Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವಿಜಯದಶಮಿ ಬಳಿಕ ಲಂಕಾದಿಂದ ಅಯೋಧ್ಯೆಗೆ ತಲುಪಲು 21 ದಿನವಾಯ್ತೇ ಶ್ರೀರಾಮನಿಗೆ: ಗೂಗಲ್ ಮ್ಯಾಪ್‌ನಲ್ಲಿಯೂ ಇದೇ ಸತ್ಯ, ವೈರಲ್ ಆಯ್ತು
ರಾಮಾಯಣ ಒಂದು ಕಾಲ್ಪನಿಕ ಕತೆ ಎಂಬುವುದು ಕೆಲವರ ವಾದವಾದರೆ ಇಲ್ಲ ಅದು ನಿಜವಾಗಿ ನಡೆದಿದ್ದು ಎಂಬುವುದು ಇನ್ನು ಕೆಲವರ ವಾದ, ಆದರೆ ರಾಮಾಯಣ ಜೀವನದ ಆದರ್ಶಗಳನ್ನು, ಮೌಲ್ಯಗಳನ್ನು ತಿಳಿಸುತ್ತದೆ ಎಂಬುವುದು ಮಾತ್ರ ಸತ್ಯ. ರಾಮಾಯಣ ನಿಜವಾಗಿ ನಡೆದಿದೆ ಎಂಬುವುದಕ್ಕೆ ಹಲವಾರು ಕುರುಹುಗಳು ಇಂದಿಗೂ ಸಿಗುತ್ತದೆ, ಇದರ ಆಧಾರದ ಮೇಲೆ ರಾಮಯಣ ಎಂಬುವುದು ನಿಜವಾಗಿ ನಡೆದಿದ್ದು ಎಂಬ ವಾದಕ್ಕೆ ಬಲ ಹೆಚ್ಚಿದೆ.
ರಾಮಾಯಣದಲ್ಲಿ ರಾವಣನು ಸೀತೆಯನ್ನು ಅಪಹರಿಸಿದಾಗ ಶ್ರೀರಾಮ ಬಂದು ರಾವಣನ ಸಂಹಾರ ಮಾಡಿ ಸೀತೆಯನ್ನು ರಕ್ಷಣೆ ಮಾಡಿದ ಎಂದು ಹೇಳಲಾಗಿದೆ, ಶ್ರೀರಾಮನು ಲಂಕಾದಿಂದ ಅಯೋಧ್ಯೆ ತಲುಪಲು 21 ದಿನ ತೆಗೆದುಕೊಳ್ಳುತ್ತಾನೆ, ಆದರೆ ಈ ಲೆಕ್ಕಾಚಾರ ನಿಜ ಎಂಬುವುದನ್ನು ಗೂಗಲ್‌ಮ್ಯಾಪ್ ಕೂಡ ಹೇಳುತ್ತದೆ, ಟ್ವಿಟರ್ ಬಳಕೆದಾರರು ಶೇರ್ ಮಾಡಿದ ಸ್ಕ್ರೀನ್ ಶಾಟ್ ಈಗ ವೈರಲ್ ಆಗಿದೆ.

ದಸರಾ ಆದ 21 ದಿನದ ಬಳಿಕ ದೀಪಾವಳಿ ಆಚರಿಸುತ್ತೇವೆ, ಈ ಲೆಕ್ಕಚಾರದ ಹಿಂದಿರುವ ಕತೆಯೇನು?
ಬಹುಶಃ ಈ ರೀತಿ ಯಾರೂ ಯೋಚಿಸಿರಲಿಲ್ಲ, ಪ್ರತಿವರ್ಷ ವಿಜಯದಶಮಿ ಬಳಿಕ ದೀಪಾವಳಿ ಬರುತ್ತದೆ,ದೀಪಗಳನ್ನು ಹಚ್ಚಿ ಸಂಭ್ರಮಿಸುತ್ತೇವೆ. ಕೆಲವರಿಗೆ ದಸರಾ ಆಚರಣೆ ಮಾಡಿ 21 ದಿನದ ಬಳಿಕ ದೀಪಾವಳಿ ಆಚರಿಸುತ್ತೇವೆ ಎಂದು ಗೊತ್ತಿರುತ್ತದೆ, ಈ 21 ದಿನದ ಲೆಕ್ಕಾಚಾರ ಏನು ಎಂಬುವುದು ಗೊತ್ತಿರುವುದಿಲ್ಲ.
