Latest Updates
-
ದೆಹಲಿ-ಎನ್ಸಿಆರ್ನಲ್ಲಿ ತೀವ್ರ ವಾಯು ಮಾಲಿನ್ಯ: ನಿಮ್ಮ ಶ್ವಾಸಕೋಶವನ್ನು ರಕ್ಷಿಸಿಕೊಳ್ಳಲು ಇಲ್ಲಿದೆ ತ್ವರಿತ ಗೈಡ್ -
ದೆಹಲಿ ಮಾಲಿನ್ಯದ ಹೊಡೆತ: ಶ್ವಾಸಕೋಶದ ಆರೋಗ್ಯ ಕಾಪಾಡಲು ಇಂದೇ ನಿಮ್ಮ ಆಹಾರದಲ್ಲಿ ಈ ಬದಲಾವಣೆ ಮಾಡಿ! -
ಧನ್ತೇರಸ್ ಶಾಪಿಂಗ್: ಬಂಗಾರ ಖರೀದಿಸುವ ಮುನ್ನ ಈ 5 ವಿಷಯ ಮರೆಯದಿರಿ, ಇಲ್ಲವಾದರೆ ಮೋಸ ಹೋಗ್ತೀರಾ! -
ಮುರಸು ಚಂಡಮಾರುತದ ಅಬ್ಬರ: ಮಳೆಯಲ್ಲಿ ವರ್ಕೌಟ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ದೀಪಾವಳಿ ಹಬ್ಬದ ಸಂಭ್ರಮದಲ್ಲಿ ದಂಪತಿಗಳ ಜಗಳ ತಪ್ಪಿಸಲು ಈ 7 ಮೈಕ್ರೋ-ಅಭ್ಯಾಸಗಳು ಮರೆಯದಿರಿ! -
ಮೊಟ್ಟೆ ಬೆಲೆ ಏರಿಕೆ: ಬಜೆಟ್ನಲ್ಲಿ ಪ್ರೋಟೀನ್ ಪಡೆಯಲು ಈ ಆಹಾರಗಳೇ ಬೆಸ್ಟ್! -
ಮುರಾಸು ಚಂಡಮಾರುತದ ಎಚ್ಚರಿಕೆ: ಚೆನ್ನೈ, ತಿರುವಳ್ಳೂರಿನಲ್ಲಿ ಶಾಲೆಗಳಿಗೆ ರಜೆ, ಪೋಷಕರು ಮತ್ತು ಪ್ರಯಾಣಿಕರು ತಿಳಿಯಲೇಬೇಕಾದ ವಿಷಯಗಳು -
ಬೆಂಗಳೂರು ಮಳೆ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಬೆಳಗಿನ ವ್ಯಾಯಾಮ ಮತ್ತು ಪ್ರಯಾಣಕ್ಕೆ ಇಲ್ಲಿದೆ ಸುರಕ್ಷತಾ ಟಿಪ್ಸ್ -
ಅಮೆರಿಕದಲ್ಲಿ ಸಮಯ ಬದಲಾವಣೆ: ಭಾರತ-ಯುಎಸ್ ಮೀಟಿಂಗ್ಗಳಲ್ಲಿ ಗೊಂದಲ ತಪ್ಪಿಸಲು ಈ ಟಿಪ್ಸ್ ಫಾಲೋ ಮಾಡಿ -
ನಂದಿನಿ ಹಾಲಿನ ದರ ಏರಿಕೆ: ಬಜೆಟ್ ಬಿಸಿ ತಟ್ಟದಂತೆ ಪ್ರೋಟೀನ್, ಕ್ಯಾಲ್ಸಿಯಂ ಪಡೆಯುವುದು ಹೇಗೆ?
ಮಂಗಗಳಿಗೆ ಶುಂಠಿ ರುಚಿ ಏಕೆ ಗೊತ್ತಿಲ್ಲಾ..? ಈ ಮಾತಿನ ನಿಜಾಂಶವೇನು?
ನೀವು ಒಂದು ನುಡಿಗಟ್ಟು ಕೇಳಿರಬೇಕು - ಕೋತಿಗೆ ಶುಂಠಿಯ ರುಚಿ ತಿಳಿದಿಲ್ಲ. ಮೂರ್ಖನಿಗೆ ಯೋಗ್ಯತೆ ತಿಳಿದಿಲ್ಲ ಅಥವಾ ಅಜ್ಞಾನಿಯು ಯಾರೊಬ್ಬರ ಮಹತ್ವವನ್ನು ತಿಳಿದಿರುವುದಿಲ್ಲ ಎಂದು ಅರ್ಥ. ಹಾಗಾದರೆ ನಿಜವಾಗಿಯೂ ಕೋತಿಗಳಿಗೆ ಶುಂಠಿಯ ರುಚಿ ತಿಳಿದಿರುವುದಿಲ್ಲವೇ? ಮಂಗಗಳು ಏಕೆ ಶುಂಠಿ ಸೇವಿಸುವುದಿಲ್ಲ.
