Latest Updates
-
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ
ಈ ಊರಿನಲ್ಲಿ ಹನುಮನ ಗುಡಿಯಿಲ್ಲ...ಮಾರುತಿ ಕಾರು ಬಂದರೂ ಸಹಿಸಲ್ಲ..! ಏಕೆ ಗೊತ್ತಾ?
ಭಾರತ ವಿವಿಧತೆಯಲ್ಲಿ ಏಕತೆಯ ರಾಷ್ಟ್ರ. ಇಲ್ಲಿ ಪ್ರತಿ ಹೆಜ್ಜೆಗೂ ಹೊಸ ಸಂಸ್ಕೃತಿಗಳು, ಹೊಸ ಆಚರಣೆಗಳ ನೋಡಬಹುದು. ಅಷ್ಟೊಂದು ವಿಭಿನ್ನ ಆಚರಣೆಗಳು ಈ ನೆಲದಲ್ಲಿವೆ. ಹೀಗಾಗಿ ಭಾರತ ವಿವಿಧ ಸಂಸ್ಕೃತಿಗಳಿಂದ ತುಂಬಿರುವ ಬಹಳ ವಿಶೇಷ ನಾಡು. ಹಾಗೆ ಇಲ್ಲಿನ ಆಚರಣೆಗಳನ್ನು ಬೇರೆಲ್ಲೂ ನೀವು ನೋಡಲು ಸಾಧ್ಯವಾಗದಿಲ್ಲ. ಹಾಗೆ ಕೆಲವೊಂದು ಆಚರಣೆಗಳ ಕೇಳಿದ್ರೆ ನಿಮಗೂ ಅಚ್ಚರಿ ಆಗುತ್ತೆ.
ಅದ್ರಲ್ಲೂ ಇಲ್ಲೊಂದು ಕಡೆ ರಾಮಾಯಣದಲ್ಲಿ ಬರುವ ರಾವಣನಂತೆ ರಾಕ್ಷಸನಿಗೆ ಪೂಜೆ ಮಾಡಲಾಗುತ್ತದೆ. ಬಹುತೇಕ ಭಾಗದಲ್ಲಿ ರಾವಣನನ್ನು ರಾಕ್ಷಸ ಎಂದು ಪರಿಗಣಿಸಿರುವುದು ಹಾಗೆ ಆತನ ಗುಣಗಳನ್ನು ಕೆಟ್ಟದೆಂದು ಪರಿಗಣಿಸಲಾಗಿದೆ.

ಆದ್ರೆ ಇಲ್ಲೊಂದು ಊರಿನಲ್ಲಿ ಈ ರಾಕ್ಷಸನಿಗೆ ಪೂಜೆ ಸಲ್ಲಿಸಲಾಗುತ್ತದೆ. ಹಾಗೆ ಅಚ್ಚರಿ ವಿಚಾರ ಏನೆಂದರೆ ಆ ಊರಿನಲ್ಲಿ ಹನುಮಂತನ ಒಂದೇ ಒಂದು ಗುಡಿ ಇಲ್ಲ. ಜೊತೆಗೆ ಇಲ್ಲಿ ಮಾರುತಿಗೆ ನಿಷೇಧವಿದೆ. ಇಲ್ಲಿ ಹನುಮನ ಗುಡಿ ಮಾತ್ರವಲ್ಲ ಮಾರುತಿ ಕಾರುಗಳಿಗೂ ಜಾಗವಿಲ್ಲ. ಈ ಊರು ಇರುವುದು ಮಹಾರಾಷ್ಟ್ರದಲ್ಲಿ.
ಮಹಾರಾಷ್ಟ್ರದ ಬಿಸ್ರಾಖ್ ಎಂಬ ಊರಿನಲ್ಲಿ ಇಂತಹವೊಂದು ವಿಶೇಷ ಆಚರಣೆ ನೋಡಲಾಗುತ್ತದೆ. ಅಲ್ಲಿನ ಸ್ಥಳೀಯರು ರಾವಣನನ್ನು ತನ್ನ ಪೂರ್ವಜ ಎಂದು ಪರಿಗಣಿಸುತ್ತಾರೆ. ಇಲ್ಲಿನ ನಂದೂರ್ ಎಂಬ ಗ್ರಾಮವು ಅಹಮದಾಬಾದ್‌ನ ಪಠಾರ್ಡಿ ತಾಲೂಕಿನಲ್ಲಿದೆ. ಈ ಗ್ರಾಮದಲ್ಲಿ ಒಂದೇ ಒಂದು ಹನುಮನ ಗುಡಿ ಇಲ್ಲ. ಹಾಗೆ ಮಕ್ಕಳಿಗೂ ಹನುಮನ ಹೆಸರು ನಾಮಕರಣ ಮಾಡುವುದಿಲ್ಲ.
ಈ ವಿಶಿಷ್ಟ ಪದ್ಧತಿಯನ್ನು ಸುತ್ತುವರೆದಿರುವ ದಂತಕಥೆಯು ಹನುಮ ಹಾಗೂ ಗ್ರಾಮದ ನಡುವಿನ ಸಂಘರ್ಷ ಕುರಿತು ಹೇಳಲಿದೆ. ಇಲ್ಲಿ ನಿಂಬಾ ಎಂಬ ರಾಕ್ಷಸನಿದ್ದನಂತೆ ಆತ ರಾಮನಿಗೆ ಅತ್ಯಂತ ಭಕ್ತಿಯಿಂದ ನಡೆದುಕೊಳ್ಳುತ್ತಿದ್ದನಂತೆ. ಹಾಗೆ ರಾಮನ ಕುರಿತು ಆತ ತಪಸ್ಸು ಮಾಡಿ ಒಲಿಸಿಕೊಂಡು ವರ ಕೇಳಿದ್ದನಂತೆ ಈ ಊರಿನಲ್ಲಿ ಆತನನ್ನು ಬಿಟ್ಟು ಬೇರೆ ಯಾರನ್ನು ಪೂಜಿಸಬಾರದು ನನಗೆ ಪ್ರಧಾನ ದೇವಗತೆಯ ಸ್ಥಾನ ನೀಡುವಂತೆ ವರ ಪಡೆದನಂತೆ.
