Latest Updates
-
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್
ಟಾಯ್ಲೆಟ್‌ನಲ್ಲಿ ಎರಡು ಫ್ಲಶ್ ಬಟನ್ ಏಕಿರುತ್ತೆ.? ಈ ಸ್ಟೋರಿ ನಿಮಗೆ ಗೊತ್ತಾ?
ನೀವು ಶೌಚಾಲಯದೊಳಗೆ ಇರುವ ಕಮೋಡ್‌ನಲ್ಲಿ ನೀರು ಹಾಕಲು ಎರಡು ಬಟನ್‌ಗಳಿರುವುದನ್ನು ಗಮನಿಸಿದ್ದೀರಾ? ಹೌದು ನೀವು ಗಮನವಿಟ್ಟು ನೋಡಿದಾಗ ಕಮೋಡ್‌ನಲ್ಲಿ ಎರಡು ಬಟನ್‌ಗಳಿರುವುದು ಕಾಣುತ್ತದೆ. ಒಂದು ದೊಡ್ಡ ಬಟನ್ ಆಗಿದ್ದರೆ ಮತ್ತೊಂದು ಚಿಕ್ಕ ಬಟನ್ ಆಗಿರುತ್ತೆ.
ಆದ್ರೆ ನೀವು ಎಂದಾದ್ರು ಯೋಚಿಸಿದ್ದೀರಾ ಈ ಎರಡು ಬಟನ್‌ಗಳು ಏಕಿರುತ್ತವೆ. ಅದರಲ್ಲೂ ಒಂದು ಚಿಕ್ಕದು ಮತ್ತೊಂದು ದೊಡ್ಡ ಬಟನ್ ಇಡುವುದು ಏಕೆ? ಹೀಗೆ ಕಮೋಡ್ ಮೇಲಿರುವ ಬಟನ್ ಬಗ್ಗೆ ನಾವು ಚಿಂತಿಸಿರುವುದಿಲ್ಲ. ಅದರಲ್ಲಿ ನೀರು ಬಾರದಿದ್ದರೆ ಮಾತ್ರ ಚಿಂತಿಸುತ್ತೇವೆ.

ಆದ್ರೆ ವರ್ಷಗಳ ಹಿಂದೆ ನೀರಿನ ಬಳಕೆ ಕುರಿತು ಅರಿವಿದ್ದ ಹಿರಿಯರು ಈ ಬಟನ್ ಹಾಕಲು ನಿರ್ಧರಿಸಿದ್ದರು ಎಂದು ನಿಮಗೂ ಅಚ್ಚರಿಯಾಗಬಹುದು. ಹೌದು ಹಾಗಾದ್ರೆ ಈ ಎರಡು ಬಟನ್ ಇಡಲು ಕಾರಣವಾಗಿದ್ದೇನು? ಮೊದಲು ಎಲ್ಲಿ ಆರಂಭಗೊಂಡಿತ್ತು ಎಂಬ ಅಚ್ಚರಿಯ ಮಾಹಿತಿ ನಾವಿಂದು ತಿಳಿಯೋಣ.
ಈ ರೀತಿ ಎರಡು ಬಟನ್‌ಗಳು ಹುಟ್ಟಿಕೊಂಡಿದ್ದು ನೀರು ಪೋಲಾಗುವುದನ್ನು ತಪ್ಪಿಸಲು. ಏಕೆಂದರೆ ಒಮ್ಮೆ ಈ ಬಟನ್ ಒತ್ತಿದರೆ ಲೀಟರ್‌ಗಟ್ಟಲೆ ನೀರು ಹರಿದು ಹೋಗುತ್ತಿತ್ತು. ಆದರೆ ಎಲ್ಲಾ ಸಮಯದಲ್ಲೂ ಇಷ್ಟೊಂದು ನೀರಿನ ಅಗತ್ಯವಿರುವುದಿಲ್ಲ. ಆದರೆ ಈ ಬಟನ್ ಒಮ್ಮೆ ಒತ್ತಿದರೆ ಅಷ್ಟೂ ನೀರು ಹೋಗುತ್ತಿತ್ತು. ಇದನ್ನು ತಪ್ಪಿಸಲೆಂದು ಮೊದಲಿಗೆ ಈ ರೀತಿ ಎರಡು ಬಟನ್ ಇರುವ ಕಮೋಡ್ ಕಂಡು ಹಿಡಿಯಲಾಯಿತು.
