Latest Updates
-
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ
ಸರ್ಕಾರಿ ಯೋಜನೆ ಪಡೆಯಲು 17 ಬಾರಿ ನಕಲಿ ಗರ್ಭಿಣಿ ಅವತಾರ ಎತ್ತಿದಳು..! ₹98 ಲಕ್ಷ ಎಗರಿಸಿದ್ಲು..!
ಸರ್ಕಾರ ಯಾವುದಾದ್ರು ಯೋಜನೆ ತರುತ್ತಿದೆ ಅಂದ್ರೆ ಅದನ್ನು ದುರುಪಯೋಗ ಪಡಿಸಿಕೊಳ್ಳುವವರೂ ಇರುತ್ತಾರೆ. ನಕಲಿ ದಾಖಲೆ ಸೃಷ್ಟಿಸಿ, ಇಲ್ಲವೆ ಸುಳ್ಳು ಹೇಳಿಯಾದರು ಅದರ ಪ್ರಯೋಜನ ಪಡೆಯಬೇಕು ಎಂದು ಕಸರತ್ತು ಮಾಡುತ್ತಾರೆ. ಇದರಲ್ಲಿ ಸಾವಿರಾರು ಮಂದಿ ಯಶಸ್ವಿಯೂ ಆಗುತ್ತಾರೆ. ತಾವು ಈ ಯೋಜನೆಗೆ ಅರ್ಹರಲ್ಲದಿದ್ದರೂ ಯೋಜನೆಗಳ ಪಡೆದುಕೊಂಡಿರುತ್ತಾರೆ.
ಇದು ಎಲ್ಲಾ ಕಡೆಗಳಲ್ಲೂ ನಡೆಯುವು ಸಾಮಾನ್ಯ ವಂಚನೆಯಾಗಿದೆ. ಆದರೆ ಕೆಲವು ಬಾರಿ ಇದು ಎಷ್ಟು ಗಂಭೀರ ಸ್ವರೂಪ ಪಡೆದಿರುತ್ತದೆ ಎಂದರೆ ಆಡಳಿತ ಅಧಿಕಾರಿಗಳೇ ಶಾಕ್ ಆಗುತ್ತಾರೆ. ಜೊತೆಗೆ ವಂಚನೆಯಾದ ಮೊತ್ತವೂ ಸಹ ಹೆಚ್ಚಾಗಿರುತ್ತದೆ. ಹೀಗೆ ನಾವಿಂದು ಹೇಳ ಹೊರಟಿಸುವ ಘಟನೆಯೂ ಸಹ ಇಂತಹ ವಂಚನೆಗೆ ಸಂಬಂಧಿಸಿದೆ.

ಒಬ್ಬ ಮಹಿಳೆ ತಾನು ಗರ್ಭಿಣಿ ಎಂದು ಸರ್ಕಾರದ ಸೌಲಭ್ಯ ಪಡೆದುಕೊಂಡು ವಂಚನೆ ಎಸಗಿರುವುದು ಪತ್ತೆಯಾಗಿದೆ. ಅದು ಒಂದು ಸಲ ಅಲ್ಲ ಬರೋಬ್ಬರಿ 17 ಬಾರಿ ಈ ರೀತಿ ವಂಚನೆ ಎಸಗಿರುವುದು ಬೆಳಕಿಗೆ ಬಂದಿದೆ. ಹಾಗಾದರೆ ಈ ಘಟನೆ ನಡೆದಿದ್ದು ಎಲ್ಲಿ, ಆಕೆ ಮಾಡಿದ ವಂಚನೆ ಏನು? ಸರ್ಕಾರದಿಂದ ಏನೆಲ್ಲಾ ಲಾಭ ಪಡೆದುಕೊಂಡಳು ಎಂಬ ಮಾಹಿತಿ ಇಲ್ಲಿದೆ ನೋಡಿ.
