Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಯಾರು ಈ ಭೀಷ್ಮ? ಪಿತೃಪಕ್ಷಕ್ಕೂ ಮಹಾಭಾರತದ ಆತನಿಗೂ ಇರುವ ಸಂಬಂಧ ಗೊತ್ತಾ?
ಪಿತೃ ಪಕ್ಷ ಆರಂಭಗೊಂಡಿದೆ. ಹಿಂದೂ ಧರ್ಮದಲ್ಲಿ ಪೂರ್ವಜರಿಗೆ ಪಿಂಡ ಪ್ರದಾನ ಮಾಡುವುದು, ಅನ್ನ ಆಹಾರ ನೀಡುವ ಒಂದು ಸಂಪ್ರದಾಯ ಇದಾಗಿದೆ. ಭಾದ್ರಪದ ಮಾಸದ ಹುಣ್ಣಿಮೆಯ ದಿನಾಂಕದಿಂದ ಪ್ರಾರಂಭವಾಗುತ್ತದೆ, ಇದು ಅಶ್ವಿನ್ ಮಾಸದ ಅಮಾವಾಸ್ಯೆಯಂದು ಕೊನೆಗೊಳ್ಳುತ್ತದೆ. ಇದನ್ನು ಮಹಾಲಯ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ.
ಪಿತೃ ಪಕ್ಷದ ಕೊನೆಯ ದಿನವನ್ನು ಸರ್ವಪಿತೃ ಅಮಾವಾಸ್ಯ ಎಂದು ಕೂಡ ಕರೆಯಲಾಗುತ್ತದೆ. ಇದೇ ಸೆಪ್ಟೆಂಬರ್ 21ರಂದು ಕೊನೆಯ ದಿನವಾಗಿದೆ. ನಮ್ಮ ಪೂರ್ವಜರಿಗೆ ಕೃತಜ್ಞತೆ ಮತ್ತು ಗೌರವವನ್ನು ವ್ಯಕ್ತಪಡಿಸಲು ಶ್ರಾದ್ಧ, ತರ್ಪಣ ಮತ್ತು ಪಿಂಡದಾನದಂತಹ ವಿಧಿಗಳನ್ನು ನಡೆಸಲಾಗುತ್ತದೆ. ಹಾಗೆ ಈ ದಿನವು ಮಹಾಭಾರತದ ಭೀಷ್ಮನ ನೆನೆಯುವುದು ನೋಡಬಹುದು.

ಇಂದು ಪೂರ್ವಜನರ ನೆನೆದು ಪಿತೃ ಪಕ್ಷ ಆಚರಿಸುವುದಕ್ಕೂ ಮಹಾಭಾರತದ ಭೀಷ್ಮ ಪಿತಾಮಹನಿಗೂ ಸಂಬಂಧವಿದೆ. ಹಾಗಾದ್ರೆ ಪಿತೃ ಪಕ್ಷದಲ್ಲಿ ಭೀಷ್ಮನ ನೆನೆಯುವುದು ಏಕೆ ಎಂಬುದು ನಿಮಗೆ ಗೊತ್ತಾ? ಮಹಾಭಾರತದಲ್ಲಿ ಭೀಷ್ಮ ಪಿತಾಮಹರು ತಮ್ಮ ದೇಹವನ್ನು ತೊರೆದಾಗ, ಇಡೀ ಕುರು ಕುಲವು ದುಃಖದಲ್ಲಿ ಮುಳುಗಿತು ಎಂದು ಉಲ್ಲೇಖಿಸಲಾಗಿದೆ.
ಭೀಷ್ಮರ ಮರಣದ ನಂತರ ಪಾಂಡವರು ಅಂತ್ಯಕ್ರಿಯೆಗಳ ನೆರವೇರಿಸಲು ಮುಂದಾದರು ಹಾಗೆ ಪಿಂಡದಾನದ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತುಕೊಂಡರು. ಹಾಗೆ ಧರ್ಮರಾಜ ಯುಧಿಷ್ಠಿರನು ಧರ್ಮ ಮತ್ತು ನೀತಿಯನ್ನು ಅನುಸರಿಸಿ ವಿಧಿಗಳನ್ನು ಮುನ್ನಡೆಸಿದನು. ಅರ್ಜುನನು ತನ್ನ ಬಾಣಗಳಿಂದ ಅಗ್ಮಿಯನ್ನು ಭೂಮಿಗಿಳಿಸಿನು, ಅದೇ ಸಮಯದಲ್ಲಿ ನಕುಲ ಹಾಗೂ ಸಹದೇವರು ಮಂತ್ರಗಳ ಪಠಿಸಿದರು ಎಂದು ಹೇಳಲಾಗಿದೆ. ಹಾಗೆ ಆಹುತಿ ಮತ್ತು ಜಲನು ಅರ್ಪಣೆ ಮಾಡಿದನು.
