ಅಷ್ಟೇ ಅಲ್ಲ ಇದನ್ನು ಸ್ಟಾಂಪ್ ಪೇಪರ್‌ನಲ್ಲಿ ಮುದ್ರಿಸಿದ್ದು, ನಿಯಮ ತಪ್ಪಿದವರಿಗೆ ಶಿಕ್ಷೆಯೂ ಅದರಲ್ಲಿ ಬರೆಯಲಾಗಿದೆ.
my maasi made everyone in the house sign this agreement 😭 pic.twitter.com/hnEfo5JELH
— Jesus (@clownlamba) January 3, 2024
ಆಕೆ ರಜಾ ದಿನದಲ್ಲಿ ಎಲ್ಲಾ ಸದಸ್ಯರು ಮನೆಯಲ್ಲಿ ಮೊಬೈಲ್ ಬಳಸುತ್ತಾ ಇರುವುದನ್ನು ಕಂಡು ಬೇಸತ್ತು ಈ ಕೆಲಸ ಮಾಡಿದ್ದಾರಂತೆ. ಮನೆಯ ಸದಸ್ಯರು ಅವರ ಪಾಡಿಗೆ ಮೊಬೈಲ್ ಬಳಸುತ್ತಿರುತ್ತಾರೆ ಈ ಗೀಳು ಕಡಿಮೆ ಮಾಡಲು ಈ ರೀತಿ ಮಾಡಿರುವುದಾಗಿ ಆಕೆ ಹೇಳಿದ್ದಾರೆ.
ಮೊಬೈಲ್ ಬಳಕೆಗೆ ಮೂರು ರೂಲ್ಸ್
ಇಲ್ಲಿ ನಿತ್ಯ ಮೊಬೈಲ್ ಬಳಸುವ ಮಂದಿಗೆ ಮೂರು ನಿಯಮ ಹೇರಲಾಗಿದೆ. ಬೆಳಗ್ಗೆ ಎದ್ದ ಕೂಡಲೇ ಮೊಬೈಲ್ ನೋಡುವಂತಿಲ್ಲ ಬದಲಿಗೆ ಹೊರಬಂದು ಸೂರ್ಯನ ನೋಡಬೇಕು. ಎರಡನೇ ನಿಯಮ ಮೊಬೈಲ್ ಅನ್ನು ಬಾತ್‌ರೂಮ್‌ನೊಳಗೆ ತೆಗೆದುಕೊಂಡು ಹೋಗುವಂತಿಲ್ಲ. ಮೂರನೇ ನಿಯಮ ಡೈನಿಂಗ್ ಟೇಬಲ್‌ನಲ್ಲಿ ಮೊಬೈಲ್ ಜೊತೆ ಊಟ ಮಾಡುವಂತಿಲ್ಲ.
ಇದರ ಜೊತೆ ಮನೆ ಸದಸ್ಯರ ಇಲ್ಲದ ಮನಸ್ಸಿನಲ್ಲಿ ಈ ನಿಯಮಕ್ಕೆ ಒಪ್ಪಿ ಸಹಿ ಮಾಡಬಾರದು. ಎಲ್ಲರೂ ಸಮ್ಮತದಿಂದ ಈ ನಿಯಮ ಒಪ್ಪಿಕೊಳ್ಳಬೇಕು ಎಂದು ಸ್ಟಾಂಪ್ ಪೇಪರ್‌ನಲ್ಲಿ ಬರೆಯಲಾಗಿದೆ.
ನಿಯಮ ಮುರಿದರೆ ಕಠಿಣ ಶಿಕ್ಷೆ
ಒಂದು ವೇಳೆ ಮನೆ ಸದಸ್ಯರು ಈ ನಿಯಮ ಮುರಿದರೆ ಅವರಿಗಾಗಿ ಶಿಕ್ಷೆಯನ್ನೂ ಪ್ರಕಟಿಸಲಾಗಿದೆ. ಅದೇನೆಂದರೆ ಅವರು ಒಂದು ತಿಂಗಳ ಕಾಲ ಸ್ವಿಗ್ಗಿ ಅಥವಾ ಜೊಮಾಟೋ ಮೂಲಕ ಆಹಾರವನ್ನು ಆರ್ಡರ್ ಮಾಡುವುದನ್ನು ನಿಷೇಧಿಸಲಾಗುತ್ತದೆ. ಜೊತೆಗೆ ನಿಯಮ ಮುರಿದ ಸದಸ್ಯ ಒಂದು ದಿನ ಮನೆ ಸ್ವಚ್ಛ ಮಾಡಬೇಕಾಗುತ್ತದೆ ಎಂಬ ನಿಯಮ ಹಾಕಲಾಗಿದೆ.
ಈ ಪೋಸ್ಟ್ ಅನ್ನು ಮಂಜು ಗುಪ್ತಾ ಅವರ ಪುತ್ರಿ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ರೀತಿ ಹಂಚಿಕೊಂಡ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಸಹ ಆಗಿದ್ದು, ಆಕೆಗೆ ಬೆಂಬಲವೂ ವ್ಯಕ್ತವಾಗಿದೆ. ಜೊತೆಗೆ ಕೆಲವರು ಶಿಕ್ಷಯ ಪ್ರಮಾಣ ಏರಿಸುವಂತೆ ಸಲಹೆ ನೀಡಿದ್ದಾರೆ. ನಿಯಮ ಮುರಿದವರಿಗೆ ಟಚ್‌ಸ್ಕ್ರೀನ್ ಮೊಬೈಲ್ ಬದಲು ಹಳೆಯ ನೋಕಿಯಾ ಮೊಬೈಲ್ ನೀಡುವಂತೆಯೂ ಸಲಹೆ ನೀಡಲಾಗಿದೆ.



Click it and Unblock the Notifications