Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಸಾರ್ವಜನಿಕ ಗಣೇಶೋತ್ಸವ 10 ದಿನಗಳ ಕಾಲ ನಡೆಸುವುದೇಕೆ..? ಏನಿದರ ಇತಿಹಾಸ ಗೊತ್ತಾ?
ದೇಶದ ಬಹುತೇಕ ಕಡೆಗಳಲ್ಲಿ ಇಂದು ಭರ್ಜರಿ ಗಣೇಶೋತ್ಸವ ನಡೆಯುತ್ತಿದೆ. ಬೆಳಗ್ಗೆಯಿಂದ ಸಂಜೆಯವರೆಗೂ ವಿವಿಧ ಕಡೆಗಳಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡಿ ಸಂಭ್ರಮದ ಪೂಜೆ, ನೆರವೇರಲಿದೆ. ಲಕ್ಷ ಲಕ್ಷ ಮಂದಿ ಈ ಹಬ್ಬದಂದು ವಿಘ್ನ ನಿವಾಕರನ ಕಣ್ತುಂಬಿಕೊಳ್ಳುತ್ತಾರೆ. ಹಾಗೆ ಈ ದಿನ ವಿಶೇಷವಾಗಿ ಮನೆ ಮನೆಯಲ್ಲಿ ಚಿಕ್ಕ ಪುಟ್ಟ ಗಣಪನ ಪ್ರತಿಷ್ಠಾಪನೆ ಮಾಡಲಾಗುತ್ತೆ. ಹಾಗೆ ಪೂಜೆ ನೆರವೇರಲಿದೆ. ಇದರಿಂದ ಹಬ್ಬಕ್ಕೆ ಕಳೆ ಬರಲಿದೆ.
ಸಾರ್ವಜನಿಕ ಗಣೇಶೋತ್ಸವ ಎಂದರೆ ಇಡೀ ಊರಿಗೆ ಊರೇ ಸಂಭ್ರಮಿಸುವ ಹಬ್ಬ. ಚಿಕ್ಕ ಪುಟ್ಟ ರಸ್ತೆಯಲ್ಲಿ , ಬೀದಿಯಲ್ಲಿ ಸಾರ್ವಜನಿಕ ಸಮುದಾಯ ಭವನದಲ್ಲಿ ಗಣೇಶ ಮುಗಿಲೆತ್ತರಕ್ಕೆ ನಿಂತಿರುತ್ತಾನೆ. ಇಲ್ಲಿ ಮನರಂಜನ ಕಾರ್ಯಕ್ರಮಗಳು, ವಿವಿಧ ರೀತಿಯ ಪೂಜೆ, ಅನ್ನ ಸಂತರ್ಪಣೆ, ಕೊನೆಯ ದಿನದ ರಾಜಬೀದಿ ಉತ್ಸವ ಹೀಗೆ ಎಲ್ಲವು ಸಂಭ್ರಮದಿಂದ ಕೂಡಿರುತ್ತೆ.

ಆದರೆ ಮನೆಯಲ್ಲಿ ನಾವು ಒಂದು ದಿನದ ಮಟ್ಟಿಗೆ ಗಣೇಶನ ಕೂರಿಸಿ ಹಬ್ಬ ಮಾಡುತ್ತೇವೆ. ಮತ್ತೆ ಕೆಲವರು ಒಂದು ದಿನ ಸಾರ್ವಜನಿಕ ಗಣೇಶೋತ್ಸವ ಆಚರಿಸುತ್ತಾರೆ. ಆದರೆ ಕೆಲವೊಂದು ಕಡೆಗಳಲ್ಲಿ ಸತತ ಒಂದು ತಿಂಗಳ ಕಾಲ ಗಣೇಶೋತ್ಸವ ನಡೆಸುವುದನ್ನು ನಾವು ನೋಡಬಹುದು.
ಹಾಗಾದ್ರೆ ಈ ಸಾರ್ವಜನಿಕ ಗಣೇಶೋತ್ಸವ 10 ದಿನಗಳಿಗಿಂತ ಹೆಚ್ಚು ದಿನ ಆಚರಿಸುವುದೇಕೆ? ಇದರ ಹಿಂದಿರುವ ಅಸಲಿ ಕಥೆ ಏನು? ಎಂಬ ಕುರಿತ ಒಂದಿಷ್ಟು ಮಾಹಿತಿ ನಾವಿಂದು ತಿಳಿದುಕೊಳ್ಳೋಣ.
ಗಣೇಶ ಚತುರ್ಥಿಯ ಆಚರಣೆಯ ಮೂಲವನ್ನು 17 ನೇ ಶತಮಾನದಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಭಾರತೀಯರಲ್ಲಿ ರಾಷ್ಟ್ರೀಯತೆ ಮತ್ತು ಏಕತೆಯನ್ನು ಉತ್ತೇಜಿಸಿದಾಗ ಮರಾಠ ಸಾಮ್ರಾಜ್ಯದಲ್ಲಿ ಗುರುತಿಸಬಹುದು. ಹಿಂದೂ ಪುರಾಣಗಳ ಪ್ರಕಾರ, ಪಾರ್ವತಿ ದೇವಿಯು ತನ್ನ ಸ್ನಾನಕ್ಕೆ ಬಳಸಿದ ಶ್ರೀಗಂಧದಿಂದ ಗಣೇಶನನ್ನು ಸೃಷ್ಟಿಸಿದಳು ಹೀಗೆ ಈ ರೀತಿಯ ಎಲ್ಲಾ ಕಥೆಗಳು ನಮಗೆ ಗೊತ್ತಿದೆ.
