Latest Updates
-
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ -
ಗಣೇಶ ಹಬ್ಬ 2026: ಬೆಂಗಳೂರಿನಲ್ಲಿ PoP ಮೂರ್ತಿಗಳ ಮೇಲೆ ಕಠಿಣ ನಿಷೇಧ, ಪರಿಸರ ಸ್ನೇಹಿ ಗಣಪತಿಯನ್ನು ಪತ್ತೆ ಹಚ್ಚುವುದು ಹೇಗೆ? -
ವೈ-ವೈ ನೂಡಲ್ಸ್ ಕಂಪನಿಗೆ FSSAI ಬಿಗ್ ಶಾಕ್: ಉತ್ಪಾದನೆ ಸ್ಥಗಿತ, ಅಸಲಿ ಕಾರಣವೇನು?
ಮಧ್ಯರಾತ್ರಿ ನಾಯಿಗಳು ಬೊಗಳುವುದೇಕೆ..? ಇದರ ಹಿಂದಿದೆ ಅಚ್ಚರಿಯ ಕಾರಣ..!
ರಾತ್ರಿ ಹೊತ್ತು ನಾಯಿಗಳು ವಿಚಿತ್ರವಾಗಿ ಕೂಗುವುದನ್ನು ನೀವು ಕೇಳಿರುತ್ತೀರಿ. ಆದ್ರೆ ಎಂದಾದರು ಅವು ಏಕೆ ರಾತ್ರಿ ಹೊತ್ತಿನಲ್ಲಿ ಕೂಗುತ್ತವೆ ಎಂದು ಯೋಚಿಸಿದ್ದೀರಾ? ನಾಯಿಗಳು ಕೆಲವೊಮ್ಮೆ ರಾತ್ರಿಯಿಡಿ ಕೂಗುತ್ತಲೇ ಇರುತ್ತವೆ. ಒಂದು ದಿಕ್ಕಿನ ಕಡೆ ಮುಖ ಮಾಡಿ ಕೂಗುತ್ತವೆ. ಅದು ಒಂದು ನಾಯಿ ಅಲ್ಲ ಊರಿನಲ್ಲಿ ಹತ್ತಾರು ನಾಯಿಗಳಿದ್ದರೆ ಎಲ್ಲಾ ನಾಯಿಗಳು ಬೊಗಳುತ್ತಲೆ ಇರುತ್ತವೆ.
ಈ ರೀತಿ ಮಧ್ಯರಾತ್ರಿ ನಾಯಿಗಳು ಕೂಗುತ್ತಿದ್ದರೆ ಭಯದ ವಾತಾವರಣ ನಿರ್ಮಾಣವಾಗುತ್ತದೆ. ನೀವು ಮನೆಯಲ್ಲಿದ್ದರೆ ಮನೆಯಿಂದ ಹೊರಬರಲು ಆ ವೇಳೆ ಭಯವಾಗುತ್ತದೆ. ನಾಯಿಗಳು ಏನೋ ಕಂಡಂತೆ ಬೊಗುಳುತ್ತಲೇ ಇರುತ್ತವೆ. ರಾತ್ರಿ ನಾವು ನೆಮ್ಮದಿಯಿಂದ ಮಲಗಿ ನಿದ್ರೆ ಮಾಡಲು ಯತ್ನಿಸುವಾಗ ನಾಯಿಗಳು ಬೊಗಳಲು ಆರಂಭಿಸುತ್ತವೆ. ಈ ವೇಳೆ ಹೆಚ್ಚಿನವರು ನಾಯಿಗಳ ಓಡಿಸಲು ಮುಂದಾಗುತ್ತಾರೆ. ಆದರೂ ಅವು ಬೊಗಳುವುದನ್ನು ನಿಲ್ಲಿಸುವುದಿಲ್ಲ. ಹಾಗಾದರೆ ಈ ರೀತಿ ಮಧ್ಯರಾತ್ರಿ ನಾಯಿಗಳು ಕೂಗುವುದು ಏಕೆ? ಇದರ ಹಿಂದಿರುವ ಸತ್ಯವೇನು? ಎಂಬುದನ್ನು ನಾವಿಂದು ತಿಳಿಯೋಣ.

