Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರಸ್ತೆ ಬದಿಯ ಮರಗಳಿಗೆ ಬಣ್ಣ ಏಕೆ ಬಳಿದಿರುತ್ತಾರೆ..? ಕೆವಿನ್ ಪೀಟರ್‌ಸನ್‌ಗೆ ಈ ಪ್ರಶ್ನೆ ಕಾಡಿದ್ದೇಕೆ..?
ನೀವು ಹೆದ್ದಾರಿಯಲ್ಲಿ ಪ್ರಯಾಣಿಸುವಾಗ ಇಲ್ಲವೆ ವಾಹನದಲ್ಲಿ ತೆರಳುವಾಗ ರಸ್ತೆ ಬದಿಯಲ್ಲಿರುವ ಮರಗಳ ಮೇಲೆ ಬಣ್ಣ ಬಳಿದಿರುವುದನ್ನು ಗಮನಿಸಿರಬಹುದು. ಬಿಳಿ ಮತ್ತು ಕೆಂಪು ಬಣ್ಣವನ್ನು ರಸ್ತೆ ಬದಿಯ ಮರಗಳಿಗೆ ಹಚ್ಚಿರುತ್ತಾರೆ. ಆದರೆ ಇಷ್ಟು ಹಣ ಖರ್ಚು ಮಾಡಿ ರಸ್ತೆ ಬದಿಯಲ್ಲಿ ಅಥವಾ ಎಲ್ಲಿಯಾದರು ಮರಗಳಿಗೆ ಬಣ್ಣ ಬಳಿಯುವುದೇಕೆ ಎಂದು ನೀವೆಂದಾದರು ಯೋಚಿಸಿದ್ದೀರಾ.?
ಈ ಪ್ರಶ್ನೆ ಈಗ ಹುಟ್ಟಿಕೊಳ್ಳಲು ಒಂದು ಕಾರಣವೂ ಇದೆ. ಭಾರತದಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೈಮಿಯರ್ ಲೀಗ್ (ಐಪಿಎಲ್) ನಡೆಯುತ್ತಿದ್ದು, ಭಾರತದಲ್ಲಿರುವ ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ಆಟಗಾರ ಕೆವಿನ್ ಪೀಟರ್‌ಸನ್ ಹುಟ್ಟುಹಾಕಿರುವ ಪ್ರಶ್ನೆ ಇದು. ಕೆವಿನ್ ಪೀಟರ್‌ಸನ್ ಸದ್ಯ ಕಾಮೆಂಟರಿ ಬಾಕ್ಸ್‌ನಲ್ಲಿ ಕಾಣಸಿಗುತ್ತಾರೆ. ಒಂದು ಕಾಲದಲ್ಲಿ ಬೆಂಗಳೂರು ತಂಡದಲ್ಲೂ ಅವರು ಆಡಿದ್ದರು.

ಆದರೆ ಭಾರತದ ರಸ್ತೆ ಮಾರ್ಗದಲ್ಲಿ ಕಾರಿನ ಮೂಲಕ ಅವರು ಪ್ರಯಾಣಿಸುವಾಗ ಅವರು ರಸ್ತೆ ಬದಿಯ ಮರಗಳಿಗೆ ಬಣ್ಣ ಬಳಿದಿರುವುದನ್ನು ಕಂಡು ಈ ಪ್ರಶ್ನೆ ಕೇಳಿದ್ದಾರೆ. ಈ ವಿಡಿಯೋವನ್ನು ಅವರು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದ್ದು, ದಯವಿಟ್ಟು ಯಾರಾದರು ನನಗೆ ವಿವರಿಸುತ್ತೀರಾ ಈ ಮರಗಳಿಗೆ ಬಣ್ಣ ಏಕೆ ಬಳಿಯಲಾಗಿದೆ? ಎಂದು ಪ್ರಶ್ನೆ ಕೇಳಿದ್ದಾರೆ.
ಆದರೆ ಇಷ್ಟು ದಿನ ಇದನ್ನು ಗಮನಿಸದೆ ಇದ್ದ ಮಂದಿ ಈ ಪ್ರಶ್ನೆಗೆ ಒಂದೊಂದು ರೀತಿ ಉತ್ತರ ನೀಡಿದ್ದಾರೆ. ಕೆಲವರು ನಿಮಗೆ ಯಾರಾದರು ಹೇಳಿದರೆ ನಮಗೂ ಹೇಳಿ ಎಂದು ಹೇಳಿದರೆ, ಮತ್ತೆ ಕೆಲವರು ಇದಕ್ಕೆ ಹತ್ತಾರು ಉತ್ತರಗಳ ನೀಡಿದ್ದಾರೆ. ಹಾಗಾದ್ರೆ ಈ ಬಗ್ಗೆ ನಿಮಗೆ ಏನಾದರು ತಿಳಿದಿದ್ಯಾ? ಗೊತ್ತಿಲ್ಲಾ ಅಂದ್ರೆ ನಾವಿಂದು ಈ ಕುರಿತು ಹೇಳುತ್ತೇವೆ ನೋಡಿ.
