Latest Updates
-
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ! -
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು
ವಿರುಷ್ಕಾ ಪುತ್ರ ಭಾರತೀಯನಾ ಇಲ್ಲ ಬ್ರಿಟಿಪ್ ಪೌರತ್ವ ಪಡೆಯುತ್ತಾನಾ..? ಏನಿದು ಹೊಸ ಚರ್ಚೆ..!
ಸ್ಟಾರ್ ಜೋಡಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಫೆಬ್ರವರಿ 20 ರಂದು ತಮಗೆ ಎರಡನೇ ಮಗು ಜನಿಸಿರುವ ಕುರಿತು ಘೋಷಿಸಿದ್ದಾರೆ. ಈ ಘೋಷಣೆಯ ಬಳಿಕ ಭಾರೀ ಚರ್ಚೆಯೂ ನಡೆಯುತ್ತಿದೆ. ಹಲವರು ದಂಪತಿಗೆ ಶುಭ ಕೋರಿದ್ದಾರೆ. ಆದರೆ ಈ ಸಂಭ್ರಮದ ನಡುವೆಯೂ ಹಲವು ಪ್ರಶ್ನೆಗಳು ಹುಟ್ಟಿಕೊಂಡಿದ್ದವು.
ಕೆಲವರು ಅನುಷ್ಕಾ ಶರ್ಮಾ ಗರ್ಭಿಣಿ ಆಗಿರಲಿಲ್ಲ ಆಕೆ ಬಾಡಿಗೆ ತಾಯಿಯಾಗುತ್ತಿದ್ದಾರೆ, ಮಗುವನ್ನು ದತ್ತು ಪಡೆದಿದ್ದಾರೆ ಅಂತಲೂ ವಾದ ಮಾಡುತ್ತಿದ್ದಾರೆ. ಆದರೆ ಅನುಷ್ಕಾ ಶರ್ಮಾ ಗರ್ಭಿಣಿಯಾಗಿದ್ದರು ಎಂಬುದಕ್ಕೆ ಹಲವು ಸಾಕ್ಷಿಗಳಿವೆ. ಆಕೆ 8 ತಿಂಗಳು ತುಂಬಿದ್ದರಿಂದ ಲಂಡನ್‌ನಲ್ಲಿದ್ದರು. ಹೀಗಾಗಿ ದೇಶದಲ್ಲಿ ಎಲ್ಲಿಯೂ ಕಾಣಿಸಿರಲಿಲ್ಲ. ಜೊತೆಗೆ ಅಲ್ಲಿಯೇ ಹೆರಿಗೆ ಮಾಡಿಸಲು ಮೊದಲೇ ನಿರ್ಧರಿಸಿದ್ದರು.

ಲಂಡನ್‌ನಲ್ಲಿ ಮಗು ಜನಿಸಿರುವುದರಿಂದ ಈಗ ಹೊಸ ಚರ್ಚೆಯೊಂದು ಹುಟ್ಟುಹಾಕಿದೆ. ಹಾಗಾದರೆ ಮಗು ಲಂಡನ್ ಪೌರತ್ವ ಪಡೆಯುತ್ತದೆಯೇ? ಇಲ್ಲ ಭಾರತದ ಪೌರತ್ವ ಪಡೆಯುತ್ತದೆಯೇ? ಪೌರತ್ವ ಪಡೆಯಲು ಇರುವ ನಿಯಮವೇನು? ವಿರಾಟ್ ಹಾಗೂ ಅನುಷ್ಕಾ ಭವಿಷ್ಯದಲ್ಲಿ ಲಂಡನ್‌ನಲ್ಲೇ ವಾಸವಾಗುತ್ತಾರಾ ಎಂಬೆಲ್ಲಾ ಚರ್ಚೆ ಜೋರಾಗುತ್ತಿದೆ.