ನಾಯಿಗಳು ಬೊಗಳಲು ಆರಂಭಿಸಿದರೆ ಕೆಲವರು ಅವುಗಳಿಗೆ ದೆವ್ವಗಳು ಕಾಣುತ್ತವೆ ಹೀಗಾಗಿ ಕೂಗುತ್ತವೆ ಎನ್ನುತ್ತಾರೆ. ಇನ್ನೂ ಕೆಲವರು ಅವುಗಳ ಕಿವಿ ಬಹಳ ಸೂಕ್ಷ್ಮವಾಗಿದ್ದು, ನಮಗೆ ಕೇಳಿಸದ ಕೆಲವು ಅನ್ಯ ಶಬ್ದಗಳು ಅವುಗಳ ಕಿವಿಗೆ ಕೇಳುತ್ತದೆ ಹೀಗಾಗಿ ಕೂಗುತ್ತವೆ ಎನ್ನುತ್ತಾರೆ.
ವಾಸ್ತವವಾಗಿ, ದೆವ್ವ ಇದೆಯೇ ಅಥವಾ ಇಲ್ಲವೇ ಎಂಬುದು ದೊಡ್ಡ ಚರ್ಚೆಯ ವಿಷಯವಾಗಿದೆ. ನಾಯಿಗಳು ದೆವ್ವವನ್ನು ನೋಡುತ್ತವೆ ಎಂಬ ನಂಬಿಕೆ ತಪ್ಪು ಎಂದು ಈಗಾಗಲೇ ಸ್ಪಷ್ಟವಾಗಿದೆ. ದೆವ್ವದ ಬಗ್ಗೆ ಯಾವುದೇ ಪುರಾವೆಗಳು ಇಲ್ಲದಿದ್ದಾಗ ನಾಯಿಗಳು ಮಾತ್ರ ದೆವ್ವಗಳನ್ನು ನೋಡಬಹುದು ಎಂದು ಹೇಳುವುದು ತಪ್ಪಾಗುತ್ತದೆ. ಇದರೊಂದಿಗೆ, ನಾಯಿಗಳ ಕಣ್ಣಿಗೆ ದೆವ್ವಗಳು ಕಾಣಿಸಯತ್ತವೆ ಎಂಬುದಕ್ಕೆ ಯಾವ ಪುರಾವೆಯೂ ಇಲ್ಲ.
ಹಾಗಾದರೆ ನಾಯಿಗಳು ರಾತ್ರಿ ವೇಳೆ ಅಳುವುದು ಅಥವಾ ಬೊಗಳುವುದು ಏಕೆ?
ರಾತ್ರಿಯಲ್ಲಿ ನಾಯಿ ಬೊಗಳುವುದಕ್ಕೆ ಹಲವು ಕಾರಣಗಳಿವೆ. ರಾತ್ರಿಯಲ್ಲಿ ನಿಶಬ್ದತೆ ಹೆಚ್ಚಾಗಿರುವುದರಿಂದ ನಾಯಿಗಳು ಬೊಗಳುವುದು ಹೆಚ್ಚು ಜೋರಾಗಿ ಕೇಳಿಸುತ್ತದೆ. ಇದು ನಮ್ಮಲ್ಲಿ ಭಯದ ವಾತಾವರಣ ಸೃಷ್ಟಿಯಾಗಲು ಕಾರಣವಾಗುತ್ತದೆ. ನಾಯಿಗಳು ರಾತ್ರಿಯ ವೇಳೆ ಒಂಟಿತನ ಅನುಭವಿಸುವುದರಿಂದ ಬೊಗಳುತ್ತವಂತೆ. ಹೌದು ನಾಯಿಗಳು ಹಗಲು ವೇಳೆಯಲ್ಲಿ ಮನೆಯ ಆಗುಹೋಗುಗಳು, ಮಾಲಿಕರು, ಊರಿನವರು, ಓಡಾಟ ಮಾಡುವವರು ಹೀಗೆ ಎಲ್ಲರನ್ನು ನೋಡುತ್ತವೆ. ಆಗಾಗ ಹೊಟ್ಟೆಗೆ ಏನನ್ನಾದರು ತಿನ್ನುತ್ತವ, ಓಡಾಡುತ್ತವೆ. ಇಲ್ಲವೆ ಒಂದೇ ಸಮ ಮಲಗಿ ನಿದ್ರೆ ಮಾಡುತ್ತವೆ.