ಇದರಲ್ಲಿ ಬಹುತೇಕ ಮಂದಿ ನೀಡಿರುವ ಉತ್ತರ ಏನೆಂದರೆ ರಾತ್ರಿ ಹೊತ್ತು ಅಪಘಾತ ತಡೆಯಲೆಂದು ವಾಹನ ಚಾಲಕರಿಗೆ ಮರ ಚೆನ್ನಾಗಿ ಕಾಣಸಲಿ ಎಂದು ಈ ರೀತಿ ಬಣ್ಣ ಬಳಿಯುತ್ತಾರೆ ಎಂದು ಉತ್ತರಿಸಿದ್ದಾರೆ. ಈ ಉತ್ತರ ಸಹ ಸರಿಯಾಗಿದೆ. ಆದ್ರೆ ಈ ಪ್ರಶ್ನೆಗೆ ಇದೊಂದೇ ಉತ್ತರವಲ್ಲ.
ರಸ್ತೆ ಬದಿಯಲ್ಲಿ ಮರಗಳಿಗೆ ಕೆಂಪು ಮತ್ತು ಬಿಳಿ ಬಣ್ಣ ಬಳಿಯುತ್ತಾರೆ. ಆದ್ರೆ ಇದು ಆಯಿಲ್ ಪೇಂಟ್ ಬಳಸಿ ಮಾಡಲಾಗುವ ಬಣ್ಣವಲ್ಲ, ಇದು ಸುಣ್ಣವನ್ನು ಬಳಸಿ ಮಾಡಲಾಗುತ್ತೆ, ಸುಣ್ಣಕ್ಕೆ ನೀರು ಹಾಗೂ ಕೆಂಪು ಕಲರ್ ಹಾಕಿ ಮರಗಳಿಗೆ ಹಚ್ಚಲಾಗುತ್ತದೆ. ಮೊದಲೇ ಹೇಳಿದಂತೆ ರಾತ್ರಿ ವೇಲೆ ವಾಹನ ಚಾಲಕರಿಗೆ ಮರಗಳು ಚೆನ್ನಾಗಿ ಕಾಣಲಿ ಎಂಬುದು ಸಹ ಒಂದು ಕಾರಣವಾಗಿದೆ.
ಇನ್ನೊಂದು ಕಡೆ ಇದೊಂದು ಸರ್ಕಾರದ ಸಮೀಕ್ಷೆಯೂ ಎನ್ನಬಹುದು, ಅರಣ್ಯ ಇಲಾಖೆಯು ರಸ್ತೆ ಬದಿಯಲ್ಲಿ ಎಷ್ಟು ಮರಗಳಿವೆ ಎಂಬುದನ್ನು ತಿಳಿಯಲು ಈ ರೀತಿ ಮಾಡುತ್ತಿತ್ತು. ಇನ್ನೊಂದು ಕಡೆ ಈ ಬಣ್ಣಗಳಿಂದ ಸೂರ್ಯನ ಶಾಖವನ್ನು ಮರಗಳು ತಡೆದುಕೊಳ್ಳಲಿ ಎಂಬ ಕಾರಣವೂ ಅಡಗಿತ್ತು. ನೀವು ಅಡಕೆ ಮರ, ತೆಂಗಿನ ಮರಗಳಿಗೆ ಈ ರೀತಿ ರೈತರು ಸಹ ಬಣ್ಣ ಬಳಿಯುವುದನ್ನು ನೋಡಿರುತ್ತೀರಿ. ಇದರ ಅರ್ಥ ಬಿಸಿಲು ತಡೆಯುವಲ್ಲಿ ಈ ಬಣ್ಣ ನೆರವಾಗಲಿದೆ ಎಂದು ಸಾಬೀತಾಗಿತ್ತು.
ಮರದಲ್ಲಿ ಹೊಸ ಎಲೆಗಳೂ ಚಿಗುರುತ್ತಿದ್ದರೆ ಇಲ್ಲವೆ ಮರ ದುರ್ಬಲವಾಗಿದ್ದರೆ ಅಂತಹ ಮಗಳಿಗೆ ಸುಣ್ಣ ಹಚ್ಚಲಾಗುತ್ತದೆ. ಇದರಿಂದ ಕ್ರಿಮಿ ಕೀಟಗಳು ಸೇರಿದಂತೆ ಸೂರ್ಯನ ಕಿರಣಗಳಿಂದ ಮರ ರಕ್ಷಣೆ ಪಡೆಯುತ್ತದೆ ಎನ್ನಲಾಗಿದೆ. ಇದಿಷ್ಟೇ ಅಲ್ಲದೆ ಇನ್ನು ಹಲವು ಉತ್ತರಗಳನ್ನು ನೆಟ್ಟಿಗರು ಪೀಟರ್‌ಸನ್‌ಗೆ ನೀಡಿದ್ದಾರೆ. ಆದ್ರೆ ನಮ್ಮ ನಡೆವಯೇ ಇರುವ ಇಂತಹ ಹತ್ತು ಹಲವು ವಿಚಾರಗಳ ಕುರಿತು ನಮಗೆ ತಿಳಿಯುವುದೇ ಇಲ್ಲ ಎಂಬುದೇ ಇಲ್ಲಿನ ಅಚ್ಚರಿ ವಿಚಾರವಾಗಿದೆ.



Click it and Unblock the Notifications