ದೀಪಾವಳಿ ಆಚರಣೆಯ ಪೌರಾಣಿಕ ಹಿನ್ನೆಲೆ
ಶ್ರೀರಾಮಯಣ ಕತೆಯಲ್ಲಿ ಶ್ರೀರಾಮ ಸೀತೆಯನ್ನು ರಕ್ಷಿಸಿ, ವನವಾಸ ಮುಗಿಸಿ ಅಯೋಧ್ಯೆಗೆ ಮರಳುವಾಗ ಅಯೋಧ್ಯೆಯ ಜನರು ದೀಪಗಳನ್ನು ಬೆಳಗಿ ಶ್ರೀರಾಮಚಂದ್ರನನ್ನು ಸ್ವಾಗತಿಸುತ್ತಾರೆ ಎಂದು ಹೇಳಲಾಗಿದೆ. ದಶಮಿಯಂದು 10 ತಲೆಯ ರಾವಣನ ಸಂಹಾರ ಮಾಡಿದನು ಎಂದು ಕೂಡ ಹೇಳಲಾಗಿದೆ. ಹಾಗಾಗಿ ವಿಜಯದಶಮಿಯಂದು ರಾವಣನ ಮೂರ್ತಿ ಮಾಡಿ ಅದಕ್ಕೆ ಬೆಂಕಿ ಹಚ್ಚುವ ಆಚರಣೆ ಹಲವು ಕಡೆ ಇದೆ. ದುಷ್ಟರ ನಾಶ, ಶಿಷ್ಟರ ರಕ್ಷಣೆ ಎಂಬ ಸಾಂಕೇತವಾಗಿ ಈ ಹಬ್ಬವನ್ನು ಆಚರಿಸಲಾಗುವುದು.
Why is Diwali celebrated 21 days after Dussehra.
— Mukul Dekhane (@dekhane_mukul) October 12, 2024
They told me that it took Shree Ram ji 21 days to walk from Srilanka to Ayodhya.
I then checked it in Google maps and I was just shocked to see it does take 21 days to get back.
So Shree Ram ji did exist and he knew the… pic.twitter.com/d2uedGp2d6
ಮುಖಲ್ ದೇಖನೆ ಎಂಬ ಟ್ವಿಟರ್ ಬಳಕೆದಾರರು ಶೇರ್ ಮಾಡಿರುವ ಸ್ಕ್ರೀನ್ ಶಾಟ್ ಮತ್ತೆ ಚರ್ಚೆಯನ್ನು ಹುಟ್ಟು ಹಾಕಿದೆ
ಈಗ ನಾವು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುವಾಗ ಅಡ್ರೆಸ್ ಗೊತ್ತಿಲ್ಲ ಎಂದು ತಲೆಕೆಡಿಸಿಕೊಳ್ಳಬೇಕಾಗಿಲ್ಲ, ಗೂಗಲ್ ಮ್ಯಾಪ್ ಬಳಸಿ ತಲುಪಬೇಕಾದ ಜಾಗ ಆರಾಮವಾಗಿ ತಲುಪಬಹುದು, ಅದರಂತೆ ಶ್ರೀಲಂಕಾದಿಂದ ಅಯೋಧ್ಯೆಯನ್ನು ಕಾಲ್ನಡಿಗೆಯಲ್ಲಿತಲುಪಲು ಎಷ್ಟು ದಿನ ಬೇಕು ಎಂದು ನೋಡಿದರೆ ಅದು 21 ದಿನ ತೋರಿಸುತ್ತದೆ.
