ಬೂಮ್ರಾ, ಜಡೇಜಾ, ಅಯ್ಯರ್: ಮೂವರಲ್ಲಿ ಯಾರು ಅತಿ ಶ್ರೀಮಂತ? ಆಸ್ತಿ ವಿವರ ಇಲ್ಲಿದೆ

ಕ್ರಿಕೆಟ್ ಲೋಕದಲ್ಲಿ ಡಿಸೆಂಬರ್ 6 ಒಂದು ವಿಶೇಷ ದಿನ. ಒಂದಲ್ಲ, ಎರಡಲ್ಲ, ಮೂವರು ಮಹಾನ್ ಕ್ರಿಕೆಟಿಗರಾದ ಜಸ್ಪ್ರಿತ್ ಬುಮ್ರಾ (Jaspreet Bumrah), ರವೀಂದ್ರ ಜಡೇಜಾ (Ravindra Jadeja) ಹಾಗೂ ಶ್ರೇಯಸ್ ಐಯ್ಯರ್ (Shreyas Iyer) ಅವರ ಹುಟ್ಟುಹಬ್ಬ ಇಂದೇ. ಈ ಮೂವರು ಭಾರತೀಯ ಕ್ರಿಕೆಟ್‌ನ ಪ್ರಮುಖ ತಾರೆಯರಾಗಿದ್ದು, ಅವರ ಜನ್ಮದಿನ (Birthday) ಒಂದೇ ದಿನ ಬರುವುದು ಅಪರೂಪದ ಸಂಗತಿಯಾಗಿದೆ.

ಮೈದಾನದಲ್ಲಿ ಇವರ ಪ್ರತಿಭೆಗೆ ಇಡೀ ದೇಶವೇ ಮಾರುಹೋಗಿದೆ. ಬುಮ್ರಾ ಅವರ ದಾಹಕ ಬೌಲಿಂಗ್, ಜಡೇಜಾ ಅವರ ಸಮಗ್ರ ಆಟದ ಶಕ್ತಿ ಮತ್ತು ಐಯ್ಯರ್ ಅವರ ಕ್ಲಾಸಿಕ್ ಬ್ಯಾಟಿಂಗ್ ಟೀಮ್ ಇಂಡಿಯಾಕ್ಕೆ ಅನೇಕ ಗೆಲುವು ತಂದುಕೊಟ್ಟಿದೆ. ಆದರೆ, ಈ ಮೂವರು ತಾರಾ ಕ್ರಿಕೆಟಿಗರಲ್ಲಿ ಯಾರು ಅತಿ ಹೆಚ್ಚು ಸಂಪಾದನೆ (Bumrah Jadeja Shreyas Iyer Net worth) ಮಾಡಿದ್ದಾರೆ ಎಂಬ ಪ್ರಶ್ನೆ ಕ್ರಿಕೆಟ್ ಅಭಿಮಾನಿಗಳಲ್ಲಿ ಪದೇ ಪದೇ ಮೂಡುತ್ತದೆ.

Bumrah vs Jadeja vs Shreyas Iyer Birthday

ಆದಾಯ, ನಿವ್ವಳ ಮೌಲ್ಯ, ಮತ್ತು ಬ್ರ್ಯಾಂಡ್ ಬೆಲೆಯ ವಿಷಯದಲ್ಲಿ ಯಾರು ಮುಂದಿದ್ದಾರೆ ಎಂಬುದನ್ನು ತಿಳಿದುಕೊಳ್ಳುವುದು ಇನ್ನಷ್ಟು ಕುತೂಹಲಕಾರಿಯಾಗಿದೆ. ಕೋಟ್ಯಧಿಪತಿಗಳಾದ ಈ ಕ್ರಿಕೆಟಿಗರ ಸಂಪಾದನೆಯ ವಿವರ ಇಲ್ಲಿದೆ.

