Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ತಿಂಗಳಿಗೆ ₹6 ಲಕ್ಷ ಜೀವನಾಂಶ ಕೇಳಿದ ಪತ್ನಿ: ಮೊದಲು ದುಡಿದು ತೋರಿಸಿ ಎಂದ ಕೋರ್ಟ್!!
ಈಗ ಒಂದು ದಿನದ ಜೀವನ ನಡೆಸೋಕೆ ಪರದಾಡುವವರ ನಾವು ನೋಡುತ್ತೇವೆ. ಕೇವಲ 100 ರೂಪಾಯಿಯಿಂದ ಹಿಡಿದು ಚಿಲ್ಲರೆಗಳಿಗೂ ಪರದಾಡುವ ಜನ ಇದ್ದಾರೆ. ಆದ್ರೆ ಇನ್ನೊಂದು ದಿನವೊಂದಕ್ಕೆ ಸಾವಿರಾರು ರೂಪಾಯಿ, ಲಕ್ಷ ರೂಪಾಯಿ ಆದಾಯ ಹೊಂದಿರುವ ಜನರೂ ಇದ್ದಾರೆ. ಆದರೆ ಕೆಲವರು ಹಾಸಿಗೆ ಇದ್ದಷ್ಟು ಕಾಲು ಚಾಚುವ ಬದಲಿಗೆ ಹಾಸಿಗೆಯಿಂದ ಕಾಲು ಮತ್ತಷ್ಟು ಉದ್ದ ಮಾಡುತ್ತಾರೆ. ಅಂದ್ರೆ ತಮ್ಮ ಆದಾಯಕ್ಕೂ ಅವರ ಆಸೆಗೂ ಮಿ ಎಂಬುದೇ ಇರುವುದಿಲ್ಲ.
ಅದ್ರಲ್ಲೂ ಇತ್ತೀಚಿನ ದಿನದಲ್ಲಿ ಮಹಾನಗರದಲ್ಲಿ ಜನ ವಾಸ ಮಾಡುವುದೇ ದೊಡ್ಡ ಸವಾಲು. ದಿನಕ್ಕೆ ಎಷ್ಟು ಖರ್ಚು ಮಾಡಬೇಕು ಎಂಬುದನ್ನು ಲೆಕ್ಕ ಹಾಕಿಕೊಂಡು ಬದುಕು ಕಟ್ಟಿಕೊಂಡಿರುತ್ತಾರೆ. ಆದ್ರೆ ಇಲ್ಲೊಂದು ಘಟನೆಯಲ್ಲಿ ಐಷಾರಾಮಿ ಜೀವನದ ಗುಂಗಿಗೆ ಬಿದ್ದಿದ್ದ ಮಹಿಳೆಗೆ ಕೋರ್ಟ್ ಸರಿಯಾಗಿ ಬುದ್ಧಿ ಹೇಳಿ ಛೀಮಾರಿ ಹಾಕಿದೆ.

ಪತಿಯಿಂದ ಜೀವನಾಂಶ ಕೇಳಿ ಕೋರ್ಟ್ ಮೆಟ್ಟಿಲೇರಿದ್ದ ಮಹಿಳೆಯ ಬೇಡಿಕೆ ಕೇಳಿ ನ್ಯಾಯಾಧೀಶರೇ ಒಂದು ಕ್ಷಣ ದಂಗಾಗಿದ್ದಾರೆ. ರಾಜ್ಯದ ಹೈಕೋರ್ಟ್‌ನ ನ್ಯಾಯಮೂರ್ತಿ ಲಲಿತಾ ಕನ್ನೆಗಂಟಿ ಅವರಿದ್ದ ಪೀಠದಲ್ಲಿ ಇಂದು ನಡೆದ ವಾದ-ಪ್ರತಿವಾದ ಭಾರೀ ಕುತೂಹಲಕ್ಕೆ ಕಾರಣವಾಗಿತ್ತು. ಪತಿಯಿಂದ ಜೀವನಾಂಶ ಕೇಳಿದ್ದ ಪತ್ನಿ ಬೇಡಿಕೆ ಕಂಡು ಇಡೀ ಕೋರ್ಟ್ ಒಂದು ಕ್ಷಣ ಮೌನವಾಗಿತ್ತು.
