Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮೊಟ್ಟ ಮೊದಲ ಕ್ರಾಂತಿಕಾರಿ ಯಾರು..? ಈತನ ಇತಿಹಾಸ ಗೊತ್ತಾ?
ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ಕೋಟಿ ಕೋಟಿಗೂ ಅಧಿಕ ಮಂದಿ ಇದ್ದಾರೆ. ನಾವು ಅವರಲ್ಲಿ ಕೆಲವೇ ಕೆಲವು ಹೋರಾಟಗಾರರ ಹೆಸರನ್ನು ಮಾತ್ರ ನೆನಪಿಟ್ಟುಕೊಂಡಿರುತ್ತೇವೆ. ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ಯಾರು ಎಂದು ಕೇಳಿದಾಗ, ಎಲ್ಲರೂ ಮೊದಲು ಉಲ್ಲೇಖಿಸುವುದು ಮಹಾತ್ಮ ಗಾಂಧಿ. ಆದರೆ ಮಹಾತ್ಮ ಗಾಂಧೀಜಿಯವರಿಗಿಂತ ಮೊದಲು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕರು ಭಾಗಿಯಾಗಿದ್ದರು.
ಮಹಾತ್ಮಾ ಗಾಂಧಿಯವರಿಗಿಂತ ಮುಂಚೆಯೇ ಮಂಗಲ್ ಪಾಂಡೆ 1827-1857ರ ಅವಧಿಯಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ್ದರು. ಹಾಗೆ ಮೊದಲ ಸ್ವಾತಂತ್ರ್ಯ ಸಂಗ್ರಾಮ ನಡೆದಿದ್ದು 1857ರಲ್ಲಿ ಎಂದು ನಾವೆಲ್ಲ ತಿಳಿದಿದ್ದೇವೆ ಆದರೆ ಇದಕ್ಕೂ ಮೊದಲು ಅಂದರೆ 1759ರಲ್ಲಿ ಮೊಟ್ಟ ಮೊದಲ ಬಾರಿಗೆ ಸ್ವಾತಂತ್ರ್ಯಕ್ಕಾಗಿ ಧ್ವನಿ ಎತ್ತಲಾಗಿತ್ತು.

ಭಾರತದಲ್ಲೇ ಮೊದಲ ಬಾರಿಗೆ ಬ್ರಿಟೀಷರ ವಿರುದ್ಧ ಧ್ವನಿ ಎತ್ತಿದ್ದು ನಾಯಕ ಅಲಗುಮುತ್ತು ಗೋನೆ ಎಂಬ ಹೋರಾಟಗಾರ. ಆತ ತಮಿಳುನಾಡಿನಲ್ಲಿ ಬ್ರಿಟೀಷರ ದಬ್ಬಾಳಿಕೆ, ದಾಸ್ಯದ ವಿರುದ್ಧ ಮೊದಲ ಬಾರಿಗೆ ಧ್ವನಿ ಎತ್ತಿದ್ದ.
ಮಾವೀರನ್ ಅಲಗುಮುತ್ತು ಗೋನೆ 1728 ರಲ್ಲಿ ತಮಿಳುನಾಡಿನ ತೂತುಕುಡಿ ಜಿಲ್ಲೆಯ ಕಟಾಲಂಗುಳಂನ ರಾಜ ಅಂಗಮುತ್ತು ಗೋನೆ ಮತ್ತು ರಾಣಿ ಅಕುಮುತಮ್ಮಾಳ್ ಅವರ ಮಗನಾಗಿ ಜನಿಸಿದರು. 1729 ರಲ್ಲಿ, ಅವನ ಕಿರಿಯ ಸಹೋದರ ಚಿನ್ನ ಅಕುಮುತ್ತು ಗೋನೆ ಜನಿಸಿದನು. 1750 ರಲ್ಲಿ, ರಾಜ ಅಂಗಮುತ್ತು ಗೋನೆ ಅನುಮಂತಕುಡಿ ಯುದ್ಧದಲ್ಲಿ ನಿಧನರಾದರು. ಅದೇ ವರ್ಷದಲ್ಲಿ, ಅಕುಮುತ್ತು ಗೋನೆ ತನ್ನ 22 ನೇ ವಯಸ್ಸಿನಲ್ಲಿ ಕತಲಾಂಗುಳಂನ ರಾಜನಾಗಿ ಅಧಿಕಾರ ವಹಿಸಿಕೊಂಡನು.
