Latest Updates
-
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ! -
ಕರಾವಳಿ ರೆಡ್ ಅಲರ್ಟ್: ಮನೆಯಲ್ಲೇ ಸುರಕ್ಷಿತವಾಗಿ ಫಿಟ್ ಆಗಿರಲು ಈ 12 ನಿಮಿಷಗಳ ವರ್ಕೌಟ್ ಟ್ರೈ ಮಾಡಿ!
ಮೃತರ ಚಿತೆಗೆ ಬೆಂಕಿ ಇಟ್ಟ ಬಳಿಕ ತಿರುಗಿ ನೋಡಬಾರದು ಏಕೆ..? ಏನಿದು ನಿಯಮ?
ದೂ ಧರ್ಮದಲ್ಲಿ ಒಂದೊಂದು ಆಚರಣೆಯೂ ಸಂಕೀರ್ಣ ಸಂಪ್ರದಾಯಗಳ ತನ್ನಲ್ಲಿ ಅಡಗಿಸಿಕೊಂಡಿದೆ. ಪ್ರತಿಯೊಂದು ಆಚರಣೆಯು ತನ್ನದೇ ಆದ ವಿವರಣೆ, ಮಹತ್ವ ಹೊಂದಿದೆ. ಇಲ್ಲಿ ಹುಟ್ಟಿನಿಂದ ಸಾವಿನವರೆಗೂ ನೂರಾರು ಆಚರಣೆಗಳ ಪಾಲಿಸಬೇಕಾಗುತ್ತದೆ. ಅಲ್ಲದೆ ಕಲವು ನಿಯಮಗಳ ಜೀವನದ ಉದ್ದಕ್ಕೂ ಜೊತೆಯಾಗಿರಲಿದೆ.
ಅದರಲ್ಲೂ ಹಿಂದೂ ಧರ್ಮದಲ್ಲಿ ಸಾವಿನ ಬಳಿಕ ಆತ್ಮ ಮುಕ್ತಿ ಪಡೆದು ಹೊಸದೊಂದು ಜೀವ ಪಡೆಯಲಿದೆ ಎಂದು ನಂಬಲಾಗಿದೆ. ಸನಾತನ ಧರ್ಮದಲ್ಲಿ ಒಟ್ಟು 16 ಆಚರಣೆಗಳಿಗೆ ಮಾನವ ದೇಹ ಒಳಗಾಗಲಿದೆಯಂತೆ. ಅದರಲ್ಲಿ ಕೊನೆಯ ಆಚರಣೆಯೇ ಈ ಮರಣದ ಬಳಿಕ ನಡೆಯುವ ವಾರಣೆಯಂತೆ. ಮರಣದ ನಂತರ ಏರ್ಪಡಿಸಲಾಗುವ ಆಚರಣೆ ಸಂಪ್ರದಾಯವು ಬೇರೆಲ್ಲಾ ಆಚರಣೆಗಿಂತಲೂ ಭಿನ್ನ ಎನಿಸಿದೆ.

ಅದರಲ್ಲೂ ಸಾವಿನ ಬಳಿಕ ವ್ಯಕ್ತಿಯೊಬ್ಬ ಕರ್ಮ ನಿಯಮಗಳು ಆರಂಭವಾಗುತ್ತದೆ. ಕೊನೆಯದಾಗಿ ದೇಹವನ್ನು ಪಂಚ ಭೂತಗಳಲ್ಲಿ ಲೀನ ಮಾಡಲಾಗುತ್ತದೆ. ಆದರೆ ಅಂತಿಮ ವಿಧಿವಿಧಾನದಲ್ಲಿ ಹಲವಾರು ರೀತಿಯ ನಿಯಮಗಳಿವೆ. ಅದರಲ್ಲೂ ಕೊನೆಯದಾಗಿ ದೇಹಕ್ಕೆ ಅಗ್ನಿ ಸ್ಪರ್ಶ ಮಾಡಿದ ಬಳಿಕ ಹಿಂತಿರುಗಿ ನೋಡದೆ ಬರಬೇಕು ಎಂದು ಹಿರಿಯರು ಹೇಳುತ್ತಾರೆ. ಹಾಗಾದ್ರೆ ದೇಹಕ್ಕೆ ಅಗ್ನಿ ಸ್ಪರ್ಶ ಮಾಡಿದ ಬಳಿಕ ಹಿಂತಿರುಗಿ ಏಕೆ ನೋಡಬಾರದು? ಏನಿದು ಸಂಪ್ರದಾಯ ಎಂಬ ಕುರಿತು ತಿಳಿದುಕೊಳ್ಳೋಣ.
ಗರುಡ ಪುರಾಣದ ಪ್ರಕಾರ, ಒಬ್ಬ ವ್ಯಕ್ತಿಯು ಸತ್ತಾಗ, ಅವನ ಆತ್ಮವು ದೇಹವನ್ನು ತೊರೆಯುತ್ತದೆ. ಅಂತಿಮ ವಿಧಿಗಳನ್ನು ನಡೆಸಿದ ನಂತರ ದೇಹವು ಬೂದಿಯಾಗುತ್ತದೆ. ಹೀಗಾದಾಗ ಆತನ ಆತ್ಮ ಪಂಚಭೂತಗಳಲ್ಲಿ ನೆಲಸಸುತ್ತದೆ ಎಂದು ನಂಬಲಾಗಿದೆ. ಆದರೆ ಆತ್ಮಕ್ಕೆ ಸಾವಿರುವುದಿಲ್ಲವಂತೆ. ಆತ್ಮವು ಶಾಶ್ವತ ಮತ್ತು ಅವಿನಾಶಿ ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ್ದಾನೆ. ಯಾವುದೇ ಆಯುಧ, ಬೆಂಕಿ ಅಥವಾ ನೀರು ಸೇರಿ ಒಂಚಭೂತದಲ್ಲಿ ಯಾವುದೂ ಸಹ ಆತ್ಮವನ್ನು ನಾಶಮಾಡಲಾಗುವುದಿಲ್ಲವಂತೆ.
