Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಪ್ರಿಯಕರ ನಮ್ಮ ಜೊತೆ ಇರಬೇಕೆಂದು ವಿದ್ಯುತ್ ಕಂಬ ಏರಿದ ಮೂರು ಮಕ್ಕಳ ತಾಯಿ..!
ಪ್ರೀತಿ ಕುರುಡು, ಪ್ರೀತಿಗೆ ವಯಸ್ಸು, ಜಾತಿ, ಧರ್ಮದ ಹಂಗಿಲ್ಲ ಎಂದು ಹೇಳುತ್ತಾರೆ. ಜೊತೆಗೆ ಪ್ರೀತಿಯಲ್ಲಿ ಬಿದ್ದರೆ ಯಾರು ಲೆಕ್ಕಕ್ಕಿಲ್ಲ ಎನ್ನುತ್ತಾರೆ, ಆದ್ರೆ ಇಲ್ಲೊಂದು ಘಟನೆಯಲ್ಲಿ ಗಂಡನೂ ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ಹೌದು ಪ್ರೀತಿಯಲ್ಲಿ ಬಿದ್ದ ಪತ್ನಿಗೆ ಇಲ್ಲಿ ಗಂಡನೂ ಲೆಕ್ಕಕ್ಕಿಲ್ಲದಂತಾಗಿದೆ.
ವಿವಾಹವಾದ ಬಳಿಕವೂ ಮಹಿಳೆ ಮತ್ತೊಬ್ಬನ ಪ್ರೀತಿಸಿ ಆತನೂ ಬೇಕು ಗಂಡನೂ ಬೇಕು, ಮಕ್ಕಳು ಬೇಕು ಎಂದು ರಂಪಾಟ ಮಾಡಿರುವ ವಿಚಿತ್ರ ಘಟನೆ ಇದು. ಆಕೆ ಮದುವೆಯಾದ ಮೇಲೆ ಬರೋಬ್ಬರಿ 10 ವರ್ಷ ಯುವಕನೊಬ್ಬನನ್ನು ಪ್ರೀತಿಸಿ ಈಗ ಆತನ ಜೊತೆಗಿರಲು ಗಂಡನ ಒಪ್ಪಿಸಲು ಮುಂದಾಗಿ ಹೈಡ್ರಾಮಾ ಸೃಷ್ಟಿಸಿ ಸುದ್ದಿಯಾಗಿದ್ದಾಳೆ.
ಹಾಗಾದ್ರೆ ಈ ಘಟನೆ ನಡೆದಿದ್ದು ಎಲ್ಲಿ? ಏನಿದು ಪ್ರಿಯತಮನಿಗಾಗಿ ಕಂಬ ಏರಿದ ಘಟನೆ? ಎಂಬುದನ್ನು ನಾವಿಂದು ಹೇಳುತ್ತೇವೆ ನೋಡಿ.

ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. 34 ವರ್ಷದ ಮಹಿಳೆಯೊಬ್ಬರು ಸಿನಿಮಾದಲ್ಲಿ ಕಂಡುಬರುವ ಡ್ರಾಮಾ ಆಡಿರುವುದು ಅಲ್ಲಿದ್ದ ಜನರಿಗೂ ಅಚ್ಚರಿ ಮೂಡಿಸಿದೆ. ಆಕೆ ತನ್ನ ಪ್ರಿಯಕರನು ಸಹ ನಮ್ಮ ಜೊತೆ ಇರಬೇಕು ಇದಕ್ಕೆ ಗಂಡ ಒಪ್ಪಿಕೊಳ್ಳಬೇಕು ಎಂದು ಹಠ ಹಿಡಿದು ಆತ್ಮಹತ್ಯೆ ಮಾಡಿಕೊಳ್ಳಲು ಟ್ರಾನ್ಸ್ ಫಾರ್ಮರ್ ಕಂಬ ಏರಿದ ಘಟನೆ ನಡೆದಿದೆ.
ಮದುವೆಯಾಗಿ ಮೂರು ಮಕ್ಕಳಿರುವ ಆಕೆ ಅದೇ ಊರಿನ ಯುವಕನೊಬ್ಬನ ಪ್ರೀತಿಸಿದ್ದಳು, ಪತಿ ರಾಮ್ ಗೋವಿಂದ್‌ಗೆ ತನ್ನ ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ತಿಳಿದಾಗ ಮನೆಯಲ್ಲಿ ಕೋಪಗೊಂಡು ಗಲಾಟೆ ಮಾಡಿದ್ದಾನೆ. ಆದ್ರೆ ಆಮೇಲೆ ಆಗಿದ್ದೇ ಬೇರೆ. ಗಂಡ ಗಲಾಟೆ ಮಾಡಿದ್ದರಿಂದ ಪತ್ನಿ ಸರಿಯಾಗುತ್ತಾಳೆ ಎಂದುಕೊಂಡರೆ ಆಕೆಯ ಡ್ರಾಮಾ ಆರಂಭವಾಗಿದ್ದೇ ಅಲ್ಲಿಂದ.
