Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಪದೇ ಪದೇ ಸೋಲು ಎದುರಾಗೋದ್ಯಾಕೆ? ಪಾರಾಗಲು ಇದೆ ಚಾಣಕ್ಯ ನೀತಿ..!
ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಬದುಕಿನ ಕುರಿತು ಹಲವು ವಿಚಾರಗಳನ್ನು ತಿಳಿಸಿದ್ದಾರೆ. ಅವರು ಮಾಡಿರುವ ಜೀವನದ ಪಾಠಗಳಲ್ಲಿ ಸೋಲುಗಳ ಎದುರಿಸಲು ಏನು ಮಾಡಬೇಕು ಎಂಬುದನ್ನು ವಿವರಿಸಿದ್ದಾರೆ. ಒಬ್ಬ ವ್ಯಕ್ತಿ ಪದೇ ಪದೇ ಸೋಲುಗಳನ್ನೇ ಕಾಣುತ್ತಿದ್ದರೆ ಆತ ಏನು ಮಾಡಬೇಕು. ಅಷ್ಟಕ್ಕೂ ಆ ಸೋಲಿಗಳಿಗೆ ಆತನಲ್ಲಿರುವ ಕಾರಣವೇನು ಎಂಬುದನ್ನು ವಿವರಿಸಿದ್ದಾರೆ.
ಆಚಾರ್ಯ ಚಾಣಕ್ಯರ ಪ್ರಕಾರ ಬದುಕಿನಲ್ಲಿ ಯಶಸ್ಸು ಗಳಿಸಬೇಕು ಅಂದರೆ ಕೆಲವು ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಂತೆ. ಈ ರೀತಿ ಆದಾಗ ಮಾತ್ರ ನಿಮ್ಮ ಶತ್ರುಗಳು ಸಹ ಅಚ್ಚರಿ ಪಡುವಷ್ಟು ನೀವು ಬೆಳವಣಿಗೆ ಕಾಣುತ್ತೀರಿ ಎಂದು ಚಾಣಕ್ಯ ಹೇಳಿದ್ದಾರೆ. ಪ್ರತಿಯೊಂದು ಸನ್ನಿವೇಶಕ್ಕೂ, ಚಾಣಕ್ಯರು ತಮ್ಮ ನೀತಿಶಾಸ್ತ್ರ ಪುಸ್ತಕದಲ್ಲಿ ಪರಿಹಾರಗಳನ್ನು ಬರೆದಿದ್ದಾರೆ.

ಹಾಗಾದರೆ ಚಾಣಕ್ಯರ ಪ್ರಕಾರ, ಪದೇ ಪದೇ ಸೋಲು ಕಾಣುತ್ತಿರುವ ವ್ಯಕ್ತಿ ಯಾವ ಗುಣ ಬೆಳೆಸಿಕೊಂಡರೆ ಆತ ಸೋಲಿನಿಂದ ಹೊರಬರುತ್ತಾನೆ ಎಂಬುದನ್ನು ನಾವು ತಿಳಿಯೋಣ.
ಆಲೋಚನೆಗಳ ಕಾರ್ಯರೂಪಕ್ಕೆ ತರುವುದಿಲ್ಲ
ಒಬ್ಬ ವ್ಯಕ್ತಿ ಯಾವುದೇ ಕೆಲಸ ಮಾಡುವ ಮುನ್ನ ಹತ್ತು ಹಲವು ಬಾರಿ ಯೋಚಿಸುತ್ತಾನೆ. ಆದರೆ ಆತ ಯೋಚಿಸಿದಂತೆ ನಡೆದುಕೊಳ್ಳುವುದಿಲ್ಲ. ಇಲ್ಲದೆ ಯೋಚಿಸಿದ್ದನ್ನೇ ಕಾರ್ಯರೂಪಕ್ಕೆ ತರುವುದಿಲ್ಲ. ತಮ್ಮ ಮನಸ್ಸಿನಲ್ಲಿ ಹಲವು ವಿಷಯಗಳನ್ನು ಪರಿಗಣಿಸುತ್ತಾರೆ. ಆದರೆ ಇಂತಹ ಜನರು ಯೋಚನೆಗೆ ತಕ್ಕಂತೆ ಕೆಲಸ ಮಾಡುವುದಿಲ್ಲ. ಅಂದರೆ, ಯೋಚಿಸುವ ಆದರೆ ಏನನ್ನೂ ಮಾಡದ ಜನರು ಎಂದಿಗೂ ಯಶಸ್ವಿಯಾಗುವುದಿಲ್ಲ. ಯಶಸ್ವಿಯಾಗಲು, ಒಬ್ಬ ವ್ಯಕ್ತಿಯು ಯೋಚಿಸುವುದು ಮಾತ್ರವಲ್ಲದೆ ತನ್ನ ಆಲೋಚನೆಯ ಮೇಲೆ ಕಾರ್ಯನಿರ್ವಹಿಸಬೇಕು. ಈ ರೀತಿ ಯೋಚನೆಗೆ ಬಂದ ವಿಷಯ, ಆಲೋಚನೆಗಳ ಜಾರಿ ಮಾಡದಿರುವಾತ ಪದೇ ಪದೇ ಸೋಲು ಎದುರಿಸಬೇಕಾಗುತ್ತದೆ ಎಂದು ಚಾಣಕ್ಯ ಹೇಳಿದ್ದಾನೆ.