ಮಾಸಿಕ ಜೀವನಾಂಶಕ್ಕೆ ಬೇಡಿಕೆ ಇಟ್ಟಿದ್ದ ಆಕೆ ಪತಿಯಿಂದ 6 ಲಕ್ಷ ಪ್ರತಿ ತಿಂಗಳು ಜೀವನಾಂಶ ಪಡೆಯಲು ಮಹಿಳೆಯ ಪರ ವಕೀಲರು ವಾದ ಮಂಡಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಶೂ, ಚಪ್ಪಲಿ, ಡ್ರೆಸ್, ಬಳೆ , ಸೀರೆ ಇತ್ಯಾದಿಗಳಿಗೆ ತಿಂಗಳಿಗೆ 15,000 ರೂಪಾಯಿ ಮತ್ತು ಮನೆಯಲ್ಲಿ ಊಟಕ್ಕೆ 60,000 ರೂಪಾಯಿ ಬೇಕಾಗುತ್ತದೆ ಎಂದು ಮಹಿಳೆಯ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಆಕೆಯ ಮೊಣಕಾಲು ನೋವು ಮತ್ತು ಫಿಸಿಯೋಥೆರಪಿ ಮತ್ತು ಇತರ ಔಷಧಿಗಳ ವೈದ್ಯಕೀಯ ವೆಚ್ಚಕ್ಕಾಗಿ 4-5 ಲಕ್ಷ ರೂಪಾಯಿ ಅಗತ್ಯವಿದೆ ಎಂದು ಮಹಿಳೆಯ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.
ಆದರೆ ನಿಯಮಗಳ ಪ್ರಕಾರ ಪತ್ನಿ ತಿಂಗಳಿಗೆ ಎಷ್ಟು ಆದಾಯ ಹೊಂದಿದ್ದಾಳೆ? ಪತಿ ಎಷ್ಟು ಆದಾಯ ಹೊಂದಿದ್ದಾನೆ? ಅವರ ಆದಾಯದ ಮೂಲವೇನು? ಜೀವನಾಂಶ ಪಡೆಯಲು ಆಕೆ ಅರ್ಹಳೆ ಎಂಬ ಕುರಿತ ಎಲ್ಲಾ ವಿಚಾರಣೆಯ ಬಳಿಕವಷ್ಟೇ ಕೋರ್ಟ್ ಈ ಕುರಿತು ನಿರ್ಧಾರ ಮಾಡಲಿದೆ. ಆದರೆ ಮಹಿಳೆಯ ಈ ಬೇಡಿಕೆ ಕೇಳಿದ ನ್ಯಾಯಮೂರ್ತಿ ಮೊದಲ ಆ ಮಹಿಳೆ ಇಷ್ಟೊಂದು ಹಣ ದುಡಿಯಲು ಸಾಧ್ಯವೇ? ಮೊದಲು ಇಷ್ಟು ಹಣ ನೀವೆ ಸಂದಾದಿಸಿ ಎಂದು ಹೇಳಿದರು.
ಒಬ್ಬ ವ್ಯಕ್ತಿಗೆ ಬೇಕಾಗಿರುವುದು ಇಷ್ಟೇ ಎಂದು ನ್ಯಾಯಾಲಯಕ್ಕೆ ದಯವಿಟ್ಟು ಹೇಳಬೇಡಿ. ತಿಂಗಳಿಗೆ 6,16,300 ರೂ. ಯಾರಾದರೂ ಇಷ್ಟು ಖರ್ಚು ಮಾಡುತ್ತಾರೆಯೇ? ಒಬ್ಬಂಟಿ ಮಹಿಳೆ ಇಷ್ಟೊಂದು ಖರ್ಚು ಮಾಡಲು ಬಯಸಿದರೆ ಮೊದಲು ಆಕೆ ಸಂಪಾದಿಸಲಿ. ನಿಮಗೆ ಕುಟುಂಬದ ಬೇರೆ ಯಾವುದೇ ಜವಾಬ್ದಾರಿ ಇಲ್ಲ. ನೀವು ಮಕ್ಕಳನ್ನು ನೋಡಿಕೊಳ್ಳಬೇಕಾಗಿಲ್ಲ. ನೀವು ಈ ಹಣವನ್ನು ಕೇವಲ ನಿಮಗಾಗಿ ಬಯಸುತ್ತೀರಿ. ನೀವು ಕೇಳುತ್ತಿರುವ ಮೊತ್ತವು ಸಮಂಜಸವಾಗಿರಬೇಕು ಎಂದು ಕೋರ್ಟ್ ತಿಳಿಸಿದೆ.
ಅಲ್ಲದೆ ಸರಿಯಾದ ಮೊತ್ತದ ಮನವಿ ಮಾಡುವಂತೆ ಮಹಿಳೆ ಪರ ವಕೀಲರಿಗೆ ತಿಳಿಸಿದ ಕೋರ್ಟ್ ಸರಿಯಾದ ಜೀವನಾಂಶ ಕೇಳದಿದ್ದರೆ ಅವರ ಅರ್ಜಿ ವಜಾ ಮಾಡುವುದಾಗಿ ಎಚ್ಚರಿಕೆ ನೀಡಿದರು.



Click it and Unblock the Notifications