ಆದರೆ ಮಂಗಗಳು ಯಾವ ವಸ್ತುವನ್ನೂ ಬಿಡುವುದಿಲ್ಲ. ಅದರಲ್ಲೂ ರೈತರಿಗೆ ಅವುಗಳು ನೀಡುವ ಉಪಟಳ ಅಷ್ಟಿಷ್ಟಲ್ಲ. ಯಾವ ಬೆಳೆ ಬೆಳೆದರೂ ಅವುಗಳನ್ನು ತಿಂದು ಹಾಳು ಮಾಡುತ್ತವೆ. ಮಂಗಗಳ ಕಾಟ ತಾಳಲಾಗದೆ ಅದೆಷ್ಟೋ ರೈತರು ವ್ಯವಸಾಯವನ್ನೇ ನಿಲ್ಲಿಸಿದ್ದಾರೆ. ಹೀಗಿರುವಾಗ ಅವು ಶುಂಠಿಯನ್ನು ಏಕೆ ಸೇವಿಸುವುದಿಲ್ಲ, ಶುಂಠಿಯ ರುಚಿ ಅವುಗಳಿಗೆ ತಿಳಿದೇ ಇಲ್ಲ ಎಂಬುದು ಸತ್ಯವೇ.?

ಈ ಎಲ್ಲಾ ನಿಮ್ಮ ಪ್ರಶ್ನೆಗಳಿಗೆ ಇಂದು ನಾವು ಉತ್ತರ ಹುಡುಕುವ ಪ್ರಯತ್ನ ಮಾಡಿದ್ದೇವೆ. ಶುಂಠಿಯ ರುಚಿಯನ್ನು ಮಂಗಕ್ಕೆ ಏಕೆ ತಿಳಿಯುವುದಿಲ್ಲ ಇದರ ಹಿಂದಿನ ಕಾರಣವನ್ನು ತಿಳಿಯಿರಿ
ಇದೂ ಒಂದು ಕಾರಣ
ಕೋತಿಯು ಸಸ್ಯಾಹಾರಿಯಾಗಿದ್ದು, ಕಾಡಿನಲ್ಲಿರುವ ಅನೇಕ ಸಸ್ಯಗಳು, ಹಣ್ಣುಗಳು, ಹೂವುಗಳ ಬಗ್ಗೆ ಮಂಗಗಳಿಗೆ ಚೆನ್ನಾಗಿ ತಿಳಿದಿದೆ. ಆದರೆ, ಶುಂಠಿಯು ಭೂಮಿ ಒಳಗೆ ಬೆಳೆಯುತ್ತದೆ. ಇದು ತನ್ನದೇ ಆದ ನಿರ್ದಿಷ್ಟ ರುಚಿಯನ್ನು ಹೊಂದಿದೆ, ಅದನ್ನು ನಾವು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಬಳಸುತ್ತೇವೆ ಆದರೆ ಮಂಗಗಳು ಹಾಗೆ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅವು ಭೂಮಿಯೊಳಗಿನ ಈ ಶುಂಠಿಯ ರುಚಿಯನ್ನು ಕಂಡಿಲ್ಲ ಎಂಬುದು ಒಂದು ಕಥೆಯಾಗಿದೆ.
ಯಾವುದೇ ರುಚಿ ಇಲ್ಲ
ವಾಸ್ತವವಾಗಿ ಶುಂಠಿಗೆ ಯಾವುದೇ ರುಚಿ ಇಲ್ಲ, ಅದು ಹುಳಿ ಅಥವಾ ಸಿಹಿ ಅಥವಾ ಕಹಿಯಾಗಿರುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಮನುಷ್ಯರು ಅನುಭವಿಸುವ ರೀತಿಯಲ್ಲಿ ಪ್ರಾಣಿಗಳು ಅದರ ರುಚಿಯನ್ನು ಅನುಭವಿಸಲು ಸಾಧ್ಯವಾಗುವುದಿಲ್ಲ. ಆದುದರಿಂದ ಕೋತಿಗೆ ಶುಂಠಿಯನ್ನು ತಿನ್ನಲು ಕೊಟ್ಟಾಗಲೂ ಅದನ್ನು ತಿನ್ನದೆ ಇರಬಹುದು. ಅಲ್ಲದೆ ಶುಂಠಿ ಒಂದು ರೀತಿಯ ಖಾರವಾದ ಅನುಭವ ನೀಡುವುದರಿಂದ ಮಂಗಗಳು ಶುಂಠಿ ತಿನ್ನುವುದಿಲ್ಲ ಎನ್ನಲಾಗಿದೆ.