ಬ್ರಿಟಿಷರ ವಿರುದ್ಧ ಹೋರಾಟ ನಡೆದದ್ದು 1857ರಲ್ಲಿ ಎಂದು ಹಲವರು ಭಾವಿಸಿದ್ದಾರೆ. ಆದರೆ ಅದಕ್ಕೂ ಮೊದಲು, 1759 ರಲ್ಲಿ, ಹೋರಾಟ ಪ್ರಾರಂಭವಾಯಿತು. ವಾಸ್ತವವಾಗಿ, ಬ್ರಿಟಿಷರ ವಿರುದ್ಧ ಯುದ್ಧ ಮಾಡಿದ ಮೊದಲ ವ್ಯಕ್ತಿ ಅಲಗುಮುತ್ತು ಗೋನೆ.
ತೆರಿಗೆ ಸಂಗ್ರಹಕ್ಕೆ ಬಂದ ಬ್ರಿಟೀಷರಿಗೆ ತಿರುಗೇಟು
ಆ ಸಮಯದಲ್ಲಿ ಬ್ರಿಟೀಷ್ ಕಮಾಂಡರ್ ಆಗಿದ್ದ ಅಲೆಕ್ಸಾಂಡರ್ ಕ್ರೇನ್ ಮತ್ತು ಮಾರುತನಾಯಕಂ ಪಿಳ್ಳೈ (ಖಾನ್ ಸಾಹಿಬ್) ಎಟ್ಟಾಯಪುರಂನ ಶಿಬಿರಗಳಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೆರಿಗೆ ಸಂಗ್ರಹಿಸಲು ಬಂದಿದ್ದರು. ಅವರ ಆಗಮನದ ಬಗ್ಗೆ ತಿಳಿದ ಎತ್ತಪ್ಪನ್, ತಕ್ಷಣವೇ ತನ್ನ ಮಂತ್ರಿಗಳು, ಆಪ್ತ ಸಹಾಯಕರು ಮತ್ತು ಅಲಗುಮುತ್ತು ಗೋನೆ ಅವರೊಂದಿಗೆ ಸಭೆ ನಡೆಸಿದ್ದರು, ಈ ವೇಳೆ ಬ್ರಿಟೀಷರ ತೆರಿಗೆ ನಿಮಯ ಪ್ರಕಾರವಾಗಿರದೆ ಭೂ ತೆರಿಗೆ, ಕೃಷಿ ಭೂಮಿ ತೆರಿಗೆ, ಮನೆಗಳಿಗೂ ತೆರಿಗೆ ವಿಧಿಸಿದ್ದರು. ಇದರಿಂದ ಸಿಟ್ಟಿಗೆದ್ದ ರಾಜ ಇನ್ನು ಮುಂದೆ ಬ್ರಿಟೀಷರಿಗೆ ಯಾವುದೇ ತೆರಿಗೆ ನೀಡುವುದಿಲ್ಲ ಎಂದು ಈ ಸಭೆಯಲ್ಲಿ ಘೋಷಿಸಿ ಬಿಟ್ಟರು.
