Latest Updates
-
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ!
ಬರ್ಗರ್ ಡೇ ಸ್ಪೆಷಲ್: ಈ ಫೋಟೋದಲ್ಲಿರುವ ಮುದ್ದು ಹುಡುಗ ಯಾರು ಗೊತ್ತಾ?
ಜಗತ್ತಿನಾದ್ಯಂತ ಒಂದೊಂದು ದಿನ ಒಂದೊಂದು ಆಚರಣೆ ಇದ್ದೇ ಇರುತ್ತೆ. ಹಾಗೆ ನಿನ್ನೆ ಸಹ ಅಂತಾರಾಷ್ಟ್ರೀಯ ಬರ್ಗರ್ ದಿನವಂತೆ. ಬರ್ಗರ್ ಅಂದ್ರೆ ಕೆಲವರ ಬಾಯಲ್ಲಿ ನೀರು ಬರುತ್ತೆ. ಪಾಶ್ಚಿಮಾತ್ಯ ಫುಡ್ ಆಗಿದ್ದರೂ ಭಾರತದಲ್ಲಿ ಈ ಬರ್ಗರ್ ಪ್ರೇಮಿಗಳಿಗೇನು ಕಡಿಮೆ ಇಲ್ಲ.
ಭಾರತದಲ್ಲಿ ಬರ್ಗರ್ ಕಿಂಗ್ ಸೇರಿ ಹತ್ತಾರು ಇಂಟರ್ ನ್ಯಾಷನಲ್ ಬರ್ಗರ್ ಔಟ್‌ಲೆಟ್‌ಗಳಿವೆ. ಭಾರತ ಸಹ ಈಗ ಬರ್ಗರ್‌ಗೆ ದೊಡ್ಡ ಮಾರುಕಟ್ಟೆ ಒದಗಿಸಿದೆ. ಯುವ ಜನರ ಪಾಲಿಗೆ ಬರ್ಗರ್ ಸ್ನ್ಯಾಕ್ಸ್ ಸವಿಯೋದು ಪಂಚಪ್ರಾಣ. ಇಂತಹ ಬರ್ಗರ್ ದಿನಾಚರಣೆ ನಡುವೆ ಆನ್‌ಲೈನ್ ಫುಡ್ ಡೆಲಿವರಿ ಆಪ್ ಹಾಕಿರುವ ಪೋಸ್ಟ್ ಈಗ ಗಮನ ಸೆಳೆಯುತ್ತಿದೆ.

ಅಂತಾರಾಷ್ಟ್ರೀಯ ಬರ್ಗರ್ ದಿನಾಚರಣೆಯ ಅಂಗವಾಗಿ ಸ್ವಿಗ್ಗಿ ಒಂದು ಫೋಟೋವನ್ನು ಹಂಚಿಕೊಂಡಿದೆ. ಅದರಲ್ಲಿ ಚಿಕ್ಕ ಹುಡುಗು ಬರ್ಗರ್ ಅನ್ನು ಬಾಯಲ್ಲಿ ಇಟ್ಟುಕೊಂಡಿರುವುದು ನೋಡಬಹುದು. ಈ ಫೋಟೋವನ್ನು ಸ್ವಿಗ್ಗಿ ಮತ್ತೆ ಹಂಚಿಕೊಂಡಿದೆ.
ಈ ಫೋಟೋದಲ್ಲಿರುವುದು ಭಾರತ ಕ್ರಿಕೆಟ್ ತಂಡದ ಆಟಗಾರ ವಿರಾಟ್ ಕೊಹ್ಲಿ, ಅವರು ಚಿಕ್ಕವರಿರುವಾಗ ಬರ್ಗರ್ ತಿನ್ನುತ್ತಿರುವ ಫೋಟೋ ಇದಾಗಿದ್ದು, ಈ ಫೋಟೋವನ್ನು 2016ರಲ್ಲಿ ಖುದ್ದು ವಿರಾಟ್ ಕೋಹ್ಲಿ ಅವರೇ ಹಂಚಿಕೊಂಡಿದ್ದರು. ಅದೇ ಫೋಟೋವನ್ನು ಸ್ವಿಗ್ಗಿ ಈಗ ಹಂಚಿಕೊಂಡು ಅಂತಾರಾಷ್ಟ್ರೀಯ ಬರ್ಗರ್ ದಿನದ ಶುಭಾಶಯ ಕೋರಿದೆ.
ಕೆಲವೊಮ್ಮೆ ನೀವು ಒಂದು ಒಳ್ಳೆಯ ಬರ್ಗರ್ ಅನ್ನು ತಿನ್ನುತ್ತೀರಿ ಮತ್ತು ನಿಮ್ಮ ಉಳಿದ ಜೀವನದ ಬಗ್ಗೆ ಯೋಚಿಸುತ್ತೀರಿ. ಬರ್ಗರ್ ದಿನದ ಶುಭಾಶಯಗಳು.' ಎಂದು ಬರೆದುಕೊಂಡಿದೆ. ಇದಕ್ಕೂ ಮೊದಲು ಈ ಫೋಟೋ ವಿರಾಟ್ ಸಹ ಹಂಚಿಕೊಂಡಿದ್ದರು.