ಈ ಘಟನೆ ನಡೆದಿರುವುದು ಇಟಲಿಯಲ್ಲಿ 50 ವರ್ಷದ ಬಾರ್ಬರಾ ಲೊಯೆಲ್ ಎಂಬ ಮಹಿಳೆ ಬರೋಬ್ಬರಿ 17 ಬಾರಿ ಗರ್ಭಿಣಿ ಎಂದು ಸರ್ಕಾರದ ಸೌಲಭ್ಯ ಪಡೆದು ಈಗ ಜೈಲುಪಾಲಾಗಿದ್ದಾಳೆ. 24 ವರ್ಷಗಳ ಅವಧಿಯಲ್ಲಿ ತನಗೆ 12 ಗರ್ಭಪಾತಗಳು ಮತ್ತು 5 ಮಕ್ಕಳನ್ನು ಹೊಂದಿರುವುದಾಗಿ ಸುಳ್ಳು ಮಾಹಿತಿ ಹಂಚಿಕೊಂಡಿರುವುದು ಬೆಳಕಿಗೆ ಬಂದಿದೆ.
ಆಕೆ ಗರ್ಭಿಣಿಯರಿಗೆ ನೀಡುವ ಸರ್ಕಾರದ ಯೋಜನೆಯಿಂದ ಬರೋಬ್ಬರಿ 110,000 ಯೂರೋಗಳ ಅಂದರೆ ಭಾರತೀಯ ರೂಪಾಯಿಯಲ್ಲಿ ಸುಮಾರು 98 ಲಕ್ಷ ರೂಪಾಯಿ ಪಡೆದಿದ್ದಾಳೆ.
ಕ್ಲೀನಿಕ್‌ನಿಂದ ದಾಖಲೆಗಳ ಕಳವು
ಆಕೆ ತಾನು ಗರ್ಭಿಣಿ ಎಂದು ಸರ್ಕಾರಕ್ಕೆ ದಾಖಲೆಗಳ ನೀಡಲು ಹತ್ತಿರದ ಕ್ಲೀನಿಕ್‌ನಿಂದ ದಾಖಲೆಗಳ ಕಳ್ಳತನ ಮಾಡುತ್ತಿದ್ದಳು. ಅದನ್ನು ಸರ್ಕಾರಿ ಅಧಿಕಾರಿಗಳಿಗೆ ನೀಡಿ ಸೌಲಭ್ಯ ಪಡೆಯುವಲ್ಲಿ ಯಶಸ್ವಿಯಾಗುತ್ತಿದ್ದಳು.
ಗರ್ಭಿಣಿಯಂತೆ ಕಾಣಿಸಲು ದಿಂಬು ಬಳಕೆ
ಗರ್ಭಿಣಿಯಂತೆ ಕಾಣಿಸಲು ಆಕೆ ಹೊಟ್ಟೆಯ ಭಾಗದಲ್ಲಿ ದಿಂಬು ಇಟ್ಟುಕೊಂಡು ಓಡಾಡುತ್ತಿದ್ದಳು, ಜೊತೆಗೆ ಮನೆಯಿಂದ ಹಿರಬರುವುದನ್ನೇ ನಿಲ್ಲಿಸಿದ್ದಳು. ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ಕೆಲಸಕ್ಕೆ ತನ್ನ ಮಹಿಳಾ ಸ್ನೇಹಿತೆಯನ್ನು ಬಳಸುತ್ತಿದ್ದಳು, ಆಕೆ ಎಲ್ಲಾ ಕಡೆ ಓಡಾಡುತ್ತಿದ್ದಳು.
ಸಿಕ್ಕಿಬಿದ್ದಿದ್ದು ಹೇಗೆ?