ಆದರೆ ಕತ್ತಲಾದರೆ ಅವುಗಳಿಗೆ ಒಂಟಿತನ ಕಾಡುತ್ತದೆ. ಸುತ್ತಲು ಯಾರು ಇಲ್ಲದ ಕಾರಣ ಅವುಗಳಿಗೆ ಒಂಟಿ ಎಂಬ ಭಾವನೆ ಎದುರಾಗುತ್ತದೆ. ಅಲ್ಲದೆ ರಾತ್ರಿ ಹೊತ್ತು ಹೊಟ್ಟೆ ಖಾಲಿಯಾದಾಗ ಅವು ಕೂಗಲು ಆರಂಭಿಸುತ್ತವೆ. ಇದಲ್ಲದೆ ದೂರದಲ್ಲಿ ಬೊಗಳುತ್ತಿರುವ ನಾಯಿಗಳಿಗೆ ಪ್ರತಿಯಾಗಿ ಇವು ಸಹ ಬೊಗಳಲು ಆರಂಭಿಸುತ್ತವೆ. ಇದು ನಿರಂತರವಾಗಿ ನಡೆಯುತ್ತಲೇ ಇರುತ್ತದೆ.
ರಾತ್ರಿ ಹೊತ್ತು ಮತ್ತೊಂದು ಪ್ರಾಣಿ ಅಥವಾ ಯಾರಾದರು ಅಪರಿಚಿತರು ಕಣ್ಣಿಗೆ ಬಿದ್ದರೆ ಇಡೀ ರಾತ್ರಿ ಕೂಗುತ್ತಲೇ ಇರುತ್ತವೆ. ಈ ವೇಳೆ ನಾವು ನಾಯಿಗೆ ಏನೋ ಕಣ್ಣಿಗೆ ಕಾಣಿಸುತ್ತಿದೆ ಎಂದುಕೊಳ್ಳುತ್ತೇವೆ.
ಇದಿಷ್ಟೆ ಅಲ್ಲ, ನಾಯಿಗಳು ರಾತ್ರಿಯ ವೇಳೆ ಹೆಚ್ಚು ನಿದ್ರೆ ಮಾಡುವುದಿಲ್ಲ. ಅವು ಹಗಲಿನಲ್ಲಿ ಹೆಚ್ಚು ತಾಪಮಾನದ ಕಾರಣ ಎಲ್ಲಿಯೂ ಓಡಾಡುವುದಿಲ್ಲ ತಣ್ಣನೆಯ ಸ್ಥಳದಲ್ಲಿ ಸಾಕಷ್ಟು ನಿದ್ರೆ ಮಾಡುತ್ತವೆ. ಆದರೆ ರಾತ್ರಿ ವೇಳೆ ಎಚ್ಚರವಾಗಿರುತ್ತವೆ. ಹೀಗಾಗಿ ಸಣ್ಣ ಪುಟ್ಟ ಸದ್ದು ಕೇಳಿದರು ಎದ್ದು ಕೂಗಲು ಆರಂಭಿಸುತ್ತವೆ. ಒಮ್ಮೆ ಈ ಕೂಗು ಆರಂಭವಾದರೆ ಗಂಟೆಗಳ ಕಾಲ ಮುಂದುವರೆಯುತ್ತದೆ.



Click it and Unblock the Notifications