Latest Updates
-
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ!
ಮಳೆಗಾಲದಲ್ಲಿ ಸಂಗಾತಿಯೊಂದಿಗೆ, ಸ್ನೇಹಿತರೊಂದಿಗೆ ಈ ಸ್ಥಳಕ್ಕೆ ಹೋದರೆ ನಿಮಗದು ನೀಡಲಿದೆ ವಿಶೇಷ ಅನುಭವ
ಕೆಲಸ, ಸಿಟಿ ಲೈಫ್‌ನಿಂದ ಚಿಕ್ಕದಾಗಿ ಬ್ರೇಕ್ ತೆಗೆದು ಸಂಗಾತಿಯೊಂದಿಗೆ ಒಂದು ಸುಂದರ ತಾಣಕ್ಕೆ ಹೋಗಬೇಕೆನ್ನುವವರಿಗೆ, ಒಂದಿಷ್ಟು ಫ್ರೆಂಡ್ಸ್ ಜೊತೆಯಾಗಿ ಜಾಲಿಯಾಗಿ ಟ್ರಿಪ್ ಹೋಗುವ ತುಂತುರು ಮಳೆಯಲ್ಲಿ ಜಾಲಿ ಟ್ರಿಪ್ ಮಾಡಿದ ನಂತರ ಕೆಲವೊಂದು ಅಡ್ವೆಂಚರ್ ಇದ್ದರೆ ಇನ್ನೂ ಚೆನ್ನಾಗಿರುತ್ತದೆ ಎಂದು ಬಯಸುವವರಿಗೆ, ಈ ಮಳೆಗಾಲದಲ್ಲಿ ಹೋಗಲು ಸೂಕ್ತವಾದ ತಾಣ ಯಾವುದೆಂದು ಹುಡುಕುತ್ತಿರುವವರೆಗೆ ಅತ್ಯುಂತ ಸೂಕ್ತ ಸ್ಥಳ ಕೊಡಗಿನ ದುಬಾರೆ.

ಹೌದು ಮಳೆಗಾಲದಲ್ಲಿ ಭೇಟಿ ನೀಡಲೇಬೇಕಾದ ಸ್ಥಳಗಳಲ್ಲಿ ಒಂದು ಈ ದುಬಾರೆ, ನೀರಿನ ಮಟ್ಟ ಹೆಚ್ಚಾದಾಗ ವೈಟ್ ವಾಟರ್ ರಿವರ್ ರ‍್ಯಾಫ್ಟಿಂಗ್ ಇರುತ್ತದೆ, ಹನಿಮೂನ್ ಜೋಡಿಗಳಿಗೆ , ಒಂದಿಷ್ಟು ಫ್ರೆಂಡ್ಸ್ ಜೊತೆಗೆ ಬರುವವರಿಗೆ ಅತ್ಯಂತ ಖುಷಿ ನೀಡುವ ಸಾಹಸ... ನೀರು ಉಕ್ಕಿ ಹರಿಯುತ್ತಿದ್ದಾಗ ಆ ನೀರಿನಲ್ಲಿ ಸಾಗುವ ಅನುಭವ ಇದೆಯೆಲ್ಲಾ ಅತ್ಯಂತ ರೋಚಕ, ಇನ್ನು ನೀರಿನಲ್ಲಿ ಇಳಿದು ಆಟ ಆಡಬೇಕೆಂದು ಬಯಸುವವರಿಗೆ ಸುರಕ್ಷಿತ ಕಡೆ ಅವರು ನೀರಿನಲ್ಲಿ ಇಳಿಸುತ್ತಾರೆ, ಈಜು ಬರದಿದ್ದರೂ ಮುಳುಗುತ್ತೇವೆ ಎಂಬ ಭಯ ಬೇಕಾಗಿಲ್ಲ, ಲೈಫ್ ಜಾಕೆಟ್ ಧರಿಸಿರುವುದರಿಂದ ಯಾವುದೇ ಆತಂಕವಿಲ್ಲದೆ ನೀರಿನಲ್ಲಿ ಈಜಾಡಬಹುದು. ನೀರಿನಲ್ಲಿ ಬಿದ್ದಾಗ ಜೋರಾಗುವ ಎದೆ ಬಡಿತ ಸ್ವಲ್ಪ ಹೊತ್ತಿನಲ್ಲಿಯೇ ದೂರಾಗಿ ಆಹಾ... ಈ ರೀತಿ ನೀರಿನಲ್ಲಿಯೇ ಈಜಾಡುತ್ತಾ ಕಾಲ ಕಳೆದರೆ ಎಷ್ಟೊಂದು ಚೆನ್ನಾಗಿರುತ್ತದೆ ಎಂದನಿಸುವುದು.
