Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಕಾಣೆಯಾಗಿದ್ದ ಮಹಿಳೆ ಹೆಬ್ಬಾವಿನ ಹೊಟ್ಟೆಯಲ್ಲಿ ಪತ್ತೆ, ಆಕೆಯ ದೇಹವನ್ನು ಹೊರ ತೆಗೆದಿದ್ದು ಹೇಗೆ?
ತುಂಬಾನೇ ವಿಚಿತ್ರವಾದ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ, ಮೂರು ದಿನಗಲಿಂದ ನಾಪತ್ತೆಯಾಗಿದ್ದ ಮಹಿಳೆ ಕೊನೆಗೆ ಕಂಡು ಬಂದಿದ್ದು ಹೆಬ್ಬಾವಿನ ಹೊಟ್ಟೆಯಲ್ಲಿ.
45 ವರ್ಷದ ಮಹಿಳೆ ದೊಡ್ಡ ಹೆಬ್ಬಾವಿನ ಹೊಟ್ಟೆಯಲ್ಲಿ ಸತ್ತ ಸ್ಥಿತಿಯಲ್ಲಿ ಪತ್ತೆಯಾಗಿದೆ, ಹೆಬ್ಬಾವಿನ ಹೊಟ್ಟೆಯಲ್ಲಿ ಮಹಿಳೆಯನ್ನು ನೋಡಿ ಆಕೆಯ ಗಂಡ ಹಾಗೂ ಸೌತ್ ಸುಲವೆಸಿ ಪ್ರಾವಿನೆನ್ಸ್ ಗ್ರಾಮಸ್ಥರಿಗೆ ಅಚ್ಚರಿಯಾಗಿದೆ. ಆ ಹೆಬ್ಬಾವು 16 ಅಡಿ ಉದ್ದವಿತ್ತು.

ಆಕೆ ಗುರುವಾರ ರಾತ್ರಿಯಿಂದ ಕಾಣೆಯಾಗಿದ್ದಳು, ಆಕೆ ಕಾಣೆಯಾದ ವಿಷಯ ತಿಳಿಯುತ್ತಿದ್ದಂತೆ ಇಡೀ ಗ್ರಾಮದವರು ಆಕೆ ಹುಡುಕಾಟ ಪ್ರಾರಂಭಿಸಿದ್ದಾರೆ. ಹೀಗೆ ಹುಡುಕುವಾಗ ಆಕೆಯ ವಸ್ತುಗಳು ಪತ್ತೆಯಾಗಿದೆಮಜೊತೆಗೆ ದೊಡ್ಡ ಹೆಬ್ಬಾವು ಕಂಡು ಬಂದಿದೆ, ಅದರ ಹೊಟ್ಟೆ ತುಂಬಾನೇ ದಪ್ಪವಾಗಿತ್ತು.
ಅವರಿಗೆ ಆ ಹೆಬ್ಬಾವು ಆಕೆಯನ್ನು ತಿಂದಿರಬಹುದೆಂದು ಅವರಿಗೆ ಸಂಶಯವಾಗುತ್ತೆ, ಏಕೆಂದರೆ ಭರ್ಜರಿ ಊಟದ ಬಳಿಕ ಆ ಹಾವು ತುಂಬಾನೇ ಶಾಂತವಾಗಿತ್ತು, ಅದರ ಹೊಟ್ಟೆ ತುಂಬಿತ್ತು, ಇದನ್ನು ನೋಡಿದ ಮೇಲೆ ಹೆಬ್ಬಾವಿನ ಹೊಟ್ಟೆಯನ್ನು ಕತ್ತರಿಸುವ ಬಗ್ಗೆ ಯೋಚಿಸುತ್ತಾರೆ. ಅದರಂತೆ ಹಾವಿನ ಹೊಟ್ಟೆ ಕತ್ತರಿಸುತ್ತಿದ್ದಂತೆ ಆಕೆಯ ಬಟ್ಟೆ ಕಾಣ ಸಿಗುತ್ತದೆ. ನೋಡಿದರೆ ಫರಿದಾ ಹೆಬ್ಬಾವಿನ ಹೊಟ್ಟೆಯಲ್ಲಿ ಸತ್ತು ಹೋಗಿರುತ್ತಾಳೆ.
ಈ ಬಗೆಯ ಘಟನೆ ಅಪರೂಪವಾದರೂ ಇದುವರೆಗೆ ನಡೆದೇ ಇಲ್ಲ ಎಂದು ಹೇಳುವಂತಿಲ್ಲ, ಕಳೆದ ವರ್ಷ ಇಂಡೋನೇಷ್ಯಾದಲ್ಲಿಯೇ ಒಬ್ಬ ರೈತನನ್ನು 8 ಅಡಿ ಉದ್ದ ಹೆಬ್ಬಾವು ನುಂಗಿತ್ತು. 2018ರಲ್ಲಿ 54 ವರ್ಷದ ಮಹಿಳೆಯನ್ನು ಹೆಬ್ಬಾವು ತಿಂದಿತ್ತು, ಹೀಗಾಗಿ ದೈತ್ಯ ಹೆಬ್ಬಾವು ಮನುಷ್ಯನನ್ನು ತಿಂದಂಥ ಘಟನೆಗಳು ನಡೆದಿದೆ.
ಈ ಘಟನೆಯ ಬಳಿಕ ಆಕೆಯ ಸಾವಿಗೆ ಗ್ರಾಮಸ್ಥರು ಕಂಬನಿ ಹಾಕಿದ್ದಾರೆ, ಆಕೆಯ ಗಂಡ ಆಕೆಯನ್ನು ಒಬ್ಬಳೇ ಬಿಟ್ಟು ತಪ್ಪು ಮಾಡಿದೆ ಎಂದು ಅಳುತ್ತಿದ್ದಾನೆ. ಹೆಬ್ಬಾವು ಆಕೆಯ ಕಾಲಿಗೆ ಕಚ್ಚಿ ಸುತ್ತಿಕೊಂಡು ಆಕೆಯನ್ನು ಉಸಿರುಕಟ್ಟಿಸಿದ ಬಳಿಕ ನುಂಗಿದೆ ಎಂದು ಹೇಳಲಾಗಿದೆ.
ಸರ್ಜರಿ ಮೂಲಕ ಆಕೆಯ ದೇಹವನ್ನು ಹೊರ ತೆಗೆಯಲಾಯ್ತು?
ಆಕೆಯ ದೇಹವನ್ನು ತಜ್ಞರು ಸೇರಿ ಆಪರೇಷನ್ ಮಾಡಿ ಹೊರತರಲಾಯ್ತು, ಹಾವಿಗೆ ಶಸ್ತ್ರ ಚಿಕಿತ್ಸೆ ಮಾಡಿ, ಅದರ ಆರೈಕೆ ಮಾಡಲಾಗಿದೆ, ಇದರಿಂದಾಗಿ ಹಾವಿಗೆ ಯಾವುದೇ ತೊಂದರೆ ಆಗಿಲ್ಲ.
ಈ ಘಟನೆಯ ಬಳಿಕ ಆ ಊರನವರು ತುಂಬಾನೇ ಎಚ್ಚೆತ್ತುಕೊಂಡಿದ್ದಾರೆ, ಗಾಡಿಗೆ ಸಮೀಪದ ಆ ಹಳ್ಳಿಯ ಜನರು ಒಬ್ಬೊಬ್ಬರೇ ಓಡಾಡಲು ಹೆದರುತ್ತಿದ್ದಾರೆ.



Click it and Unblock the Notifications