ನೀವು ಶ್ರೀಲಂಕಾದಿಂದ ಅಯೋಧ್ಯೆಗೆ ಕಾಲ್ನಡಿಗೆಯಲ್ಲಿ ಎಷ್ಟು ದಿನ ಬೇಕಾಗುತ್ತದೆ ಎಂದು ಸರ್ಚ್ ಮಾಡಿದರೆ 3,125.6 km ಕಿ. ಮೀಗೆ 542 ಗಂಟೆ ತೋರಿಸುತ್ತದೆ. ಅದನ್ನು ಭಾಗಿಸಿದರೆ ನಿಮಗೆ 22 ದಿನ ತೋರಿಸುತ್ತದೆ,ಆದರೆ ಆ ಕಾಲದಲ್ಲಿ ಶಾರ್ಟ್‌ಕಟ್‌ಗಳು ಗೊತ್ತಿರಬಹುದು ಹೀಗಾಗಿ 21 ದಿನಕ್ಕೆ ಅವರಿಗೆ ಅಯೋಧ್ಯೆ ತಲುಪಲು ಸಾಧ್ಯವಾಯ್ತು ಎಂದು ಹೇಳಲಾಗುತ್ತದೆ. ಅವರು ಕಾಡು, ನದಿಯೆಲ್ಲಾ ದಾಟಿ ಬರ್ತಾರೆ, ಅಲ್ಲದೆ ಹಿಂದಿನ ಕಾಲದವರು ಚಿಕ್ಕ-ಚಿಕ್ಕ ಕಾಲುದಾರಿ, ಕಾಡಿನ ಮಾರ್ಗ ಬಳಸುತ್ತಿದ್ದರು, ಇದರಿಂದ ಅವರು ತಲುಪ ಬೇಕಾದ ಸ್ಥಳಕ್ಕೆ ಬೇಗನೆ ತಲುಪಲು ಸಾಧ್ಯವಾಗಿತ್ತು. ಈಗಿನಂತೆ ರಸ್ತೆಗಳು ಇರ್ಲಲಿಲ್ಲ, ಆದರೆ ಈಗ ರಸ್ತೆಗಳಿವೆ, ಗೂಗಲ್ ಮ್ಯಾಪ್ ಆ ಲೆಕ್ಕಾಚಾರದಲ್ಲಿ ನೀಡುತ್ತೆ, ಆದರೂ 22 ದಿನ ಸಾಕು ಎಂದಾದರೆ ಖಂಡಿತ ಶ್ರೀರಾಮ ಅಯೋಧ್ಯೆಗೆ 21 ದಿನಕ್ಕೆ ತಲುಪಿರುತ್ತಾನೆ. ಈ ಕಾರಣದಿಂದಲೇ ವಿಜಯದಶಮಿ ಆಚರಿಸಿದ 21ನೇ ದಿನಕ್ಕೆ ದೀಪಾವಳಿ ಆಚರಣೆ ಮಾಡಲಾಗುವುದು.
ಗೂಗಲ್ ಮ್ಯಾಪ್ ಈಗೀನ ಟೆಕ್ನಾಲಾಜಿ, ಆದರೆ ಆಗಿನ ಕಾಲದಲ್ಲಿಯೇ ನಮ್ಮ ಹಿರಿಯರು ಈ ಟೆಕ್ನಾಲಾಜಿಯಲ್ಲಿ ತುಂಬಾನೇ ಮುಂದುವರೆದಿದ್ದರು, ಆದರೆ ಅದನ್ನು ಧಾರ್ಮಿಕ ಲೆಕ್ಕಚಾರದ ಮೂಲಕ ಹೇಳಲಾಗುತ್ತಿತ್ತು ಅಷ್ಟೇ ಅಲ್ವಾ?
ಸೂರ್ಯಗ್ರಹಣ, ಚಂದ್ರ ಗ್ರಹಣ, ಅಮವಾಸ್ಯೆ, ಹುಣ್ಣಿಮೆ, ಋತುಗಳು ಎಲ್ಲವೂ ಅವರಿಗೆ ಗೊತ್ತಿತ್ತು, ಈಗ ಸೂರ್ಯಗ್ರಹಣ ಯಾವಾಗ ನಡೆಯುತ್ತೆ ಎಂದು ವಿಜ್ಞಾನ ಹೇಳುತ್ತೆ, ಆದರೆ ಆ ಕಾಲದಲ್ಲಿಯೂ ನಿಖರ ದಿನ, ನಿಖರ ಸಮಯ ಹೇಳುತ್ತಿದ್ದರು, ಗ್ರಹಗತಿಗಳ ಲೆಕ್ಕಾಚಾರ ಮಾಡಿ ಹೇಳುತ್ತಿದ್ದರು. ರಾಮಾಯಣದಲ್ಲಿಯೇ ನೋಡಿ ಪುಷ್ಪಕ ವಿಮಾನದ ಪರಿಕಲ್ಪನೆಯಿದೆ. ವಿಜಯದಶಮಿಯಂದು ರಾವಣ ಸತ್ತ, ಬಳಿಕ ರಾಮ ಅಯೋಧ್ಯೆಗೆ ಬಂದಾಗ ದೀಪಾವಳಿ ಆಚರಣೆ ಮಾಡಲಾಯ್ತು ಎಂದು ಹೇಳಲಾಗಿದೆ, ರಾಮ ತಲುಪಿರುವುದು 21 ದಿನದ ಬಳಿಕ, ಈಗೀನ ಟೆಕ್ನಾಲಾಜಿ ಕೂಡ ಅದನ್ನೇ ಹೇಳುತ್ತಿರುವುದು... ಈ ಎಲ್ಲಾ ಲೆಕ್ಕಚಾರ ಇಟ್ಟು ನೋಡುವುದಾದರೆ ರಾಮಾಯಣ ಕಾಲ್ಪನಿಕ ಕತೆಯಲ್ಲ ನಿಖರ ಕತೆ ಎಂಬುವುದು ತಿಳಿಯಬಹುದು, ಈ ಬಗ್ಗೆ ನಿಮ್ಮ ಅನಿಸಿಕೆಯೇನು?



Click it and Unblock the Notifications