ಜೋಡಿಗಳಿಗೆ ಕೊನೆಯವೆಗೂ ನೆನಪಿನಲ್ಲಿರುವಂಥ ಅನುಭವ ಕಟ್ಟಿ ಕೊಡುತ್ತದೆ ಈ ತಾಣ
ಹೊಸದಾಗಿ ಮದುವೆಯಾಗಿ ಬರುವ ಜೋಡಿಗಳಿಗೆ ಹೇಳಿ ಮಾಡಿಸಿದ ಸ್ಥಳ. ತನ್ನ ಸಂಗಾತಿ ಜೊತೆ ಆ ನೀರಿನಲ್ಲಿ ಸಾಗುತ್ತಿದ್ದರೆ ಸಕತ್ ರೊಮ್ಯಾಂಟಿಕ್ ಅನಿಸುವುದು. ಉಕ್ಕಿ ಹರಿಯುವ ನೀರಿನ ಬೋರ್ಗೆರೆತದ ನಡುವೆ ಸಾಗುವ ರ‍್ಯಾಫ್ಟಿಂಗ್ ಅನುಭವವೇ ಚೆಂದ. ವಯಸ್ಸಾದವರು ಈ ಸಾಹಸಕ್ಕೆ ಬರುವುದು ತುಂಬಾನೇ ಕಡಿಮೆ, ಏನಿದ್ದರೂ 40 ವರ್ಷದೊಳಗೆ ಈ ರೀತಿ ಸಾಹಸಕ್ಕೆ ಮುಂದಾಗುತ್ತಾರೆ.
ಪ್ರೇಮಿಗಳಿಗೆ ರೊಮ್ಯಾಂಟಿಕ್ ಅನಿಸಿದರೆ ಸ್ನೇಹಿತರ ಗುಂಪಿನ ಜೊತೆ ಬಂದಿದ್ದರೆ ಅದರ ಮಜಾವೇ ಬೇರೆ....
ಒಂದು ರ‍್ಯಾಫ್ಟಿಂಗ್‌ನಲ್ಲಿ 6 ಜನರನ್ನು ಕರೆದುಕೊಂಡು ಹೋಗುತ್ತಾರೆ, ಅದರಲ್ಲಿ ನಿಮ್ಮದೇ ತಂಡವಿದ್ದರೆ ಅದರ ಅನುಭವ ತುಂಬಾನೇ ಸ್ಪೆಷಲ್. ನೀವು ಇಬ್ಬರು-ಮೂವರು ಆಗಿ ಹೋದರೆ ಉಳಿದವರು ಬೇರೆ ಗುಂಪಿನವರು ಆಗಿರುತ್ತಾರೆ, ಆದರೆ ಆ 6 ಜನವೂ ನಿಮ್ಮ ತಂಡವರೇ ಆದರೆ ತುಂಬಾನೇ ಎಂಜಾಯ್ ಮಾಡ್ತೀರಿ, ನಿಮ್ಮೆಲ್ಲಾ ಮಾನಸಿಕ ಒತ್ತಡ ದೂರಾಗಿ ಹೊಸ ಉಲ್ಲಾಸದಿಂದ ಟ್ರಿಪ್‌ನಿಂದ ಹೀಂತಿರುಗುತ್ತೀರಿ, ಅಷ್ಟೊಂದು ವಿಶೇಷ ಅನುಭವ ನೀಡುತ್ತದೆ ಈ ಟ್ರಿಪ್.
