Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಗಡಿಯಾರ ಟಿಕ್ ಟಿಕ್ ಟಿಕ್ ಶಬ್ದ ಮಾಡುವುದೇಕೆ? ವಾಚ್‌ನಲ್ಲೂ ಈ ಶಬ್ದ ಕೇಳಿದ್ದೀರಾ?
ನಿಮ್ಮ ಮನೆ ನಿಶಬ್ದವಾಗಿದೆ ಎಂದುಕೊಳ್ಳಿ ಅಥವಾ ರಾತ್ರಿ ಮಲಗಿದ್ದಾಗ ಯಾವ ಶಬ್ದವೂ ಇಲ್ಲದೆ ನಿಶಬ್ದವಾಗಿದ್ದರೆ ನಿಮ್ಮ ಕಿವಿಗೆ ಯಾವ ಶಬ್ದಗಳು ಬೀಳುತ್ತವೆ ಎಂಬುದನ್ನು ಯೋಚಿಸಿದ್ದೀರಾ? ಒಂದಿಷ್ಟಿ ಕೀಟಗಳು ಕೂಗುವುದು, ವಾಹನಗಳ ಶಬ್ದ, ನಾಯಿ ಕೂಗುವುದು, ಇದರ ಜೊತೆಗೆ ಗಡಿಯಾರದ ಶಬ್ದ ಸಹ ನಿಮ್ಮ ಕಿವಿಗೆ ಬೀಳುತ್ತೆ.
ಗಡಿಯಾರದ ಸೆಕೆಂಡ್ ಮುಳ್ಳು ತಿರುಗುವಾಗ ಟಿಕ್ ಟಿಕ್ ಟಿಕ್ ಎನ್ನುವ ಶಬ್ದ ಮಾಡುತ್ತದೆ. ಹಗಲಿನಲ್ಲಿ ಈ ಶಬ್ದ ಇದ್ದರೂ ಅದರ ಬಗ್ಗೆ ನಾವು ಗಮನ ಕೊಡುವುದಿಲ್ಲ. ಆದರೆ ರಾತ್ರಿ ವೇಳೆ ಈ ಶಬ್ದ ಚೆನ್ನಾಗಿ ಕಿವಿಗೆ ಅಪ್ಪಳಿಸುತ್ತೆ. ಆದರೂ ನಾವದರ ಬಗ್ಗೆ ಗಮನ ಹರಿಸುವುದಿಲ್ಲ.

ಆದ್ರೆ ಗಡಿಯಾರದ ಈ ಮುಳ್ಳು ಏಕೆ ಶಬ್ದ ಮಾಡುತ್ತೆ ಎಂಬುದನ್ನು ನೀವು ಎಂದಾದ್ರು ಯೋಚಿಸಿದ್ದೀರಾ? ಖಂಡಿತ ನೀವು ಯೋಚಿಸಿರುವುದಿಲ್ಲ. ಗಡಿಯಾರದ ಮುಳ್ಳು ಎಂದ ಮೇಲೆ ಶಬ್ದ ಮಾಡಬೇಕು ಎಂಬುದು ನಿಮ್ಮ ಅಭಿಪ್ರಾಯ ಆಗಿರಹುದು. ಅದ್ರೆ ಇತ್ತೀಚಿಗೆ ಕೆಲವು ಗಡಿಯಾರದಲ್ಲಿ ಈ ಮುಳ್ಳುಗಳು ಶಬ್ದ ಮಾಡುವುದಿಲ್ಲ. ಡಿಜಿಟಲ್ ಗಡಿಯಾರದಲ್ಲಿ ಯಾವ ಶಬ್ದವೂ ಇರುವುದಿಲ್ಲ.
ಆದರೆ ಬಹುತೇಕ ಗಡಿಯಾರಗಳಲ್ಲಿ ಇರುವ ಈ ಸೆಕೆಂಡ್ ತೋರಿಸುವ ಮುಳ್ಳು ಖಂಡಿತ ಶಬ್ದ ಮಾಡುತ್ತದೆ. ಇದು ನಿಮಗೂ ತಿಳಿದರುತ್ತದೆ. ಒಂದು ವೇಳೆ ಈ ಶಬ್ದ ನಿಂತಿದ್ದು ನಿಮ್ಮ ಗಮನಕ್ಕೆ ಬಂದರೆ ಆ ಗಡಿಯಾರದ ಬ್ಯಾಟರಿ ಹಾಳಾಗಿದೆ ಎಂದರ್ಥ ಇಲ್ಲವೆ ಗಡಿಯಾರ ದುರಸ್ಥಿಗೆ ಬಂದಿದೆ ಎಂದರ್ಥವಾಗುತ್ತದೆ.
ಗಡಿಯಾರದ ಈ ಮುಳ್ಳು ಶಬ್ದ ಮಾಡುವುದೇಕೆ?