ಹಾಗಾದರೆ ನಾವಿಂದು ಈ ಲಂಡನ್‌ನಲ್ಲಿ ಜನಿಸಿರುವ ಅಕಾಯ್ ಯಾವ ಪೌರತ್ವ ಪಡೆಯಬಹುದು. ನಿಯಮ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ. ವಿರಾಟ್ ಮತ್ತು ಅನುಷ್ಕಾ ಲಂಡನ್‌ನಲ್ಲಿ ಮನೆ ಖರೀದಿಸಿದ್ದಾರೆ ಎಂಬ ಊಹಾಪೋಹಗಳು ಹೆಚ್ಚುತ್ತಿವೆ. ಆದರೆ ಅಕಾಯ್ ಲಂಡನ್‌ನಲ್ಲಿ ಜನಿಸಿದರೂ, ಅವನು ಸ್ವಯಂಚಾಲಿತವಾಗಿ ಬ್ರಿಟಿಷ್ ಪೌರತ್ವವನ್ನು ಪಡೆದುಕೊಳ್ಳುವುದಿಲ್ಲ.
ಅಕಾಯ್ ಅವರ ಪಾಸ್‌ಪೋರ್ಟ್ ಅನ್ನು ಯುಕೆಯಲ್ಲಿ ನೀಡಲಾಗುವುದು, ಆದರೆ ಭಾರತೀಯ ಪ್ರಜೆ ಎಂದು ಪರಿಗಣಿಸಲಾಗುತ್ತದೆ. ಸ್ಪೋರ್ಟ್ಸ್ ಟಾಕ್ ವರದಿಯ ಪ್ರಕಾರ, ಯುಕೆಯಲ್ಲಿ ಮಗು ಜನಿಸಿದರೆ, ಅವನು ಅಥವಾ ಅವಳನ್ನು ಸ್ವಯಂಚಾಲಿತವಾಗಿ ಬ್ರಿಟಿಷ್ ಪ್ರಜೆ ಎಂದು ಪರಿಗಣಿಸಲಾಗುವುದಿಲ್ಲ. ಅಂತಹ ಮಗು ತನ್ನ ಹೆತ್ತವರಲ್ಲಿ ಒಬ್ಬರು ಬ್ರಿಟಿಷ್ ಪ್ರಜೆಯಾಗಿದ್ದರೆ ಮಾತ್ರ ಬ್ರಿಟಿಷ್ ಪ್ರಜೆಯಾಗಬಹುದು. ಇನ್ನೊಂದು ರೀತಿಯಲ್ಲಿ, ಯುಕೆಯಲ್ಲಿ ಜನಿಸಿದ ಮಗು ತನ್ನ ತಾಯಿ ಅಥವಾ ತಂದೆಯು ನಿಯಮಗಳ ಪ್ರಕಾರ ದೀರ್ಘಕಾಲ ವಾಸಿಸಿದ ನಂತರ ನೆಲೆಸಿದ ಸ್ಥಾನಮಾನವನ್ನು ಪಡೆದರೆ ಸ್ವಯಂಚಾಲಿತವಾಗಿ ಬ್ರಿಟಿಷ್ ಪ್ರಜೆಯಾಗಬಹುದು.
ಅಂದರೆ ಇಲ್ಲಿ ಪೋಷಕರು ಲಂಡನ್ ಪ್ರಜೆಗಳಲ್ಲ. ಅವರ ಬಳಿ ಲಂಡನ್ ಪಾಸ್‌ಪೋರ್ಟ್ ಇಲ್ಲ. ಜೊತೆಗೆ ಅವರು ಲಂಡನ್‌ನಲ್ಲಿ ಆಸ್ತಿಯನ್ನೂ ಹೊಂದಿಲ್ಲ. ಬ್ರಿಟೀಷ್ ನಾಗರಿಕ ಪೋಷಕರಿಗೆ ದೇಶದ ಹೊರಗೆ ಮಗು ಜನಿಸಿದರೆ, ಅವರು ಬ್ರಿಟಿಷ್ ಪ್ರಜೆಯಾಗಬಹುದು. ಇದು ಮಗುವಿನ ಪೋಷಕರು ಹೇಗೆ ಬ್ರಿಟಿಷ್ ಪೌರತ್ವವನ್ನು ಪಡೆದರು ಎಂಬುದರ ಮೇಲೆ ಅವಲಂಬಿತವಾಗಿದೆ.
