Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಮದುವೆ ಮನೆಯಲ್ಲಿ ಡ್ಯಾನ್ಸ್ ಮಾಡುವಾಗ ಹೃದಯಾಘಾತಕ್ಕೆ ಯುವತಿ ಬಲಿ..! SCAD ಸಮಸ್ಯೆ ಬಗ್ಗೆ ಗೊತ್ತಾ?
ಯುವ ಸಮುದಾಯದಲ್ಲಿ ಹೃದಯಾಘಾತ ಸಮಸ್ಯೆ ಕುರಿತು ನಿತ್ಯ ನಾವು ನೋಡುತ್ತಲೇ ಇರುತ್ತೇವೆ. ವಿಶ್ವದ ಬಹುತೇಕ ಕಡೆಗಳಲ್ಲಿ ಇದೊಂದು ಸಮಸ್ಯೆಯಾಗಿದೆ. ಇತ್ತೀಚಿನ ವರ್ಷದಲ್ಲಿ ಈ ಮರಣ ಪ್ರಮಾಣ ಏರಿಕೆಯಾಗಿದೆ. ಅದರಲ್ಲೂ ಮಹಿಳೆಯರಲ್ಲಿ ಕೂಡ ಏಕಾಏಕಿ ಹೃದಯಾಘಾತವಾಗುವಂತಹ ಘಟನೆಗಳು ಮರುಕಳಿಸುತ್ತಲೇ ಇದೆ.
ಈಗ ಮಧ್ಯಪ್ರದೇಶದಲ್ಲಿ 23 ವರ್ಷದ ಯುವತಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಆಕೆ ಮದುವೆಯಲ್ಲಿ ನೃತ್ಯ ಮಾಡುತ್ತಿರುವಾಗಲೇ ವೇದಿಕೆ ಮೇಲೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಮಧ್ಯಪ್ರದೇಶದ ವಿದಿಶಾ ಜಿಲ್ಲೆಯ ರೆಸಾರ್ಟ್‌ನಲ್ಲಿ ಈ ಘಟನೆ ನಡೆದಿದೆ. ಮೃತ ಯುವತಿಯನ್ನು ಇಂದೋರ್ ನಿವಾಸಿ ಪರಿಣಿತಾ ಜೈನ್ ಎಂದು ಗುರುತಿಸಲಾಗಿದೆ. ಆಕೆ ತಮ್ಮ ಸೋದರಸಂಬಂಧಿಯ ಸಹೋದರಿಯ ಮದುವೆ ಸಮಾರಂಭದಲ್ಲಿ ಭಾಗವಹಿಸಲು ವಿದಿಶಾಗೆ ಆಗಮಿಸಿದ್ದರು.

ಅರಶಿಣ ಶಾಸ್ತ್ರ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಸುಮಾರು 200ಕ್ಕೂ ಹೆಚ್ಚು ಮಂದಿ ಅಲ್ಲಿ ನೆರೆದಿದ್ದರು. ಈ ವೇಳೆ ಪರಿಣಿತಾ ವೇದಿಕೆ ಮೇಲೆ ಡ್ಯಾನ್ಸ್ ಮಾಡುತ್ತಿದ್ದರು. ಆದರೆ ಏಕಾಏಕಿ ಕುಸಿದು ಬಿದ್ದರು. ಈ ಘಟನೆಯ ವಿಡಿಯೋ ಕೂಡ ಲಭ್ಯವಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆದ್ರೆ ಈ ಸಮರಂಭದಲ್ಲಿ ಭಾಗಿಯಾಗಿದ್ದ ವೈದ್ಯರೊಬ್ಬರು ತಕ್ಷಣ ಆಕೆಗೆ ಸಿಪಿಆರ್ ನಿರ್ವಹಿಸಿದ್ದಾರೆ. ಆದರೂ ಫಲ ನೀಡಲಿಲ್ಲ ಎಂದು ತಿಳಿದುಬಂದಿದೆ.
ಬಳಿಕ ಅವರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಅಲ್ಲಿಂದ ಕರೆದೊಯ್ಯಲಾಗಿದೆ. ಆದರೆ ಆಸ್ಪತ್ರೆಗೆ ಬರುವಾಗಲೆ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಎಂಬಿಎ ಓದಿದ್ದ ಪರಿಣಿತಾ ಇಂದೋರ್‌ನಲ್ಲಿ ನೆಲೆಸಿದ್ದರು. ಸಂಬಂಧಿಯ ವಿವಾಹದಲ್ಲಿ ಭಾಗಿಯಾಗಲೆಂದು ಆಗಮಿಸಿದ್ದರು. ಹಾಗೆ ಆಕೆಯ ಕಿರಿಯ ಸಹೋದರ 12ನೇ ವಯಸ್ಸಿನಲ್ಲಿ ಹೃದಯಾಘಾತದಿಂದಲೇ ಮೃತಪಟ್ಟಿದ್ದರು ಎಂಬ ವಿಚಾರ ಕೂಡ ಬಯಲಾಗಿದೆ. ಹಾಗಾದ್ರೆ ಈ ಘಟನೆ ಅನುವಂಶೀಯ ಸಮಸ್ಯೆಗಳಿಂದಲೂ ಉಂಟಾಗಿರುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿದೆ.