ಇದರ ಇತಿಹಾಸ ಹುಡುಕುತ್ತಾ ಹೋದರೆ ದೊಡ್ಡ ದೊಡ್ಡ ವಿಚಾರಗಳು ಹೊರಬರುತ್ತದೆ. ಭಾರತೀಯ ರೈಲ್ವೆಯಲ್ಲಿ ಇಂಜಿನಿಯರ್ ಎಂದು ಹೇಳಿಕೊಂಡಿರುವ ಅನಿಮೇಶ್ ಕುಮಾರ್ ಸಿನ್ಹಾ ಈ ಕುರಿತು ಮಾಹಿತಿ ಹಂಚಿಕೊಳ್ಳುತ್ತಾರೆ, "ವಾಸ್ತವವಾಗಿ, ಇದು ಬ್ಯಾಲೆನ್ಸ್ ವೀಲ್‌ನ ಎರಡು ಫೋರ್ಕ್‌ಗಳು ತಿರುಗುವ ಚಕ್ರವನ್ನು ಪರ್ಯಾಯವಾಗಿ ಹೊಡೆಯುವ ಶಬ್ದವಾಗಿದೆ. ಸೂಜಿಯು ವಿಭಿನ್ನ ದಿಕ್ಕುಗಳಲ್ಲಿ ತೋರಿಸುವ ಎರಡು ಪ್ರಾಂಗ್‌ಗಳನ್ನು ಹೊಂದಿದೆ. ಒಂದು ಸೆಕೆಂಡ್ ಅಥವಾ ಒಂದು ನಿಮಿಷ ಮುಂದಕ್ಕೆ ಚಲಿಸಿದಾಗ, ಅದು ಒಂದು ಘಾಟ್ ಅನ್ನು ಬಿಟ್ಟು ಮತ್ತೊಂದು ಘಾಟ್ನಲ್ಲಿ ನೆಲೆಗೊಳ್ಳುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಅದು ನಿರಂತರವಾಗಿ ಚಕ್ರವನ್ನು ಹೊಡೆಯುತ್ತದೆ, ಅದು ಶಬ್ದವನ್ನು ಸೃಷ್ಟಿಸುತ್ತದೆ' ಎಂದಿದ್ದಾರೆ.
ಜನರು ಇದನ್ನು ಟಿಕ್ ಮಾಡುವ ಧ್ವನಿ ಎಂದು ಕರೆಯುತ್ತಾರೆ, ಆದರೆ ತಾಂತ್ರಿಕವಾಗಿ, ಇದು ಘರ್ಷಣೆಯಿಂದ ತಪ್ಪಿಸಿಕೊಳ್ಳುವ ಶಬ್ದವಾಗಿದೆ. ಕೆಳಭಾಗದಲ್ಲಿ ತಿರುಗುವ ಹಳದಿ ಚಕ್ರವನ್ನು ಎಸ್ಕೇಪ್ ಚಕ್ರ ಎಂದು ಕರೆಯಲಾಗುತ್ತದೆ ಮತ್ತು ಅದರ ತಿರುಗುವಿಕೆಯ ವೇಗವನ್ನು ಮೇಲಿನ ಸಮತೋಲನ ಚಕ್ರದ ಎರಡು ಫೋರ್ಕ್‌ಗಳಿಂದ ನಿಯಂತ್ರಿಸಲಾಗುತ್ತದೆ. ಕೆಳಗಿನ ಹಳದಿ ಚಕ್ರವು ಗಡಿಯಾರದ ಉಳಿದ ಕೈಗಳಿಗೆ ಸಂಪರ್ಕ ಹೊಂದಿದೆ. ಗಂಟೆ, ನಿಮಿಷ ಮತ್ತು ಸೆಕೆಂಡಿನ ಸಮಯವನ್ನು ಹೇಗೆ ನಿಯಂತ್ರಿಸಲಾಗುತ್ತದೆ. ಗಡಿಯಾರವು ವೇಗವಾಗಿ ಓಡುತ್ತಿರುವಾಗ, ಮೇಲಿನ ಸಮತೋಲನ ಚಕ್ರದ ಎರಡು ಫೋರ್ಕ್‌ಗಳು ಓಟದ ವೇಗ ಕಡಿಮೆ ಮಾಡುತ್ತವೆ.
ಸರಳವಾಗಿ ಹೇಳಬೇಕೆಂದರೆ ಈ ಶಬ್ದ ಬರಲು ಮುಖ್ಯ ಕಾರಣ ಗಡಿಯಾರದ ಒಳಗಿರುವ ಮೂರು ಬಗೆಯ ಚಕ್ರಗಳು ಇವು ಒಂದೊಂದು ಒಂದೊಂದು ಮುಳ್ಳಗಳ ಪ್ರತಿನಿಧಿಸುತ್ತವೆ. ಅದರಲ್ಲಿ ಈ ಸೆಕೆಂಡ್ ಮುಳ್ಳು ಎರಡು ಮುಳ್ಳುಗಳಿಗೆ ಸಂಪರ್ಕ ಹೊಂದಿರುತ್ತದೆ. ಉಳಿದ ಎರಡು ಚಕ್ರ ತಿರುಗುವಾಗ ಒಂದೊಂದು ಸುತ್ತಿಗೆ ಅದು ಶಬ್ದ ಮಾಡುತ್ತದೆ. ಹೀಗಾಗಿ ಸೆಕೆಂಡ್ ಮುಳ್ಳು ಸುತ್ತಿದಾಗಲೆಲ್ಲ ಶಬ್ದ ಬರುತ್ತದೆ.



Click it and Unblock the Notifications