ಭೀಷ್ಮ ಪಿತಾಮಹ ಶ್ರಾದ್ಧದಲ್ಲಿ ಎಲ್ಲಾ ಐವರು ಸಹೋದರರು ಭಾಗಿಯಾಗಿದ್ದರು. ಹೀಗಾಗಿ ಮಹಾಭಾರತದಲ್ಲಿ ನಡೆದ ಈ ಆಚರಣೆಯು ಕರ್ತವ್ಯ ಎಂದು ಪರಿಗಣಿಸಲ್ಪಟ್ಟಿತು. ಭೀಷ್ಮ ಪಿತಾಮಹರ ಪಿಂಡದಾನದಿಂದ, ಯುದ್ಧಭೂಮಿಯಲ್ಲಿ ಎಷ್ಟೇ ಮಹಾನ್ ಯೋಧ ಬಿದ್ದರೂ, ಧರ್ಮ ಮತ್ತು ಕರ್ತವ್ಯವನ್ನು ಅನುಸರಿಸುವುದು ಜೀವನದ ದೊಡ್ಡ ಪಾಠ ಎಂದು ಪರಿಗಣಿಸಲಾಗಿದೆ.
ಇಂದಿಗೂ ಸಹ ಭೀಷ್ಮ ಅಷ್ಟಮಿಯ ದಿನವನ್ನು ಪೂರ್ವಜರಿಗೆ ತರ್ಪಣ ಮತ್ತು ಪಿಂಡ ದಾನಕ್ಕೆ ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ. ಭೀಷ್ಮ ಪಿತಾಮಹನಿಗೆ ಪಿಂಡ ಪ್ರದಾನ ಮಾಡಿದ ದಿನದಂದೇ ಪೂರ್ವಜರಿಗೂ ಪಿಂಡ ದಾನ ಮಾಡುವುವು ಅನ್ನಾಹಾರ ಹಾಕುವುದು ನೋಡಬಹುದು.
ಭೀಷ್ಮ ಏಕೆ ಮುಖ್ಯ?
ಮಹಾಭಾರತದ ಭೀಷ್ಮ ಪಿತಾಮಹನು ಗಂಗೆಯ 8ನೇ ಮಗ. ಉಳಿದ 7 ಮಂದಿಯನ್ನು ಗಂಗಾ ನದಿಗೆ ಎಸೆಯಲಾಗಿತ್ತಂತೆ. ಶಾಂತನು ಹಾಗೂ ಗಂಗೆಯ ಪುತ್ರನಾದ ಭೀಷ್ಮನು ಚಿಕ್ಕಮ್ಮನಿಂದ ಮಾತು ಪಡೆದುಕೊಂಡನು. ಗಂಗೆಯ ಮರಣದ ನಂತರ ಶಾಂತನು ಸತ್ಯವತಿಯ ಮದುವೆಯಾಗಲು ಇಚ್ಛಿಸಿದನು. ಆದ್ರೆ ಸತ್ಯವತಿಯು ಭೀಷ್ಮನ ಬಳಿ ಬಂದು ಶಾಂತನನ್ನು ವಿವಾಹವಾಗಬೇಕಾದರೆ ತನ್ನ ಪುತ್ರರನ್ನು ಹಸ್ತಿನಾಪುರದ ಸಿಂಹಾಸನದಲ್ಲಿ ಕೂರುವಂತೆ ಮಾಡಬೇಕು ಎಂದು ಮಾತುಪಡೆದಳು. ಯಾಕೆಂದರೆ ಭೀಷ್ಮನು ಒಂದು ವೇಳೆ ಮದುವೆಯಾದರೆ ಆತನ ಪುತ್ರರು ಹಸ್ತಿನಾಪುರದ ರಾಜರಾಗುತ್ತಾರೆ ಎಂಬುದು ಸತ್ಯವತಿಯ ಉಪಾಯವಾಗಿತ್ತು.
ಸತ್ಯವತಿಯ ಮಾತಿಗೆ ಒಪ್ಪಿದ ಭೀಷ್ಮನು ಕೊನೆಯವರೆಗೂ ಮದುವೆಯಾಗದೆ ಬ್ರಹ್ಮಚಾರಿಯಾಗಿ ಉಳಿಯುವುದಾಗಿ ಮಾತು ನೀಡಿದ. ಈ ವಿಚಾರ ತಿಳಿದ ಶಾಂತನು ಪುತ್ರನ ಪಿತೃ ಪ್ರೇಮ ಕಂಡು ವರ ನೀಡಿದನು. ನಿನ್ನ ಸಾವು ನೀನು ಬಯಸಿದಾಗ ಬರಲಿದೆ ಎಂದು ಹೇಳಿದನು. ಹಾಗೆ ಭೀಷ್ಮನ ಪ್ರತಿಜ್ಞೆಯನ್ನು ಮುಂದೆಯೂ ನೆನೆಯುತ್ತಾರೆ ಎಂದು ಹೇಳಿದನಂತೆ.
ಇನ್ನು ಭೀಷ್ಮನು ಕೂಡ ಅರ್ಜುನನ ಬಾಣದಿಂದ ಪ್ರಾಣ ಬಿಡಬೇಕಾಯಿತು. ಆದ್ರೆ ಮಾಘ ಮಾಸದ ಶುಕ್ಲ ಪಕ್ಷ ಅರ್ಧ ಬಂದಿದೆ. ಈಗ ನಾನು ನನ್ನ ದೇಹವನ್ನು ಬಿಡಲು ಬಯಸುತ್ತೇನೆ ಎಂದು ಭೀಷ್ಮ ಹೇಳಿಕೊಂಡನು, ಹೀಗಾಗಿ ಭೀಷ್ಮನ ಮರಣದ ನಂತರ ಪಾಂಡವರು ಸೇರಿ ಪಿಂಡ ಪ್ರದಾನ ಮಾಡಿದ್ದರು.



Click it and Unblock the Notifications
