Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಹಸಿದು ಬಂದ ಗೋವುಗಳಿಗೆ ರೊಟ್ಟಿ ನೀಡಿದ ಮಹಿಳೆ..! ಈ ಹೃದಯವಂತಿಕೆ ಯಾರಿಗಿದೆ..?
ಭಾರತೀಯ ಸಂಸ್ಕೃತಿಯಲ್ಲಿ ಅದರಲ್ಲೂ ಹಿಂದೂಗಳು ಗೋವುಗಳಿಗೆ ಪವಿತ್ರ ಸ್ಥಾನ ನೀಡಿ ಅದನ್ನು ಗೌರವಿಸಿ ಪೂಜಿಸುತ್ತಾರೆ. ಹಬ್ಬ ಹರಿದಿನಗಳಲ್ಲಿ ಗೋವುಗಳಿಗೂ ಒಂದು ಪೂಜೆ ಮೀಸಲಿಡಲಾಗುತ್ತದೆ. ಶ್ರೀ ಕೃಷ್ಣ ಹಾಗೂ ಗೋವುಗಳ ನಡುವಿನ ಅಗಾಧ ಪ್ರೀತಿ ಇಂದಿಗೂ ಮನೆ ಮಾಡಿದೆ.
ಜೊತೆಗೆ ಗೋವುಗಳ ದೇಹದಲ್ಲಿ ಮುಕ್ಕೋಟಿ ದೇವರು ನೆಲೆಸಿದ್ದಾರೆ ಎಂದು ನಂಬಲಾಗಿದೆ. ಇದೆಲ್ಲದರ ನಡುವೆ ಗೋವುಗಳನ್ನು ಮಾನವೀಯ ಮೌಲ್ಯದಲ್ಲಿ ನೋಡಲಾಗುತ್ತದೆ. ಗೋವುಗಳಿಂದ ಹಾಲು, ಗೊಬ್ಬರ ಪಡೆಯುವ ನಾವು ಅವುಗಳ ಕಡೆಗೂ ಸ್ವಲ್ಪ ದಯೇ ತೋರಬೇಕಿದೆ.

ಏಕೆಂದರೆ ಇತ್ತೀಚಿನ ದಿನಗಳಲ್ಲಿ ಗೋವುಗಳ ಸಾಕುವವರ ಸಂಖ್ಯೆ ಕಡಿಮೆಯಾಗಿದೆ. ಬೀಡಾಡಿ ದನಗಳ ಸಂಖ್ಯೆ ಮಾತ್ರ ಏರುತ್ತಲೇ ಇದೆ. ಯಾವ ರಸ್ತೆಯಲ್ಲಿ ನೋಡಿದರು ಗೋವುಗಳು ಕಾಣಸಿಗುತ್ತವೆ. ಇನ್ನು ನಗರಗಳಲ್ಲಿ ಬೀಡಾಡಿ ದನಗಳ ಸಮಸ್ಯೆ ಹೆಚ್ಚಾಗುತ್ತಲೆ ಇದೆ. ಅವು ವಾಹನ ಸವಾರರಿಗೆ ದಾರಿ ಹೋಕರ ಮೇಲೆ ದಾಳಿ ಮಾಡುವುದು, ಮಕ್ಕಳ ಮೇಲೆ ಎರಗುವುದು ಹೀಗೆ ಒಂದಲ್ಲಾ ಒಂದು ಸಮಸ್ಯೆ ತಂದಿಡುತ್ತಿವೆ.
ಹೀಗಿದ್ದರೂ ಬೀದಿಯಲ್ಲಿ ಅಲೆಯುವ ಗೋವುಗಳಿಗೆ ಹಲವರು ಪ್ರೀತಿ ತೋರಿಸುತ್ತಾರೆ. ಅವು ಹೊಟ್ಟೆ ತುಂಬಿಸಿಕೊಳ್ಳಲು ಸಿಕ್ಕ ಸಿಕ್ಕ ಕಡೆ ತಿನ್ನುತ್ತಿರುತ್ತವೆ, ಹೆಚ್ಚಾಗಿ ಮಾರುಕಟ್ಟೆ, ಮದುವೆ ಮಂಟಪಗಳು, ದೇವಾಲಯಗಳು, ಹೋಟೆಲ್ ಹಿಂಭಾಗ ಹೀಗೆ ಅವುಗಳಿಗೆ ಆಹಾರ ಸಿಗುವ ಕಡೆಳಲ್ಲಿ ಯಾವಾಗಲು ಅಲೆಯುತ್ತಿರುತ್ತವೆ.