ಹೀಗೆ ಈ ಸಾರ್ವಜನಿಕ ಗಣೇಶೋತ್ಸವ ಆರಂಭದಲ್ಲಿ ಒಂದೇ ದಿನಕ್ಕೆ ಸೀಮಿತವಾಗಿತ್ತು. ಆದರೆ ಸ್ವಾತಂತ್ರ್ಯದ ಸಮಯದಲ್ಲಿ ಗಣೇಶೋತ್ಸವವೇ ಜನರನ್ನು ಸೇರಿಸಲು ಬಹಳ ಮುಖ್ಯವಾದ ಮಾಧ್ಯಮವಾಗಿ ಬದಲಾಗಿತ್ತು, ಬಾಲಗಂಗಾಧರ ತಿಲಕ್ ಅವರು ಮೊದಲು ಈ ಸಾರ್ವಜನಿಕ ಗಣೇಶೋತ್ಸವನ್ನ ಸ್ವಾತಂತ್ರ್ಯದ ಕಿಡಿಯಾಗಿ ಬಳಸಿದರು. ಆದರೆ ಮುಂದೆ ದೊಡ್ಡ ದೊಡ್ಡ ಸಭೆಗಳ ನಡೆಸುವುದು ಇದರಿಂದ ಸಾಧ್ಯವಾಗುತ್ತಿತ್ತು.
ಹೀಗಾಗಿ ಒಮ್ಮೆ ಜನರನ್ನು ಸೇರಿಸಲು ಕಷ್ಟ ಪಡುವಾಗ ಅವರು ಸಾರ್ವಜನಿಕ ಗಣೇಶೋತ್ಸವದ ಮೊರೆ ಹೋದರು. ಒಮ್ಮೆ ಈ ಸ್ಥಳದಲ್ಲಿ ಗಣಪತಿ ಕೂರಿಸಿದರೆ 3 ದಿನಗಳ ಕಾಲ ನಿರಂತರ ಜನ ಸೇರಿಸಬಹುದು ಎಂದು ಅರಿತುಕೊಂಡರು. ಹೀಗಾಗಿ ದೇಶದ ಹಲವು ಕಡೆಗಳಲ್ಲಿ ಈ ರೀತಿಯ ಪ್ರಯೋಗ ಮಾಡಲಾಯಿತು, ಇದರಿಂದ ಜನರು ಒಂದೇ ಕಡೆ ಸತತ ಮೂರು ನಾಲ್ಕು ದಿನಗಳ ಕಾಲ ಸೇರುತ್ತಿದ್ದರು.
ಹೀಗಾಗಿ ಇಲ್ಲಿಂದ ಸಾರ್ವಜನಿಕ ಗಣೇಶೋತ್ಸವ ಒಂದು ದಿನದ ಬದಲಾಗಿ ಎರಡು ದಿನ ಮೂರು ದಿನ ಹೀಗೆ ಬೆಳೆಯುತ್ತಾ ಹೋಗಿತ್ತು, ಆದ್ರೆ ಈಗ ಈ ಗಣೇಶೋತ್ಸವ 30 ದಿನಗಳಿಗೂ ಹೆಚ್ಚು ಕಾಲ ನಡೆಯುವ ಸಂಭ್ರಮದ ಹಬ್ಬವಾಗಿ ಬದಲಾಗಿದೆ.
ಆದ್ರೆ ಈಗ 5ಕ್ಕಿಂತ ಹೆಚ್ಚು ದಿನಗಳ ಕಾಲ ಗಣೇಶನ ಪ್ರತಿಷ್ಠಾಪನೆ ಮಾಡಿ ಒಂದೊಂದು ದಿನ ಒಂದೊಂದು ರೀತಿಯ ಆಚರಣೆ, ಕಾರ್ಯಕ್ರಮಗಳು, ಒಂದೊಂದು ಪೂಜೆ ನೆರವೇರುತ್ತದೆ, ಸಾರ್ವಜನಿಕ ಸತ್ಯನಾರಾಯಣ ಪೂಜೆ, ಕ್ರೀಡೆ, ಮನರಂಜನಾ ಕಾರ್ಯಕ್ರಮ, ರಾಜಬೀದಿ ಉತ್ಸವ, ಸಿಡಿಮದ್ದು ಪ್ರದರ್ಶನ ಸೇರಿ ಹಲವು ರೀತಿಯ ಕಾರ್ಯಕ್ರಮಗಳ ನಾವು ನೋಡಬಹುದು.



Click it and Unblock the Notifications