1980 ರಲ್ಲಿ, ಆಸ್ಟ್ರೇಲಿಯಾದ ಕರೋಮಾ ಇಂಡಸ್ಟ್ರೀಸ್‌ನ ಎಂಜಿನಿಯರ್‌ಗಳು ನೀರಿನ ವ್ಯರ್ಥವನ್ನು ತಡೆಗಟ್ಟಲು ಮೊದಲ ಈ ಎರಡು ಬಟನ್ ಹೊಂದಿರುವ ಫ್ಲಶ್ ಬಳಸಲಾಗಿತ್ತು ಎಂದು ತಿಳಿದುಬರುತ್ತದೆ. ಮೊದಲು ಈ ದೊಡ್ಡ ಬಟನ್ ಫ್ಲಶ್ ಮಾಡಿದಾಗ 10 ಲೀಟರ್‌ಗೂ ಅಧಿಕ ನೀರು ಹೊರಬರುತ್ತಿತ್ತು. ಆದರೆ ಚಿಕ್ಕ ಲಿವರ್ ಸುಮಾರು 3 ರಿಂದ 4.5 ಲೀಟರ್ ನೀರನ್ನು ಹೊರಹಾಕುತ್ತದೆ.
ಪ್ರಸಿದ್ಧ ಅಮೇರಿಕನ್ ಕೈಗಾರಿಕಾ ವಿನ್ಯಾಸಕ ವಿಕ್ಟರ್ ಪಾಪನೆಕ್ ಅವರು 1976 ರಲ್ಲಿ ಬರೆದ 'ಡಿಸೈನ್ ಫಾರ್ ದಿ ರಿಯಲ್ ವರ್ಲ್ಡ್' ಪುಸ್ತಕದಲ್ಲಿ ಮೊದಲ ಬಾರಿಗೆ ಡ್ಯುಯಲ್-ಫ್ಲಶ್ ಟಾಯ್ಲೆಟ್ ಅನ್ನು ಉಲ್ಲೇಖಿಸಿದ್ದರು. ಆದರೆ ಜಾರಿ ಮಾಡುವಲ್ಲಿ ಎಡುವಿದ್ದರು. ಆರಂಭದಲ್ಲಿ ನೀರಿಗೆ ತೀವ್ರ ಬರಗಾಲ ಬಂದಾಗ ಈ ನೀರಿನ ಟಾಯ್ಲೆಟ್‌ಗಳೇ ಹೆಚ್ಚು ಹೊರೆಯಾಗಿದ್ದವು. ಈ ಟಾಯ್ಲೆಟ್ ಬಳಸುವವರೆ ಹೆಚ್ಚು ನೀರು ಪೋಲಾಗುವಂತೆ ಮಾಡುತ್ತಿದ್ದಾರೆ ಎಂಬ ದೂರು ಇತ್ತು.
ಈ ಸಮಸ್ಯೆ ದೂರ ಮಾಡುವ ಉದ್ದೇಶದಿಂದ ಸಣ್ಣ ಮತ್ತು ದೊಡ್ಡ ಬಟನ್ ಇರುವಂತೆ ಕಮೋಡ್‌ಗಳ ರಚಿಸಲು ಮುಂದಾಗಲಾಯಿತು. ಹೀಗಾಗಿ ದೊಡ್ಡ ಬಟನ್‌ನಿಂದ 10 ಲೀಟರ್ ನೀರು ಹೋದರೆ ಸಣ್ಣ ಬಟನ್ ಒತ್ತಿದಾಗ 4 ರಿಂದ 5 ಲೀಟರ್ ನೀರು ಹೊರಬರುವಂತೆ ಮಾಡಲಾಯಿತು.
ಈ ರೀತಿ ಎರಡು ಬಟನ್ ಫ್ಲಶ್ ಬಳಕೆ ಮಾಡುವುದರಿಂದ ಒಬ್ಬ ವ್ಯಕ್ತಿ ಸುಮಾರು 20 ಸಾವಿರ ಲೀಟರ್ ನೀರನ್ನು ಒಂದು ವರ್ಷದಲ್ಲಿ ಉಳಿತಾಯ ಮಾಡುತ್ತಾನೆ ಎಂದು ತಿಳಿದುಬಂದಿದೆ. ಒಮ್ಮೆ ಇದು ಪರಿಸರ ಸ್ನೇಹಿ ಎಂದು ತಿಳಿದುಬಂದಾಗ ಎಲ್ಲೆಡೆ ವ್ಯಾಪಕವಾಗಿ ಬಳಕೆಯಾಯಿತು. ನೀವು ಐಷಾರಾಮಿ ಹೋಟೆಲ್‌ಗಳು ಪಾರ್ಟಿ ಹಾಲ್‌ಗಳು ಸೇರಿ ಹಲವು ಕಡೆ ಈ ರೀತಿ ಡಬಲ್ ಫ್ಲಶ್ ಬಟನ್ ಇರುವ ಟಾಯ್ಲೆಟ್ ಇಂದಿಗೂ ನೋಡಬಹುದು.
ಇದರ ಜೊತೆಗೆ ಇತ್ತೀಚಿನ ದಿನಗಳಲ್ಲಿ ಈ ಕಮೋಡ್‌ಗೆ ಎಷ್ಟು ನೀರು ಹಾಕಬೇಕು ಎಂಬುದನ್ನು ನೀವೇ ನಿರ್ಧರಿಸಿ ಅಷ್ಟು ನೀರು ಹೋಗುವಂತೆ ಮಾಡುವ ಬಟನ್‌ಗಳಿವೆ.



Click it and Unblock the Notifications