ಇತ್ತ ನಗರವಾಸಿಗಳು ತಮ್ಮ ಮನೆಯಲ್ಲಿ ಉಳಿದ ಆಹಾರವನ್ನು ಗೋವುಗಳಿಗೆ ಇಡುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ತಮ್ಮ ಮನೆಯ ಮುಂದೆ ಒಂದು ಪಾತ್ರೆ ಇಟ್ಟು ಅದಕ್ಕೆ ಉಳಿದ ಆಹಾರ ಹಾಕಿದರೆ ಈ ಹಸುಗಳು ಆ ಆಹಾರ ಸೇವಿಸಿ ತೆರಳುತ್ತವೆ. ಆದ್ರೆ ಇಲ್ಲೊಬ್ಬ ಮಹಿಳೆ ತನ್ನ ಅಂಗಡಿಯಲ್ಲಿ ಮಾಡಿದ್ದ ರೊಟ್ಟಿ ಗೋವುಗಳಿಗೆ ನೀಡಿರುವ ವಿಡಿಯೋವೊಂದು ವೈರಲ್ ಆಗಿದ್ದು ಎಲ್ಲರ ಮೆಚ್ಚುಗೆ ಗಳಿಸಿದೆ.
ಬೀಡಾಡಿ ದನಗಳು ಆಕೆಯ ಅಂಗಡಿ ಬಳಿ ಬಂದು ತಿನ್ನಲು ಏನಾದರು ಕೊಡುವಂತೆ ಆಕೆಯನ್ನೇ ನೋಡುತ್ತಿವೆ. ಹೀಗಾಗಿ ಆಕೆ ಒಂದು ರೊಟ್ಟಿಯನ್ನು ಗೋವಿನ ಬಾಯಿಗೆ ಇಟ್ಟಿದ್ದಾಳೆ. ಅವು ರೊಟ್ಟಿ ತಿಂದು ಅಲ್ಲಿಂದ ತೆರಳಿವೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಮಹಿಳೆ ನಿತ್ಯವು ತನ್ನ ತಳ್ಳುವ ಗಾಡಿಯಲ್ಲಿ ಆಹಾರಗಳ ತರುವುದು ಆ ಹಸುಗಳಿಗೆ ತಿಳಿದಿರುವಂತೆ ಕಾಣುತ್ತದೆ. ಹೀಗಾಗಿ ಅವು ಗಾಡಿಯ ಬಳಿ ಬಂದು ಆಕೆಯನ್ನೇ ನೋಡುತ್ತಾ ನಿಂತಿವೆ. ಏನಾದರು ಕೊಡುವಂತೆ ಕೇಳುತ್ತಿರುವಂತೆ ಅವುಗಳ ಮುಖ ಭಾವನೆ ಕಾಣುತ್ತಿದೆ. ಹೀಗಾಗಿ ಮಹಿಳೆ ಗೋವುಗಳಿಗೆ ಆಹಾರ ನೀಡುತ್ತಿದ್ದಾಳೆ.
ಈ ವಿಡಿಯೋ ನೋಡಿದ ಪ್ರಾನಿ ಪ್ರಿಯರು ಹಾಗೂ ನೆಟ್ಟಿಗರು ಆಕೆಯ ಹೃದಯವಂತಿಕೆಗೆ ಫಿದಾ ಆಗಿದ್ದಾರೆ. ಹಸಿದು ಬಂದು ಊಟ ಕೇಳಿದರೆ ಕೊಡದ ಜನರ ನಡುವೆ ಮೂಖ ಪ್ರಾಣಿಗಳ ಹವಿಸು ಅರ್ಥ ಮಾಡಿಕೊಂಡು ಅವುಗಳಿಗೆ ರೊಟ್ಟಿ ನೀಡಿದ ಮಹಿಳೆಗೆ ಧನ್ಯವಾದ ಅರ್ಪಿಸಿದ್ದಾರೆ.
ಜೊತೆಗೆ ಇಂತಹ ನೂರಾರು ಮಂದಿಯ ಅವಶ್ಯಕತೆ ಈಗಿನ ಕಾಲಕ್ಕಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ಆಕೆಯ ವ್ಯಾಪಾರ ಇನ್ನಷ್ಟು ಹೆಚ್ಚಾಗಿ ನೂರಾರು ಇಂತಹ ಬೀದಿ ಬದಿಯ ಪ್ರಾಣಿಗಳಿಗೆ ಊಟ ಹಾಕುವಷ್ಟು ಶಕ್ತಿ, ಬಲ ಬರಲಿ ಎಂದು ಹಾರೈಸಿದ್ದಾರೆ.
ಇನ್ಸ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ಈವರೆಗೆ ಬರೋಬ್ಬರಿ ಮಿಲಿಯನ್ ವೀಕ್ಷಣೆ ಕಂಡಿದೆ. ಜೊತೆಗೆ 15 ಲಕ್ಷ ಮಂದಿ ಲೈಕ್ಸ ಮಾಡಿದ್ದಾರೆ. ಆ ಮಹಿಳೆ ಯಾರು ಎಂಬುದು ವಿಡಿಯೋದಲ್ಲಿ ಕಾಣಿಸಿದಿದ್ದರೂ ಹಲವರು ಆಕೆ ಇದೇ ರೀತಿ ತನ್ನ ಕಾರ್ಯ ಮುಂದುವರೆಸಲಿ ಎಂದು ಕೇಳಿಕೊಂಡಿದ್ದಾರೆ.



Click it and Unblock the Notifications