ಮಾರುತಿ ಕಾರು ತಂದಿದ್ದ ವೈದ್ಯರ ಬಳಿ ಬರಲಿಲ್ಲ ರೋಗಿಗಳು
ಈ ಊರಿಗೆ ಹೊಸದಾಗಿ ಆಗಮಿಸಿದ್ದ ಡಾ. ಸುಭಾಷ್ ದೇಶಮುಖ್ ಎಂಬ ವೈದ್ಯರ ಬಳಿ ಯಾರೊಬ್ಬ ರೋಗಿಗಳು ಚಿಕಿತ್ಸೆಗೆ ಬರುತ್ತಿರಲಿಲ್ಲವಂತೆ. ಈ ಕುರಿತು ಅಚ್ಚರಿಗೊಂಡ ವೈದ್ಯರು ಸ್ಥಳೀಯರನ್ನು ವಿಚಾರಿಸಿದ್ದರಂತೆ. ಬಳಿಕ ಅವರು ಮಾರುತಿ 800 ಕಾರು ಬಳಸುತ್ತಿರುವುದು ಇದಕ್ಕೆ ಕಾರಣ ಎಂದು ತಿಳಿದರಂತೆ. ನಂತರ ಅದನ್ನು ಮಾರಾಟ ಮಾಡಿ ಟಾಟಾ ಸುಮೋ ಕಾರು ಖರೀದಿಸಿದರಂತೆ. ಆದರೆ ಹನುಮಂತನ ಗುಡಿಯನ್ನು ಏಕೆ ಹೊಂದಿಲ್ಲ ಹಾಗೆ ಆತನ ಏಕೆ ಪೂಜಿಸುವುದಿಲ್ಲ ಎಂಬ ವಿಚಾರದಲ್ಲಿ ಒಂದೊಂದು ರೀತಿಯ ಕಥೆಗಳಿವೆ.
ನಿಂಬ ರಾಕ್ಷಸ ರಾಮನ ಕುರಿತು ತಪಸ್ಸಿಗೆ ಕುಳಿತಾಗ ಕೋತಿಯೊಂದು ಬಂದು ಆತನ ತಪಸ್ಸಿಗೆ ಭಂಗ ತರುವ ಯತ್ನ ಮಾಡಿತ್ತಂತೆ. ಅದರ ಅರಿವಿದ್ದರ ನಿಂಬ ತನ್ನ ತಪಸ್ಸು ಮುಂದುವರೆಸಿದನಂತೆ. ರಾಮ ವರ ನೀಡಿದ ಬಳಿಕ ಊರಿನಲ್ಲಿದ್ದ ಕೋತಿಗಳನ್ನು ಆತ ಶಿಕ್ಷಿಸಲು ಮುಂದಾದನಂತೆ ಎಂಬ ಕಥೆ ಇದೆ. ಹೀಗಾಗಿ ಇಲ್ಲಿ ಹನುಮನಿಗೆ ಗುಡಿ ಇಲ್ಲ. ಹಾಗೆ ಆ ಹೆಸರಿನವರು ಯಾರು ಇಲ್ಲಿ ನೆಲೆಸಿಲ್ಲ. ಒಮ್ಮೆ ಇಲ್ಲಿನ ಸರ್ಕಾರಿ ಶಾಲೆಗೆ ಇಬ್ಬರು ಹನುಮನ ಹೆಸರಿನ ಶಿಕ್ಷಕರು ಬಂದಿದ್ದರಂತೆ, ಆದರೆ ಶಾಲೆಯಲ್ಲಿ ಪಾಠ ಮಾಡಲು ಬರಲಿಲ್ಲವಂತೆ ಎಂದು ಕೂಡ ಗ್ರಾಮಸ್ಥರು ಹೇಳಿಕೊಳ್ಳುತ್ತಾರೆ.
ಹಾಗೆ ಊರಿನಲ್ಲಿ ಕೆಲಸಕ್ಕೆಂದು ಬಂದು ದೂರದಲ್ಲಿ ನೆಲೆಗೊಂಡಿದ್ದ ಕಾರ್ಮಿಕನೊಬ್ಬನ ಆರೋಗ್ಯ ಏರುಪೇರು ಆಗಿತ್ತು ಆತ ಉಳಿಯುವುದು ಕಷ್ಟ ಎನ್ನಲಾಗಿತ್ತು. ಆದ್ರೆ ಆನ ಹೆಸರು ಮಾರುತಿ ಎಂದು ತಿಳಿದ ಜನರು ಆತನನ್ನು ನಿಂಬ ರಕ್ಕಸನ ಗುಡಿಗೆ ತಂದು ಪ್ರಾರ್ಥನೆ ಸಲ್ಲಿಸಿದ್ದರಂತೆ ಬಳಿಕ ಆತ ಗುಣಮುಖನಾದ ಎಂದು ಹೇಳಲಾಗಿದೆ.



Click it and Unblock the Notifications
