Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಯಾರು ಈ ಲಡ್ಡು ಮುತ್ಯಾ..? ಅವರೆಂತ ಪವಾಡ ಪುರುಷ ಗೊತ್ತಾ?
ನಾವು ಆನ್‌ಲೈನ್ ಎಷ್ಟೊಂದು ರೀತಿಯ ವಿಡಿಯೋಗಳು ವೈರಲ್ ಆಗುತ್ತವೆ. ಕೆಲವೊಂದು ನಮ್ಮ ಅಚ್ಚರಿಗೆ ಕಾರಣವಾಗಿರುತ್ತವೆ. ಈ ರೀತಿಯ ವಿಡಿಯೋಗಳಲ್ಲಿ ಇತ್ತೀಚಿಗೆ ಭಾರೀ ವೈರಲ್ ಆಗಿರುವುದು ಈ ಲಡ್ಡು ಮುತ್ಯಾ ಎಂಬ ವಿಡಿಯೋ. ಪವಾಡ ಪುರುಷ ಎಂಬಂತೆ ವಿಶೇಷ ಚೇತನ ವ್ಯಕ್ತಿಯೊಬ್ಬನ ವಿಡಿಯೋ ಹಾಗೂ ಉತ್ತರ ಕರ್ನಾಟಕ ಶೈಲಿಯ ಹಾಡಿನಿಂದಿಗೆ ಇಂಟರ್‌ನೆಟ್‌ನಲ್ಲಿ ಭಾರೀ ಸದ್ದು ಮಾಡುತ್ತಿದೆ.
ನೀವು ಆನ್‌ಲೈನ್‌ನಲ್ಲಿ ಯಾವುದೇ ಸಮಯದಲ್ಲಿ ಈ ವಿಡಿಯೋ ನೋಡಬಹುದು. ಆತ ತನ್ನ ಕೈಯಿಂದ ತಿರುಗುವ ಫ್ಯಾನ್ ಅನ್ನು ನಿಲ್ಲಿಸಿ ಅದರ ಕೊಳೆಯನ್ನು ಭಕ್ತರ ಹಣೆಗೆ ಹಚ್ಚುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೇ ರೀತಿ ನೂರಾರು ಮಂದಿ ವಿಡಿಯೋ ಮಾಡಿ ಹಂಚಿಕೊಂಡಿರುವುದನ್ನು ನಾವು ನೋಡಬಹುದು.

ಹಾಗಾದ್ರೆ ಈತ ಯಾರು? ಈ ಲಡ್ಡು ಮುತ್ಯಾ ಎಂದು ಯಾರನ್ನು ಕರೆಯುತ್ತಾರೆ. ನಿಜವಾಗಿಯೂ ಅವರು ಪವಾಡ ಪುರುಷರಾಗಿದ್ದರಾ? ಅವರ ಹೆಸರು ಹೇಳಿಕೊಂಡಿರುವ ಇವರೆಲ್ಲಾ ಪವಾಡ ಪುರುಷರೇನಾ? ಎಂಬ ಕುರಿತ ಮಾಹಿತಿ ನಾವಿಂದು ತಿಳಿದುಕೊಳ್ಳೋಣ.
ಬಾಲಕೋಟೆಯಲ್ಲಿರುವ ಸೀಮೆಕೇರಿಯಲ್ಲಿ ಲಡ್ಡು ಮುತ್ಯಾರ ಮಠ ಇದೆ. ಈ ಮಠ ಬಿಟ್ಟರೆ ಬೇರೆ ಎಲ್ಲಿಯೂ ಅವರ ಮಠಗಳು, ಮೂರ್ತಿಗಳು ನಿಮಗೆ ನೋಡಲು ಸಿಗುವುದಿಲ್ಲ ಹಾಗಾದ್ರೆ ಯಾರು ಈ ಲಡ್ಡು ಮುತ್ಯಾ? ಲಡ್ಡು ಮುತ್ಯಾ ಎಂದು ಹೆಸರಾಗಿದ್ದ ವಿರಾಗಿಯೊಬ್ಬರ ನಿಜವಾದ ಹೆಸರು ಮಲ್ಲಯ್ಯ ಎಂದು ಅವರು ಬಾಗಲಕೋಟೆಯ ಸೀಮಿಕೇರಿ ಎಂಬ ಚಿಕ್ಕ ಹಳ್ಳಿಯಲ್ಲಿದ್ದವರು. ಅವರೇ ಈಗನ ಲಡ್ಡು ಮುತ್ಯಾ ಹೆಸರಿಗೆ ಕಾರಣರಾದವರು.
