Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಶಿವಲಿಂಗಕ್ಕೆ ಅರ್ಪಿಸಿದ ಆಹಾರವನ್ನು ಸೇವಿಸಬಾರದು ಯಾಕೆ?
ಸಾಮಾನ್ಯವಾಗಿ ದೇವಸ್ಥಾನಕ್ಕೆ ಹೋದಾಗ ಅಲ್ಲಿ ಪ್ರಸಾದವನ್ನು ಸೇವಿಸುವುದು ವಾಡಿಕೆ. ದೇವರಿಗೆ ನೈವೇದ್ಯ ಮಾಡಿದ ಪ್ರಸಾದ ಬಹಳ ಶ್ರೇಷ್ಠ ಅಂತಲೂ ಹೇಳಲಾಗುತ್ತದೆ. ಹೆಚ್ಚಾಗಿ ಎಲ್ಲಾ ದೇವಸ್ಥಾನಗಳಲ್ಲಿಯೂ ನೈವೇದ್ಯ ರೂಪದಲ್ಲಿ ಪ್ರಸಾದವನ್ನು ವಿತರಿಸಲಾಗುತ್ತದೆ. ಜನರು ಆ ಪ್ರಸಾದವನ್ನು ಸ್ವೀಕರಿಸಿ ದೇವರ ಆಶೀರ್ವಾದಕ್ಕೂ ಪಾತ್ರರಾಗುತ್ತಾರೆ.

ಆದರೆ ನಿಮಗೊತ್ತಾ ಶಿವಲಿಂಗಕ್ಕೆ ಅರ್ಪಿಸಿದ ಆಹಾರವನ್ನು ನಾವು ಸೇವಿಸುವಂತಿಲ್ಲ. ಹೌದು, ಶಿವಲಿಂಗಕ್ಕೆ ನೈವೇದ್ಯ ಮಾಡಿದ ಪ್ರಸಾದವನ್ನು ಸಾಮಾನ್ಯ ಜನ ಸೇವಿಸಬಾರದು ಅಂತ ಹೇಳಲಾಗುತ್ತದೆ. ಒಂದು ವೇಳೆ ಶಿವಲಿಂಗಕ್ಕೆ ಅರ್ಪಿಸಿದ ನೈವೇದ್ಯವನ್ನು ನಾವು ಸೇವಿಸಿದ್ರೆ ಒಳ್ಳೆಯದಾಗೋದಿಲ್ಲ ಅಂತ ಹೇಳಲಾಗುತ್ತದೆ. ಅಷ್ಟಕ್ಕು ಶಿವಲಿಂಗಕ್ಕೆ ಅರ್ಪಿಸಿದ ಪ್ರಸಾದವನ್ನು ಯಾವ ಕಾರಣಕ್ಕೆ ಸೇವಿಸಬಾರದು ಅನ್ನೋದನ್ನು ತಿಳಿಯೋಣ.
ಚಂಡೇಶ್ವರನ ಭಾಗವನ್ನು ಸೇವಿಸೋದು ಒಳ್ಳೆಯದಲ್ಲ!
ಪುರಾಣಗಳ ಪ್ರಕಾರ ಚಂಡೇಶ್ವರ ಶಿವನ ಬಾಯಿಯಲ್ಲಿ ಕಾಣಿಸಿಕೊಂಡನು ಅಂತ ಹೇಳಲಾಗುತ್ತದೆ. ಚಂಡೇಶ್ವರನು ದೆವ್ವ ಮತ್ತು ಆತ್ಮಗಳ ಮುಖ್ಯಸ್ಥ. ಶಿವಲಿಂಗದ ಮೇಲೆ ಅರ್ಪಿಸುವ ಪ್ರಸಾದವು ಚಂದೇಶ್ವರನ ಭಾಗವಾಗಿದೆ ಎಂದು ಹೇಳಲಾಗುತ್ತದೆ. ಶಿವಲಿಂಗದ ಮೇಲೆ ಅರ್ಪಿಸುವ ಚಂಡೇಶ್ವರದ ಭಾಗವನ್ನು ತೆಗೆದುಕೊಳ್ಳುವುದು ದೆವ್ವ ಮತ್ತು ಆತ್ಮಗಳ ಭಾಗವೆಂದು ಪರಿಗಣಿಸಲಾಗಿದೆ. ಹಾಗಾಗಿ ಶಿವಲಿಂಗದ ಮೇಲೆ ಅರ್ಪಿಸಿದ ಪ್ರಸಾದವನ್ನು ಸ್ವೀಕರಿಸಬಾರದು ಎಂದು ಹೇಳಲಾಗುತ್ತದೆ.
ಯಾವ ಶಿವಲಿಂಗಕ್ಕೆ ಅರ್ಪಿಸಿದ ಆಹಾರ ನಾವು ಸೇವಿಸಬಾರದು?
ಲೋಹದಿಂದ ಮಾಡಿದ ಶಿವಲಿಂಗ ಎಂದರೆ ತಾಮ್ರ, ಚಿನ್ನ, ಬೆಳ್ಳಿ ಮುಂತಾದ ಲೋಹಗಳಿಂದ ಮಾಡಿದ ಶಿವಲಿಂಗದ ಮೇಲೆ ಅರ್ಪಿಸಿದ ಪ್ರಸಾದವನ್ನು ತಿನ್ನಬಹುದು. ಈ ಲೋಹಗಳಿಂದ ಮಾಡಿದ ಶಿವಲಿಂಗದ ಪ್ರಸಾದವನ್ನು ಸೇವಿಸುವುದರಿಂದ ಯಾವುದೇ ರೀತಿಯ ದೋಷ ಉಂಟಾಗುವುದಿಲ್ಲ.
ನೀವು ಶಿವಲಿಂಗದ ಮೇಲೆ ಅರ್ಪಿಸುವ ಪ್ರಸಾದವನ್ನು ಸೇವಿಸಿದರೆ ಅಥವಾ ಅದನ್ನು ಮನೆಗೆ ತೆಗೆದುಕೊಂಡು ಹೋದರೆ ಈ ವಸ್ತುಗಳ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಇನ್ನೂ ಈ ವಿಚಾರದ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ನೀವು ತಜ್ಞರನ್ನು ಸಂಪರ್ಕಿಸಿದರೆ ಉತ್ತಮ.
ಸೂಚನೆ : ಈ ಮೇಲಿನ ಮಾಹಿತಿ ಇಂಟರ್ನೆಟ್ ಆಧಾರಿತವಾಗಿದ್ದು, ಹಾಗೂ ಬೋಲ್ಡ್ ಸ್ಕೈ ಕನ್ನಡ ಇದಕ್ಕೆ ಯಾವುದೇ ರೀತಿಯಲ್ಲಿ ಜವಾಬ್ದಾರರಾಗಿ ಇರೋದಿಲ್ಲ.



Click it and Unblock the Notifications
