Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಟ್ಯಾರೋ ಕಾರ್ಡ್ ಪ್ರಕಾರ ಇಂಡೋ-ಪಾಕ್ ಹೋರಾಟದಲ್ಲಿ ಗೆಲುವು ಯಾರಿಗೆ?
ಎಲ್ಲರ ಚಿತ್ತ ವರ್ಲ್ಡ್ ಕಪ್‌ನತ್ತ. ಕಾರಣ ಇಂದು ನಡೆಯುತ್ತಿರುವ ಭಾರತ-ಪಾಕ್ ನಡುವಿನ ಮ್ಯಾಚ್. ಪಾಕ್-ಭಾರತ ಕ್ರಿಕೆಟ್‌ನಲ್ಲಿ ಸ್ಪರ್ಧಿಗಳಾದಾಗ ಎರಡು ತಂಡದ ನಡುವಿನ ಹಣಾಹಣಿ ನೋಡುವುದೇ ರೋಚಕ. ಈ ಪಂದ್ಯವನ್ನು ಬರೀ ಪಂದ್ಯವನ್ನಾಗಿ ನೋಡದೆ ಎರಡು ದೇಶದ ನಡುವಿನ ಪ್ರತಿಷ್ಠೆಯ ಕಣ ಎಂಬಂತೆ ನೋಡುವುದರಿಂದಲೇ ಈ ಮ್ಯಾಚ್ ತುಂಬಾನೇ ಗಮನ ಸೆಳೆಯುವುದು. ಭಾರತದ ಪಾಕಿಸ್ತಾನವನ್ನು ಸೋಲಿಸಬೇಕೆಂಬುವುದು ಭಾರತೀಯರ ಆಸೆ, ಅದರಂತೆ ಪಾಕಿಸ್ತಾನಿಯರು ತಾವು ಗೆಲ್ಲಬೇಕೆಂದು ಬಯಸುತ್ತಿದ್ದಾರೆ.
ಭಾರತದ ಗೆಲುವಿಗಾಗಿ ಹಲವರು ಪೂಜೆ, ಹವನಗಳನ್ನು ಕೂಡ ಮಾಡಿಸಿದ್ದಾರೆ, ಭಾರತದ ಪಾಕಿಸ್ತಾನ ವಿರುದ್ಧ ಜಯಗಳಿಸಬೇಕೆಂಬ ಪ್ರಾರ್ಥನೆ, ಆತ್ಮವಿಶ್ವಾಸ ಭಾರತಿಯರಲ್ಲಿದೆ. ಟ್ಯಾರೋ ಕಾರ್ಡ್ ಭವಿಷ್ಯ ಈ ಮ್ಯಾಚ್‌ನಲ್ಲಿ ಯಾರಿಗೆ ಜಯ ಸಿಗಲಿದೆ ಎಂಬುವುದರ ಬಗ್ಗೆ ಹೇಳಲಾಗಿದೆ ನೋಡಿ:

ಟ್ಯಾರೋ ಕಾರ್ಡ್ ಮೂಲಕ ಟಿಂ ಇಂಡಿಯಾ ಭವಿಷ್ಯ
ICC ವರ್ಲ್ಡ್ ಕಪ್ ಮ್ಯಾಚ್‌ನಲ್ಲಿ ಭಾರತ ಎರಡು ಬಾರಿ ಜಯಗಳಿಸಿದೆ. ಟ್ಯಾರೋ ಕಾರ್ಡ್ ಭವಿಷ್ಯ ಪ್ರಕಾರ ಭಾರತ ಈ ಬಾರಿ ಜಯಗಳಿಸುವ ಸಾಧ್ಯತೆ ಬಲವಾಗಿದೆ. ಉತ್ತಮ ಟೀಂ ಸಪೋರ್ಟ್‌ನಿಂದಾಗಿ ಭಾರತ ಜಯಗಳಿಸಲಿದೆ. ಈ ಮ್ಯಾಚ್ ವೀಕ್ಷಕರಿಗೆ ಸಕತ್ ಥ್ರಿಲ್ಲಿಂಗ್ ಆಗಿರಲಿದೆ.
ವರ್ಲ್ಡ್ ಕಪ್ ಮ್ಯಾಚ್‌ನಲ್ಲಿ ಇದುವರೆಗೆ ಪಾಕಿಸ್ತಾನದ ಎದುರು ಭಾರತ ಸೋತಿಲ್ಲ, ಈ ಭಾರಿಯೂ ಆ ಚರಿತ್ರೆ ಮರುಗಳಿಸಲಿದೆ ಎಂಬುವುದೇ ಭಾರತೀಯರ ಆಶಯ. ಭಾರತದ ಪಾಲಿಗೆ ಜಯದ ಲಕ್ಷ್ಮಿ ಒಲಿಯುವಂತಾಗಲಿ.
ಟೀಂ ಪಾಕಿಸ್ತಾನ
ICC ವರ್ಲ್ಡ್ ಕಪ್ 2023ರಲ್ಲಿ ಪಾಕಿಸ್ತಾನ ಕೂಡ ಚೆನ್ನಾಗಿ ಆಡುತ್ತಿದೆ. ಬ್ಯಾಕ್ ಟು ಬ್ಯಾಕ್ ಜಯಗಳಿಸುವ ಮೂಲಕ ತುಂಬಾನೇ ಹುಮ್ಮಸ್ಸಿನಲ್ಲಿದ್ದಾರೆ. ಆದರೆ ಈ ಮ್ಯಾಚ್‌ನಲ್ಲಿ ಪಾಕಿಸ್ತಾನ ಗೆಲ್ಲುವ ಸಾಧ್ಯತೆ ತುಂಬಾ ಕಡಿಮೆಯಿದೆ, ಜಯದ ಓಟಕ್ಕೆ ಬ್ರೇಕ್ ಬೀಳಲಿದೆ ಎಂದು ಟ್ಯಾರೋ ಭವಿಷ್ಯ ಹೇಳಿದೆ.
ಯಾರು ಗೆಲ್ಲುತ್ತಾರೆ-ಸೋಲುತ್ತಾರೆ ಎಂಬುವುದನ್ನು ಕೊನೆಯ ಕ್ಷಣದವರೆಗೆ ಯಾರಿಗೂ ಹೇಳಲು ಸಾಧ್ಯವಿಲ್ಲ. ಎಲ್ಲಾ ಮ್ಯಾಚ್ ಅನ್ನು ಕ್ರೀಡಾಸ್ಪೂರ್ತಿಯಿಂದ ಸ್ವಾಗತಿಸುವಂತೆ ಈ ಮ್ಯಾಚ್ ಅನ್ನೂ ಸ್ವಾಗತಿಸೋಣ... ಭಾರತ ಗೆಲ್ಲಲಿ ಎಂಬುವುದೇ ನಮ್ಮೆಲ್ಲರ ಆಶಯ...



Click it and Unblock the Notifications