ಅವರು ಮದುವೆಯಾದ ಬಳಿಕ ಪತ್ನಿಯ ಬಿಟ್ಟು ವಿರಾಗಿಯಾದರಂತೆ. ಅಲ್ಲದೆ ಊರು ಊರು ಅಲೆಯುವುದು ಮಾಡುತ್ತಿದ್ದರೆ. ಆದ್ರೆ ಬರು ಬರುತ್ತಾ ಇವರು ಹೇಳುತ್ತಿದ್ದ ಮಾತು ನೆರವೇರಲು ಆರಂಭಿಸಿದ್ದವು. ಅವರು ಯಾವ ಮನೆಯಲ್ಲಿ ಅಕ್ಕಿ ಪಡೆದು ಹೋಗುತ್ತಿದ್ದರೋ ಅವರ ಮನೆಯಲ್ಲಿ ಸಂತೋಷ ನೆಲೆಸುತ್ತಿತ್ತು ಎಂದು ಜನ ನಂಬಿದ್ದರು. ಹಾಗೆ ಅಂಗಡಿಗಳಿಗೆ ಅವರನ್ನು ಕರೆಸುತ್ತಿದ್ದರು, ಇದರಿಂದ ಅವರಿಗೆ ಒಳ್ಳೆಯದಾಗುತ್ತಿತ್ತು ಎನ್ನುತ್ತಿದ್ದರು.
ಹೀಗೆ ಬರು ಬರುತ್ತಾ ಅವರು ಊರಿನಲ್ಲಿ ಫೇಮಸ್ ಆದರು ಪವಾಡ ಪುರುಷ ಎನಿಸಿಕೊಂಡರು. ನಂತರ ಒಂದೇ ಜಾಗದಲ್ಲಿ ಕುಳಿತು ಯಾವಾಗಲು ಧ್ಯಾನ ಮಾಡುತ್ತಿದ್ದರಂತೆ. ಹೀಗಿರುವಾಗ ಅವರು 1993ರ ಆಗಸ್ಟ್ 2ರಂದು ಲಿಂಗೈಕ್ಯರಾದರು ಎಂದು ಹೇಳಲಾಗಿದೆ. ಅವರು ಲಿಂಗೈಕ್ಯರಾದ ಸ್ಥಳದಲ್ಲಿ ಈಗ ಮಠವಿದೆ. ಅವರ ಹೆಸರಲ್ಲಿ ಇಂದಿಗೂ ಪವಾಡ ನಡೆಯುತ್ತದೆ ಎಂದು ಹೇಳಲಾಗುತ್ತದೆ.
ಅವರು ಬದುಕಿದ್ದಾಗ ತಲೆಗೆ ಒಂದು ಪೇಟ ಕಟ್ಟುತ್ತಿದ್ದರು ಹಾಗೆ ಗೋಣಿಯಿಂದ ಮಾಡಿದ್ದ ಒಂದು ಬಟ್ಟೆ ಧರಿಸುತ್ತಿದ್ದರು. ಇದರಿಂದಲೇ ಅವರಿಗೆ ಲಡ್ಡು ಮುತ್ಯಾ ಹೆಸರು ಬಂದಿದೆ ಎಂದು ಸಹ ಹೇಳುತ್ತಾರೆ. ಆದ್ರೆ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಅವರ ಹೆಸರನ್ನು ಬಳಸಿಕೊಂಡು ವಿಡಿಯೋ ಮಾಡುತ್ತಿರುವುದು ಅವರ ಭಕ್ತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಪವಾಡ ಪುರುಷರ ಹೆಸರಿನಲ್ಲಿ ರೀಲ್ಸ್ ಮಾಡುವುದು ವಿಡಿಯೋ ಮಾಡುವುದು ಹೆಚ್ಚಾದ ಹಿನ್ನೆಲೆ ಈ ಹಿಂದೆ ಮಠ ಆಕ್ರೋಶ ಹೊರಹಾಕಿತ್ತು. ಮುತ್ಯಾ ಅವರನ್ನು ಜನರು ದೆವರಂತೆ ಪೂಜಿಸುತ್ತಾರೆ ಅವರ ಹೆಸರಿನಲ್ಲಿ ಯಾವುದೆ ವಿಡಿಯೋ ಮಾಡಬಾರದಂತೆ ಹೇಳಿತ್ತು. ಆದ್ರೆ ಇತ್ತೀಚಿಗೆ ಈ ವಿಡಿಯೋಗಳು ಮತ್ತಷ್ಟು ಹೆಚ್ಚಾಗಿವೆ. ವಿಶೇಷ ಚೇತನ ವ್ಯಕ್ತಿಯೊಬ್ಬನನ್ನು 4 ಮಂದಿ ಎತ್ತಿಕೊಂಡು ಫ್ಯಾನ್‌ಗೆ ಕೈ ಇಟ್ಟು ನಿಲ್ಲಿಸುವ ವಿಡಿಯೋ ವೈರಲ್ ಆದ ಬಳಿಕ ಈ ರೀಲ್ಸ್ ಮತ್ತಷ್ಟು ಕಡೆ ಹರಡಿದೆ. ಉತ್ತರ ಭಾರತೀಯರು ಕೂಡ ಇದೇ ರೀತಿಯ ವಿಡಿಯೋ ಮಾಡುತ್ತಿದ್ದಾರೆ.



Click it and Unblock the Notifications