ಶುಂಠಿಯಲ್ಲಿ ಕಂಡುಬರುವ ಅಂಶಗಳು
ಶುಂಠಿಯಲ್ಲಿ ಅನೇಕ ಅಂಶಗಳು ಕಂಡುಬರುತ್ತವೆ. ಇದು ವಿಟಮಿನ್ ಸಿ, ವಿಟಮಿನ್ ಇ, ವಿಟಮಿನ್ ಕೆ, ವಿಟಮಿನ್ ಬಿ 6, ಫ್ಯಾಟಿ ಆಸಿಡ್ ಸ್ಯಾಚುರೇಟೆಡ್, ಫ್ಯಾಟಿ ಆಸಿಡ್ ಪಾಲಿ ಸ್ಯಾಚುರೇಟೆಡ್, ಫ್ಯಾಟಿ ಆಸಿಡ್ ಮೊನೊ ಅಪರ್ಯಾಪ್ತ, ನೀರು, ಶಕ್ತಿ, ಪ್ರೋಟೀನ್, ಕಾರ್ಬೋಹೈಡ್ರೇಟ್, ಫೈಬರ್, ಸಕ್ಕರೆ, ಖನಿಜ, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್, ರಂಜಕ, ಪೊಟ್ಯಾಸಿಯಮ್, ಸೋಡಿಯಂ, ಸತು, ತಾಮ್ರ, ಮ್ಯಾಂಗನೀಸ್, ಸೆಲೆನಿಯಮ್ ಮುಂತಾದ ಅಂಶಗಳು ಸೇರಿವೆ.
ಶುಂಠಿಯ ಪ್ರಯೋಜನಗಳು
ಶುಂಠಿಯ ದೈನಂದಿನ ಸೇವನೆಯು ದೇಹಕ್ಕೆ ಹಲವಾರು ಪ್ರಯೋಜನಗಳನ್ನು ಹೊಂದಿದೆ. ಶುಂಠಿಯು ದೇಹದೊಳಗಿನ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ. ಮಧುಮೇಹದಿಂದ ಬಳಲುತ್ತಿರುವ ಜನರಿಗೆ ಶುಂಠಿಯು ತುಂಬಾ ಪ್ರಯೋಜನಕಾರಿ ಎಂದು ಇದರ ಅರ್ಥ. ಶುಂಠಿಯು ಅಜೀರ್ಣವನ್ನು ನಿವಾರಿಸುತ್ತದೆ ಮತ್ತು ಪಿರಿಯಡ್ಸ್ ನಲ್ಲಿಯೂ ಸಹಕಾರಿಯಾಗಿದೆ. ಅಷ್ಟೇ ಅಲ್ಲ, ಶುಂಠಿಯ ಸೇವನೆಯು ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.
ಶುಂಠಿಯ ಅಡ್ಡಪರಿಣಾಮಗಳು
ಶುಂಠಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದಾಗ ಗರ್ಭಾವಸ್ಥೆಯಲ್ಲಿ ಗರ್ಭಾಶಯದ ಸಂಕೋಚನಕ್ಕೆ ಇದು ಕಾರಣವಾಗಬಹುದು ಹೀಗಾಗಿ ಇದು ಗರ್ಭಿಣಿ ಮಹಿಳೆಯರಿಗೆ ಸಮಸ್ಯೆಯಾಗುತ್ತದೆ. ಇದೇ ಕಾರಣಕ್ಕೆ ಮಹಿಳೆಯರು ಗರ್ಭಿಣಿಯಾಗಿರುವ ವೇಳೆ ಶುಂಠಿ ಸೇವಿಸಬಾರದು ಅನ್ನುತ್ತಾರೆ. ಇನ್ನು ಗರ್ಭಿಣಿಯಾಗಿರುವ ವೇಳೆ ಮಹಿಳೆಯರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ ಹೀಗಾಗಿ ಅತಿಯಾದ ಶುಂಠಿಯು ಗರ್ಭಾವಸ್ಥೆಯಲ್ಲಿ ತೀವ್ರವಾದ ಎದೆಯುರಿ ಮತ್ತು ಆಸಿಡ್ ರಿಫ್ಲಕ್ಸ್ ಗೆ ಕಾರಣವಾಗಬಹುದು.



Click it and Unblock the Notifications