ಬೂಮ್ ಬೂಮ್ ಬುಮ್ರಾ

"ಬೂಮ್ ಬೂಮ್ ಬುಮ್ರಾ" ಎಂದೇ ಖ್ಯಾತಿ ಪಡೆದ ಜಸ್ಪ್ರಿತ್ ಬುಮ್ರಾ ಬಗ್ಗೆ ಮೊದಲು ತಿಳಿದುಕೊಳ್ಳೋಣ. ಡಿಸೆಂಬರ್ 6ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುವ ಇವರು ತಮ್ಮ ಅದ್ಭುತ ಬೌಲಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. 1993ರಲ್ಲಿ ಅಹಮದಾಬಾದ್‌ನಲ್ಲಿ ಜನಿಸಿದ ಬುಮ್ರಾ, ಭಾರತ ಮತ್ತು ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ತಮ್ಮ ಅಸಾಧಾರಣ ಮತ್ತು ನಿರ್ಣಾಯಕ ಪ್ರದರ್ಶನಗಳಿಂದ ಟೀಮ್ ಇಂಡಿಯಾಕ್ಕೆ ಅನೇಕ ಬಾರಿ ಗೆಲುವು ತಂದುಕೊಟ್ಟಿರುವ ಬುಮ್ರಾ, ಸಂಪಾದನೆಯ ವಿಷಯದಲ್ಲೂ ಮುಂದಿದ್ದಾರೆ. ಅವರ ನಿವ್ವಳ ಆಸ್ತಿ ಸುಮಾರು ₹60 ಕೋಟಿ ಎಂದು ಅಂದಾಜಿಸಲಾಗಿದೆ. ಇವರು ತಮ್ಮ ಅದ್ಭುತ ಬೌಲಿಂಗ್ ಮೂಲಕ ಪ್ರಪಂಚದಾದ್ಯಂತ ಅಭಿಮಾನಿಗಳನ್ನು ಗಳಿಸಿದ್ದಾರೆ.

ಶ್ರೇಯಸ್ ಐಯ್ಯರ್

ಕ್ರಿಕೆಟಿಗ ಶ್ರೇಯಸ್ ಐಯ್ಯರ್ ಕೂಡ ಡಿಸೆಂಬರ್ 6ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಾರೆ. 1994ರಲ್ಲಿ ಮುಂಬೈನಲ್ಲಿ ಜನಿಸಿದ ಇವರು ಬಾಲ್ಯದಿಂದಲೇ ಶ್ರೇಷ್ಠ ಕ್ರಿಕೆಟಿಗರಾಗುವ ಕನಸು ಕಂಡು, ಅದನ್ನು ನನಸಾಗಿಸಲು ಸಾಕಷ್ಟು ಪರಿಶ್ರಮ ವಹಿಸಿದ್ದಾರೆ. ಇಂದು ದೇಶ-ವಿದೇಶಗಳಲ್ಲಿ ಕ್ರಿಕೆಟಿಗರಾಗಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ.

ಆಟದಲ್ಲಿ ಎಷ್ಟು ನುರಿತರೋ, ಸಂಪಾದನೆಯಲ್ಲೂ ಶ್ರೇಯಸ್ ಅಷ್ಟೇ ಮುಂದಿದ್ದಾರೆ. ಅವರ ನಿವ್ವಳ ಆಸ್ತಿ ಸುಮಾರು ₹80 ಕೋಟಿ ಎಂದು ವರದಿಗಳು ತಿಳಿಸುತ್ತವೆ. 2025ರ ಐಪಿಎಲ್ ಹರಾಜಿನಲ್ಲಿ ಇವರನ್ನು ಪಂಜಾಬ್ ಕಿಂಗ್ಸ್‌ ₹27.75 ಕೋಟಿಗೆ ಖರೀದಿಸಿದ್ದು, ಐಪಿಎಲ್ ಇತಿಹಾಸದಲ್ಲಿ ಎರಡನೇ ಅತ್ಯಂತ ದುಬಾರಿ ಆಟಗಾರರಾಗಿದ್ದಾರೆ.