ಈ ವಿಚಾರ ತಿಳಿದ ಬ್ರಿಟೀಷರು ಸಿಟ್ಟಿಗೆದ್ದರು. ಅಲ್ಲದೆ ನೇರವಾಗೊ ಯುದ್ಧ ಘೋಷಣೆ ಮಾಡಿಯೇ ಬಿಟ್ಟರು. ಅಂತಿಮವಾಗಿ ಯುದ್ಧ ಘೋಷಣೆಗೂ ಮುನ್ನ ಕ್ಷಮಾಪಣ ಪತ್ರ ಬರೆದು ತೆರಿಗೆ ಜೊತೆಗೆ ದಂಡ ಪಾವತಿಸುವಂತೆ ರಾಜನಿಗೆ ಹೇಳಲಾಗಿತ್ತು. ಆದರೆ ಆತ ಯುದ್ಧ ಮಾಡಿಯೇ ತೀರುತ್ತೇನೆ ಎಂದಿದ್ದ. ಹೀಗಾಗಿ ತನ್ನ 248 ಸೈನಿಕರೊಂದಿಗೆ ಆತ ಯುದ್ಧಕ್ಕೆ ಸನ್ನದ್ದನಾದ. ಈ ಯುದ್ಧ ಬರೋಬ್ಬರಿ 3 ಗಂಟೆಗಳ ನಡೆದಿತ್ತು. ಆದರೆ ಯುದ್ಧದಲ್ಲಿ ರಾಜನಿಗೆ ಸೋಲಾಯಿತು. ಎಲ್ಲರನ್ನೂ ಬಂಧಿಸಿ ನಡುಕತ್ತೂರು ಎಂಬ ಸ್ಥಳಕ್ಕೆ ಕರೆದೊಯ್ಯಲಾಯಿತು.
ಇದಾದ ಬಳಿಕ ಎಲ್ಲರನ್ನು ಪಿರಂಗಿಗಳ ಮುಂದೆ ಕಟ್ಟಲಾಗಿತ್ತು, ಬಳಿಕ ಕ್ಷಮೆಯಾಚಿಸಿ ತೆರಿಕೆ ಕಟ್ಟಲು ಒತ್ತಾಯಿಸಲಾಗಿತ್ತು, ಆದರೆ ರಾಜ ತೆರಿಗೆ ಪಾವತಿಗೆ ನಿರಾಕರಿಸಿದ್ದ ಇದರ ಪರಿಣಾಮವಾಗಿ, 248 ಸೈನಿಕರ ಬಲಗೈಗಳನ್ನು ಕತ್ತರಿಸಲಾಯಿತು ಮತ್ತು ಅಕು ಮುತ್ತುಕ್ಕೋನ್ ಮತ್ತು ಅವನ 6 ಕಮಾಂಡರ್‌ಗಳು ಎದೆಗೆ ಗುಂಡು ಹಾರಿಸಿದರು.
ಬ್ರಿಟಿಷರ ವಿರುದ್ಧ ಯುದ್ಧ ಮಾಡಿದ ಮೊದಲ ಭಾರತೀಯ ವೀರ ಅಲುಗು ಮುತ್ತು ಗೊನೆಗೂ ಜುಲೈ 11ರಂದು ಗಲ್ಲಿಗೇರಿಸಲಾಗಿತ್ತು ಎಂದು ಹೇಳಲಾಗಿದೆ. ಇವರ ನೆನಪಿನಲ್ಲಿ ಡಿಸೆಂಬರ್ 26, 2015 ರಂದು ಭಾರತ ಸರ್ಕಾರವು ಮಧುರೈನಲ್ಲಿ ಅಕುಮುತ್ತುಕ್ಕೋನ್ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿತು. ಈತನನ್ನು ದೇಶದ ಮೊಟ್ಟ ಮೊದಲ ಸ್ವಾತಂತ್ರ್ಯ ಸೇನಾನಿ ಎಂದು ಕರೆಯಲಾಗಿದೆ. ಅಲ್ಲದೆ ಬ್ರಿಟೀಷರ ವಿರುದ್ಧ ಹೋರಾಡಿದ ಮೊಟ್ಟ ಮೊದಲ ಭಾರತೀಯ ಎಂದು ಗುರುತಿಸಲಾಗಿದೆ.



Click it and Unblock the Notifications