ನಾನು ಪ್ರಿಯಕರನ ಬಿಟ್ಟು ಇರುವುದಿಲ್ಲ, ಆತನೂ ನಮ್ಮ ಜೊತೆ ಇದೇ ಮನೆಯಲ್ಲಿ ಇರಬೇಕು ಎಂದು ಹಠ ಹಿಡಿದಿದ್ದಾಳೆ. ಇದಕ್ಕೆ ಯಾವ ಪತಿ ತಾನೆ ಒಪ್ಪಿಕೊಳ್ಳುತ್ತಾನೆ. ಇದರಿಂದ ಮತ್ತಷ್ಟು ಕೆರಳಿದ ಗಂಡ ಬೈದು ಪತ್ನಿಯನ್ನು ಹೊರಗಟ್ಟಿದ್ದಾನೆ. ಆದ್ರೆ ಆಕೆ ಪಟ್ಟು ಬಿಡದೆ ಹಠ ಹಿಡಿದು ಪ್ರಿಯಕರ ನಮ್ಮ ಜೊತೆ ಇರದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೆದರಿಸಿ ವಿದ್ಯುತ್ ಕಂಬ ಏರಿದ್ದಾಳೆ. ಇದರಿಂದ ಭಯಗೊಂಡ ಸ್ಥಳೀಯರು ವಿದ್ಯುತ್ ಇಲಾಖೆಗೆ ಕರೆ ಮಾಡಿ ಕರೆಂಟ್ ತೆಗೆಸಿದ್ದಾರೆ.
ಪ್ರಿಯಕರನ ಮನೆಗೆ ಕರೆಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದಳು. ಈ ವೇಳೆ ನೆರೆದಿದ್ದ ಜನ ತಕ್ಷಣ ಪೊಲೀಸರು ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ಮುಟ್ಟಿಸಿದ್ದಾರೆ. ಸ್ಥಳಕ್ಕಾಗಮಿಸಿದ ಸಿಬ್ಬಂದಿ ಆಕೆಯನ್ನು ಕೆಳಗಿಳಿಸುವ ಪ್ರಯತ್ನ ಮಾಡಿದರು ಯಶಸ್ವಿಯಾಗಲಿಲ್ಲ. ಗಂಟೆಗಳ ಕಾಲ ಸಿಬ್ಬಂದಿ ಹರಸಾಹಸಪಟ್ಟು ಆಕೆಯ ಬೇಡಿಕೆ ಈಡೇರಿಸೋದಾಗಿ ಭರವಸೆ ನೀಡಿದ ಬಳಿಕ ಆಕೆ ವಿದ್ಯುತ್ ಕಂಬದಿಂದ ಕೆಳಗಿಳಿದು ಬಂದಿದ್ದಾಳೆ ಎಂದು ತಿಳಿದುಬಂದಿದೆ.
ಆದ್ರೆ ಸಾಮಾಜಿಕ ಜಾಲತಾಣದಲ್ಲಿ ಇಕೆಯ ಹೈಡ್ರಾಮದ ವಿಡಿಯೋ ವೈರಲ್ ಆದ ಬಳಿಕ ಆಕೆಯ ವಿರುದ್ಧ ಆಕ್ರೋಶ ಕೇಳಿಬಂದಿದೆ. ಮದುವೆಯಾಗಿ ಮೂರು ಮಕ್ಕಳಿದ್ದರೂ ಬೇರೊಬ್ಬನ ಪ್ರೀತಿಸಿದ್ದೇ ತಪ್ಪಾಗಿರುವಾಗ ಆತನೂ ನಮ್ಮ ಜೊತೆ ಮನೆಯಲ್ಲಿ ಇರಬೇಕು ಎಂದು ಹೇಳುವುದು ಮೂರ್ಖತನ ಎಂದು ನೆಟ್ಟಿಗರು ಆಕೆಯ ವಿರುದ್ಧ ಕಿಡಿಕಾರುತ್ತಿದ್ದಾರೆ.
ಇನ್ನು ಇದೇ ಉತ್ತರ ಪ್ರದೇಶದಲ್ಲಿ ಇಂತಹದ್ದೆ ಮತ್ತೊಂದು ಘಟನೆ ನಡೆದಿತ್ತು. ಅಲ್ಲಿ ಗಂಡ ತನ್ನ ಪತ್ನಿಯನ್ನು ಆಕೆಯ ಪ್ರಿಯಕರನೊಂದಿಗೆ ಮದುವೆ ಮಾಡಿ ಕೊಟ್ಟಿದ್ದ ಘಟನೆ ನಡೆದಿತ್ತು. ಪತ್ನಿಗೆ ಬೇರೊಬ್ಬ ಪ್ರಿಯತಮ ಇದ್ದಾನೆ ಎಂದು ತಿಳಿದು ಆತನೇ ಮುಂದೆ ನಿಂತು ಅವರಿಬ್ಬರ ಮದುವೆ ಮಾಡಿದ್ದ ವಿಚಿತ್ರ ಘಟನೆ ವರದಿಯಾಗಿತ್ತು.



Click it and Unblock the Notifications