ಚಿಂತನೆಗಳಿಲ್ಲದೆ ಹೋರಾಟಕ್ಕಿಳಿಯುವ ವ್ಯಕ್ತಿ
ಆಚಾರ್ಯ ಚಾಣಕ್ಯರ ಪ್ರಕಾರ, ಆಲೋಚನೆಗಳ ಕಾರ್ಯರೂಪಕ್ಕೆ ತರಲಾರದವನು ಸೋಲು ಅನುಭವಿಸುತ್ತಾನೆ. ಇದರ ಜೊತೆ ಆತನ ಯೋಜನೆಗಳ ಬಗ್ಗೆ ಚಿಂತನೆಗಳನ್ನೇ ಕಟ್ಟಿಕೊಳ್ಳದ ವ್ಯಕ್ತಿ ಸೋಲು ಕಾಣುತ್ತಾನೆ ಎಂದಿದ್ದಾರೆ. ಅಂದರೆ ನೀವೊಂದು ಕೆಲಸ ಮಾಡಬೇಕೆಂದು ಅಂದುಕೊಂಡರೆ ಆ ಕೆಲಸದ ಬಗ್ಗೆ ಚಿಂತನೆಗಳು, ಮುಂದಾಲೋಚನೆಗಳ ಹೊಂದಿರಬೇಕು. ಮುಂದೆ ಆಗುವ ಫಲಿತಾಂಶದ ಬಗ್ಗೆ ನಿಮಗೆ ಅರಿವಿಲ್ಲದಿದ್ದರೆ ಆ ಕೆಲದಲ್ಲಿ ಸೋಲಾಗುವುದು ಖಚಿತ ಎಂಬುದು ಚಾಣಕ್ಯನ ವಾದವಾಗಿದೆ. ಗುರಿಯನ್ನು ಸಾಧಿಸಲು ಯೋಜನೆಯನ್ನು ಮಾಡಿ. ಯೋಜನೆಯನ್ನು ರೂಪಿಸುವುದು ನಿಮ್ಮ ಗುರಿಯನ್ನು ಸಾಧಿಸುವ ರೀತಿಯಲ್ಲಿ ಬರುವ ಸಮಸ್ಯೆಗಳನ್ನು ನಿಭಾಯಿಸಲು ಸಹಾಯ ಮಾಡುತ್ತದೆ ಎಂದಿದ್ದಾರೆ.
ಈ ಸೋಲುಗಳಿಂದ ಹೊರಬರಲು ಸಹ ಚಾಣಕ್ಯ ಕೆಲವು ಸೂತ್ರಗಳ ನಮ್ಮ ಮುಂದಿಟ್ಟಿದ್ದಾರೆ.
ಉದ್ದೇಶದಲ್ಲಿ ನಿಖರ ಗುರಿಯಿರಲಿ
ನೀವಂದುಕೊಂಡಂತೆ ಯಾವ ವಿಚಾರವನ್ನಾಗಲಿ ಯೋಚನಾ ರೂಪದಿಂದ ಕಾರ್ಯರೂಪಕ್ಕೆ ತರುವಾಗ ನಿಖರ ಗುರಿಯನ್ನು ಸಿದ್ಧವಾಗಿಸಿಟ್ಟುಕೊಳ್ಳಿ. ಗುರಿಯಿಲ್ಲದೆ ಕಾರ್ಯ ಅಸಾಧ್ಯವಾಗಲಿದೆ. ಇದಕ್ಕಾಗಿ ನೀವು ಮಾಡುತ್ತಿರುವ ಕೆಲಸದ ಕುರಿತು ನಿಮ್ಮ ಬಳಿ ನಿಖರ ಗುರಿಯಿರಲಿ.