ಹೀಗಾಗಿ ವಿರಾಟ್ ದಂಪತಿಯ ಪುತ್ರ ಬ್ರಿಟಿಪ್ ಪೌರತ್ವ ಪಡೆಯಲು ಸಾಧ್ಯವಿಲ್ಲ. ಆತ ಭಾರತೀಯ ಪೌರತ್ವ ಪಡೆಯಲಿದ್ದಾನೆ ಎಂಬುದು ಸ್ಪಷ್ಟವಾಗಿದೆ. ವಿರುಷ್ಕಾ 2017ರಲ್ಲಿ ಮದುವೆಯಾದರು. ಅವರು 2021ರಲ್ಲಿ ವಮಿಕಾ ಮಗುವಿಗೆ ಜನ್ಮ ನೀಡಿದ್ರು, ಇದೀಗ ಎರಡನೇ ಮಗು ಅಕಾಯ್ ಜನನದ ಸಂಭ್ರಮದಲ್ಲಿದ್ದಾರೆ.
ಅಕಾಯ್ ಹೆಸರಲ್ಲಿ ಹತ್ತಾರು ಖಾತೆಗಳು
ಇನ್ನು ವಿರಾಟ್ ಕೊಹ್ಲಿಗೆ ಗಂಡು ಮಗುವಾದ ಸುದ್ದಿ ಹೊರಬೀಳುತ್ತಿದ್ದಂತೆ ಇತ್ತ ಅವರ ಅಭಿಮಾನಿಗಳು ಅಂಭ್ರಮಾಚರಣೆ ಕೈಗೊಂಡಿದ್ರು, ಅಕಾಯ್ ಕೊಹ್ಲಿ ಹೆಸರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹತ್ತಾರು ಖಾತೆಗಳು ಅವರ ಹೆಸರಲ್ಲಿ ತೆರೆಯಲಾಗಿದೆ. ಆದರೆ ಇದ್ಯಾವುದು ಅಧಿಕೃತ ಖಾತೆಗಳಲ್ಲ. ಆದರೆ ಈ ಖಾತೆಗಳು ತೆರೆದ ಕೆಲವೇ ಗಂಟೆಗಳಲ್ಲಿ ಸಾವಿರಾರು ಮಂದಿ ಫಾಲೋವರ್ಸ್ ಸಹ ಸೇರಿಕೊಂಡಿದ್ದಾರೆ.
ಅಕಾಯ್ ಪದದ ಅರ್ಥವೇನು?
ಅಕಾಯ್ ಎಂಬುದು ಹಿಂದಿ ಪದವಾಗಿದ್ದು, ಟರ್ಕಿಶ್ ಮೂಲವಾಗಿದೆ. ಸಂಸ್ಕೃತದಲ್ಲಿ, ಅಕಾಯ್ ಎಂದರೆ ಕಾಯ್, ಅಕಾ ರೂಪ ಅಥವಾ ದೇಹವಿಲ್ಲದ ಯಾವುದಾದರೂ ಅಥವಾ ನಿರಾಕಾಯ ಎಂದು. ಇದು ಕಾಯ ಎಂಬ ಪದದಿಂದ ಬಂದಿದೆ, ಅಂದರೆ ದೇಹ. ಆದರೆ ಇಲ್ಲಿ ಶಕ್ತಿಶಾಲಿ ಎಂಬ ಅರ್ಥವನ್ನೂ ಅದು ನೀಡುತ್ತದೆ. ಜೊತೆಗೆ ಟರ್ಕಿಶ್ ಮೂಲದಲ್ಲಿ ಅಕಾಯ್ ಎಂದರೆ ಹೊಳೆಯುವ ಚಂದ್ರ ಎಂಬ ಅರ್ಥವೂ ಇದೆ.
ಇದಲ್ಲದೆ ಹಿಂದೂ ಪುರಾಣಗಳ ಪ್ರಕಾರ ನೋಡುವುದಾದರೆ ಅಕಾಯ್ ಎಂಬುದು ಬ್ರಹ್ಮನ ಹೆಸರಂತೆ, ಅಲ್ಲದೆ ಶಿವನನ್ನೂ ಅಕಾಯ್ ಎಂದು ಕರೆದಿರುವ ಉಲ್ಲೇಖಗಳಿವೆ. ಸಾಮಾನ್ಯವಾಗಿ ಶಕ್ತಿಯುತ ವ್ಯಕ್ತಿ ಎಂಬ ಅರ್ಥ ಕಲ್ಪಿಸುತ್ತದೆ.



Click it and Unblock the Notifications