ಸ್ವಿಗ್ಗಿ ಈ ಫೋಟೋ ಹಂಚಿಕೊಂಡಿದ್ದರಿಂದ ಹಲವರಲ್ಲಿ ನಗು ತರಿಸಿದೆ. ವಿರಾಟ್ ಚಿಕ್ಕವರಿರುವಾಗ ಎಷ್ಟು ಬರ್ಗರ್ ಸವಿದಿರಬಹುದು ಎಂಬ ಪ್ರಶ್ನೆ ನೆಟ್ಟಿಗರಲ್ಲಿ ಮೂಡಿದೆ. ವಿರಾಟ್ ಕ್ರೀಡಾ ಪ್ರೇಮಿಯ ಜೊತೆಗೆ ಆಹಾರ ಪ್ರೇಮಿ ಕೂಡ ಹೌದು ಎಂದು ಮತ್ತೊಬ್ಬ ಬಳಕೆದಾರರು ಬರೆದುಕೊಂಡಿದ್ದಾರೆ.
ಮೊದಲು ವಿರಾಟ್ ಕೊಹ್ಲಿಯ ಈ ಫೋಟೋ ನೋಡಿ ಹಲವರು ಗೊಂದಲಕ್ಕೊಳಗಾಗಿದ್ದಾರೆ. ಮುದ್ದು ಮುಖದ ಈ ಹುಡುಗ ಯಾರು ಎಂಬ ಪ್ರಶ್ನೆ ಅವರಲ್ಲಿ ಮೂಡಿದೆ. ಬಳಿಕ ಆ ಫೋಟೋವನ್ನು ಗಮನವಿಟ್ಟು ನೋಡಿದಾಗ ಜೊತೆಗೆ ಅದನ್ನು ವಿರಾಟ್ ಕೊಹ್ಲಿಯೇ ಹಂಚಿಕೊಂಡಿದ್ದನ್ನು ಕಂಡು ಅವರಿಗೆ ಯಾರೆಂದು ತಿಳಿದುಬಂದಿದೆ.
ಸದ್ಯ ವಿರಾಟ್ ತಮ್ಮ ಫಿಟ್‌ನೆಸ್ ಬಗ್ಗೆ ತುಂಬಾನೆ ಕಾಳಜಿ ವಹಿಸುವ ವ್ಯಕ್ತಿಯಾಗಿದ್ದು, ಈಗ ಈ ಬರ್ಗರ್‌ನಿಂದ ದೂರವೇ ಉಳಿದಿರಬಹುದು. ಅವರು ಆಹಾರದ ಆಯ್ಕೆಯಲ್ಲಿ ತುಂಬಾನೆ ಎಚ್ಚರಿಕೆ ವಹಿಸುತ್ತಾರೆ. ಏಕೆಂದರೆ ಯಾವಾಗಲು ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳುವುದು ಅವರ ಹವ್ಯಾಸದಲ್ಲಿ ಒಂದಾಗಿದೆ. ಜೊತೆಗೆ ಕ್ರೀಡಾಪಟುವಿಗೆ ಯಾವಾಗಲು ದೇಹ ಫಿಟ್ ಆಗಿಟ್ಟುಕೊಳ್ಳಬೇಕಾದ ಅನಿವಾರ್ಯತೆಯೂ ಇದೆ.
ವಿರಾಟ್ ಕೊಹ್ಲಿ ಈಗ ಐಪಿಎಲ್ ಮುಗಿಸಿ ಟಿ20 ವಿಶ್ವಕಪ್ ಟೂರ್ನಿಗೆ ತಯಾರಿ ನಡೆಸುತ್ತಿದ್ದಾರೆ. ಈಗ ಪತ್ನಿ ಅನುಷ್ಕಾ ಶರ್ಮಾ ಜೊತೆಗೆ ಜಾಲಿ ಮೂಡ್‌ನಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಭಾರತ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ಜಹೀರ್ ಖಾನ್ ಮತ್ತು ಅವರ ಪತ್ನಿ ಸಾಗರಿಕಾ ಘಾಟ್ಗೆ ಅವರೊಂದಿಗೆ ಸೆಲೆಬ್ರಿಟಿ ದಂಪತಿ ರಾತ್ರಿ ಊಟಕ್ಕೆ ತೆರಳಿದ್ದರು. ಅವರ ಜೊತೆ ಹತ್ತಾರು ಮಂದಿ ಸ್ನೇಹಿತರೂ ಇದ್ದರು ಎಂದು ತಿಳಿದುಬಂದಿದೆ.
ಜೂನ್ 25 ರಂದು ಮುಂಬೈನಿಂದ ನ್ಯೂಯಾರ್ಕ್‌ಗೆ ತೆರಳಿದ್ದ ತನ್ನ ತಂಡದ ಸಹ ಆಟಗಾರರ ಮೊದಲ ಬ್ಯಾಚ್‌ಗೆ ವಿರಾಟ್ ಕೊಹ್ಲಿ ತೆರಳಿಲ್ಲ. ರೋಹಿತ್ ಶರ್ಮಾ, ರಿಷಬ್ ಪಂತ್, ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ಮೊದಲ ಬ್ಯಾಚ್‌ನ ಭಾರತೀಯ ಕ್ರಿಕೆಟಿಗರು ಯುಎಸ್‌ಗೆ ತೆರಳಿದ್ದಾರೆ. ಜೂನ್ 1 ರಿಂದ ಜೂನ್ 29 ರವರೆಗೆ ಯುಎಸ್ಎ ಮತ್ತು ವೆಸ್ಟ್ ಇಂಡೀಸ್ ಜಂಟಿಯಾಗಿ ಟಿ 20 ವಿಶ್ವಕಪ್ ಆಯೋಜಿಸಿದೆ. ಆದರೆ ವಿರಾಟ್ ಪ್ರವಾಸ ವಿಳಂಬವಾಗಲಿದೆ.



Click it and Unblock the Notifications