4 ವರ್ಷದ ಬಳಿಕ ಈ ವರ್ಷ ವೈಟ್ ವಾಟರ್ ರ‍್ಯಾಫ್ಟಿಂಗ್ ಶುರುವಾಗಿದೆ
ವೈಟ್ ವಾಟರ್ ರ‍್ಯಾಫ್ಟಿಂಗ್ ಹೋಗಬೇಕೆಂದು ಬಯಸುತ್ತಿದ್ದರಿಗೆ ಈ ವರ್ಷ ಕಾಲ ಕೂಡಿ ಬಂದಿದೆ. ಕೊರೊನ ಸಮಯದಲ್ಲಿ ಇರಲಿಲ್ಲ, ಅದಾದ ಬಳಿಕ ಕಳೆದ ವರ್ಷ ಮಳೆ ಕೂಡ ಅಷ್ಟಾಗಿ ಬಂದಿರಲಿಲ್ಲ, ಆದರೆ ಈ ವರ್ಷ ಮಳೆ ಚೆನ್ನಾಗಿ ಬಂದಿರುವುದರಿಂದ ನೀರಿನ ಮಟ್ಟ ಹೆಚ್ಚಾಗಿದೆ. ಹೀಗಾಗಿ ವೈಟ್ ವಾಟರ್ ರ‍್ಯಾಫ್ಟಿಂಗ್ ತುಂಬಾನೇ ರೋಚಕವಾಗಿರುತ್ತದೆ. ನೀರಿನ ಮಟ್ಟ ಕಡಿಮೆ ಇದ್ದಾಗಲೂ ರ‍್ಯಾಫ್ಟಿಂಗ್ ಇದೆ, ಆದರೆ ರ‍್ಯಾಫ್ಟಿಂಗ್‌ನ ನಿಜವಾದ ಮಜ ಸಿಗಲು ನೀರು ತುಂಬಿ ಹರಿಯಬೇಕು, ಆದರೆ ತುಂಬಾ ಮಳೆಯಿಂದ ನೀರಿನ ಮಟ್ಟ ತುಂಬಾ ಹೆಚ್ಚಾದಾಗಲೂ ಅಪಾಯಕಾರಿ ಎಂದು ರ‍್ಯಾಫ್ಟಿಂಗ್ ಇರುವುದಿಲ್ಲ.
ನುರಿತ ರ‍್ಯಾಫ್ಟಿಂಗ್ ಗೈಡ್‌ಗಳು
ಈಜು ಬರುವುದೇ ಇಲ್ಲ ಎನ್ನುವವರು ಕೂಡ ಧೈರ್ಯವಾಗಿ ರ‍್ಯಾಫ್ಟಿಂಗ್ ಹೋಗಬಹುದು, ಏಕೆಂದರೆ ನುರಿತ ಗೈಡ್‌ಗಳು ಇರುತ್ತಾರೆ, ಸಾಮಾನ್ಯವಾಗಿ 2-3 ರ‍್ಯಾಫ್ಟಿಂಗ್ ಜೊತೆ-ಜೊತೆಯಲ್ಲಿ ಹೋಗುವುದು, ಹೀಗಾಗಿ ರ‍್ಯಾಫ್ಟಿಂಗ್ ಬಂದವರ ರಕ್ಷಣೆಗೆ ಆ ತಂಡ ಸದಾ ಸಿದ್ಧವಾಗಿರುತ್ತದೆ. ಅಲ್ಲದೆ ನೀರಿನಲ್ಲಿ ನಮ್ಮ ಪೋಟೋ ತೆಗೆಯಬೇಕು, ಆದರೆ ಮೊಬೈಲ್ ಬಿದ್ದು ಹೋದರೆ? ಎಂಬ ಭಯವೂ ಬೇಕಾಗಿಲ್ಲ, ಅವರೇ ನಿಮಗೆ ಫೋಟೋ ವೀಡಿಯೋ ತೆಗೆದುಕೊಡುತ್ತಾರೆ.
ಎಷ್ಟು ಚಾರ್ಜ್?
ರ‍್ಯಾಫ್ಟಿಂಗ್ ಹೋಗಬೇಕೆಂದು ಬಯಸುವವರು ರೂ. 800 ಪಾವತಿಸಬೇಕು. ಸುಮಾರು ಏಳೂವರೆ ಕಿ. ಮೀ ನೀರಿನಲ್ಲಿ ಸಾಗುತ್ತೇವೆ. ಹೀಗೆ ನೀರಿನಲ್ಲಿ ಸಾಗುವ ಎರಡು ಬದಿಯಲ್ಲಿ ಕಂಡು ಬರುವ ಮಾವಿನ ಗಿಡಗಳು ತುಂಬಾನೇ ಆಕರ್ಷಕ ಅನಿಸುವುದು.
ವೀಕೆಂಡ್‌ನಲ್ಲಿ ಮಳೆಗಾಲದಲ್ಲಿ ಸಂಗಾತಿ ಜೊತೆಗೆ ಟ್ರಿಪ್ ಹೋಗುವ ಪ್ಲ್ಯಾನ್‌ನಲ್ಲಿದ್ದರೆ ಅಥವಾ ಸ್ನೇಹಿತರುಗಳು ಹೋಗುವ ಪ್ಲ್ಯಾನ್ ಮಾಡುತ್ತಿದ್ದರೆ ಈ ರ‍್ಯಾಫ್ಟಿಂಗ್ ಅನುಭವ ಮಿಸ್ ಮಾಡದಿರಿ...



Click it and Unblock the Notifications