ಶ್ರೇಯಸ್ ಐಯ್ಯರ್ ಅವರ ಆದಾಯದ ಮೂಲಗಳೆಂದರೆ ಕ್ರಿಕೆಟ್ ಪಂದ್ಯಗಳು, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮತ್ತು ವಿವಿಧ ಬ್ರಾಂಡ್‌ಗಳ ಜಾಹೀರಾತುಗಳು. ಇವರು ಬ್ಯಾಟಿಂಗ್ ಕ್ಷೇತ್ರದ ಅದ್ಭುತ ಪ್ರದರ್ಶನಗಾರರಾಗಿದ್ದಾರೆ.

ಸರ್ ರವೀಂದ್ರ ಜಡೇಜಾ

ಈಗ ರವೀಂದ್ರ ಜಡೇಜಾ ಬಗ್ಗೆ ನೋಡೋಣ. ಇವರ ಹುಟ್ಟುಹಬ್ಬವೂ ಡಿಸೆಂಬರ್ 6ರಂದೇ. ರವೀಂದ್ರ ಜಡೇಜಾ ಅವರು ಟಾಪ್ ಆಲ್‌ರೌಂಡರ್ ಆಗಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಪರಿಣತರಾಗಿದ್ದಾರೆ. 1988ರಲ್ಲಿ ಗುಜರಾತ್‌ನ ಜಾಮ್‌ನಗರದಲ್ಲಿ ಜನಿಸಿದ ಇವರು ತಮ್ಮ ಕುಟುಂಬದೊಂದಿಗೆ "ರಾಯಲ್ ನವಘನ್" ಎಂಬ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ.

ಈ ಆಟಗಾರನ ನಿವ್ವಳ ಮೌಲ್ಯ ಕೋಟಿಗಳಲ್ಲಿದೆ. ಅವರ ಬಳಿ ಐಷಾರಾಮಿ ಬಂಗಲೆಗಳು, ವಿಶಾಲವಾದ ಫಾರ್ಮ್ ಹೌಸ್‌ಗಳಿವೆ. ಇವುಗಳ ಜೊತೆಗೆ, ಅವರು ಕುದುರೆ ಸಾಕಣೆಯ ವ್ಯವಹಾರವನ್ನೂ ನಡೆಸುತ್ತಾರೆ. ಇದು ಅವರ ಆಸ್ತಿ ಸಂಗ್ರಹಕ್ಕೆ ಮತ್ತಷ್ಟು ಸೇರ್ಪಡೆಯಾಗಿದೆ.

ವರದಿಗಳ ಪ್ರಕಾರ, ರವೀಂದ್ರ ಜಡೇಜಾ ಅವರ ಒಟ್ಟು ನಿವ್ವಳ ಆಸ್ತಿ ಸುಮಾರು ₹120 ಕೋಟಿಗಳಷ್ಟಿದೆ. ಕ್ರಿಕೆಟ್‌ ಆಟದ ಹೊರತಾಗಿ, ಜಾಹೀರಾತುಗಳು ಮತ್ತು ಇತರೆ ವ್ಯವಹಾರಗಳ ಮೂಲಕವೂ ಇವರು ಸಂಪಾದನೆ ಮಾಡುತ್ತಾರೆ. ಈ ಮೂವರು ಪ್ರತಿಭಾವಂತ ಕ್ರಿಕೆಟಿಗರಲ್ಲಿ ಜಡೇಜಾ ಅವರೇ ಅತಿ ಶ್ರೀಮಂತರಾಗಿದ್ದಾರೆ.

English summary

Who is Richer Cricketer? Bumrah vs Jadeja vs Shreyas Net Worth Comparison & IPL Salary

Birthday Special: Who is Richer Cricketer? Bumrah vs Jadeja vs Shreyas Net Worth Comparison & IPL Salary
Story first published: Saturday, December 6, 2025, 13:15 [IST]
X
Desktop Bottom Promotion