ಚಿತೆಗೆ ಬೆಂಕಿ ಹಚ್ಚಿದ ಮರುಕ್ಷಣ ದೇಹ ಐಕ್ಯತೆಯ ಹಾದಿ ಹಿಡಿಯುತ್ತದೆಯಂತೆ. ಈ ವೇಳೆ ಅವರ ಕುಟುಂಬಸ್ಥರು ಚಿತೆ ಕಡೆ ನೋಡಿದರೆ ಆತ್ಮದ ಬಾಂಧವ್ಯವು ಕುಟುಂಬದ ಜೊತೆ ಉಳಿದುಬಿಡುತ್ತದೆ. ಅದು ಎಂದಿಗೂ ಮುಕ್ತಿ ಲೋಕದ ದಾರಿ ಹಿಡಿಯಲಾಗುವುದಿಲ್ಲ ಎಂದು ನಂಬಲಾಗಿದೆ.
ಗರುಡ ಪುರಾಣದಲ್ಲಿ ಉಲ್ಲೇಖಿಸಿದಂತೆ, ಮರಣದ ನಂತರ ಸತ್ತ ವ್ಯಕ್ತಿಯ ಆತ್ಮವು ಅವನ ಕೊನೆಯ ಬಲದ ಚಟುವಟಿಕೆಗಳನ್ನು ವೀಕ್ಷಿಸುತ್ತದೆ. ಮೃತನ ಕುಟುಂಬದ ಸದಸ್ಯರು ಸ್ಮಶಾನದಲ್ಲಿ ಇರುವುದರಿಂದ, ಒಬ್ಬ ವ್ಯಕ್ತಿಯು ಚಿತೆಯ ಕಡೆಗೆ ಹಿಂತಿರುಗಿ ನೋಡಿದರೆ, ಮೃತನ ಆತ್ಮವು ಸೇರಬೇಕಾಗಿದ್ದ ಸ್ಥಳ ಮುಟ್ಟುವುದಿಲ್ಲವಂತೆ. ಅಂದರೆ ಮುಕ್ತಿ ಸಿಗುವುದಿಲ್ಲವಂತೆ. ಕುಟುಂಬ ಬಂಧನದಲ್ಲಿ ಅದು ಕೊನೆಯವರೆಗೂ ಬಂಧನವಾಗುತ್ತದೆ ಎಂದು ಹೇಳಲಾಗಿದೆ. ಜೊತೆಗೆ ಆತ್ಮ ಕಷ್ಟದ ದಿನಗಳ ಕಳೆಯ ಬೇಕಾಗುತ್ತದೆಯಂತೆ.
ಇದರ ಜೊತೆಗೆ ಮೃತರ ಆತ್ಮಕ್ಕೆ ಶಾಂತಿ ದೊರಕಲಿ ಎಂಬ ಕಾರಣಕ್ಕೆ ಸತತ 13 ದಿನಗಳ ಕಾಲ ವಿಧಿ ವಿಧಾನಗಳ ನೆರವೇರಿಸಲಾಗುತ್ತದೆ. ಪಿಂಡ ದಾನ ಕಾರ್ಯ ಸಹ ಮಾಡಲಾಗುತ್ತದೆ. ಹೀಗಾಗಿ ವ್ಯಕ್ತಿಯ ಜೀವನದ ಉದ್ದಕ್ಕೂ ಇರುವ ನಿಯಮ, ಸಂಪ್ರದಾಯದಲ್ಲಿ ಈ ಕೊನೆಯ ಆಚರಣೆಗಳು ಪ್ರಮುಖವಾಗುತ್ತವೆ. ಹೀಗಾಗಿ ಮರಣದ ನಂತರದಲ್ಲಿ ನಡೆಯುವ 13 ದಿನಗಳ ಸಂಪ್ರದಾಯಗಳು ಮೃತ ವ್ಯಕ್ತಿಯ ಮುಂದಿನ ಜೀವನದ ದಾರಿ ದೀಪವಾಗಲಿದೆಯಂತೆ.
ಮೃತರ ಕುಟುಂಬಸ್ಥರು ಸಹ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಈ ಆಚರಣೆಗಳ ನೆರವೇರಿಸುತ್ತಾರೆ. ಅದೇ ರೀತಿ ಚಿತೆಗೆ ಅಗ್ನಿ ಸ್ಪರ್ಶವಾದ ಬಳಿಕ ಹಿಂದೆ ತಿರುಗಿ ನೋಡಬಾರದು ಎಂದು ಹಿರಿಯರು ಹಾಕಿದ ನಿಯಮ ನಡೆದುಕೊಂಡು ಬಂದಿದೆ. ಚಿತೆಗೆ ಅಗ್ನಿ ಸ್ಪರ್ಶವಾದ ಬಳಿಕ ಮನೆಗೆ ಬಂದು ಎಲ್ಲರು ಸ್ನಾನ ಮಾಡಿ ಶುದ್ಧವಾಗುತ್ತಾರೆ.



Click it and Unblock the Notifications