ವಿಡಿಯೋದಲ್ಲಿ ನಾವು ನೋಡುವಂತೆ ಆಕೆ ಎಲ್ಲರಂತೆ ಸಾಮಾನ್ಯವಾಗಿದ್ದಾಳೆ. ಹಾಗೆ ನೃತ್ಯ ಮಾಡುವಾಗಲು ಆಕೆಯಲ್ಲಿ ಅನಾರೋಗ್ಯ ಸಮಸ್ಯೆಗೆ ಒಳಗಾಗಿದ್ದಾರೆ ಎಂಬುದು ತಿಳಿಯುವುದಿಲ್ಲ. ಆಕೆ ಕುಸಿದು ಬೀಳುತ್ತಿದ್ದಂತೆ ಅಲ್ಲಿದ್ದವರು ವೇದಿಕೆಯತ್ತ ಓಡಿ ಬಂದಿದ್ದಾರೆ. ಆದರೆ ಆಕೆ ಬದುಕುಳಿಯಲಿಲ್ಲ.
ಮಹಿಳೆಯರಲ್ಲಿ ಈ ರೀತಿಯ ಹೃದಯಾಘಾತ ಸಮಸ್ಯೆ ಕುರಿತು ಈ ಮೊದಲು ನಾವು ವಿವರಿಸಿದ್ದೆವು. ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುವ ಹೃದಯಾಘಾತ ಸಮಸ್ಯೆಯಲ್ಲಿ ಅವರಿಗೆ ಅರಿವಿಲ್ಲದ ಒಂದಿಷ್ಟು ಲಕ್ಷಣಗಳು ಎದುರಾಗಿರುತ್ತವೆ, ಆದ್ರೆ ಆ ಕುರಿತ ನಿರ್ಲಕ್ಷ್ಯ ಜೀವಕ್ಕೆ ಅಪಾಯ ತಂದುಬಿಡುತ್ತವೆ. ಅವರಲ್ಲಿ ಕಾಡುವ ಸೈಲೆಂಟ್ ಹೃದಯಾಘಾತದ ಲಕ್ಷಣಗಳು ಅರಿತುಕೊಳ್ಳುವಷ್ಟರಲ್ಲಿ ಅಪಾಯ ಕಣ್ಣ ಮುಂದೆ ಬಂದುಬಿಡುತ್ತದೆ.
ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ಪ್ರಕಾರ 20 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಶೇಕಡ 45 ಕ್ಕಿಂತ ಹೆಚ್ಚು ಯುವತಿಯರು ಯಾವುದಾದರೂ ಒಂದು ರೀತಿಯ ಹೃದಯರಕ್ತನಾಳದ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಆಘಾತಕಾರಿ ವಿಚಾರ ಹೇಳಿದೆ. Spontaneous Coronary Artery Dissection (SCAD) ಅಥವಾ ಸ್ವಯಂಪ್ರೇರಿತ ಪರಿಧಮನಿಯ ಛೇದನ ಎಂದು ಕರೆಯುವ ಒಂದು ಅಪಾಯಕಾರಿ ಹೃದಯದ ಸಮಸ್ಯೆ ಮಹಿಳೆಯರಲ್ಲಿ ಕಾಡುವುದು ಹೆಚ್ಚಂತೆ.
ಅಂದರೆ ಯಾವುದೇ ಮುನ್ನೆಚ್ಚರಿಕೆ ಇಲ್ಲದೆ, ನಿಮ್ಮ ಅಪಧಮನಿಯ ಮೇಲೆ ಏಕಾಏಕಿ ಉಂಟಾಗುವ ಹಾನಿ ಇದು ಎನ್ನಬಹುದು. ಅಪಧಮನಿಯು ನಿಮ್ಮ ಹೃದಯದ ಬಹುಮುಖ್ಯ ಅಂಗವಾಗಿದೆ. ಆಮ್ಲಜನಕ ಹಾಗೂ ರಕ್ತವನ್ನು ಪೂರೈಸುವ ಒಂದು ನಾಳಗಳಾಗಿವೆ. ಇದು ಹೃದಯ ಸಂಬಂಧಿ ಸಮಸ್ಯೆ ಹೊಂದಿರುವವಲ್ಲಿ ಬಹುಬೇಗ ಒಡೆದು ಹಠಾತ್ ಹೃದಯಾಘಾತಕ್ಕೆ ಕಾರಣವಾಗುತ್ತಿದೆ.



Click it and Unblock the Notifications