ಆಕೆಗೆ 50 ವರ್ಷ ವಯಸ್ಸಾಗಿದ್ದು, ಈ ವಯಸ್ಸಿನಲ್ಲಿ ಗರ್ಭ ಧರಿಸಲು ಹೇಗೆ ಸಾಧ್ಯ ಎಂಬ ಅನುಮಾನ ಸರ್ಕಾರಿ ಅಧಿಕಾರಿಗಳಿಗೆ ಮೂಡಿತ್ತು. ಹೀಗಾಗಿ ಪೊಲೀಸರ ಸಹಾಯದಿಂದ ಆಕೆಯ ಮೇಲೆ ಕಣ್ಣಿಡಲಾಗಿತ್ತು. ಅಲ್ಲದೆ ಕಳೆದ ಡಿಸೆಂಬರ್‌ನಲ್ಲಿ ಮಗುವಿಗೆ ಜನ್ಮ ನೀಡಿರುವುದಾಗಿ ದಾಖಲೆ ಸೃಷ್ಟಿಸಿದಳು. ಆದರೆ ಆ ಮಗುವಿನ ಕುರಿತು ಎಲ್ಲಿಯೂ ದಾಖಲೆಗಳೇ ಇರಲಿಲ್ಲ. ಅಂದರೆ ಆಕೆ ಜನನ ಪ್ರಮಾಣ ಪತ್ರ ಪಡೆಯಲು ಮಕ್ಕಳ ಜನನದ ಕುರಿತು ಯಾವ ಆಸ್ಪತ್ರೆಯಲ್ಲೂ ದಾಖಲೆಗಳೇ ಇರಲಿಲ್ಲ. ಇದು ಒಂದು ಪ್ರಕರಣವಲ್ಲ ಉಳಿದ 17 ಪ್ರಕರಣಗಳು ಹೊರಬರಲು ಕಾರಣವಾಯಿತು.
ಪೊಲೀಸರು-ಅಧಿಕಾರಿಗಳು ಶಾಕ್
ಆಕೆ ಎಷ್ಟೆಲ್ಲಾ ಪ್ಲಾನ್ ಮಾಡಿದರೂ ಕೊನೆಯಲ್ಲಿ ಯಡುವಿದ್ದಳು, ಡಿಸೆಂಬರ್‌ನಲ್ಲಿ ಮಗುವಿಗೆ ಜನ್ಮ ನೀಡಿರುವುದಾಗಿ ದಾಖಲೆ ಸೃಷ್ಟಿಸಿದ್ದ ಆಕೆ, ಮಗುವಿನ ಜನನವನ್ನು ದಾಖಲು ಮಾಡುವಲ್ಲಿ ಯಡುವಿದ್ದಳು. ಈ ಮಗುವಿನ ಜನನ ದಾಖಲೆ ಪ್ರಮಾಣ ಪತ್ರದ ಹಿಂದೆ ಬಿದ್ದಿದ್ದ ಅಧಿಕಾರಿಗಳು ಯಾವ ಆಸ್ಪತ್ರೆಯಲ್ಲಿ ಹುಡುಕಾಡಿದರು ಯಾವ ದಾಖಲೆಯೂ ಲಭ್ಯವಾಗಿರಲಿಲ್ಲ. ಹೀಗಾಗಿ ಇದರಲ್ಲಿ ವಂಚನೆ ಎಸಗಿರುವುದು ಬೆಳಕಿಗೆ ಬಂದಿತು. ಆದ್ರೆ ಆಕೆಯ ಪತಿ ಸಹ ಇದೊಂದು ವಂಚನೆ ಎಂದು ಒಪ್ಪಿಕೊಂಡು ಆಕೆಯನ್ನು ಪೊಲೀಸರಿಗೆ ಒಪ್ಪಿಸಿದ. ಆಕೆಗೆ ಇಟಾಲಿಯನ್ ನ್ಯಾಯಾಲಯವು ವಂಚನೆ ಆರೋಪ ಹೊರಿಸಿ ಆಕೆಗೆ 1 ವರ್ಷ ಮತ್ತು 6 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.



Click it and Unblock the Notifications