ವಿವೇಚನೆಗಳ ಬೆಳಸಿಕೊಳ್ಳಿ
ನಿಮಗೆ ಸರಿ ಯಾವುದು ತಪ್ಪು ಯಾವುದು ಎಂಬ ಬಗ್ಗೆ ಮತ್ತು ಸರಿ ದಾರಿ ತಪ್ಪು ದಾರಿಗಳ ಗುರುತಿಸುವ ವಿವೇಚನೆ ಬೆಳೆದಾಗಲೇ ನಿಮ್ಮ ಗೆಲುವಿನ ದಾರಿ ಸುಲಭವಾಗಿತ್ತದೆ. ಇದಕ್ಕಾಗಿ ನಿಮ್ಮ ಸುತ್ತ ವಿವೇಚನೆಗಳ ಸರಹದ್ದು ರಚಿಸಿಕೊಳ್ಳಿ. ಇದರಿಂದ ನಿಮ್ಮ ಗುರಿ ಸಾಧನೆಗೆ ಅಗತ್ಯ ದಾರಿ ಕಣ್ಣೆದುರಲ್ಲೇ ಸೃಷ್ಟಿಯಾಗಲಿದೆ.
ಅತಿಯಾದ ಪ್ರಾಮಾಣಿಕತೆ ಒಳ್ಳೆಯದಲ್ಲ
ಮನುಷ್ಯ ಯಾವತ್ತಿಗೂ ಚಾಣಾಕ್ಷನಾಗಿರಬೇಕು ಆಗ ಮಾತ್ರ ಬದುಕೋದಿಕ್ಕೆ ಸಾಧ್ಯ. ನಿಮಗೆ ಗೊತ್ತಿರಲಿ ನೇರವಾದ ಮರಗಳಿಗೆ ಮೊದಲು ಕೊಡಲಿ ಏಟು ಬೀಳೋದು. ಅದೇ ರೀತಿ ಪ್ರಮಾಣಿಕತೆಯನ್ನ ದುರುಪಯೋಗ ಪಡಿಸಿಕೊಳ್ಳುವವರೇ ಹೆಚ್ಚು. ಅತಿಯಾದ ಪ್ರಮಾಣಿಕತೆ ಒಂದಲ್ಲ ಒಂದು ದಿನ ನಿಮಗೆ ಅಪಾಯವನ್ನು ತಂದೊಡ್ಡಬಹುದು. ಆದ್ದರಿಂದ ಜಾಗರೂಕರಾಗಿರಿ.
ನಿಮ್ಮ ಜುಟ್ಟು ಬೇರೆಯವರ ಕೈಗೆ ಕೊಡಬೇಡಿ
ಗುರುತ್ವಾಕರ್ಷಣ ಬಲ ನಮ್ಮನ್ನು ನೆಲದ ಮೇಲೆ ನಿಲ್ಲಲು ಸಹಾಯ ಮಾಡುತ್ತದೆ ಇದು ಸಾಧ್ಯವಾಗಿದ್ದು ನ್ಯೂಟನ್ ರೂಪಿಸಿದ ನಿಯಮದಿಂದಾಗಿ. ಅದೇ ರೀತಿ ಇಡೀ ಜಗತ್ತು ಬೇರೆ ಬೇರೆ ಕಾನೂನಿಂದ ನಡೆಯುತ್ತಿದೆ. ನಿಮ್ಮ ಜೀವನದಲ್ಲೂ ಕೆಲವೊದು ಕಾನೂನುಗಳನ್ನು ರೂಪಿಸಿಕೊಳ್ಳಿ. ಅದು ನಿಮ್ಮನ್ನ ನಿಯಂತ್ರಿಸುವಂತಹ ಕಾನೂನಾಗಿರಬೇಕು. ಚಾಣಕ್ಯನ ಪ್ರಕಾರ ನಮ್ಮ ಜುಟ್ಟನ್ನು ಎಂದಿಗೂ ಬೇರೆಯವರ ಕೈಗೆ ಕೊಡಬಾರದು. ನಮ್ಮ ಜಗತ್ತಿನಲ್ಲಿ ನಾವೇ ಹೀರೋಗಳಾಗಿರಬೇಕು. ಜನರನ್ನು ಯಾವ ರೀತಿ ನಿಭಾಯಿಸಬೇಕು ಎಂಬ ಪಾಠವನ್ನು ಖಂಡಿತ ಕಲಿತಿರಬೇಕು



Click it and Unblock the Notifications
